ನನ್ನ ತುಟಿಯಲ್ಲಿ ಸಾಧಾರಣ ನಗುವಿತ್ತು. ಆದರೆ ಹೆಂಡತಿಯ ಮುಖದಲ್ಲಿ ಆಶ್ಚರ್ಯದ ಭಾವ ಎದ್ದು ಕಾಣುತ್ತಿತ್ತು. ಅದಕ್ಕೆ ಕಾರಣ ನನ್ನ ಮಿತ್ರನ ಹೇಳಿಕೆ. ರಾತ್ರಿ 1 ಗಂಟೆಯ ಹೊತ್ತಿಗೆ ಬರುವ ಟ್ಯಾಕ್ಸಿ ಡ್ರೈವರ್‌ ಒಬ್ಬ ಮಹಿಳೆಯಾಗಿರುತ್ತಾಳೆ ಎಂದು ಗೆಳೆಯ ಹೇಳಿದ್ದ.

ಆಕೆ ಬಂದಾಗ ಸಾಧಾರಣ ಮಹಿಳೆಯಂತೆಯೇ ಕಾಣುತ್ತಿದ್ದಳು. ಆಕೆಗೂ ಎರಡೇ ಕೈಗಳಿದ್ದವು. ಆ ಕೈಗಳಲ್ಲಿ ಯಾವುದೇ ಅಸ್ತ್ರಶಸ್ತ್ರಗಳು ಇರಲಿಲ್ಲ. ಏರ್‌ಕಂಡೀಶನ್ಡ್ ಟ್ಯಾಕ್ಸಿಯ ಸ್ಟೇರಿಂಗ್‌ ಮೇಲೆ ಆಕೆಯ ಕೈಗಳು ನಾನು ಚಾಲನೆ ಮಾಡಲು ಸಿದ್ಧ ಎಂದು ಹೇಳುತ್ತಲಿದ್ದವು.

ಆಕೆಯ ಕೈಗಳ ಹಿಡಿತವನ್ನು ನಾನು ಗಮನಕೊಟ್ಟು ನೋಡುತ್ತಲಿದ್ದೆ. ಆದರೆ ಆ ಕೈಗಳಲ್ಲಿ ಆತ್ಮವಿಶ್ವಾಸದ ಕೊರತೆಯಾಗಲಿ, ಗಾಬರಿಯಾಗಲೀ ಕಂಡುಬರುತ್ತಿರಲಿಲ್ಲ. ಅವಳ ಮಾತುಗಳಲ್ಲಿ ಕೂಡ ಆತಂಕದ ಯಾವ ಲಕ್ಷಣ ಗೋಚರಿಸಲಿಲ್ಲ. ಆದರೆ ಆಕೆ ಅತಿಯಾಗಿ ಮಾತನಾಡುವವಳೂ ಆಗಿರಲಿಲ್ಲ. ಆತ್ಮವಿಶ್ವಾಸ ವಿನಯವನ್ನು ಆವರಿಸಿಕೊಂಡಿರಲಿಲ್ಲ. ಆಕೆ ಪ್ರಯಾಣಿಕರೊಂದಿಗೆ ಮಾತನಾಡುತ್ತ ಸಾಧಾರಣ ಗೃಹಿಣಿಯಂತೆಯೇ ವರ್ತಿಸುತ್ತಿದ್ದಳು. ಆದರೆ ನಾನಿನಲ್ಲಿ ತಪ್ಪು ಮಾಡುತ್ತಿದ್ದೇನೆ. ಅನಿಸುತ್ತೆ. ಏಕೆಂದರೆ ಯಾವುದೇ ಮಹಿಳೆ ರಾತ್ರಿ 2 ಗಂಟೆಗೆ ಮುಂಬೈ ಮಹಾನಗರದ ರಸ್ತೆಯ ಮೇಲೆ ಅಪರಿಚಿತರ ಜೊತೆ ಮಾತನಾಡುತ್ತ ಇಷ್ಟೊಂದು ಸಹಜವಾಗಿ ಇರಲು ಸಾಧ್ಯವೇ ಇಲ್ಲ.

ಅವಳ ಮಾತುಗಳಲ್ಲಿ ಸ್ತ್ರೀ ಸಹಜ ಮೃದುತ್ವವಿತ್ತು. ಮಾತುಗಳಲ್ಲಿ `ಅಹಂ' ಇಣುಕುತ್ತಲೇ ಇರಲಿಲ್ಲ. ತಾನು ಅಸಾಧಾರಣ ಕೆಲಸ ಮಾಡುತ್ತಿದ್ದೇನೆ ಎಂದು ಆಕೆಯ ಮಾತುಗಳಲ್ಲಿ ಪ್ರಕಟವಾಗುತ್ತಿರಲಿಲ್ಲ. ಟ್ಯಾಕ್ಸಿ ಚಾಲನೆ ಮಾಡುವ ಅವಳ ಕೌಶಲ್ಯ ಪುರುಷರಿಗಿಂತ ಕಡಿಮೆ ಏನಿರಲಿಲ್ಲ.

ಕೆಲವು ದಿನ ಮಗ ಸೊಸೆಯ ಜೊತೆ ಕಾಲ ಕಳೆಯಲು ನಾನು ಮೈಸೂರಿನಿಂದ ಮುಂಬೈಗೆ ಬಂದಿದ್ದೆ. ಮುಂಬೈಗೆ ಬರುತ್ತಿದ್ದಂತೆ ಒಂದು ದಿನ ಸಂಜೆ ನಮ್ಮ ಮನೆಗೂ ಬರಬೇಕೆಂದು ನನ್ನ ಹಳೆಯ ಮಿತ್ರರೊಬ್ಬರು ಆಗ್ರಹ ಮಾಡಿದ್ದರು. 23 ದಶಕಗಳ ಹಿಂದೆ ನಾನು ವಾಯುಸೇನೆಯಲ್ಲಿ ಕೆಲಸ ಮಾಡಿದ್ದೆ. ನನ್ನ ಹೆಂಡತಿ ಹಾಗೂ ಮಿತ್ರನ ಹೆಂಡತಿ ತುಂಬಾ ಆತ್ಮೀಯ ಗೆಳತಿಯರೇ ಆಗಿಬಿಟ್ಟಿದ್ದರು. ಹೀಗಾಗಿ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಹರಟೆ ಹೊಡೆಯುತ್ತ ಯಾವಾಗ ರಾತ್ರಿ 1 ಗಂಟೆಯಾಯಿತೊ ತಿಳಿಯಲಿಲ್ಲ. ಅಂದಹಾಗೆ ಮಗ ವಾಸಿಸುತ್ತಿದ್ದ ಕೊಲಾಬಾದಿಂದ ನನ್ನ ಮಿತ್ರನ ಮನೆ ಪಯಿಯ ಹರಾನಂದಾನಿ ಕಾಂಪ್ಲೆಕ್ಸ್ ಗೆ ಬರಲು ಬಹಳ ತಡವಾಗಿತ್ತು. ರಾತ್ರಿ 8 ಗಂಟೆಯ ಹೊತ್ತಿಗೆ ನಾವು ಅಲ್ಲಿ ತಲುಪುತ್ತಿದ್ದಂತೆ ಊಟ, ಹರಟೆ ಮುಗಿಯಲು ರಾತ್ರಿಯ 1 ಗಂಟೆಯೇ ಆಗಿಬಿಟ್ಟಿತು. ಸ್ನೇಹಿತ ನಮ್ಮನ್ನು ಮಾತಿನಲ್ಲಿ ತೊಡಗಿಸಿ ಅಷ್ಟೊಂದು ವಿಳಂಬ ಮಾಡಿಬಿಟ್ಟಿದ್ದ. ರಾತ್ರಿ ಎಷ್ಟೊತ್ತಾದರೂ ಟ್ಯಾಕ್ಸಿಗಳು ಲಭ್ಯವಾಗುತ್ತವೆ ಎಂದೂ ಆತ ನಮಗೆ ಭರವಸೆ ಕೊಟ್ಟಿದ್ದ.

ಆದರೆ ನಮಗೆ ಅವರು ಟ್ಯಾಕ್ಸಿ ಕರೆಸಲು ಫೋನ್‌ ಮಾಡುವಾಗ, ನನ್ನ ಪತ್ನಿಯನ್ನುದ್ದೇಶಿಸಿ, ``ಇಂದು ನೀವು ನನ್ನ ಗೆಳೆಯನ ಜೊತೆಗೆ ಇರುವಿರಿ. ಹೀಗಾಗಿ ನಾನು ಮಹಿಳಾ ಡ್ರೈವರ್‌ ಇರುವ ಟ್ಯಾಕ್ಸಿಯನ್ನೇ ಕರಿಸ್ತೀನಿ,'' ಎಂದು ಹೇಳಿದ. ನನ್ನ ಮುಖದಲ್ಲಿ ಕೇವಲ ಆಶ್ಚರ್ಯದ ಭಾವನೆಯಷ್ಟೇ ಇತ್ತು. ಆದರೆ ನನ್ನ ಪತ್ನಿಯ ಮುಖದಲ್ಲಿ ಆಶ್ಚರ್ಯದ ಜೊತೆಗೆ ಗಾಬರಿಯೂ ಇತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ