ಟಿ.ವಿ.ಯಲ್ಲಿ ಟೋನಿ ಮಹಿಲಾಲ್‌ರ ಅಡುಗೆ ಕಾರ್ಯಕ್ರಮ ಬರುತ್ತಿತ್ತು. ಅವರ ಫುಡ್‌ ಪ್ರೋಗ್ರಾಮ್ ಬಹಳ ಪ್ರಸಿದ್ಧವಾಗಿತ್ತು. ಅವರ ಪ್ರೋಗ್ರಾಂ ಶುರುವಾಗುವ ಸಮಯ ಮತ್ತು ನಾನು ಊಟ ಮಾಡುವ ಸಮಯ ಒಂದೇ ಆಗಿರುತ್ತಿದ್ದು ಟೋನಿಯವರು ಸ್ವಾದಿಷ್ಟ ಪರೋಟಾಗಳನ್ನು ಮಾಡುತ್ತಿದ್ದರೆ ಅದು ನಮ್ಮ ತ್ರೀಡಿ ಟಿ.ವಿ.ಯಿಂದ ಸೀದಾ ನನ್ನ ತಟ್ಟೆಯಲ್ಲಿ ಬಂದು ಬೀಳುವಂತೆ ಆಗುತ್ತಿತ್ತು. ನನ್ನ ಬೋರಿಂಗ್‌ ಸಾಂಸಾರಿಕ ಜೀವನದಲ್ಲಿ ಈ ಮಧ್ಯಾಹ್ನದ ಸಮಯ ಆಕರ್ಷಕಾವಾಗಿರುತ್ತಿತ್ತು. ಆ ಸಮಯ ನನಗಾಗಿಯೇ ಮೀಸಲು. ಗಂಡ ಹಾಗೂ ಮಕ್ಕಳಿಗೆ ಬೆಳಗಿನ ಟಿಫಿನ್‌, ಕಾಫಿ ಇತ್ಯಾದಿ ಕೊಟ್ಟು ಡಿಸ್‌ ಪ್ಯಾಚ್‌ ಮಾಡಿಬಿಟ್ಟರೆ ಇತರೆ ಸಣ್ಣಪುಟ್ಟ ಕೆಲಸಗಳನ್ನು ಬೇಗ ಮುಗಿಸುವ ಅಗತ್ಯವಿರಲಿಲ್ಲ. ಮನೆಯಲ್ಲಿನ ವೃದ್ಧರು ಮಂಚದಲ್ಲಿ ಗೊರಕೆ ಹೊಡೆಯುತ್ತಿರುತ್ತಿದ್ದರು. ಆ ಒಂದು ಗಂಟೆ ಸಮಯ ನನಗೆ ಅಮೂಲ್ಯವಾಗಿ ಇರುತ್ತಿತ್ತು. ಊಟದ ಸ್ವಾದ ಸವಿಯುತ್ತಲೇ ನಾನು ಟೋನಿಯವರೊಂದಿಗೆ ಇರುತ್ತೇನೆ.

ಈಗ ನಿಮಗೆ ಅರ್ಥವಾಗಿರಬಹುದು ನಾನೊಬ್ಬ ಸಾಮಾನ್ಯ ಹೌಸ್‌ ವೈಫ್‌ ಎಂದು. ಕನ್ನಡದಲ್ಲಿ ಬರೆಯುವಾಗ ಇವಳೆಷ್ಟು ಇಂಗ್ಲಿಷ್ ಪದಗಳನ್ನು ಉಪಯೋಗಿಸುತ್ತಾಳೆ ಎಂದುಕೊಳ್ಳುತ್ತೀರಿ. ಅದು ನಿಜ. ಆದರೆ ಕೊಂಚ ಯೋಚಿಸಿ. ಒಂದು ವೇಳೆ ನಾನು ಹೌಸ್ ವೈಫ್‌ ಬದಲು `ಗೃಹಿಣಿ' ಎಂದು ಹೇಳಿದರೆ ನೀವು ಅಷ್ಟೇ ಆದರದಿಂದ ನನ್ನತ್ತ ನೋಡುತ್ತೀರಾ? ಇಲ್ಲ ತಾನೇ? ಇನ್ನೊಂದು ಉತ್ತಮ ಪದ `ಗೃಹಲಕ್ಷ್ಮಿ' ನನಗೆ ಹೊಳೆಯುತ್ತಿದೆ. ನಿಮಗೆ ಅದು ಇಷ್ಟವಿದೆಯೇ? ಆದರೆ ನನಗಂತೂ ಈ ಶಬ್ದ ಮಹಿಳೆಯರನ್ನು ಮೂರ್ಖರನ್ನಾಗಿಸುವ ಪುರುಷರ ಒಳಸಂಚೆಂದು ಅನ್ನಿಸುತ್ತದೆ. ಯಾವ ಗೃಹಿಣಿಯರತ್ತ ಒಮ್ಮೆಯಾದರೂ ಲಕ್ಷ್ಮಿ ತಿರುಗಿ ನೋಡುವುದಿಲ್ಲವೋ ಅಂತಹವರನ್ನು `ಗೃಹಲಕ್ಷ್ಮಿ' ಎಂದು ಹೇಗೆ ಕರೆಯುವುದು?

ಇಂತಹುದೇ ಡೋಂಗಿ ವಾಸನೆ ಕೊಡುವ ಹಲವು ಶಬ್ದಗಳಿವೆ. ಉದಾ: ಗೃಹ ಸ್ವಾಮಿನಿ. ತನ್ನ ದಿನನಿತ್ಯದ ಗೃಹಕೃತ್ಯಗಳ ಖರ್ಚಿಗೆ ತನ್ನ ಒಡೆಯನ ಜೇಬನ್ನೇ ಕತ್ತರಿಸುವಂತಹವಳು `ಗೃಹ ಸ್ವಾಮಿನಿ' ಹೇಗಾದಾಳು? ಹೌಸ್‌ ವೈಫ್‌ ಪದದಲ್ಲಿಯೇ `ಧಮ್' ಇದೆ. ಆದರೆ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಮ್ಮ ಆದರಣೀಯರಾದ ಹೌಸ್‌ ವೈಫ್‌ಗಳ ಸೈನ್ಯ ತಂತಮ್ಮ ಟಿವಿಗಳ ಎದುರು ಕುಳಿತುಬಿಡುತ್ತಿದ್ದರು. ಕೈಯಲ್ಲಿ ರೈಟಿಂಗ್‌ ಪ್ಯಾಡ್‌ ಮತ್ತು ಪೆನ್‌ ಹಿಡಿದು ನಾನೂ ಸಹ ಸೋಫಾ ಮೇಲೆ ಕಾಲು ಮಡಿಚಿಕೊಂಡು ಬಹಳ ಅಕ್ಕರೆಯಿಂದ ಅಡುಗೆ ಮಾಡುವ ವಿಧಾನ ಬರೆದುಕೊಳ್ಳುತ್ತೇನೆ.

ಟೋನಿ ಹೇಳುತ್ತಾರೆ, ``ಇಂದು ನಾನು ನಿಮಗೆ ಟಿಂಬಕ್ಟೂನ ಜನಪ್ರಿಯ ಗ್ಲೋಬಲ್ ಸಲಾಡ್‌ ತಯಾರಿಸುವ ವಿಧಾನ ಹೇಳುತ್ತೇನೆ. ಈ ಸಲಾಡ್‌ ಬಹಳ ಪೌಷ್ಟಿಕಾಂಶಗಳಿಂದ ಕೂಡಿದೆ. ಮಕ್ಕಳು ಇದನ್ನು ಬಹಳ ಇಷ್ಟಪಡುತ್ತಾರೆ.''

ನನ್ನ ದೃಷ್ಟಿ ಟೋನಿಯವರ ನೇಲ್ ‌ಪಾಲಿಶ್‌ ಮೇಲಿದೆ. ಅವರು ಪ್ರೋಗ್ರಾಮ್ ಗೆ ಮುಂಚೆ ಖಂಡಿತಾ ಯಾವುದಾದರೂ ನೇಲ್ ‌ಆರ್ಟ್‌ ಪಾರ್ಲರ್‌ಗೆ ಹೋಗಿರಬೇಕು.

ಇಂದು ಅವರು ನೀಲಿ ಬಣ್ಣದ ನೇಲ್ ‌ಪಾಲಿಶ್‌ ಮತ್ತು ಕಪ್ಪು ಬಣ್ಣದ ಲಿಪ್‌ಸ್ಟಿಕ್‌ ಹಾಕಿದ್ದರು. ನನ್ನ ಮೆದುಳಿನ `ಗ್ರೇ ಸೆಲ್ಸ್'ನಿಂದಾಗಿ ಅಥವಾ ನನ್ನ ಹಳೆಯ ದೃಷ್ಟಿಕೋನದಿಂದಾಗಿ ಟೋನಿಯವರ ಅಸಾಧಾರಣ, ಆಧುನಿಕ ಸೌಂದರ್ಯ ವರ್ಣಿಸಲಾಗುತ್ತಿಲ್ಲ. ಹಿಂದಿನ ಕಾಲದ ಕವಿಗಳು ಗುಲಾಬಿ ದಳಗಳಂತಹ ತುಟಿಗಳಿಗೆ ಹುಚ್ಚರಾಗುತ್ತಿದ್ದರು. ಎದುರಿಗಿರುವ ಸುಂದರಿಯ ನೀಲಿ ಉಗುರುಗಳು ಹಾಗೂ ಕಪ್ಪು ತುಟಿಗಳನ್ನು ಕಂಡು ಅವರೇನು ಹೇಳುತ್ತಿದ್ದರೋ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ