``ಅಬ್ಬಾ, ಕೊಂಚ ಟೈಮ್ ಸಿಕ್ತು ಸುತ್ತಾಡೋಕೆ. ಹೆವಿ ವರ್ಕ್‌ನಿಂದ ಬೋರ್‌ ಆಗಿಬಿಟ್ಟಿದೆ,'' ಎನ್ನುತ್ತಾ ಸುಧಾಕರ್‌ ಕೆರೆಯ ಬಳಿ ಕಾರನ್ನು ತಿರುಗಿಸಿದ. ರಮಾ ಅತ್ತ ಗಮನಿಸಲಿಲ್ಲ.

``ಹವಾಮಾನ ಸುಂದರವಾಗಿದೆ. ಬಾ, ಸ್ವಲ್ಪ ಹೊತ್ತು ಸುತ್ತಾಡಿ ಬರೋಣ.''

``ಆದರೆ ಸರ್‌......'' ರಮಾ ತಡವರಿಸಿದಳು. ಒಬ್ಬ ಗಂಡಸಿನೊಂದಿಗೆ ಏಕಾಂತದಲ್ಲಿ ಸುತ್ತಾಡುವ ಅವಕಾಶ ಅವಳಿಗೆ ಈಗಲೇ ಸಿಕ್ಕಿದ್ದು. ಅವಳಿಗೆ ಆಗತಾನೇ ಮದುವೆಯಾಗಿತ್ತು. ಅವಳು ಗಂಡ ನಾಗೇಶನೊಂದಿಗೆ ಎಲ್ಲೂ ಹೋಗಿರಲಿಲ್ಲ.

``ಏನು ಯೋಚಿಸ್ತಿದ್ದೀಯ? ಹಿಂದೆಂದೂ ಕೆರೆ ನೋಡಿರಲಿಲ್ವಾ? ನೋಡು ಎಷ್ಟು ಚೆನ್ನಾಗಿ ಪಿಕ್ನಿಕ್‌ ಸ್ಪಾಟ್‌ ಮಾಡಿದ್ದಾರೆ,'' ಸುಧಾಕರ್‌ ಖುಷಿಯಿಂದ ಹೇಳಿದ.

``ಮದುವೆಯಾದ ತಕ್ಷಣವೇ ನನಗೆ ಕೆಲಸ ಸಿಗ್ತು. ನಾನು ಮತ್ತು ನನ್ನ ಗಂಡ ನಾಗೇಶ್‌ ಎಲ್ಲಿಯೂ ಸುತ್ತಾಡಲು ಹೋಗಲಾಗಲಿಲ್ಲ. ನಾವಿಬ್ಬರೂ ಈಗಲೂ ಅಪರಿಚಿತರಂತಿದ್ದೀವಿ,'' ರಮಾ ಹೇಳಿದಳು.

ಸುಧಾಕರ್‌ ರಮಾಳ ಕೈಯನ್ನು ತನ್ನ ಕೈಗೆ ತೆಗೆದುಕೊಂಡು, ``ಧೈರ್ಯವಾಗಿರುವ. ಎಲ್ಲ ಸರಿಹೋಗುತ್ತೆ ರಮಾ,'' ಎಂದ.

ರಮಾಳ ಕೈಗಳಲ್ಲಿನ ಮೆಹೆಂದಿ ಇನ್ನೂ ತಾಜಾ ಆಗಿರುವುದನ್ನು ಸುಧಾಕರ್‌ ನೋಡಿದ. ಅವನು ನಗುತ್ತಾ, ``ಮೆಹೆಂದಿ ಡಾರ್ಕ್‌ಆಗಿದ್ದರೆ ಅದರರ್ಥ ಏನೂಂತ ಗೊತ್ತಾ?'' ಎಂದ.

``ಏನು?'' ರಮಾ ಮುಗ್ಧತೆಯಿಂದ ಕಣ್ಣರಳಿಸಿದಳು.

``ಅವಳಿಗೆ ಬಹಳ ಪ್ರೀತಿಸುವ ಗಂಡ ಸಿಗುತ್ತಾನೆ.''

``ಇಲ್ಲ. ಅವನು ಬಹಳ ಸೋಮಾರಿ ಹಾಗೂ ಹಟಮಾರಿ ಆಗಿರುತ್ತಾನೆ,'' ಎಂದು ಅವಳು ನಗತೊಡಗಿದಳು. ಸುಧಾಕರ್‌ ಕಾರು ನಿಲ್ಲಿಸಿದ. ಇಬ್ಬರೂ ಕೆರೆಯ ತೀರದಲ್ಲಿ ಇಳಿದರು. ರಮಾ ಬಗ್ಗಿ ನೀರು ಎರಚಿದಾಗ ಸುಧಾಕರ್‌ ಹಿಂದಕ್ಕೆ ಸರಿದ. ಆದರೆ ತನ್ನನ್ನು ಸಂಭಾಳಿಸಿಕೊಳ್ಳಲಾಗದೆ ನೀರಲ್ಲಿ ಬಿದ್ದ. ರಮಾ ಅವನನ್ನು ಕಂಡು ನಗತೊಡಗಿದಳು. ಸುಧಾಕರ್‌ ನೀರಲ್ಲಿ ನಿಂತು ಅವಳ ನಗು ಹಾಗೂ ಅಪ್ರತಿಮ ಸೌಂದರ್ಯ ಕಂಡು ಮುಗ್ಧನಾಗಿ ನೋಡುತ್ತಲೇ ಇದ್ದ. ರಮಾ ಕೈ ಚಾಚಿದಾಗ ಅವನು ನಿದ್ದೆಯಿಂದೆಂಬಂತೆ ಎಚ್ಚರಗೊಂಡ.

ಅವನು ಅವಳ ಕೈ ಹಿಡಿದುಕೊಂಡು ತುಂಟತನದಿಂದ ಹೇಳಿದ, ``ನಿನ್ನನ್ನೂ ಕೆರೇಲಿ ಬೀಳಿಸ್ಲಾ?''

``ಬೇಡ ಬೇಡ. ನನ್ನಾಣೆ.....''

ಸುಧಾಕರ್‌ ನಗುತ್ತಾ ಹೊರಬಂದ, ``ನೀನು ಆಣೆ ಇಟ್ಟಿದ್ದಕ್ಕೆ ಬಿಟ್ಟೆ. ಇಲ್ಲಾಂದ್ರೆ.....''

``ಹೌದಾ.... ಅದು ಸರಿ ಈಗ ಆಫೀಸಿಗೆ ಹೇಗೆ ಬರ್ತೀರಿ?''

``ನಡಿ, ಮಾಲ್ ಗೆ ಹೋಗಿ ಬಟ್ಟೆ ಖರೀದಿಸ್ತೀನಿ. ಅಲ್ಲೇ ಡ್ರೆಸ್ಸಿಂಗ್‌ ರೂಮಿನಲ್ಲಿ ಬದಲಿಸ್ತೀನಿ.''

``ಸರಿ.''

ಸುಧಾಕರ್‌ ಬಟ್ಟೆ ಖರೀದಿಸಿ ಬದಲಾಯಿಸಲು ಡ್ರೆಸ್ಸಿಂಗ್‌ ರೂಮಿಗೆ ಹೋದ. ರಮಾ ಅತ್ತಿತ್ತ ಸುತ್ತಾಡುತ್ತಾ ಇತರ ವಸ್ತುಗಳನ್ನು ನೋಡತೊಡಗಿದಳು. ಪಕ್ಕದಲ್ಲೇ ಜ್ಯೂವೆಲರಿ ಶಾಪ್‌ ಇತ್ತು.`ವಾವ್‌, ಬಳೆಗಳ ಸೆಟ್‌ ಎಷ್ಟು ಸುಂದರವಾಗಿದೆ. ಈ ಫೀರೋಜಿ ಸೆಟ್ ಅಂತೂ ಬಹಳ ಸುಂದರವಾಗಿದೆ', ಎಂದುಕೊಂಡು, ``ಎಕ್ಸ್ ಕ್ಯೂಸ್‌ ಮಿ, ಈ ಫೀರೋಜಿ ಸೆಟ್‌ ಎಷ್ಟಾಗುತ್ತೆ?'' ಎಂದು ಕೇಳಿದಳು.

``9,900 ರೂ. ಮೇಡಂ.''

``ಅಬ್ಬಾ, ಬೆಲೆ ಹೆಚ್ಚಾಯ್ತು. ಆದರೆ ಬಹಳ ಚೆನ್ನಾಗಿದೆ. ಥ್ಯಾಂಕ್ಯು. ಇನ್ನೊಂದು ಸಾರಿ ತಗೋತೀನಿ,'' ಎಂದು ನಗುತ್ತಾ ಹೊರಟಳು.

``ಯಾಕೆ ರಮಾ ಹೀಗೆ ಹೇಳ್ತೀಯ. ನಿನ್ನ ಮುಂದೆ ಇದೇನೂ ಅಲ್ಲ,'' ಹಿಂದಿನಿಂದ ಬಂದ ಸುಧಾಕರ್‌ ಅವಳ ಹೆಗಲ ಮೇಲೆ ಕೈ ಇಡುತ್ತಾ ಹೇಳಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ