ಕಾವ್ಯಾ ಪತ್ರಿಕಿ ಓದುತ್ತಾ ಕುಳಿತಿದ್ದಾಗ ಕಾಲಿಂಗ್‌ ಬೆಲ್ ‌ಶಬ್ದವಾಯಿತು. ಬಾಗಿಲು ತೆರೆದಾಗ ಎದುರಿಗೆ ಅವಳ ಚಿಕ್ಕಂದಿನ ಗೆಳತಿ ಮೇಘಾ ನಿಂತಿದ್ದಳು. ಮೇಘಾ ಶಾಲೆಯಿಂದ ಹಿಡಿದು ಕಾಲೇಜಿನವರೆಗೆ ಕಾವ್ಯಾಳ ಜೊತೆಯಲ್ಲೇ ಓದುತ್ತಿದ್ದಳು. ಈಗ ಅವಳು ಕಾವ್ಯಾಳ ಗಂಡ ಸಂಜೀವನ ಆತ್ಮೀಯ ಮಿತ್ರ ಈಶ್ವರ್‌ನ ಹೆಂಡತಿಯಾಗಿದ್ದಳು. ಅವಳು ಒಂದು ಟಿ.ವಿ. ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು.

ಕಾವ್ಯಾಳ ಮನದಲ್ಲಿ ಸ್ವಲ್ಪ ಹೊತ್ತಿನ ಮುಂಚಿನವರೆಗೂ ಶಾಂತಿ ನೆಲೆಸಿತ್ತು. ಈಗ ಅದರ ಜಾಗವನ್ನು ಅಸಹನೆ ಆಕ್ರಮಿಸಿಕೊಂಡಿತು. ಆದರೂ ಅವಳು ಬಾಗಿಲು ತೆರೆದು ನಗುತ್ತಾ ಸ್ವಾಗತಿಸಬೇಕಾಯಿತು, ``ಅರೆ ಮೇಘಾ.... ಬಾ, ಬಾ, ಬಹಳ ದಿನಗಳಾಯ್ತು ನೋಡಿ.''

ಮೇಘಾ ಒಳಗೆ ಬಂದು ಇಡೀ ಡ್ರಾಯಿಂಗ್‌ ರೂಮನ್ನು ತೀಕ್ಷ್ಣವಾಗಿ ನೋಡಿದಳು. ಕಾವ್ಯಾ ಡ್ರಾಯಿಂಗ್‌ ರೂಮ್ ಅಷ್ಟೇ ಅಲ್ಲ, ಇಡೀ ಮನೆಯನ್ನು ಸುಂದರವಾಗಿ  ಅಲಂಕರಿಸಿದ್ದು ತಾನೂ ಚೆನ್ನಾಗಿ ಸಿಂಗರಿಸಿಕೊಂಡಿದ್ದಳು. ಮೇಘಾ ಸೋಫಾದ ಮೇಲೆ ಕೂತು, ``ಈ ಕಡೆ ಒಂದು ಕೆಲಸ ಇತ್ತು. ಹಾಗೇ ನಿನ್ನನ್ನು ಭೇಟಿ ಆಗೋಣ ಅಂದ್ಕೊಂಡೆ. ಹ್ಯಾಗಿದ್ದೀಯಾ?'' ಎಂದು ಕೇಳಿದಳು.

``ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯಾ?''

ಎದುರಿಗೆ ಸ್ಟ್ಯಾಂಡ್‌ ಮೇಲೆ ಕಾವ್ಯಾಳ ಮಗನ ಫೋಟೋ ಫ್ರೇಮ್ ಇತ್ತು. ಅದನ್ನು ನೋಡಿದ ಮೇಘಾ ಹೇಳಿದಳು, ``ನಿನ್ನ ಮಗ ದೊಡ್ಡವನಾದ.''

``ಹೌದು. ಆದರೆ ಬಹಳ ತುಂಟ. ಇಡೀ ದಿನ ಏನಾದರೂ ಚೇಷ್ಟೆ ಮಾಡ್ತಾನೇ ಇರ್ತಾನೆ.'' ಹೀಗೆ ಹೇಳುವಾಗ ಕಾವ್ಯಾಳ ಮುಖ ಹೆಮ್ಮೆಯಿಂದ ಬೀಗುತ್ತಿರುವುದನ್ನು ಮೇಘಾ ಕಂಡಳು.

``ಮನೆ ಚೆನ್ನಾಗಿ ಅಲಂಕರಿಸಿದ್ದೀಯ. ಒಳ್ಳೆಯ ಟೇಸ್ಟ್ ಇದೆ ನಿನಗೆ.''

``ಏನು ಮಾಡೋದು? ಕೆಲಸ ಏನೂ ಇಲ್ಲಾಂದ್ರೆ ಮನೆ ಅಲಂಕಾರ ಆದ್ರೂ ಮಾಡಬೇಕು.''

``ಈಗ ಮಗ ದೊಡ್ಡೋನಾಗಿದ್ದಾನೆ. ಕೆಲಸಕ್ಕೆ ಸೇರ್ಕೋಬಹುದು.''

``ನಂದು ಮಾಮೂಲಿ ಡಿಗ್ರಿ. ನನಗೆ ಯಾರು ಕೆಲಸ ಕೊಡ್ತಾರೆ? ಇನ್ನೊಂದು ವಿಷಯ ಅಂದ್ರೆ ನಾನು ಕೆಲಸಕ್ಕೆ ಹೋಗೋದು ಇವರಿಗೆ ಇಷ್ಟ ಇಲ್ಲ.''

``ನೀನು ಸಂಜೀವ್ ಗೆ ಹೆದರ್ತೀಯಾ?''

``ಇದರಲ್ಲಿ ಹೆದರೋದೇನಿಲ್ಲ. ಪತಿ ಪತ್ನಿಯರು ಪರಸ್ಪರರ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳಬೇಕು.''

ಮೇಘಾ ನಕ್ಕಳು, ``ಒಂದು ವೇಳೆ ಇಬ್ಬರ ಆಲೋಚನೆಗಳಲ್ಲಿ ಭೂಮ್ಯಾಕಾಶಗಳ ಅಂತರವಿದ್ದರೆ?''

ಅದನ್ನು ಕೇಳಿ ಕಾವ್ಯಾಗೆ ರೇಗಿತು, ``ಸರಿ, ಪುಟ್ಟ ಈಶ್ವರ್‌ನ ಯಾವಾಗ ನಮಗೆ ತೋರಿಸ್ತೀಯಾ?'' ಎಂದಳು.

ಮೇಘಾ ಭುಜ ಅಲುಗಿಸುತ್ತಾ ಹೇಳಿದಳು, ``ನನಗೆ ನಿನ್ನ ತರಹ ಮನೇಲಿ ಆರಾಮಾಗಿ ಇರೋಕೆ ಆಗಲ್ಲ. ಟಿವಿ ಚಾನೆಲ್ ‌ಕೆಲಸ ಸುಲಭ ಅಲ್ಲ. ಕೈ ತುಂಬಾ ಸಂಬಳ ಕೊಡ್ತಾರೆ. ಕೆಲಸಾನೂ ಹಾಗೇ ತಗೋತಾರೆ.''

ಮೇಘಾಳ ಮಾತು ಕಾವ್ಯಾಗೆ ಹಿಡಿಸಲಿಲ್ಲ. ಆದರೂ ಸುಮ್ಮನಿದ್ದಳು. ಏಕೆಂದರೆ ಮೇಘಾಳ ಮಾತುಗಳಲ್ಲಿ ಸದಾ ನೀರಸತೆ ಇರುತ್ತಿತ್ತು. ಕಾವ್ಯಾಳ ಮದುವೆ 20ನೇ ವಯಸ್ಸಿಗೇ ಆಗಿತ್ತು. ಹುಡುಗ ಅವಳ ಅಪ್ಪನ ಅತ್ಯಂತ ಪ್ರೀತಿಯ ಸ್ಟೂಡೆಂಟ್‌ ಆಗಿದ್ದ. ಅವರ ಅಧೀನದಲ್ಲೇ ಪಿಎಚ್‌ಡಿ ಮಾಡಿ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಎಗ್ಸಿಕ್ಯೂಟಿವ್ ‌ಆಗಿದ್ದ. ಒಳ್ಳೆಯ ಸಂಬಳದ ಜೊತೆಗೆ ಇತರ ಎಲ್ಲಾ ಸೌಕರ್ಯಗಳೂ ಇದ್ದವು. ದೇಶ ವಿದೇಶಗಳ ಸುತ್ತಾಟ ಇತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ