ಕಥೆ -  ಸ್ವಾತಿ ಕಿರಣ್‌

ಕವಿತಾಗೆ ಆಗತಾನೇ ಮದುವೆಯಾಗಿತ್ತು. ಅದು ಅರೇಂಜ್ಡ್  ಮ್ಯಾರೇಜ್‌ ಆಗಿದ್ದರೂ ಲವ್ಗೇನೂ ಕಡಿಮೆ ಇರಲಿಲ್ಲ. ಮದುವೆಗೆ ಮೊದಲು ಕವಿತಾ ಮತ್ತು ಪ್ರವೀಣ್‌ ಆಗಾಗ್ಗೆ ಫೋನ್‌ನಲ್ಲಿ ಮಾತಾಡುತ್ತಿದ್ದರು. ಮನೆಯವರಿಗೆ ಗೊತ್ತಿಲ್ಲದಂತೆ ಇಬ್ಬರೂ ಹಲವಾರು ಬಾರಿ ಭೇಟಿಯಾಗಿದ್ದರು. ಪರಸ್ಪರರನ್ನು ಮೆಚ್ಚಿದ ಮೇಲೆಯೇ ಇಬ್ಬರೂ ಮದುವೆಗೆ ಒಪ್ಪಿದ್ದರು. ಮದುವೆಯ ನಂತರದ ಜವಾಬ್ದಾರಿಯನ್ನು ನಿಭಾಯಿಸಲು ಕವಿತಾ ಪ್ರಯತ್ನಿಸುತ್ತಿದ್ದಳು.

ಅಂದು ಕವಿತಾ ಆಫೀಸಿನಿಂದ ಬೇಗ ಬಂದಿದ್ದಳು. ಬೇಗನೆ ಬಟ್ಟೆ ಬದಲಿಸಿ ಇಂಟರ್‌ನೆಟ್‌ ಆನ್‌ ಮಾಡಿದಳು ಮತ್ತು ಹೈದರಾಬಾದಿ ಬಿರಿಯಾನಿಯ ರೆಸಿಪಿ ಹುಡುಕಿದಳು. ಅದು ಪ್ರವೀಣ್‌ನ ಫೇವರಿಟ್‌ ಡಿಶ್‌ ಕೂಡ ಆಗಿತ್ತು. ಕವಿತಾ ಅಕ್ಕಿಯನ್ನು ತೊಳೆದು ಸ್ವಲ್ಪ ಹೊತ್ತು ನೆನೆಯಲು ಬಿಟ್ಟು ಮಸಾಲೆ ಹಾಕಿ ತಯಾರಿಸಿದಳು.  ನಂತರ ಕುಕ್ಕರ್‌ನಲ್ಲಿ ಸೀಟಿಗಾಗಿ ಕಾಯತೊಡಗಿದಳು.

ಕವಿತಾ ಪ್ರವೀಣ್‌ಗೆ ಫೋನ್‌ ಮಾಡತೊಡಗಿದಳು. ಆದರೂ ಪ್ರವೀಣ್‌ ಫೋನ್‌ ಎತ್ತಲಿಲ್ಲ . ಕವಿತಾ ಗಡಿಯಾರ ನೋಡಿದಳು. ಸಂಜೆ 6 ಗಂಟೆಯಾಗಿತ್ತು. ಕೆಲಸ ಜಾಸ್ತಿ ಇರಬಹುದು ಎಂದುಕೊಂಡಳು. ಬಿರಿಯಾನಿ ಮಾಡಿ ಆಮೇಲೆ ತಿರುಗಿ ಫೋನ್‌ ಮಾಡಿದರಾಯ್ತು ಎಂದುಕೊಂಡಳು. ನಂತರ ಎಲ್ಲವನ್ನೂ ಕುಕ್ಕರ್‌ಗೆ ಹಾಕಿ ಸೀಟಿಗಾಗಿ ಕಾಯತೊಡಗಿದಳು.

ಇದಕ್ಕೆ ಹಿಂದೆ ಕವಿತಾ ಟೀ ಮತ್ತು ಮ್ಯಾಗಿ ಬಿಟ್ಟು ಬೇರೇನೂ ಮಾಡಿರಲಿಲ್ಲ. ಓದು ಹಾಗೂ ನೌಕರಿಯ ಧಾವಂತದಲ್ಲಿ ಅವೆಲ್ಲವನ್ನು ಕಲಿಯುವ ಅವಕಾಶ ಸಿಗಲಿಲ್ಲ. ಅಡುಗೆ ಮಾಡಲು ಅವಳಿಗೆ ವಿಶೇಷ ಅಭಿರುಚಿಯೇನೂ ಇರಲಿಲ್ಲ. ಆದರೆ ಪ್ರವೀಣ್‌ಗಾಗಿ ಅವೆಲ್ಲವನ್ನೂ ಮಾಡಲು ಖುಷಿಯಾಗುತ್ತಿತ್ತು.

ಇನ್ನಷ್ಟು ರೆಸಿಪಿಗಳನ್ನು ಚೆಕ್‌ ಮಾಡೋಣ ಎಂದುಕೊಂಡಳು ಕವಿತಾ. ಚೆಕ್‌ ಮಾಡುತ್ತಾ ಮಾಡುತ್ತಾ ಅವಳು ಕ್ಯಾರೆಟ್‌ ಹಲ್ವಾ, ಗುಲಾಬ್‌ ಜಾಮೂನ್‌ ಮತ್ತು ಹಾಲುಖೀರು ಇತ್ಯಾದಿಗಳ ರೆಸಿಪಿಗಳನ್ನು ಓದಿದಳು ಮತ್ತು ಸೇವ್ ಮಾಡಿದಳು. ಹೀಗೆ ಮಾಡುವಾಗ ಅವಳು ಕುಕ್ಕರ್‌ನ ಸೀಟಿಗಳನ್ನು ಎಣಿಸಲು ಮರೆತುಬಿಟ್ಟಳು. ಏನೋ ಸೀದುಹೋದ ವಾಸನೆ ಬಂದಾಗ ಅವಳಿಗೆ ಬಿರಿಯಾನಿಯತ್ತ ಗಮನ ಹೋಯಿತು. ಅವಳು ಕೂಡಲೇ ಗ್ಯಾಸ್‌ ಆರಿಸಿದಳು. ಕುಕ್ಕರ್‌ನ ಮುಚ್ಚಳ ತೆಗೆದು ನೋಡಿದಾಗ ಬಿರಿಯಾನಿ ಸೀದುಹೋಗಿತ್ತು.

ಅಷ್ಟು ಕೆಲಸ ವ್ಯರ್ಥವಾಗಿತ್ತು. ಕವಿತಾಗೆ ಅಳುವಂತಾಯ್ತು. ಆದರೆ ಅವಳು ಸೋಲೊಪ್ಪಿಕೊಳ್ಳಲು ಸಿದ್ಧಳಿರಲಿಲ್ಲ. ಅವಳು ಮತ್ತೆ ಮೊದಲಿನಿಂದ ಶುರು ಮಾಡಿದಳು. ಈ ಬಾರಿ ಬಹಳ ಎಚ್ಚರಿಕೆಯಿಂದ ಅವಳು ಅಡುಗೆಮನೆಯಿಂದ ಅಲ್ಲಾಡಲಿಲ್ಲ. ಕೊನೆಗೂ ಬಿರಿಯಾನಿ ರೆಡಿಯಾಯಿತು. ಎಲ್ಲ ಮುಗಿಸುವಷ್ಟರಲ್ಲಿ 7 ಗಂಟೆ ಆಯಿತು. ಕವಿತಾ ಮತ್ತೆ ಪ್ರವೀಣ್‌ಗೆ ಫೋನ್‌ ಮಾಡಿದಳು. ಈ ಬಾರಿಯೂ ಮೊಬೈಲ್‌ ರಿಂಗ್‌ ಆಗುತ್ತಿತ್ತು . ಅವನು ಫೋನ್‌ ಎತ್ತಲಿಲ್ಲ. ಕವಿತಾ ಆಫೀಸಿಗೆ ಫೋನ್‌ ಮಾಡಿದಾಗ ಪ್ರವೀಣ್‌ ಆಚೆ ಹೊರಟು ಅರ್ಧ ಗಂಟೆಯಾಯಿತೆಂದು ರಿಸೆಪ್ಶನಿಸ್ಟ್ ಹೇಳಿದಳು. ಪ್ರವೀಣ್‌ ಬಹುಶಃ  ಡ್ರೈವ್‌ ಮಾಡುತ್ತಿರಬಹುದು ಅದಕ್ಕೆ ಫೋನ್‌ ಎತ್ತುತ್ತಿಲ್ಲ ಎಂದು ಕವಿತಾ ಯೋಚಿಸುತ್ತಿದ್ದಳು. ಆಫೀಸಿನಿಂದ ಮನೆಗೆ ಬರಲು 45 ನಿಮಿಷಗಳಾಗುತ್ತದೆ. ಪ್ರವೀಣ್‌ ಮನೆ ತಲುಪುತ್ತಿರಬಹುದು. ಕವಿತಾ ತನ್ನ ಫೇವರಿಟ್‌ ಕ್ರಾಕರಿ, ಕ್ಯಾಂಡಲ್ಸ್ ತೆಗೆದಳು. ಜೊತೆಗೆ ರೊಮ್ಯಾಂಟಿಕ್‌ ಡಿನ್ನರ್‌ ರೆಡಿ ಮಾಡಿ ಪ್ರವೀಣ್‌ಗಾಗಿ ಕಾಯತೊಡಗಿದಳು. ಆದರೆ ಎಂಟುವರೆಯಾದರೂ ಪ್ರವೀಣ್‌ ಕಾಣಲಿಲ್ಲ. ಕವಿತಾಗೆ ಕೊಂಚ ಚಿಂತೆಯಾಯಿತು. ಮತ್ತೆ ಫೋನ್‌ ಮಾಡಿದಾಗ ಪ್ರವೀಣ್‌ ಫೋನ್‌ ಎತ್ತಿ ಬೇಗ ಬೇಗ ಹೇಳಿದ, ``ನಾನು ಸ್ವಲ್ಪ ಬಿಜಿಯಾಗಿದ್ದೀನಿ. ಮನೆಗೆ ಬರೋದು ಲೇಟಾಗುತ್ತೆ... ನೀನು ಊಟ ಮಾಡಿಬಿಡು ಬೈ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ