ಪ್ರಕಾಶನನ್ನು ಆಸ್ಪತ್ರೆಯಲ್ಲಿ ಹೀಗೆ ಭೇಟಿಯಾಗುತ್ತೇನೆಂದು ಶುಭಾ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಆಕೆ ಅಮ್ಮನ ಕಾಲಿಗೆ ಪ್ಲ್ಯಾಸ್ಟರ್‌ ಹಾಕಿಸಿಕೊಂಡು, ವೀಲ್ ಚೇರ್‌ ಮೇಲೆ ಕೂರಿಸಿಕೊಂಡು ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಳು. ಎದುರಿನಿಂದ ಪ್ರಕಾಶ್‌ಬರುತ್ತಿರುವುದು ಆಕೆಯ ಕಣ್ಣಿಗೆ ಬಿತ್ತು.

``ಶುಭಾ ನೀನಿಲ್ಲಿ? ಅಮ್ಮ ಆಸ್ಪತ್ರೆಯಲ್ಲಿ ಏನಾಗಿದೆ ಇವರಿಗೆ?''

ಪ್ರಕಾಶನ ಈ ಮಾತುಗಳಿಂದ ಹಲವು ವರ್ಷಗಳ ಬಳಿಕ ಅವನು ಭೇಟಿಯಾಗಿದ್ದಾನೆಂದು ಗೊತ್ತಾಗುತ್ತಲಿತ್ತು.

``ಅಂದಹಾಗೆ ಶುಭಾ, ಹೇಗಿದ್ದಿಯಾ?''

ಅವನು ಅದೆಷ್ಟು ಆತ್ಮೀಯತೆಯಿಂದ ಪ್ರಶ್ನಿಸಿದ್ದನೆಂದರೆ, ಅವನ ಮಾತಿನ ಶೈಲಿಗೆ ದಂಗಾಗಿ ಹೋದ ಆಕೆ, ``ಚೆನ್ನಾಗೇ ಇದ್ದೀನಿ. ಅಮ್ಮ ಬೆಳಗ್ಗೆ ಬಾಥ್‌ರೂಮಿನಲ್ಲಿ ಕಾಲುಜಾರಿ ಬಿದ್ದರು. ಅವರನ್ನು ತೋರಿಸಲೆಂದು ಆಸ್ಪತ್ರೆಗೆ ಬಂದಿದ್ದೆ. ಡಾಕ್ಟರ್‌ ತಪಾಸಣೆ ಮಾಡಿ ಕಾಲಿಗೆ ಫ್ರ್ಯಾಕ್ಚರ್‌ ಆಗಿದ್ದು ಪ್ಲ್ಯಾಸ್ಟರ್‌ ಹಾಕಬೇಕೆಂದು ಹೇಳಿದರು. ಈಗ ಪ್ಲ್ಯಾಸ್ಟರ್‌ ಹಾಕಿಸಿಕೊಂಡು ಹೊರಟಿರುವೆ.''

ಆಕೆ ತನ್ನ ಮಾತು ಮುಗಿಸಿದಳು. ಅಷ್ಟರಲ್ಲಿ ಅಮ್ಮ ಕೇಳಿದರು, ``ಪ್ರಕಾಶ್‌, ನೀನು ಇಲ್ಲಿಗೆ ಹೇಗೆ ಬಂದೆ?''

``ನಾನು ಸ್ನೇಹಿತನನ್ನು ನೋಡಲು ಇಲ್ಲಿಗೆ ಬಂದಿದ್ದೆ. ಅಂದಹಾಗೆ ನನಗೆ ಇದೇ ಸಿಟಿಗೆ ವರ್ಗಾವಣೆಯಾಗಿದೆ,'' ಎಂದು ಹೇಳುತ್ತಾ ಅವನು ಶುಭಾಳತ್ತ ನೋಡಿದ.

``ಬಹಳ ಖುಷಿಯಾಯ್ತಪ್ಪ. ಎಲ್ಲಿ ಉಳ್ಕೊಂಡಿದೀಯಾ ಪ್ರಕಾಶ?''

ಅಮ್ಮನಿಗೆ ಏನಾಗಿದೆ, ಅವರೇಕೆ ಹೀಗೆ ಮಾತಾಡ್ತಿದಾರೆ? ಅವರಿಗೆ ಇಷ್ಟೊಂದು ಉತ್ಸುಕತೆ ಏಕೆ? ಅವರು ಎಲ್ಲವನ್ನೂ ಮರೆತುಬಿಟ್ಟರೆ? ಮುಂಚೆಯೂ ಅವರು ಪ್ರಕಾಶ್‌ ಜೊತೆ ಕದ್ದುಮುಚ್ಚಿ ಫೋನ್‌ನಲ್ಲಿ ಮಾತಾಡ್ತಿದ್ದರು.

``ಅಮ್ಮಾ, ಇಂತಹ ಮಾತು ಆಡುವುದನ್ನು ನಿಲ್ಲಿಸಿ. ಈಗ ಪ್ರಕಾಶ್‌ ಜೊತೆ ನನಗೆ ಎಂಥ ಸಂಬಂಧ ಇದೆ. ಅವರಿಂದ ವಿಚ್ಛೇದನ ಸಿಕ್ಕಿಬಿಟ್ಟಿದೆ. ಅವರು ಬೇರೆ ಮದುವೆ ಕೂಡ ಮಾಡಿಕೊಂಡುಬಿಟ್ಟಿದ್ದಾರೆ. ನಿಮಗಿದನ್ನು ಪುನಃ ನೆನಪು ಮಾಡಿಕೊಡಬೇಕಾ?''

ಅಮ್ಮ ಪುನಃ ಮೌನವಾಗಿದ್ದರು. ಅವರು ಮತ್ತೆ ಫೋನ್‌ ಮಾಡಿದರೊ ಇಲ್ಲವೋ ಗೊತ್ತಿಲ್ಲ. ಆಕೆ ಅಮ್ಮನಿಗೆ ಈ ಬಗ್ಗೆ ಕೇಳಿರಲೇ ಇಲ್ಲ. `ಆದರೆ ಪ್ರಕಾಶ್‌..... ಇಷ್ಟೊಂದು ಆತ್ಮೀಯತೆ ತೋರಿಸುತ್ತಿರುವುದಾದರೂ ಏಕೆ?' ಆಕೆ ಯೋಚನೆಯಲ್ಲಿ ಮುಳುಗಿದಳು.

``ಅಮ್ಮಾ, ನನ್ನ ಕಾರಿನಲ್ಲೇ ನಿಮ್ಮೆಲ್ಲರನ್ನು ಮನೆತನಕ ಬಿಡ್ತೀನಿ,'' ಎಂದು ಪ್ರಕಾಶನ ಆಗ್ರಹದ ಮಾತುಗಳು ಆಕೆ ಪುನಃ ಚಕಿತಳಾಗುವಂತೆ ಮಾಡಿದ್ದ.

``ಇಲ್ಲ, ಇಲ್ಲ, ನೀವೇಕೆ ತೊಂದರೆಪಡಬೇಕು. ನಾನು ಅಲ್ಲಿ ಗೇಟಲ್ಲಿ ಒಬ್ಬ ಆಟೋದವನಿಗೆ ನಿಲ್ಲಲು ಹೇಳಿದ್ದೇನೆ. ಅವನು ಅಲ್ಲಿ ನಮಗಾಗಿ ಕಾಯುತ್ತಿರಬಹುದು,'' ಶುಭಾ ತಕ್ಷಣವೇ ಹೇಳಿದಳು.

``ಅರೆ, ಇದರಲ್ಲಿ ತೊಂದರೆಯ ಮಾತೇನಿದೆ? ಇದೇ ನೆಪದಲ್ಲಿ ಮನೆಯನ್ನು ನೋಡಿದ ಹಾಗೆಯೂ ಆಗುತ್ತದೆ. 1 ಕಪ್‌ ಟೀನಾದ್ರೂ ಸಿಗುತ್ತೆ,'' ಎಂದು ಹೇಳುತ್ತ ಅಮ್ಮನ ವೀಲ್ ಚೇರ್‌ನ್ನು ಸಂಭಾಳಿಸಿದ. ಅಮ್ಮ ಹೇಳುತ್ತಲೇ ಹೊರಟಿದ್ದರು.

``ಟೀ ಅಷ್ಟೆ ಏಕೆ, ಊಟವನ್ನೇ ಮಾಡಿಕೊಂಡು ಹೋಗುವಿಯಂತೆ. ಅಡುಗೆಯವಳು ಈಗಾಗಲೇ ಅಡುಗೆ ಮಾಡಿ ಮುಗಿಸಿರಬಹುದು.''

``ಅಮ್ಮ ಸುಮ್ಮನಿರಿ....'' ಎಂದು ಹೇಳುತ್ತಾ ಶುಭಾಗೆ ಹಿಂದೆ ಹಿಂದೆಯೇ ಹೆಜ್ಜೆ ಹಾಕಬೇಕಾಯಿತು. ಕಾರಿನ ಸಮೀಪ ವೀಲ್ ಚೇರ್‌ ನಿಲ್ಲಿಸಿ ಪ್ರಕಾಶ್‌ ಅಮ್ಮನನ್ನು ಕಾರಿನ ಹಿಂದಿನ ಸೀಟಿನ ಮೇಲೆ ಆರಾಮವಾಗಿ ಕೂರಿಸಿದ. ಅನಿವಾರ್ಯವಾಗಿ ಶುಭಾ ಪ್ರಕಾಶನ ಪಕ್ಕದಲ್ಲಿಯೇ ಕುಳಿತುಕೊಳ್ಳಬೇಕಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ