ಎಲ್ಲ ಗಂಡಂದಿರಿಗೂ ತಮ್ಮ ದಾಂಪತ್ಯ ಜೀವನದಲ್ಲಿ ಒಂದಲ್ಲ ಒಂದು ಬಾರಿ `ನೀವು ಮಾತಾಡ್ಲೇ ಬೇಡಿ' ಎನ್ನುವ ಆದೇಶ, ಬೆದರಿಕೆ ಖಂಡಿತ ಕೇಳಬೇಕಾಗುತ್ತದೆ. ಸರಳ ಶಬ್ದಗಳಲ್ಲಿ ಹೇಳುವುದಾದರೆ ನನ್ನ ಮಾತು ನಿಂತುಹೋಗುತ್ತದೆ. ಈ ಬೆದರಿಕೆಗೆ ನನಗೆ ಮಕ್ಕಳ ಜನಪ್ರಿಯ ಟಿವಿ ಸೀರಿಯಲ್`ಟಾಮ್ ಅಂಡ್‌  ಜೆರ್ರಿ' ನೆನಪಾಗುತ್ತದೆ. ಚಾಲಾಕಿ, ತುಂಟ ಜೆರ್ರಿ ಕ್ರೂರ ಬೆಕ್ಕನ್ನು ಬಹಳಷ್ಟು ಕಾಡಿಸಿ ಗೋಳಾಡಿಸುತ್ತದೆ. ಆದರೆ ನನ್ನ ಹೆಂಡತಿಯ ಗದರಿಕೆಗೆ ಎದುರಾಗಿ ನಾನು ಮಂಡಿಯೂರಬೇಕಾಗಿರುವುದು ನನ್ನ ಹಣೆಯಲ್ಲಿ ಬರೆದಿದೆ. `ನೀವು ಮಾತಾಡ್ಲೇ ಬೇಡಿ' ಎಂಬ ಲಟ್ಟಣಿಗೆಯನ್ನು ನನ್ನ ಹೆಂಡತಿ ಆರತಿ ನನ್ನತ್ತ ಎಸೆಯುತ್ತಲೇ ಇರುತ್ತಾಳೆ. ಜೆರ್ರಿ ಟಾಮ್ ಗೆ ಮಾಡುವಂತೆ ನಾನು ಆರತಿಗೆ ಗೋಳಾಡಿಸಲು ನನಗೆ ಧೈರ್ಯವೇ ಇಲ್ಲ. ಒಂದು ಪುಟ್ಟ ಇಲಿ ಭಯಂಕರ ಬೆಕ್ಕಿನ ತಲೆಯ ಮೇಲೆ ಹತ್ತಿ ಥೈ ಥೈ ಎಂದು ಕುಣಿಯುತ್ತದೆ. ಆದರೆ ನಾನು ನನ್ನ ಹೆಂಡತಿಯ ಎದುರು ಆಯುಧ ಎಸೆಯಲಿಕ್ಕೂ ಭಯಭೀತನಾಗುತ್ತೇನೆ.

ಅಂದೂ ಹಾಗೇ ಆಯಿತು. ಕೌಟುಂಬಿಕ ಚರ್ಚೆ ನಡೆಯುತ್ತಿತ್ತು. ನಾನೂ ಪೊಲಿಟಿಕ್‌ ಸೈನ್ಸ್ ಓದಿದ್ದೇನೆ. ಅದರಲ್ಲಿ ಎಲ್ಲ ನಾಗರಿಕರಿಗೂ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಹಕ್ಕು, ಅಧಿಕಾರವಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ನಾನು ಧೈರ್ಯವಹಿಸಿ ಬಾಯಿ ತೆರೆದೆ. ಆರತಿ ಕೋಪೋದ್ರಿಕ್ತಳಾಗಿ ರೌದ್ರರೂಪ ಧರಿಸಿ ಗರ್ಜಿಸಿದಳು, ``ನೀವು ಮಾತಾಡ್ಲೇ ಬೇಡಿ!''

ನಾನೇನು ಮಾಡಲಿ? ಮನಸ್ಸಿಗೆ ಬಹಳ ಬೇಜಾರಾಗಿತ್ತು. `ನೀವು ಮಾತಾಡ್ಲೇ ಬೇಡಿ' ಎಂಬುದಂತೂ ಹೆಂಡತಿಯ ಆಜ್ಞೆಯಾಗಿತ್ತು. ಅದನ್ನು ವಿಧೇಯ ಸೈನಿಕನಂತೆ ಪಾಲಿಸಲೇ ಬೇಕಾಗಿತ್ತು. ಅಲ್ಲಿ ಯಾವುದೇ ವಿಧವಾದ ತರ್ಕಕ್ಕೂ ಅವಕಾಶವೇ ಇರಲಿಲ್ಲ.`ಮೊದಲು ವಿಧೇಯನಾಗಿರು, ನಂತರ ವಾದ ಮಾಡು,' ಎನ್ನುವ ಸಿದ್ಧಾಂತ ಮಾತ್ರ ನಡೆಯುತ್ತದೆ. ಎಲ್ಲ ಸಿದ್ಧಾಂತಗಳು, ಕಾನೂನುಗಳು, ನಿಯಮಗಳೂ ನ್ಯಾಯವನ್ನು ನಿರೀಕ್ಷಿಸುವ ಕಡೆಯೇ ಇರುತ್ತವೆ. ಆದರೆ ನನ್ನ ಮನೆಯಂತೂ ಕೋರ್ಟ್‌ ಅಲ್ಲ. ನಿರಂಕುಶಾಡಳಿತವೆಂಬ ತಿಗಣೆಗಳಿಂದ ತುಂಬಿರುವ ಮಂಚವಾಗಿದೆ. ನಾನು ಮಂಜು ತುಂಬಿದ ಸಿಯಾಚಿನ್‌, ಲೇಹ್‌ನ ಶತ್ರುಗಳೊಂದಿಗೆ ಹೋರಾಡಬಲ್ಲೆ. ಆದರೆ ಹೆಂಡತಿಯ ಆಜ್ಞೆಯೆಂಬ ತಿಗಣೆಗಳನ್ನು ಎದುರಿಸಲಾಗುತ್ತಿರಲಿಲ್ಲ. ನಾನು ತಲೆ ತಗ್ಗಿಸಿ, ``ನೀನು ಹೇಳೋದು ಸರಿ ಆರತಿ, ಸಂಸಾರದ ವಿಷಯಗಳಲ್ಲಿ ನಾನು ತಲೆ ಹಾಕಬಾರದು,'' ಎಂದೆ. ಆರತಿಗೆ ಖುಷಿಯಾಯಿತು,

``ನೀವು ಬಹಳ ಬುದ್ಧಿಂತರು. ಒಮ್ಮೊಮ್ಮೆ ದೇಶದ ಹಿತಕ್ಕಾಗಿ ಮಂತ್ರಿಗಳಿಂದಲೂ ಮಾತಾಡುವ ಅಧಿಕಾರ ಕಿತ್ತುಕೊಳ್ಳಲಾಗುತ್ತದೆ. ಪ್ರೆಸ್‌ ಕಾನ್ಛೆರೆನ್ಸ್ ಗಳಲ್ಲಿ, `ನೀವು ಮಾತಾಡ್ಲೇ ಬೇಡಿ,' ಎನ್ನುವ ತೂಗುಗತ್ತಿ ಅವರ ತಲೆಯ ಮೇಲೆ ಸುತ್ತುತ್ತಿರುತ್ತದೆ. ಅವರು ಪಕ್ಷದ ಹಿತದೃಷ್ಟಿಯಿಂದ ತಮ್ಮ ತುಟಿಗಳನ್ನು ಹೊಲಿದುಕೊಳ್ಳುತ್ತಾರೆ,'' ಎಂದಳು. ಆರತಿಯ ಮಾತಿನ ಅರ್ಥ ನನಗೆ ತಿಳಿಯಿತು. ನಮ್ಮ ನಾಯಕರೇ ಜನರ ಹಿತಕ್ಕಾಗಿ, `ನೀವು ಮಾತಾಡ್ಲೇ ಬೇಡಿ' ಎಂಬುದರ ರಹಸ್ಯ ತಿಳಿದುಕೊಂಡಾಗ ನನ್ನಂತಹ ಕ್ಷುದ್ರನಾದ ಪತಿ ಪತ್ನಿಯ ಭಾವನೆಗಳನ್ನು ಹೇಗೆ ಉಪೇಕ್ಷಿಸಲಾದೀತು?

ನನಗೆ ಆರತಿಯ ಕೈಯನ್ನು ಚುಂಬಿಸಿ ಹೀಗೆ ಹೇಳಬೇಕೆನ್ನಿಸಿತು, ``ಪ್ರಿಯೆ, ನಿನಗೆ ನಮ್ಮ  ಸಂಸಾರದ ಬಗ್ಗೆ ಬಹಳ ಕಾಳಜಿ ಇದೆ. ನಾನು ಯಾವಾಗ ಏನು ಮಾತಾಡಬೇಕು, ಯಾವಾಗ ಬಾಯಿ ತೆರೆಯಬೇಕು, ಯಾವಾಗ ಬಾಯಿ ಮುಚ್ಚಬೇಕು ಎಂದೆಲ್ಲಾ ನೀನು ಆಗಿಂದಾಗ್ಗೆ ಸೂಚಿಸುತ್ತಿರುತ್ತೀಯ. ಪ್ರಿಯೆ, ನಿನಗೆ ಗೊತ್ತು. ಸಂವೇದನಾಶೀಲ ವಿಷಯಗಳ ಬಗ್ಗೆ ಮಾತಾಡುವ ಮುಂಚೆಯೇ ನನಗೆ ಆವೇಶವುಂಟಾಗುತ್ತದೆ. ನನ್ನ ಬಿ.ಪಿ. ಹೆಚ್ಚುತ್ತದೆ. ಆಗೋ ಕೆಲಸ ಹಾಳಾಗುತ್ತದೆ. ನಿನ್ನ ಈ ವಿಘ್ನ ವಿನಾಶಕ ವಾಕ್ಯ `ನೀವು ಮಾತಾಡ್ಲೇ ಬೇಡಿ' ಪರಿಸ್ಥಿತಿಯನ್ನು ಸಂಭಾಳಿಸುತ್ತದೆ ಮತ್ತು ಗೃಹಕಲಹಗಳಿಂದ ಪಾರು ಮಾಡುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ