``ನೀವು ಸ್ವಲ್ಪ ಸಮಾಧಾನದಿಂದ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಕೂಗಾಡುತ್ತಿದ್ದರೆ ಮಾತ್ರ ಕೆಲಸಗಳು ಆಗುತ್ತವೆ ಎಂದುಕೊಂಡಿರುವಿರಾ?'' ಎಂದು ಮಹಾಲಕ್ಷ್ಮಿ ತಮ್ಮ ಪತಿ ಸೀತಾಪತಿಯವರಿಗೆ ಸಾವಿರ ಸಲ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಅವರು ಮನೆಯವರೆಲ್ಲರ ಮೇಲೆ ಆರ್ಭಟಿಸುತ್ತಾ ಹರಿಹಾಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲರೂ ಅವರ ಇರಾದೆಯಂತೆಯೇ ನಡೆದುಕೊಳ್ಳ ಬೇಕಾದಂತಹ ಪರಿಸ್ಥಿತಿಯಿತ್ತು. ಕೆಲವೊಮ್ಮೆ ಅವರ ಮಾತುಗಳು ಈಟಿಯಿಂದ ಇರಿದಷ್ಟೇ ಮೊನಚಾಗಿರುತ್ತಿದ್ದವು. ಸೀತಾಪತಿಯವರಿಗೆ ಇಬ್ಬರು ಗಂಡು ಮಕ್ಕಳು. ಅಜಯ್‌ ಮತ್ತು ವಿಜಯ್‌.  ಇಬ್ಬರದೂ ಮದುವೆಯಾಗಿತ್ತು. ವಧುವರರ ಜಾತಕ ಸಂಪೂರ್ಣ ಹೊಂದಾಣಿಕೆಯಾದ ನಂತರವೇ, ಸೀತಾಪತಿ ಅವರುಗಳ ವಿವಾಹ ನೆರವೇರಿಸಿದ್ದರು. ಹೆಸರಾಂತ ಜ್ಯೋತಿಷಿ ರಾಘವ ಶಾಸ್ತ್ರಿಗಳು ಇವರ ಸ್ನೇಹಿತರು. ಅವರನ್ನು ವಿಚಾರಿಸದೆ ಸೀತಾಪತಿ ಯಾವ ಕೆಲಸ ಕಾರ್ಯಗಳನ್ನೂ ಕೈಗೆತ್ತಿಕೊಳ್ಳುತ್ತಿರಲಿಲ್ಲ.

ಮನೆ ಕೆಲಸವಿರಲಿ, ಕಾರ್ಖಾನೆ ಕೆಲಸವಿರಲಿ, ಹೆಂಡತಿಗೇ ಒಂದು ಆಭರಣ ಕೊಳ್ಳಬೇಕೆಂದರೂ ಶಾಸ್ತ್ರಿಗಳಿಂದ ಮುಹೂರ್ತ ಕೇಳಿಯೇ ಖರೀದಿಸುತ್ತಿದ್ದರು. ಆ ರಾಘವ ಶಾಸ್ತ್ರಿಗಳು, ಸೀತಾಪತಿಯ ನಂಬಿಕೆಯನ್ನೇ ಬಳಸಿಕೊಂಡು ಬೇಕಾದಷ್ಟು ದುಡ್ಡು ಮಾಡಿಕೊಂಡಿದ್ದರು. ಸೀತಾಪತಿಯವರದು ಕಷ್ಟಪಟ್ಟು ಸಂಪಾದಿಸಿದ ಶ್ರೀಮಂತಿಕೆ. ಪಿತ್ರಾರ್ಜಿತವಾಗಿ ಬಂದ ಸಾಕಷ್ಟು ಜಮೀನು ಅವರ ಬಳಿಯಲ್ಲಿತ್ತು. ಆದರೆ ಸೀತಾಪತಿ ಮಾತ್ರ, ಇದೆಲ್ಲ ಚರಸ್ಥಿರಾಸ್ತಿ, ಸಿರಿವಂತಿಕೆಗಳೆಲ್ಲ ಶಾಸ್ತ್ರಿಗಳ ಕೃಪೆಯಿಂದಲೇ ಪಡೆದದ್ದು ಎಂದು ನಂಬಿ ಕುಳಿತಿದ್ದರು.

ಸೀತಾಪತಿಯವರ ಕೊನೆಯ ಮಗಳು ಆವಂತಿಕಾ ಸ್ವಲ್ಪ ವೈಚಾರಿಕ ಮನೋಭಾವದವಳು. ಅಜಯ್‌ ಮತ್ತು ಆವಂತಿಕಾಳ ಮಧ್ಯೆ ತುಂಬ ಸಲುಗೆಯಿತ್ತು. ಕೆಲವೊಮ್ಮೆ ಆವಂತಿಕಾ ತನ್ನ ತಂದೆಯ ವಿಚಾರಗಳನ್ನು ವಿರೋಧಿಸುತ್ತಿದ್ದಳು. ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾದ್ದರಿಂದ, ಎಲ್ಲರಿಗೂ ಆಕೆ ಅಚ್ಚುಮೆಚ್ಚಿನವಳಾಗಿದ್ದಳು. ಹೀಗಾಗಿ ಸೀತಾಪತಿ ಕೂಡ ಕೆಲವೊಮ್ಮೆ ಅವಳ ಹಠಮಾರಿತನವನ್ನು ಉದಾಸೀನ ಮಾಡುತ್ತಿದ್ದರು. ಆವಂತಿಕಾ ಎಂಬಿಎ ಮುಗಿಸಿದ ನಂತರ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು. ಕೆಲವು ದಿನಗಳ ಹಿಂದೆಯೇ ಸೀತಾಪತಿ ಅವಳ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದರು. ಆದರೆ ಅವಳ ಜಾತಕದಲ್ಲಿ ಕುಜದೋಷ ಇದ್ದುದರಿಂದ, ಯಾವ ಜಾತಕದೊಂದಿಗೂ ಅವಳ ಜಾತಕ ಹೊಂದಾಣಿಕೆ ಆಗುತ್ತಿರಲಿಲ್ಲ.

ಇದೇ ಕಾರಣದಿಂದಾಗಿ ಸುಸಂಸ್ಕೃತ, ಸುಶೀಲ, ಸುಶಿಕ್ಷಿತ ವರಗಳೆಲ್ಲ ಇವರ ಕೈತಪ್ಪಿ ಹೋಗಿದ್ದರು. ಅವರುಗಳಲ್ಲಿ ರಾಜೀವ್ ‌ಎಂಬ ವರ, ಆವಂತಿಕಾಳಿಗೂ ತುಂಬಾ ಇಷ್ಟವಾಗಿದ್ದ. ಆದರೆ ಈ ವಿಚಾರದಲ್ಲಿ ಅವಳು ತನ್ನ ತಂದೆಗೂ ಬಲವಂತ ಮಾಡುವಂತಿರಲಿಲ್ಲ. ಜಾತಕ ಕೂಡಿ ಬರಲಿಲ್ಲ! ಅಷ್ಟೇ ಮುಗಿಯಿತು ಕಥೆ.

ವರಾನ್ವೇಷಣೆ ಇನ್ನೂ ಜಾರಿಯಲ್ಲಿತ್ತು. ಅದೇ ಸಮಯದಲ್ಲಿ ಮಹಾಲಕ್ಷ್ಮಿಯ ಅಕ್ಕ ಮಹಾದೇವಿ ತಮ್ಮ ಗಂಡನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಬೆಂಗಳೂರಿಗೆ ಆಗಮಿಸಿದರು. ಜೊತೆಗೆ ಆವಂತಿಕಾಳಿಗೆ ಒಂದು ಸಂಬಂಧವನ್ನು ಹುಡುಕಿಕೊಂಡು ಬಂದಿದ್ದರು. ತನ್ನ ಗಂಡನ ಅತ್ತಿಗೆಯ ಸಂಬಂಧದಲ್ಲೇ ವರ ಹುಡುಕಿದ್ದರು. ಮಹಾದೇವಿಯ ಭಾವ ವೃಷಭೇಂದ್ರ ತುಂಬಾ ಚಾಣಾಕ್ಷ. ಇಲ್ಲಿಗೆ ಬಂದಾಕ್ಷಣವೇ ಸೀತಾಪತಿ, ಶಾಸ್ತ್ರಿಗಳು ಹಾಕಿದ ಗೆರೆ ದಾಟುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದ. ತಕ್ಷಣ ಕಾರ್ಯಪ್ರವೃತ್ತನಾಗಿ ಶಾಸ್ತ್ರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಮ್ಮ ಕಡೆಯ ವರನ ಜಾತಕವನ್ನು ತೋರಿಸಿದ. ತುಸು ಹೊತ್ತು ಜಾತಕವನ್ನೇ ದಿಟ್ಟಿಸಿ ನೋಡಿ, ಅದೇನೇನೊ ಲೆಕ್ಕಾಚಾರ ಮಾಡಿದ ಶಾಸ್ತ್ರಿಗಳು, ``ವೃಷಭೇಂದ್ರರವರೇ, ಜಾತಕ ಸರಿದೂಗುವ ಲಕ್ಷಣಗಳು ಗೋಚರಿಸುತ್ತಿಲ್ಲ,'' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ