ಈ ವಯಸ್ಸಿನಲ್ಲಿ ಭಾವನೆಗಳು ಅವಳೊಡನೆ ಈ ರೀತಿ ಕಣ್ಣುಮುಚ್ಚಾಲೆ ಆಡುತ್ತವೆಂದು ಅವಳು ಕನಸಿನಲ್ಲಿಯೂ ಊಹಿಸಿರಲಿಲ್ಲ. ಮುಷ್ಟಿಯೊಳಗಿನಿಂದ ಮರಳು ಸೋರಿ ಹೋಗುವಂತೆ ಅವಳ ಮನಸ್ಸು ಅವಳ ವಶದಿಂದ ಜಾರಿಹೋಗುತ್ತಿದ್ದರೆ, ಅವಳು ಅಸಹಾಯಕಳಂತೆ ನಿಂತು ನೋಡುತ್ತಲೇ ಇದ್ದಾಳೆ. ಅವಳೇಕೆ ಅದನ್ನು ತಡೆಯಬೇಕು? ದೀರ್ಘಕಾಲದ ನಂತರ ಪಂಜರದಲ್ಲಿದ್ದ ಪಕ್ಷಿಗೆ ಸ್ವಚ್ಛಂದವಾಗಿ ವಿಹರಿಸುವ ಅವಕಾಶ ದೊರೆತಿರುವಾಗ, ಅದರ ರೆಕ್ಕೆಗಳನ್ನು ನಿರ್ದಯವಾಗಿ ಕತ್ತರಿಸಿ, ಮತ್ತೆ ಅದನ್ನು ನಿರಾಶೆಯ ರಾಡಿ ಹಾಗೂ ಉಸಿರುಗಟ್ಟಿಸುವ ಜವುಗು ತುಂಬಿದ ಪಂಜರದಲ್ಲಿ ಖೈದು ಮಾಡಲು ಅವಳಿಗೆ ಏನು ಅಧಿಕಾರವಿದೆ? ಇಲ್ಲ, ಇಲ್ಲ ಅವಳೆಂದೂ ಹೀಗೆ ಮಾಡಲಾರಳು. ಅವಳು ಆ ಪಕ್ಷಿಯನ್ನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡಲು ಬಿಟ್ಟುಬಿಡುತ್ತಾಳೆ. ಮುಂದೆ ಆ ಪಕ್ಷಿ ಹಸಿರು ಮರದ ಆಸರೆಯನ್ನಾದರೂ ಪಡೆಯಲಿ, ಇಲ್ಲ ಮುಳ್ಳು ಪೊದೆಯ ಆಸರೆಯನ್ನಾದರೂ ಪಡೆಯಲಿ.....

ತನಗೆ ಬೇಕಾದಂತೆ ಮನದಲ್ಲೇ ತರ್ಕಿಸುತ್ತಿದ್ದ ಅವಳಿಗೆ ಈಗ ನೆಮ್ಮದಿ ಎನಿಸಿತು. ಮರುಕ್ಷಣವೇ ಅವಳು ಡ್ರೆಸಿಂಗ್‌ ಟೇಬಲಿನ ಮುಂದೆ ಬಂದು ಕುಳಿತಳು. ಎಷ್ಟೋ ವರ್ಷಗಳ ನಂತರ ಮತ್ತೆ ಶೃಂಗರಿಸಿಕೊಳ್ಳಲು ಅವಳ ಮನ ಹಾತೊರೆಯಿತು. ಅವಳ ಕುಶಲ ಕೈಗಳ ಚಮತ್ಕಾರದಿಂದ ಕೆಲವೇ ಕ್ಷಣಗಳಲ್ಲಿ ಅವಳ ಸೊಬಗಿನ ರೂಪು ಆಕರ್ಷಕವಾಗಿ ಎದ್ದು ಕಾಣಿಸಿತು. ಕನ್ನಡಿಯಲ್ಲಿ ಕಾಣಿಸಿದ ಹೆಣ್ಣಿಗೆ ಅಷ್ಟು ವಯಸ್ಸಾಗಿದೆ ಎಂದು ಯಾರೂ ಹೇಳುವಂತಿರಲಿಲ್ಲ. 38 ವರ್ಷದ ಬದುಕಿನ ತಗ್ಗು ದಿಣ್ಣೆಯ ಹಾದಿಯಲ್ಲಿ ನಡೆಯುತ್ತಾ ಬಸವಳಿದ ಅವಳಿಗೆ ಹದಿಹರೆಯದ ಕಿಶೋರಿಯ ರೆಕ್ಕೆ ಮೂಡಿದಂತೆನಿಸಿತು. ಕಾಲ್ಗೆಜ್ಜೆ ಧರಿಸದಿದ್ದರೂ, ಅವಳು ಕುಣಿಯುವ ಹೆಜ್ಜೆ ಹಾಕುತ್ತಾ ಮನೆಯ ಮುಂದಿನ ತೋಟಕ್ಕೆ ಬಂದು ಮುಡಿದುಕೊಳ್ಳಲು ಹಳದಿ ಗುಲಾಬಿಯ ಒಂದು ಮೊಗ್ಗನ್ನು ಕಿತ್ತಳು. ಅದನ್ನೆತ್ತಿ ತನ್ನ ಜಡೆಗೆ ಸಿಕ್ಕಿಸಿಕೊಳ್ಳುವಷ್ಟರಲ್ಲಿ ಬಲಿಷ್ಠ ಹಸ್ತವೊಂದು ಅವಳ ಕೆಲಸವನ್ನು ಪೂರೈಸಿತು.

``ಓಹ್‌.....ನೀವಾ....'' ಮಾನಸಿ ಹಿಂದಿರುಗಿ ನೋಡಿದಳು.

ಸುಧಾಕರ್‌ ಕಣ್ಣುಗಳಲ್ಲಿ ಮೆಚ್ಚುಗೆ ತುಂಬಿಕೊಂಡು, ತುಟಿಗಳ ಮೇಲೆ ತುಂಟ ನಗೆ ಹರಿಸುತ್ತಾ ಅವಳನ್ನು ನೋಡುತ್ತಿದ್ದ. ಅವಳಿಗೆ ನಾಚಿಕೆಯಾಯಿತು. ಕೋಣೆಯಲ್ಲಿ ಕೂಡಿ ಹಾಕಿದ ಹಠಮಾರಿ ಹುಡುಗಿಯಂತೆ ಅವಳ ಹೃದಯ ಜೋರಾಗಿ ಡವಗುಟ್ಟತೊಡಗಿತು. ಅದು ಸುಧಾಕರನಿಗೇನಾದರೂ ಕೇಳಿಸೀತೆಂದು ಹೆದರಿದ ಅವಳು, ``ಬನ್ನಿ, ಒಳಗೆ ಹೋಗೋಣ,'' ಎಂದು ಕರೆದಳು.

``ಈಗ ಕುಳಿತುಕೊಳ್ಳುಷ್ಟು ಸಮಯವಿಲ್ಲ. ಆಹ್ವಾನಿತರೆಲ್ಲ ಬರತೊಡಗಿದ್ದಾರೆ. ಹೇಗೋ ಮಾಡಿ ನಿಮ್ಮನ್ನು ಕರ್ಕೊಂಡು ಹೋಗಲು ಬಂದೆ,'' ಸುಧಾಕರ್‌ ಬಲಗೈಗೆ ಕಟ್ಟಿದ್ದ ಬಂಗಾರದ ಗಡಿಯಾರದತ್ತ ಕಣ್ಣು ಹಾಯಿಸಿ ಹೇಳಿದ.

``ಸರಿ ಹಾಗಾದರೆ, ನೀವು ಕಾರು ಸ್ಟಾರ್ಟ್‌ ಮಾಡಿ ನಾನು ಇದೀಗ ಬಂದೆ,'' ಎನ್ನುತ್ತಾ ಅವಳು ಆತುರದಿಂದ ಒಳಹೊಕ್ಕಳು. ಮುಂಬಾಗಿಲಿಗೆ ಬೀಗ ಹಾಕುವಾಗ ಅಕ್ಕಪಕ್ಕದ ಮನೆಗಳ ಜನರು ವ್ಯಂಗ್ಯದ ನಗೆ ಬೀರುತ್ತಾ ತನ್ನೆಡೆಗೆ ಇಣುಕಿ ನೋಡುತ್ತಿದ್ದಾರೆಂದು ಅವಳಿಗೆ ಭಾಸವಾಯಿತು.

ವೇಗಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸುಧಾಕರನ ಪಕ್ಕ ಕುಳಿತಿದ್ದ ಮಾನಸಿಯನ್ನು, ಅವರ ಆ ವ್ಯಂಗ್ಯದ ಮೊನಚು ಬಾಣ ಚುಚ್ಚಿ ನೋಯಿಸಿತು. ಅವಳು ಮಾಡುತ್ತಿರುವ ಕೆಲಸ ಸರಿಯಾದುದೇ? ಗಂಡ ಇಲ್ಲದಿರುವಾಗ, ಪರಪುರುಷನೊಡನೆ ಹೀಗೆ ಹೋಗುವುದು ಉಚಿತವೇ? ಹದಿಹರೆಯದ ಇಬ್ಬರು ಮಕ್ಕಳ ತಾಯಿಯಾಗಿ ಅವಳೇಕೆ ಹೀಗೆ ವಿದ್ರೋಹ ಮಾಡಲು ಹೊರಟಿದ್ದಾಳೆ? ವರ್ಷಗಳಿಂದ ಕಲ್ಲಾಗಿದ್ದ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ಕಾರಂಜಿ ಪುಟಿದೆದ್ದಿದೆಯೇ? ಗಂಡನಲ್ಲದ ಪುರುಷನ ಬಗ್ಗೆ ಅನುರಾಗ ಏಕೆ ಮೊಳೆಯುತ್ತಿದೆ? `ಗಾಡಿ ನಿಲ್ಲಿಸಿ, ನಾನು ನಿಮ್ಮ ಜೊತೆ ಎಲ್ಲಿಗೂ ಬರುವುದಿಲ್ಲ,' ಎಂದು ಕೂಗಿ ಹೇಳಬೇಕೆಂದು ಅವಳು ಪಕ್ಕಕ್ಕೆ ತಿರುಗಿದಳು. ಆದರೆ ಸುಧಾಕರನನ್ನು ನೋಡುತ್ತಲೇ ಅವಳ ಮನಸ್ಸಿನ ಕೋಲಾಹಲ ಕೂಡಲೇ ಮರೆಯಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ