``ಶ್ರೀಕಾಂತ್‌.... ಬೇಗ ಬೇಗ ಆ ಮೊಟ್ಟೆ ತಿಂದು ಮುಗಿಸು,'' ತನ್ನ ಲೋಟಕ್ಕೆ ಮತ್ತೊಂದಿಷ್ಟು ಕಾಫಿ ಸುರಿದುಕೊಳ್ಳುತ್ತಾ ಹೇಳಿದಳು ಅಪರ್ಣಾ.

``ನನಗೆ ಈ ಹಾಲು ಮೊಟ್ಟೆಗಳಿಂದ ಸಾಕಾಗಿದೆಯಮ್ಮ,'' ಮೂಗನ್ನು ಎಡಗೈಯಿಂದ ಉಜ್ಜುತ್ತ ಹೇಳಿದ ಶ್ರೀಕಾಂತ.

``ಹೇಳಿದಷ್ಟು ಕೇಳೋ... ಶ್ರೀಕಾಂತೂ....''

ಅಪರ್ಣಾ ನವಿರಾಗಿ ಮಗನನ್ನು ಗದರಿಸುತ್ತ ಹೇಳಿದಳು, ``ನೀನೇನೂ ಎಳೆ ಮಗುವಲ್ಲ, ಆರೋಗ್ಯಕ್ಕೆ ಹಾಲು ಮೊಟ್ಟೆ ಎಷ್ಟು ಒಳ್ಳೆಯದೆಂದು ನಿನಗೆ ಗೊತ್ತಿಲ್ಲವೇ?''

ಮತ್ತೇನೂ ಮಾತನಾಡದೆ ಆ ದೊಡ್ಡ ಗ್ಲಾಸನ್ನು ತೆಗೆದುಕೊಂಡು, ಔಷಧ ಕುಡಿಯುವವನಂತೆ ಹಾಲನ್ನು ಗಟಗಟನೆ ಕುಡಿದು ಮುಗಿಸಿದ ಶ್ರೀಕಾಂತ.

``ಹ್ಞಾಂ, ಹಾಗಿರುವ ಜಾಣಮರಿ. ಹಾಗೇ ಆ ಮೊಟ್ಟೆ ಖಾಲಿ ಮಾಡಿ, ಆ ಬ್ರೆಡ್‌ ಮತ್ತು ಜಾಮ್ ತಿಂದು ಮುಗಿಸು,'' ಎನ್ನುತ್ತ ಅವನ ಮುಂದಿದ್ದ ಬಟ್ಟಲುಗಳತ್ತ ಬೊಟ್ಟು ಮಾಡಿದಳು.

``ಅಮ್ಮಾ, ನೀನು ಸಹ ಲಲಿತಾ ಅತ್ತೆ ತರಹ ತಿಂಡಿಗೆ ಬಿಸಿ ಬಿಸಿ ದೋಸೆ ಏಕೆ ಮಾಡಬಾರದು? ಬಿಸಿ ಬಿಸಿ ದೋಸೆ.... ಫಿಲ್ಟರ್‌ಕಾಫಿ.... ಅಹಾಹಾಹಹಹಹ....''

``ನಿನ್ನ ಲಲಿತತ್ತೆಯ ಪುರಾಣ ಇಲ್ಲಿ ತೆಗೀಬೇಡ. ಬಾಯಿ ಮುಚ್ಚಿಕೊಂಡು ಬ್ರೆಡ್‌ ಮೊಟ್ಟೆ ತಿಂದು ಮುಗಿಸು,'' ಲಲಿತಾಳ ಹೆಸರು ಕೇಳಿ ಅವಳ ಮೈಯೆಲ್ಲ ನಖಶಿಖಾಂತ ಉರಿಯಿತು.

ತಾಯಿಯ ಸಿಟ್ಟನ್ನು ಕಂಡು ಹೆಚ್ಚಿಗೆ ಮಾತನಾಡದೆ, ಮೊಟ್ಟೆಯಿದ್ದ ಬಟ್ಟಲನ್ನು ಹತ್ತಿರಕ್ಕೆಳೆದುಕೊಂಡ ಶ್ರೀಕಾಂತ. ಇತ್ತೀಚೆಗೆ ಅಮ್ಮನಿಗೆ ಕಾರಣವಿಲ್ಲದೆ ಕೋಪ ಬರುತ್ತದೆ ಎಂದುಕೊಂಡ.

``ಮೇಡಂ, ನಿಮಗೆ ಫೋನ್‌ ಬಂದಿದೆ,'' ಎಂದಳು ಕೆಲಸದ ಕಮಲಾ. ಅಪರ್ಣಾ ಬೇಗ ಬೇಗ ಕಾಫಿ ಹೀರಿ, ಅತ್ತ ಓಡಿದಳು.

``ತುಂಬಾ ತಡ ಮಾಡಬೇಡ,'' ಎಂದು ಮತ್ತೊಮ್ಮೆ  ಶ್ರೀಕಾಂತನನ್ನು ಗದರಿಸಲು ಅವಳು ಮರೆಯಲಿಲ್ಲ.

``ಓ! ಮಿಸೆಸ್‌ ಮನೋಹರ್‌, ನಿನ್ನೆ ಕಾರ್ಯ ಎಲ್ಲಾ ಸರಿಯಾಗಿ ಮುಗಿಯಿತಾ.....? ಇಲ್ಲವೋ.... ಓ ಹಾಗಾ....?''

ಶ್ರೀಂಕಾತ್‌ ಕಮಲಾಳತ್ತ ಮಿಕಿಮಿಕಿ ನೋಡುತ್ತಿದ್ದ. ಅವಳು ಅವನತ್ತ ಅಣಕದ ನಗು ಬೀರಿದಳು. ಅವನು ಸಮಯ ಸಾಧಿಸಿ ಬೆಂದ ಮೊಟ್ಟೆಯನ್ನು ಕಸದ ಬುಟ್ಟಿಗೆ ಎಸೆದ.

``ಮೀಟೂ....ಮೀಟೂ....'' ಎಂದು ಬಾಲ್ಕನಿಯ ಪಂಜರದಲ್ಲಿದ್ದ ಗಿಣಿ ಶ್ರೀಕಾಂತನನ್ನು ಎಚ್ಚರಿಸಿತು.

``ನೀನು ಬಾಯಿ ಮುಚ್ಚು,'' ಎಂದು ಅದನ್ನು ಗದರಿದ ಶ್ರೀಕಾಂತ.

ಶ್ರೀಕಾಂತ ಮುಂದಿನ ಹಾಲ್‌ನಲ್ಲಿ ಸೋಫಾದ ಮೇಲೆ ಕುಳಿತು ತನ್ನ ಸುತ್ತಲೂ ಕಾಮಿಕ್ಸ್ ಗೊಂಬೆಗಳನ್ನು ಹರಡಿಕೊಂಡು ಕುಳಿತಿದ್ದ. ಗಡಿಯಾರ 11 ಗಂಟೆ ಬಾರಿಸಿತು.

ಶ್ರೀಕಾಂತ ಕುಳಿತಲ್ಲೇ ಆಕಳಿಸಿದ. ಅವನು ಶಾಲೆಗೆ ಯಾಕೆ ಬಿಡು ಬರುತ್ತದೋ ಎಂದುಕೊಂಡ. ರಜಾ ದಿನಗಳು ಎಂದರೆ ಬಲು ಬೇಸರ. ಏಕೆಂದರೆ ಅವನ ತಾಯಿ ಅವನನ್ನು ಹೊರಗೆ ಆಡಲು ಬಿಲ್‌ಕುಲ್‌‌ಬಿಡುತ್ತಿರಲಿಲ್ಲ. ಬಿಸಿಲಿಗೆ ಹೋಗಬೇಡ ಎಂದು ಗದರುತ್ತಿದ್ದಳು.

ಅಷ್ಟರಲ್ಲಿ ಮೇಲಿನಿಂದ ಅಪರ್ಣಾ ಅಲಂಕಾರ ಪೂರೈಸಿ ಕೆಳಗೆ ಬಂದಳು. ಹೊರಗೆ ಹೋಗುವ ಸನ್ನಾಹದಲ್ಲಿ ಇದ್ದಳು. ಅವಳ ಅಂದದ ಮೈಕಟ್ಟಿಗೆ ಗುಲಾಬಿ ಬಣ್ಣದ ಸೀರೆ ಅಚ್ಚುಕಟ್ಟಾಗಿ ಹೊಂದಿಕೊಂಡಿತ್ತು.

ಅವಳ ಕೈಗಳಲ್ಲಿದ್ದ ಅದೇ ಬಣ್ಣದ ಗಾಜಿನ ಬಳೆಗಳು ಬೆಳಕಿಗೆ ಫಳಗುಡುತ್ತಿದ್ದವು. ಬೇಗ ಬೇಗ ತಲೆ ಬಾಚಿಕೊಂಡ ಶಾಸ್ತ್ರ ಮಾಡಿದಳು. ಅವಳು ದೇಹಕ್ಕೆ ಪೂಸಿಕೊಂಡಿದ್ದ ಸೆಂಟ್‌ ಸುತ್ತಲೂ ಪರಿಮಳ ಬೀರುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ