``ನಿನಗೆ ಹಣದ ಬೆಲೆ ಏನು ಗೊತ್ತು? ಎಂದಾದರೂ ಕಷ್ಟಪಟ್ಟು ದುಡಿದಿದ್ರೆ ನಿನಗೆ ಗೊತ್ತಾಗ್ತಿತ್ತು!'' ವಿನಯ್‌ ಕೋಪದಿಂದ ಹೇಳಿದ, ``ಬರೀ ಅಧಿಕಾರದಿಂದ ಅದು ಬೇಕು, ಇದು ಬೇಕು ಎಂದು ಹೇಳಿಬಿಡ್ತಿಯಾ.''

ಅನಿತಾ ಕೂಡ ಕೋಪದಿಂದ ವಿನಯನನ್ನು ನೋಡುತ್ತಾ, ``ನಾನು ನಿಮಗೆ ಅಂತಹುದೇನನ್ನು ತರಲು ಹೇಳಿದೆ? ನನಗಾಗಿ ಚಿನ್ನ ವಜ್ರಾಭರಣ ತರಲು ಕೇಳಿದ್ನಾ? ಮಕ್ಕಳಿಗೆ ಹಾಗೂ ಮನೆಗೆ ಬೇಕಾಗುವಂತಹ ಅವಶ್ಯಕ ವಸ್ತುಗಳನ್ನು ತಾನೇ ಕೇಳಿದ್ದು.,,,, ಈ ಅವಶ್ಯಕತೆಗಳನ್ನು ನೀವು ಪೂರೈಸದೆ ಬೇರಾರು ಪೂರೈಸಲು ಸಾಧ್ಯ?''

``ಈ ಅವಶ್ಯಕತೆಗಳನ್ನು ಹಣವಿಲ್ಲದೆ ಪೂರೈಸಲು ಸಾಧ್ಯವಿಲ್ಲ,'' ವಿನಯ್‌ ಹೆಚ್ಚು ಕಡಿಮೆ ಚೀರುತ್ತಲೇ ಹೇಳಿದ.

``ಈ ಅವಶ್ಯಕತೆಗಳನ್ನು ಒಮ್ಮೆಲೆ ಪೂರೈಸಿ ಎಂದು ನಾನು ನಿಮಗೆ ಯಾವಾಗ ಹೇಳಿದೆ? ಯಾವುದು ಹೆಚ್ಚು ಅಗತ್ಯವಿದೆಯೋ ಅದನ್ನು ಈಗಲೇ ತೆಗೆದುಕೊಂಡು ಬನ್ನಿ. ಉಳಿದವನ್ನು ಮುಂದಿನ ತಿಂಗಳುಗಳಲ್ಲಿ ತೆಗೆದುಕೊಡುವಿರಂತೆ.''

``ಅದು ಬೇಕು, ಇದು ಬೇಕು ಎಂದು ನೀವು ಮೂವರು ನನಗೆ ಆರ್ಡರ್‌ ಮಾಡ್ತಾನೆ ಇರ್ತೀರಾ.... ಈಗ ನಾನು ಆ ಬೇಡಿಕೆಗಳನ್ನು ಹೇಗೆ ಪೂರೈಸಲು ಸಾಧ್ಯ ಎಂದು ನೀವು ಯೋಚಿಸಲು ಹೋಗುವುದೇ ಇಲ್ಲ.''

``ನೀವು ನನಗೆ ಒಂದು ಸಲಕ್ಕೆ ಎಷ್ಟು ಹಣ ಕೊಡ್ತೀರೊ ಆ ಮೊತ್ತದಲ್ಲಿ ನಾನು ಇಡೀ ತಿಂಗಳು ಸಾಗಿಸಬೇಕಾಗುತ್ತದೆ,'' ಅನಿತಾ ಸ್ವಲ್ಪ ರೋಷದಿಂದಲೇ ಹೇಳಿದಳು, ``ಹಣ ಗಳಿಸುವ ಬಗ್ಗೆ ಹೇಳಬೇಕೆಂದರೆ, ನಾನೇನು ಕಡಿಮೆ ಓದಿಲ್ಲ. ಆದರೆ ನೀವೇ ನನಗೆ ನೌಕರಿ ಮಾಡಲು ಅವಕಾಶ ಕೊಡಲಿಲ್ಲ. ನೀವಿಂದು `ಹೂಂ' ಎಂದು ಹೇಳಿಬಿಟ್ರೆ ನಾನು ನೌಕರಿಗಾಗಿ ಹುಡುಕಾಟ ಆರಂಭಿಸ್ತೀನಿ.''

``ಹಾಂ ಹಾಂ,'' ಎಂದು ವಿನಯ್‌ ವ್ಯಂಗ್ಯವಾಗಿ ಹೇಳಿದ, ``ಈಗ ನಿನಗೆ ಯಾರು ತಾನೇ ನೌಕರಿ ಕೊಡ್ತಾರೆ? ನೀನು ಅಡುಗೆ ಮನೆ ಕೆಲಸ ನೋಡಿಕೊಳ್ತಾ ಇರು.''

ಅನಿತಾಳ ಮೈಮನ ಉರಿದಂತಾಯ್ತು. ಆಕೆ ಓದಿನಲ್ಲೇನೂ ಕಡಿಮೆಯಿರಲಿಲ್ಲ. ಆದರೆ ನೌಕರಿ ಮಾತ್ರ ಮಾಡಿರಲಿಲ್ಲ. ಈಗ ಆಕೆ ಅದಕ್ಕೆ ಪ್ರಯತ್ನಿಸುವುದಾಗಿ ನಿರ್ಧಾರ ಮಾಡಿದಳು. ಅವಳು ಇಡೀ ದಿನ ಆ ಕೆಲಸ ಈ ಕೆಲಸ ಅಂತ ಮಾಡ್ತಾನೆ ಇರ್ತಾಳೆ. ವಿನಯ್‌ ಹಾಗೂ ಮಕ್ಕಳ ಬಗ್ಗೆ ಆಕೆ ಅದೆಷ್ಟು ಕಾಳಜಿ ವಹಿಸುತ್ತಾಳೆ. ಆದರೂ ತನ್ನ ಬಗ್ಗೆ ವಿನಯ್‌ಗೆ ಯಾವುದೇ ಮಹತ್ವ ಇಲ್ಲದೇ ಇರೋದು ಆಕೆಗೆ ಬೇಜಾರು ಮೂಡುತ್ತಲಿತ್ತು.

ಅನಿತಾಳ ಹೃದಯದಲ್ಲಿ ಎದ್ದ ಬಿರುಗಾಳಿ ಈಗ ಸುನಾಮಿಯ ರೂಪ ಪಡೆದುಕೊಂಡಿತ್ತು. ವಿನಯ್‌ ಎಂದಾದರೊಮ್ಮೆ, ಗೊತ್ತಿದ್ದೊ ಗೊತ್ತಿಲ್ಲದೆಯೋ ಅವಳನ್ನು ನಿರರ್ಥಕ, ಕೆಲಸಕ್ಕೆ ಬಾರದವಳು ಎಂದು ಸಾಬೀತುಪಡಿಸುತ್ತಲೇ ಇರುತ್ತಿದ್ದ. ವಿನಯ್‌ನ ಸ್ನೇಹಿತರ ಹೆಂಡತಿಯರು ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಮಕ್ಕಳಾದಾಗ, ಚಿಕ್ಕಚಿಕ್ಕ ಮಕ್ಕಳನ್ನು ನಿರ್ವಹಣೆ ಮಾಡಲು ಏನೇನು ಕಷ್ಟ ಅನುಭವಿಸಿರಬೇಕು ಎಂಬುದನ್ನು ಯೋಚಿಸಲು ವಿನಯ್‌ ಬಿಲ್‌ಕುಲ್ ‌ತಯಾರಿರಲಿಲ್ಲ.

ಮಕ್ಕಳು ಶಾಲೆಗೆ ಹಾಗೂ ವಿನಯ್‌ ಆಫೀಸಿಗೆ ಹೊರಟುಹೋಗಿದ್ದರು. ವಿನಯ್‌ ನಿನ್ನೆ ಹೇಳಿದ ಮಾತುಗಳನ್ನು ಬಹುಶಃ ಮರೆತುಬಿಟ್ಟಿರಬಹುದು. ವಿನಯನ ವ್ಯಂಗ್ಯ ಮಾಡುವ ಸ್ವಭಾವ ಅವಳಿಗೆ ಬಹುಶಃ ಒಗ್ಗಿಹೋಗಿತ್ತು. ಅವಳು ಅದಾವುದನ್ನು ತಲೆಗೆ ಹಚ್ಚಿಕೊಂಡಿರಲಿಲ್ಲ. ಆದರೆ ಈ ಸಲ ಆಡಿದ ಒಂದೊಂದು ಮಾತುಗಳು ಅವಳ ಮನಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿದ್ದ. ಅವಳ ಅಂತರಂಗದ ಬಿರುಗಾಳಿ ಶಾಂತವಾಗುವ ಲಕ್ಷಣಗಳೇ ಕಂಡುಬರುತ್ತಿರಲಿಲ್ಲ. ತಾನು ಈ ಸಲ ವಿನಯ್‌ಗೆ ಅದನ್ನು ಮನವರಿಕೆ ಮಾಡಿಕೊಡಲೇಬೇಕು. ಆದರೆ ಆಕೆಗೆ ಉದ್ಯೋಗ ಮಾಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದೇ ಉತ್ತಮವೆನಿಸಿತು. ಅವಳು ಆಗ ಕೆಲಸ ಮಾಡುತ್ತಿದ್ದುದು ಮೈಸೂರಿನಲ್ಲಿ. ವಿನಯ್‌ ಕೆಲಸ ಮಾಡುತ್ತಿದ್ದುದು ಬೆಂಗಳೂರಿನಲ್ಲಿ. ಮದುವೆಯ ಬಳಿಕ ಬೆಂಗಳೂರಿನಲ್ಲಿಯೇ ಕೆಲಸ ಹುಡುಕಿದರಾಯಿತು ಎಂದು ಆಕೆ ಯೋಚಿಸಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ