ಬಹಳ ವರ್ಷಗಳಿಂದ ಭೇಟಿಯಾಗದ ನಿಮ್ಮ ಹಳೆಯ ಕಾಲೇಜು ಸಹಪಾಠಿ ಅಥವಾ ಗೆಳೆಯರನ್ನು ಅವರು ಅದೇ ಊರು ಅಥವಾ ಸುತ್ತಮುತ್ತಲಲ್ಲಿ ವಾಸವಾಗಿದ್ದರೆ, ಖಂಡಿತ ನಿಮ್ಮ ಸ್ನೇಹಿತರ ಮದುವೆ ಅಥವಾ ಇನ್ನಾವುದೇ ಸಮಾರಂಭದಲ್ಲಿ ಭೇಟಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಬಹಳ ವರ್ಷಗಳಿಂದ ಅಗಲಿರುವವರು, ನೂರಾರು ಮೈಲಿಗಳ ಅಂತರದಲ್ಲಿ ವಾಸವಾಗಿರುವವರು, ಮದುವೆ ಚಪ್ಪರದಲ್ಲಿ ಭೇಟಿಯಾಗುವುದು ಆಕಸ್ಮಿಕವಾದರೂ, ಅನಿರೀಕ್ಷಿತವೇನಲ್ಲ. ಅಂಥ ಅಪರೂಪದ ಸಂದರ್ಭಗಳು ಕೇವಲ ರೋಮಾಂಚನವನ್ನು ಮಾತ್ರ ಉಂಟು ಮಾಡದೆ, ಹೃದಯದ ಬೆಸುಗೆಗೂ ಕಾರಣವಾಗಬಹುದು.

ಇಂಥದೇ ಒಂದು ಸನ್ನಿವೇಶವನ್ನು ಶ್ರೀವತ್ಸ ಹಾಗೂ ಪಂಕಜಾ ಎದುರಿಸಬೇಕಾಯಿತು. ಅದು ಮನಸ್ಸಿಗೆ ಮುದ ಕೊಡುವ ಸನ್ನಿವೇಶ ಮಾತ್ರವಲ್ಲದೆ, ಮನಸ್ಸಿಗೆ ವೇದನೆಯನ್ನೂ ತಂದೊಡ್ಡುವ ಸಂದರ್ಭವಾಗಿತ್ತು. ಆ ಜನಭರಿತ ಗುಂಪಿನಲ್ಲಿ ಹಲವಾರು ತಿಂಗಳ ಮಧ್ಯೆ, ಪರಸ್ಪರ ಗುರುತಿಸಿದೊಡನೆ ಓಡಿಹೋಗಿ ಕೈ ಚಾಚಿ ಅಪ್ಪಿಕೊಳ್ಳುವುದಕ್ಕೆ ಅವರು ಎಳೆ ಪ್ರಾಯದವರಾಗಿ ಇರಲಿಲ್ಲ. ಜನಭರಿತ ಆರತಕ್ಷತೆಯ ಸಮಾರಂಭದ ಮಧ್ಯೆ ಪ್ರೌಢವಯಸ್ಕನಾದ ಒಬ್ಬ ವ್ಯಕ್ತಿ, ಒಬ್ಬ ಹೆಂಗಸನ್ನು ಕಂಡೊಡನೆ ಬಡಬಡನೆ ಮಾತನಾಡಿಬಿಡು ಹಾಗಿಲ್ಲವಲ್ಲ? ಎಳೆ ಪ್ರಾಯದ ತರುಣ ತರುಣಿಯರು ಸದ್ದು ಗದ್ದಲಗಳೊಡನೆ ಹಾಗೆ ಮಾಡಬಹುದೇನೋ? ಆದರೆ ಶ್ರೀವತ್ಸ ಹಾಗೂ ಪಂಕಜಾ ಆ ವಯಸ್ಸನ್ನು ಎಂದೋ ದಾಟಿ ಬಂದಿದ್ದರು. ಒಂದೇ ಸಾಲಿನ ಕುರ್ಚಿಗಳಲ್ಲಿ ಕುಳಿತಿದ್ದರೂ ಅವರ ನಡುವೆ ಅಪಾರ ಅಂತರವಿದ್ದಂತಿತ್ತು. ತಮ್ಮ ಪಾಡಿಗೆ ಈ ಜನಜಂಗುಳಿಯ ಗೊಡವೆಯೇ ಬೇಡ ಎಂದು ನಿರ್ಲಿಪ್ತ ಮನೋಭಾವದಲ್ಲಿ ತಟಸ್ಥರಾಗಿ ಕುಳಿತಿದ್ದರು. ಹೀಗೇ... ಆಕಸ್ಮಿಕವಾಗಿ... ಕತ್ತು ತಿರುಗಿಸಿ ನೋಡಿದಾಗ ಪರಸ್ಪರ ಗುರುತಿಸಿದರು. ತನಗೇ ಅರಿವಿಲ್ಲದಂತೆ ಪಂಕಜಾ ಕೂಗಿದಳು. ``ಅರೆ, ಶ್ರೀವತ್ಸ....'' ಇದ್ದಕ್ಕಿದ್ದಂತೆ ಅವಳ ಧ್ವನಿ ನಿಂತು ಹೋಯಿತು. ಒಂದು ಘಳಿಗೆಯಲ್ಲಿ ಅವಳ ಮುಖದ ಮೇಲೆ ನೂರಾರು ಭಾವನೆಗಳು ನಲಿದಾಡಿ ಹೋದವು.

``ಓಹ್‌....! ನೀವಿಲ್ಲಿ.... ಅದು ಹೀಗೆ?'' ಒಡನೆಯೇ ಅವಳು ತನ್ನ ಕುರ್ಚಿಯಿಂದ ಎದ್ದು ಸ್ವಲ್ಪ ಶ್ರೀವತ್ಸವನ ಪಕ್ಕಕ್ಕೆ ಬಂದಳು. ಶ್ರೀವತ್ಸ ತಪ್ಪು ಒಪ್ಪಿಕೊಳ್ಳುವವನಂತೆ, `ಇಲ್ಲಿ  ಕುಳಿತಿದ್ದವಳು ನೀನೇ ಎಂದು ತಿಳಿಯಲೇ ಇಲ್ಲ. ಸುಮಾರು ಹೊತ್ತಿನಿಂದ ಇಷ್ಟು ಹತ್ತಿರ ಕುಳಿತಿದ್ದರೂ ನಮಗೆ ಗೊತ್ತಾಗಲೇ ಇಲ್ಲವಲ್ಲ?' ಎಂದು ಹೇಳಬೇಕೆಂದುಕೊಂಡ.

ಅವಳು ಬಳಿ ಬಂದ ಕಾರಣಕ್ಕಾಗಿ ತಾನು ಪಕ್ಕಕ್ಕೆ ಸರಿದು ತಮ್ಮಿಬ್ಬರ ನಡುವೆ ಮತ್ತಷ್ಟು ಅಂತರವನ್ನು ಹೆಚ್ಚಿಸಲು ಅವನು ಬಯಸಲಿಲ್ಲ. ಅವರು ಹಾಗೆ ಬಹಳ ಹೊತ್ತು ಮುಖ ಮುಖ ನೋಡಿಕೊಳ್ಳುತ್ತ, ಯಾವ ಮಾತುಗಳನ್ನಾಡಬೇಕು ಎಂದು ತಡಬಡಾಯಿಸುತ್ತ ಸುಮ್ಮನೆ ಕುಳಿತಿದ್ದರು. ಆ ನಿಶ್ಶಬ್ದ, ಆ ಗಾಢ ಮೌನ ಇಬ್ಬರಿಗೂ ಅಸಹನೀಯವೆನಿಸುತ್ತಿತ್ತು. ಕೊನೆಗೆ ಶ್ರೀವತ್ಸ  ಆ ಮೌನವನ್ನು ಮುರಿಯಬೇಕೆಂದುಕೊಂಡ. ಹೀಗೆ ಇನ್ನೂ ಸ್ವಲ್ಪ ಹೊತ್ತು ಮಾತನಾಡದೆ ಕುಳಿತರೆ, ಪಂಕಜಾ ತನ್ನನ್ನು ನಿರ್ಲಕ್ಷಿಸಿ ಆ ಜನಜಂಗುಳಿಯಲ್ಲಿ ಕರಗಿ ಹೋಗಬಹುದೆಂದುಕೊಂಡ.

``ನಿನಗೆ....ನಿನಗೆ... ಮಂಜುಳಾ ಹೇಗೆ ಗೊತ್ತು?'' ಎಂದು ತಡವರಿಸುತ್ತ ಕೇಳಿದ.

ಆ ದಿನ ಅವರು ಮಂಜುಳಾಳ ಮದುವೆಯ ಆರತಕ್ಷತೆಗೆ ಬಂದಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ