ಆ ಚಿಕ್ಕ ಹೋಟೆಲ್‌ನ ಮೇಜಿನ ಒಂದು ಬದಿಗೆ ಸೀಮಾ, ಮತ್ತೊಂದು ಬದಿಯಲ್ಲಿ ವಿನೋದ್‌ ಮತ್ತು ಅಜಯ್‌ ಕುಳಿತಿದ್ದರು. ಊಟಕ್ಕೆ ಆರ್ಡರ್‌ ಕೊಟ್ಟು ಅವರು ಲೋಕಾಭಿರಾಮವಾಗಿ ಮಾತಾಡತೊಡಗಿದರು. ಆದರೆ ಅವರ ಮಾತುಕತೆಯ ಒಂದು ತುಣುಕೂ ಸೀಮಾಳ ಕಿವಿಗೆ ಬೀಳಲಿಲ್ಲ. ಅವಳಿಗೆ ಕೇವಲ ಮಾತಾಡುವ ಶಬ್ದವಷ್ಟೇ ಕೇಳುತ್ತಿತ್ತು. ಅವಳು ಕಣ್ಣು ಮುಚ್ಚಿಕೊಂಡಿದ್ದಳು. ಆದರೆ ತಟ್ಟೆ, ಚಮಚಗಳ ಸದ್ದಿನಿಂದ ಅವಳಿಗೆ ಊಟ ತಂದಿರಿಸಲಾಗಿದೆ ಎಂದು ಅರಿವಾಯಿತು. ಅವಳು ಕಣ್ತೆರೆದು ವಿನೋದ್‌ ಮತ್ತು ಅಜಯ್‌ರನ್ನು ನೋಡುತ್ತಿದ್ದಂತೆ ಚಮಚವನ್ನು ಕೈಗೆತ್ತಿಕೊಂಡಳು. ಆದರೆ ಮೊದಲ ತುತ್ತನ್ನು ನುಂಗುವುದೂ ಅವಳಿಗೆ ಬಹಳ ಪ್ರಯಾಸವಾಯಿತು.

``ಏಕೆ? ನೀನು ಏನನ್ನೂ ಮುಟ್ಟುತ್ತಲೇ ಇಲ್ಲವಲ್ಲ?'' ವಿನೋದ್‌ ಕೊಂಚ ಕಠಿಣವಾಗಿ ಪ್ರಶ್ನಿಸಿದ.

``ನನ್ನ ಕೈಲಿ ಊಟ ಮಾಡಕಾಗ್ತಾ ಇಲ್ಲಾರೀ, ಯಾಕೋ ಮೈ ಚೆನ್ನಾಗಿಲ್ಲ. ಕಾರಿನ ಕೀ ಕೊಡಿ. ನಾನು ಕಾರಲ್ಲಿ ಮಲಗಿಕೊಳ್ತೀನಿ. ನೀವು ಊಟ ಮಾಡ್ಕೊಂಡು ಬನ್ನಿ.''

``ನಿನ್ನದಂತೂ ಯಾವಾಗಲೂ ಇದೇ ಗೋಳಾಗಿಹೋಯಿತು,'' ಎನ್ನುತ್ತಾ ವಿನೋದ್‌ ಅಜಯ್‌ನ ಕಡೆ ನೋಡಿದ. ಕಾರಿನ ಕೀ ಅಜಯ್‌ ಬಳಿ ಇತ್ತು.ಅಜಯ್‌ ಎದ್ದು, ``ನಾನು ಬಿಟ್ಟು ಬರ್ತೀನಿ,'' ಎನ್ನುತ್ತಾ ಸೀಮಾಳ ಜೊತೆ ಹೊರಟ. ಅಜಯ್‌ ಕಾರಿನ ಬಾಗಿಲು ತೆರೆದು ಹಿಂದಿನ ಸೀಟಿನ ಮೇಲಿದ್ದ ಕೆಲವು ಚಿಕ್ಕ ಪುಟ್ಟ ಸಾಮಾನುಗಳನ್ನು ಸರಿಸಿ, ಕುಶನ್‌ ಒಂದು ಕಡೆ ತೆಗೆದಿಟ್ಟ. ಸೀಟಿನ ಮೇಲೆ ಕುಳಿತುಕೊಂಡ ಸೀಮಾ ತನ್ನ ಪರ್ಸ್‌ ತೆರೆದು ಅದರಿಂದ 3 ಬಗೆಯ ಮಾತ್ರೆಗಳನ್ನು ಹೊರತೆಗೆದಳು. ಅಜಯ್ ಥರ್ಮಾಸಿನಿಂದ ನೀರು ಕೊಡುತ್ತಾ, ``ಈಗೀಗ ಈ ಮಾತ್ರೆಗಳನ್ನೇ ಊಟ, ತಿಂಡಿಯ ಬದಲು ತೆಗೆದುಕೊಳ್ತಿದ್ದೀಯಾಂತ ಕಾಣುತ್ತೆ,'' ಎಂದ.

ಅವನ ವ್ಯಂಗ್ಯದ ಮಾತಿಗೆ ಪ್ರತ್ಯುತ್ತರ ನೀಡದೆ ಸೀಮಾ ಕುಶನ್‌ ಮೇಲೆ ತಲೆ ಇರಿಸಿ ಮಲಗಿಬಿಟ್ಟಳು.

``ನಿನಗೆ ಈಗ ಹುಷಾರಿಲ್ಲ. ಇಲ್ಲವಾದರೆ ನನಗೆ ಬರ್ತಿರೋ ಸಿಟ್ಟಿನಲ್ಲಿ......''

ಆ ಬೇಗುದಿಯಲ್ಲೂ ಸೀಮಾ ನಸುನಗುತ್ತಾ, ``ಹೋಗಿ ಊಟ ಮಾಡ್ಕೊಂಡು ಬನ್ನಿ. ವಿನೋದ್‌ ನಿಮಗಾಗಿ ಕಾಯ್ತಾ ಇದ್ದಾರೆ,'' ಎಂದಳು.

``ಸರಿ, ನೀನು ನೆಮ್ಮದಿಯಿಂದ ಮಲಗು. ಸುಮ್ಮನೆ ಇಲ್ಲದ್ದನ್ನೆಲ್ಲ ಯೋಚಿಸಿ ತಲೆ ಕೆಡಿಸಿಕೊಳ್ಳಬೇಡ,'' ಆದೇಶ ನೀಡುವಂತೆ ಹೇಳಿ ಅಜಯ್‌ ಹೊರಟುಹೋದ.

ಆದರೆ ಹೇಳುವಷ್ಟು ಸುಲಭವಾಗಿ ಯೋಚಿಸುವುದನ್ನು ನಿಯಂತ್ರಿಸಲು ಸಾಧ್ಯವೇ? ಅನಾರೋಗ್ಯದ ಕಾರಣ, ಸೀಮಾ ಆ ಕ್ಷಣ ಅಜಯನ ಪ್ರಶ್ನೆಗಳ ಸುರಿಮಳೆಯಿಂದ ಪಾರಾಗಿದ್ದಳು. ಆದರೆ ಇದು ಎಲ್ಲಿಯವರೆಗೆ ನಡೆದೀತು? ಅವಳು ತಾನಾಗಿ ಅಜಯನಿಗೆ ಎಲ್ಲವನ್ನು ತಿಳಿಸಬೇಕೆಂದಿದ್ದಳು. ಇಲ್ಲಿಯವರೆಗೆ ಅವಳು ಅಜಯ್‌ನಿಂದ ಏನನ್ನೂ ಮುಚ್ಚಿಟ್ಟಿರಲಿಲ್ಲ. ಬಾಲ್ಯದಲ್ಲಿ ತಾವಿಬ್ಬರೂ ಹೇಗೆ  ಒಟ್ಟಿಗೆ ಆಡುತ್ತಿದ್ದೆ ಎಂದು ಸೀಮಾ ನೆನಪಿಸಿಕೊಂಡಳು. ಆದರೆ ಕಿಶೋರಾವಸ್ಥೆಯ ಹೊಸ್ತಿಲಿಗೆ ಬರುತ್ತಿದ್ದಂತೆಯೇ ಅವರು ಪರಸ್ಪರ ಅಗಲಬೇಕಾಯಿತು. ಅಜಯನ ತಂದೆ ಯಾವಾಗಲೂ ಕೆಲಸದ ಮೇಲೆ ಊರಿಂದೂರಿಗೆ ಹೋಗಬೇಕಾಗುತ್ತಿತ್ತು. ಇದರಿಂದ ಅಜಯನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಹುದೆಂದು ಅವರು ಅವನನ್ನು ಪಟ್ಟಣದ ಬೋರ್ಡಿಂಗ್‌ ಸ್ಕೂಲಿಗೆ ಸೇರಿಸಿದರು. ಅನಂತರ ಅವರಿಬ್ಬರೂ ಪರಸ್ಪರ ಭೇಟಿಯಾಗಲಿಲ್ಲ. ಆದರೆ ಇಬ್ಬರೂ ಪತ್ರ ವ್ಯವಹಾರ ಇರಿಸಿಕೊಂಡಿದ್ದರು. ತಮ್ಮ ಜೀವನದ ಅತ್ಯಂತ ಚಿಕ್ಕಪುಟ್ಟ ಘಟನೆಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ