ಕಥೆ - ಡಾ. ಅಮೃತಾ ಶೆಟ್ಟಿ

ಸೌಮ್ಯಾಳ ಮನೆಯ ಲೀಸ್‌ ಪೀರಿಯಡ್‌ ಮುಗಿದಿತ್ತು. ಅವಳು ತನ್ನ ಅತ್ತೆ ಮಾವನೊಂದಿಗೆ ಇದ್ದಳು. ಅವಳ ಆಪ್ತ ಗೆಳತಿ ರೂಪಾ ಅವಳನ್ನು ಭೇಟಿಯಾಗಲು ಬಂದಳು. ಅವಳು ಸ್ವಲ್ಪ ದಿನ ಅಲ್ಲೇ ಇದ್ದಳು. ರೂಪಾಳಿಗೆ ಕಾಲೇಜಿನ ಕ್ರಾಂತಿಕಾರಿ ಸೌಮ್ಯಾ ಹೀಗೆ ಒಟ್ಟು ಕುಟುಂಬದಲ್ಲಿ ಇರುವುದನ್ನು ಕಂಡು ಹೆಚ್ಚೇನೂ ಆಶ್ಚರ್ಯವಾಗಲಿಲ್ಲ. ಒಂದು ವೇಳೆ ಸೌಮ್ಯಾ ನಿಯಮಗಳು ಹಾಗೂ ಪರಂಪರೆಯನ್ನು ಅನುಸರಿಸಿದರೆ ಹೆಚ್ಚು ಸುಖಿಯಾಗಿರುತ್ತಾಳೆ ಎನಿಸಿತು. ಏನಾದರೂ ಆಗಲಿ ಶಂಕರ್‌ ಅಂತೂ ಸೌಮ್ಯಾಳ ಕಣ್ಣೆದುರಿಗೇ ಇದ್ದಾನೆ. ಒಬ್ಬ ಮಹಿಳೆಗೆ ಅಷ್ಟು ಸಾಕು.

ಬೆಳಗ್ಗೆಯೇ ಶಂಕರ್‌ ರೂಪಾಳನ್ನು ಕರೆತರಲು ಸ್ಟೇಷನ್‌ಗೆ ಬಂದಿದ್ದ. ಟ್ರೇನ್‌ನಲ್ಲಿ ನಿದ್ದೆ ಸರಿಯಾಗಿ ಮಾಡದಿದ್ದರಿಂದ ಅವಳು ಸ್ಟೇಷನ್‌ನಿಂದ ಮನೆಗೆ ಬರುವಾಗ ಶಂಕರ್‌ನ ಭುಜಕ್ಕೊರಗಿ ನಿದ್ದೆ ಮಾಡಿದ್ದಳು. ಮುಂದೆಯೂ ಶಂಕರ್‌ನ ಜೊತೆ ಏಕಾಂತದಲ್ಲಿ ಕಳೆಯುವ ಸಂದರ್ಭ ಬರಲಿ ಅನಿಸುತ್ತಿತ್ತು. ಅವಳಿಗೆ ಅವನ ಜೊತೆ ಕಳೆದ ನೂರಾರು ವಿಷಯಗಳು ನೆನಪಿಗೆ ಬರುತ್ತಿತ್ತು. ಅವು ಅವಳ ಉಸಿರಿನ ಭಾಗವಾಗಿತ್ತು.

``ಬರೀ 2 ದಿನ ತಾನೇ, ಅತ್ತೆ ಮಾವನಿಗೆ ಏನೂ ತೊಂದರೆಯಾಗಲ್ಲ,'' ಸೌಮ್ಯಾ ರೂಪಾಳನ್ನು ಪ್ರೀತಿಯಿಂದ ಅಪ್ಪಿಕೊಂಡು ಹೇಳಿದಳು,

``ನೀನು ನನ್ನ ಗೆಳತಿ, ಸವತಿಯಲ್ಲಾಂತ ನನಗೆ ಗೊತ್ತು. ನಿನ್ನ ಜೊತೆ ರೂಮು ಹಂಚಿಕೊಳ್ಳೋ ಸಮಸ್ಯೆ ಇಲ್ಲ. ಶಂಕರ್‌ ನಿನಗೆ ಚೆನ್ನಾಗಿ ಹೊಂದಿಕೊಳ್ತಾರೆ ರೂಪಾ,'' ಎಂದಾಗ ಇಬ್ಬರೂ ಜೋರಾಗಿ ನಗತೊಡಗಿದರು.

ರೂಪಾ ಸೌಮ್ಯಾಳಿಗೆ ಎಲ್ಲ ವಿಷಯ ಹೇಳಿರಲಿಲ್ಲ. ಕಾರಿನಲ್ಲಿ ಅವಳಿಗೆ ತನ್ನನ್ನು ನಿಯಂತ್ರಿಸಿಕೊಳ್ಳಲು ಆಗಿರಲಿಲ್ಲ. ಶಂಕರ್‌ ಕೂಡ ಅವಳ ಕೈಗಳ ತುಂಟಾಟವನ್ನು ವಿರೋಧಿಸುತ್ತಿರಲಿಲ್ಲ. ಬೆಳಗ್ಗೆ ತಿಂಡಿ ತಿನ್ನುವಾಗ ಬ್ರೆಡ್‌ಗೆ ಜಾಮ್ ಹಚ್ಚಿಕೊಳ್ಳುವಾಗ ಸುತ್ತಮುತ್ತ ಹೆಚ್ಚು ಜನ ಓಡಾಡುತ್ತಿದ್ದರೆ ತಾನು ಶಂಕರ್‌ ಜೊತೆ ತಪ್ಪು ಮಾಡಲಾಗುವುದಿಲ್ಲ ಎಂದು ರೂಪಾ ಯೋಚಿಸುತ್ತಿದ್ದಳು. ಎಷ್ಟಾದರೂ ಸೌಮ್ಯಾ ತನ್ನ ಆಪ್ತ ಗೆಳತಿ. ಅವಳು ಸೌಮ್ಯಾಳನ್ನು ಕಂಡು ಮುಗುಳ್ನಕ್ಕಳು. ನಂತರ ತನ್ನ ಕಾಲನ್ನು ಒತ್ತಿಕೊಳ್ಳಲಾರಂಭಿಸಿದಳು. ಪ್ರಯಾಣದಿಂದ ಅವಳಿಗೆ ಆಯಾಸವಾಗಿತ್ತು.

ಆದರೆ ಶಂಕರ್‌ನ ತಂದೆ ತಾಯಿ 1 ವಾರದ ಮಟ್ಟಿಗೆ ಮೈಸೂರಿಗೆ ಹೋಗುತ್ತಿದ್ದಾರೆಂದು ತಿಳಿದಾಗ, ರೂಪಾಳ ಒಳ್ಳೆಯ ಆಲೋಚನೆಗಳೆಲ್ಲಾ ಬೇಗನೆ ಗಾಳಿಯಲ್ಲಿ ತೇಲಿಹೋಯಿತು. ಅವಳಿಗೆ ಗೊತ್ತಿದ್ದ ಸತ್ಯ ಒಂದೇ. ಪುರುಷ ಹಾಗೂ ಮಹಿಳೆಯ ನಡುವೆ ಒಂದು ದೈಹಿಕ ಸಂಬಂಧ ಇರುತ್ತದೆ. ಅದು ಅವಳ ಹಾಗೂ ಶಂಕರ್‌ ನಡುವೆ ಹಲವು ವರ್ಷಗಳ ಕಾಲ ಇತ್ತು. ಆದರೆ ಈಗ 2 ದಿನಗಳಲ್ಲಿ ಶಂಕರ್‌ನನ್ನು ತನ್ನ ಗೆಳತಿಯಿಂದ ಕಿತ್ತುಕೊಳ್ಳುವಳೇ? ಇಷ್ಟು ವರ್ಷಗಳಿಂದ ಅವರಿಬ್ಬರ ವಿವಾಹದ ನಂತರ ತಾನು ಬೇರೆಯಾಗಿ ಇದ್ದೇನೆ.

``ನಿನಗೆ ಇಲ್ಲಿ ಚೆನ್ನಾಗಿ ಟೈಂಪಾಸ್‌ ಆಗುತ್ತೆ. ನನಗೆ ರಜೆ ಇಲ್ಲಾಂದ್ರೆ ಏನಾಯ್ತು? ಶಂಕರ್‌ಗೆ ನೈಟ್‌ ಶಿಫ್ಟ್. ಅವರು ನಿನ್ನ ಜೊತೆ ಮಾತಾಡೋಕೆ ಹಗಲಿನಲ್ಲಿ ಇರ್ತಾರಲ್ಲ. ನನ್ನ ಪ್ರೀತಿಯ ಗಂಡ ತನ್ನ ಪ್ರೀತಿಯ ಹೆಂಡತಿಗೆ ಇಷ್ಟು ಮಾತ್ರ ಮಾಡೋಕೆ ಆಗಲ್ವೆ?'' ಸೌಮ್ಯಾ ರೂಪಾಳಿಗೆ ಕಾಫಿ ಕಪ್‌ ಕೊಡುತ್ತಾ ಹೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ