ತಿಂಗಳ ಕೊನೆಯ ದಿನ. ಇನ್ನು 4 ದಿನಕ್ಕೆ ಹಬ್ಬ ಬರುತ್ತಿದೆ. ನನ್ನಾಕೆ ಮಾರ್ಟ್‌ಗೆ ಹೋಗಿದ್ದಾಳೆ. ಮಾರ್ಟ್‌ನಲ್ಲಿ ಟ್ರಾಲಿ ಡ್ರೈವ್ ‌ಮಾಡುವ ಡ್ಯೂಟಿ ನನ್ನದು. ನನ್ನ ಬಳಿ ಡ್ರೈವಿಂಗ್‌ ಲೈಸೆನ್ಸ್ ಇಲ್ಲ. ಸಾಮಾನ್ಯವಾಗಿ ಯಾವಾಗಲೂ ಮುಸುಕು ಹೊದ್ದಿರುವ ನಮ್ಮ ಕಾರಿಗೆ ಅವಶ್ಯಕತೆ ಬಂದಾಗ ಡೇಲಿ ಪೇಮೆಂಟ್‌ಗೆ ಅನುಗುಣವಾಗಿ ಡ್ರೈವರ್‌ನನ್ನು ನೇಮಿಸಿಕೊಂಡು ಬೇಕಾದೆಡೆ ಹೋಗುತ್ತೇವೆ. ನಾನೂ ಮಾರ್ಟ್‌ನ ಟ್ರಾಲಿಯನ್ನು ಚೆನ್ನಾಗಿ ಡ್ರೈವ್ ‌ಮಾಡುತ್ತೇನೆ, ಅಂದರೆ ತಳ್ಳುತ್ತೇನೆ. ಹಬ್ಬದ ಕಾರಣ ಮಾರ್ಟ್‌ಲ್ಲಿ ಜನರ ಗುಂಪು ಹೆಚ್ಚಾಗಿರುತ್ತದೆ. ನನಗೆ ಟ್ರಾಲಿ ತಳ್ಳಲು ಬಹಳ ಕಷ್ಟವಾಗುತ್ತದೆ. ಅದರಲ್ಲೂ ನನ್ನಾಕೆ ಟ್ರಾಲಿಯನ್ನು ಸಂಪೂರ್ಣವಾಗಿ ತುಂಬಿಸಿರುತ್ತಾಳೆ. ತೂಕ ಕ್ವಿಂಟಾಲ್ ‌ದಾಟಿರುತ್ತದೆ. ಹಬ್ಬಗಳಲ್ಲಿ ಅವಳ ಬಂಧು ವರ್ಗದವರೆಲ್ಲರ ದರ್ಶನವಾಗುತ್ತದೆ.

``ನೀವು ಏನಾದರೂ ತಗೊಳೋದು ಇದೆಯಾ?'' ನನ್ನಾಕೆ ಕೇಳಿದಳು. ಅವಳ ಹಲ್ಲುಗಳು ಬೆಳ್ಳಗೆ ಹೊಳೆಯುತ್ತವೆ. ತುಟಿಗಳು ಪ್ರಾಕೃತಿಕವಾಗಿ ಕೆಂಪಗಿವೆ. ಅವಳ ನಗುವಿನಲ್ಲಿ ಆಕರ್ಷಣೆ ಇದೆ. ಅದು ನನಗೆ ಇಷ್ಟವಾಗುತ್ತದೆ, ಜೊತೆಗೆ ಅಸೂಯೆಯೂ ಆಗುತ್ತದೆ.

``ಅಂಥಾ ಸ್ಪೆಷಲ್ ಏನಿಲ್ಲ. ಪಕ್ಕದ ಡಿಪಾರ್ಟ್‌ಮೆಂಟ್‌ ಸ್ಟೋರ್‌ನಲ್ಲಿ ಏನೋ ತಗೋಬೇಕು. ನೀನು ಕಾರಿನಲ್ಲಿ ಕೂತಿರು,'' ಎಂದೆ, ನಾನು ನಗುವುದನ್ನು ಬಿಟ್ಟಿದ್ದೆ. ಅದಕ್ಕೆ ವಿಶೇಷ ಕಾರಣವಿದೆ.  ``ಚಿಕ್ಲೆಟ್ಸ್ ತಗೋಬೇಕು. ಯಾವ ಸೆಕ್ಷನ್‌ನಲ್ಲಿದೆ?'' ಡಿಪಾರ್ಟ್‌ಮೆಂಟ್‌ ಸ್ಟೋರ್ಸ್‌ನ ಎನ್‌ಕ್ವೈರಿ ಕೌಂಟರ್‌ನಲ್ಲಿ ಕೂತಿದ್ದ ಸುಂದರ ಯುವತಿಯನ್ನು ಕೇಳಿದೆ.

``ಚಿಕ್ಲೆಟ್ಸ್ ಔಟ್‌ ಆಫ್‌ ಸ್ಟಾಕ್‌ ಆಗಿದೆ ಸರ್‌, ಅಮೆರಿಕನ್‌ ಬ್ರ್ಯಾಂಡ್‌ನ ಚೂಯಿಂಗ್‌ ಗಮ್ ಕೂಡ ಖಾಲಿಯಾಗಿದೆ. ನೀವು ಫಸ್ಟ್ ಫ್ಲೋರ್‌ಗೆ ಹೋಗಿ ಕೌಂಟರ್‌ ನಂಬರ್‌ ಸಿಕ್ಸ್ ಟೀನ್‌ನಲ್ಲಿ ಕನ್‌ಫರ್ಮ್ ಮಾಡ್ಕೊಳ್ಳಿ,'' ಆಕೆ ನಗುತ್ತಾ ಹೇಳಿದಳು.

ನಾನು ಕೌಂಟರ್‌ ನಂಬರ್‌ 16ಕ್ಕೆ ಹೋಗಿ ಅಲ್ಲಿ ತುಂಡು ಉಡುಗೆ ತೊಟ್ಟು ಸುಂದರವಾಗಿ ಮೇಕಪ್‌ ಮಾಡಿಕೊಂಡಿದ್ದ ಬೆಳ್ಳನೆಯ ತರುಣಿಯನ್ನು ಕೇಳಿದಾಗ ಆಕೆ, ``ಚೂಯಿಂಗ್‌ ಗಮ್ಗೆ ಅಡ್ವಾನ್ಸ್ ಬುಕಿಂಗ್‌ ಮಾಡಿಸಬೇಕು,'' ಎಂದು ಹೇಳಿ ಬುಕಿಂಗ್‌ ಫಾರ್ಮ್ ಕೊಟ್ಟಳು.

``ಅಡ್ವಾನ್ಸ್ ಬುಕಿಂಗ್‌!?...... ಚೂಯಿಂಗ್‌ ಗಮ್ ಗಾ!?'' ನನಗೆ ಆಶ್ಚರ್ಯವಾಗಿತ್ತು. ಅಡ್ವಾನ್ಸ್ ಬುಕಿಂಗ್‌ ಫಾರ್ಮ್ ನಲ್ಲಿ ವಯಸ್ಸಿನ ಕಾಲಂ ಇತ್ತು. ಲಭ್ಯವಿದೆ ಎಂದು ಸೂಚನೆ ಕೊಡಲು ನನ್ನ ಕಾಂಟ್ಯಾಕ್ಟ್ ನಂಬರ್‌ ಕೊಡಬೇಕಿತ್ತು. ಯಾವುದೇ ಪರಿಸ್ಥಿತಿಯಲ್ಲೂ ಚೂಯಿಂಗ್‌ ಗಮ್ ನ ದುರುಪಯೋಗ ಮಾಡುವುದಿಲ್ಲ ಎಂದು ಡಿಕ್ಲರೇಶನ್‌ ಸಹಿ ಮಾಡಿ ಕೊಡಬೇಕಿತ್ತು.

``ಗೋರಿ ತೇರಿ ಪ್ರೀತ್‌ ಮೆ ಚಿತ್ರದ ಟ್ರೇಲರ್‌ ರಿಲೀಸ್‌ ಆದ ನಂತರ ಚೂಯಿಂಗ್‌ ಗಮ್ ನ ಡಿಮ್ಯಾಂಡ್‌ ಸಾಕಷ್ಟು ಹೆಚ್ಚಾಗಿದೆ. `ಚೀಂಗವ್‌ ಚಬಾ ಕೆ...' ಹಾಡು ಸೂಪರ್‌ ಹಿಟ್‌ ಆಗಿದೆ. ಎಲೆಕ್ಷನ್‌ನಲ್ಲಿ ಯುವ ಮತದಾರರನ್ನು ಪ್ರಸನ್ನಗೊಳಿಸಬೇಕು. ಅದಕ್ಕೆ ಚೂಯಿಂಗ್‌ ಗಮ್ ಬೆಟರ್‌ ಆಪ್ಶನ್‌ ಆಗಿದೆ. ಎಲೆಕ್ಷನ್‌ ಕಮೀಶನರ್‌ಗಂತೂ ಅದರ ಬಗ್ಗೆ ಯಾವ ತಕರಾರೂ ಇಲ್ಲ,''

ಕೌಂಟರ್‌ನಲ್ಲಿ ಕುಳಿತಿದ್ದ ಆ ಸುಂದರ ಯುವತಿ ಹೇಳಿದಳು.``ಈರುಳ್ಳಿಯ ಬ್ಲ್ಯಾಕ್‌ ಮಾರ್ಕೆಟ್‌ ಕೇಳಿದ್ದೆ, ನೋಡಿದ್ದೆ. ಆದರೆ ಈಗ ಈರುಳ್ಳಿ ಬಹಳ ಕಣ್ಣೀರು ತರಿಸಿದೆ. ನಾನ್‌ ವೆಜ್‌ ಬಿಟ್ಟು ವೆಜ್‌ ಲೋಕಕ್ಕೆ ಶರಣಾಗುವಂತೆ ಮಾಡಿದೆ. ಅದೇ ರೀತಿ ಚೂಯಿಂಗ್‌ ಗಮ್ ನ ಅಡ್ವಾನ್ಸ್ ಬುಕಿಂಗ್‌ನ ಡಿಕ್ಲರೇಶನ್‌ ಕೊಡಬೇಕು ಅಂತೀರಿ,'' ಎಂದು ನಾನು ಆಶ್ಚರ್ಯದಿಂದ ಅವಳತ್ತ ನೋಡಿ ಅಡ್ವಾನ್ಸ್ ಬುಕಿಂಗ್‌ ಫಾರ್ಮ್ ಸಹಿ ಮಾಡಿ ಕೊಟ್ಟೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ