``ಅರುಣಾ, ನನಗೆ ಬಹಳ ಖುಷಿಯಾಗ್ತಿದೆ. ಯುಎನ್‌ಓನ ಸ್ಪೆಷಲ್ ಫೋರ್ಸ್‌ನೊಂದಿಗೆ ಉಗಾಂಡಾಗೆ ಹೋಗೋಕೆ ನನ್ನ ಹೆಸರು ಫೈನಲ್ ಆಗಿದೆ. ಇದು ನನ್ನ ಜೀವನದ ಅಮೃತಘಳಿಗೆ. ನೀನು ರಾಹುಲ್ ‌ಮನೆಗೆ ಬೆಂಗಳೂರಿಗೆ ಹೋಗು.''

``ನೀವು ಎಲ್ಲಿಗಾದ್ರೂ ಹೊರಡಿ. ನಂಗೇನು? ನಾನ್ಯಾಕೆ ಬೆಂಗಳೂರಿಗೆ ಹೋಗಲಿ? ನೀವಿಲ್ಲದಿದ್ರೆ ನಾನು ಬದುಕೋಕೇ ಆಗಲ್ವಾ? 5 ವರ್ಷದ ಮಗ ರಾಹುಲ್ ‌ಜೊತೆ ಒಬ್ಬಳೇ ಇರ್ತಿದ್ದೆ. ಆಗ ಹೇಗಿರ್ತೀಯಾಂತ ಕೇಳಲಿಲ್ಲ.''

``ನೀನಂತೂ ನನ್ನನ್ನು ಯಾವಾಗಲೂ ಬೈತಾನೇ ಇರ್ತೀಯ. ಇರಲಿ, ನಾನು ರಾಹುಲ್‌ಗೆ ಫೋನ್‌ ಮಾಡ್ತೀನಿ. ಆಮೇವೆ ನಿನ್ನ ಮನಸ್ಸಿಗೆ ಬಂದ ಹಾಗೆ ಮಾಡು,'' ಎಂದು ಹೇಳಿ ಸುರೇಶ್‌ ರಾಹುಲ್‌‌ಗೆ ಫೋನ್‌ ಮಾಡಿದರು.

``ನಾನು ಉಗಾಂಡಾಗೆ ಹೋಗ್ತಿದ್ದೀನಿ. ನಿನ್ನ ಅಮ್ಮ ನಿನ್ನ ಬಳಿ ಬಂದಿರಲಿ. ಅವಳು ಸರಿಯಾಗಿ ಪಥ್ಯ ಮಾಡಲ್ಲ. ಅವಳ ತೂಕ ಹೆಚ್ತಾನೇ ಇದೆ. ಓಡಾಡುವುದೂ ಕಷ್ಟವಾಗಿದೆ. ಅವಳಿಗೆ ಮಂಡಿ ನೋವು. ಯಾರಾದ್ರೂ ಒಳ್ಳೆಯ ಡಾಕ್ಟರ್‌ಗೆ ತೋರಿಸು. ನಾನು ಎಲ್ಲವನ್ನೂ ಮಾಡಿ ಸೋತುಹೋಗಿದ್ದೀನಿ. ನೀನೂ ಪ್ರಯತ್ನಿಸಿ ನೋಡು. ಏನಾದ್ರೂ ಲಾಭವಾಗಬಹುದು.''

``ನೀವು ಯಾವಾಗ ಹೊರಡೋದು?''

``ನಾನು 22ನೇ ತಾರೀಕು ಡೆಲ್ಲೀಲಿ ಇರಬೇಕು.''

ನಂತರ ಅರ್ಧಗಂಟೆಯಲ್ಲೇ ರಾಹುಲ್‌‌ನ ಫೋನ್‌ ಬಂತು.``ಅಮ್ಮಾ, 20ನೇ ತಾರೀಕು ನೀವು ಬೆಂಗಳೂರಿಗೆ ಬರ್ತಿದ್ದೀರಿ. ನಾನು ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿಸಿದ್ದೀನಿ.''

``ಅಷ್ಟು ಬೇಗ ನಾನು ಹೇಗೆ ರೆಡಿಯಾಗೋದು?''

``ನೀವು ನಿಮ್ಮ ಮನೇಗೆ ಬರ್ತಿದ್ದೀರಿ. ಅದಕ್ಯಾಕೆ ಯೋಚನೆ? ನನಗೆ ಕೋಡುಬಳೆ ಮಾಡ್ಕೊಂಡು ಬನ್ನಿ.'' ಅರುಣಾ ಮೊದಲ ಬಾರಿ ಮಗನ ಮನೆಗೆ ಹೋಗುತ್ತಿದ್ದರು. ಅವರು ಬಹಳ ಕಷ್ಟಪಟ್ಟು ರಾಹುಲ್‌‌ನನ್ನು ಬೆಳೆಸಿದ್ದರು. ಗಂಡ ಸುರೇಶ್‌ ಮಿಲಿಟರಿಯಲ್ಲಿ ಸೋಲ್ಜರ್‌ ಆಗಿದ್ದರು. ಅವರು ವರ್ಷದಲ್ಲಿ ಒಮ್ಮೆ ಮಾತ್ರ ಮನೆಗೆ ಬರುತ್ತಿದ್ದರು. ಒಮ್ಮೊಮ್ಮೆ ವರ್ಷ ಮುಗಿದುಹೋಗುತ್ತಿತ್ತು. ಮನೆ ಅತ್ತೆ, ಮಾವ, ಮದುವೆಯಾಗದ ದೊಡ್ಡಣ್ಣ ಮತ್ತು ಇಬ್ಬರು ಚಿಕ್ಕ ನಾದಿನಿಯರಿಂದ ತುಂಬಿರುತ್ತಿತ್ತು. ದಿನವಿಡೀ ಕೆಲಸ ಮಾಡಿ ಅರುಣಾ ಸುಸ್ತಾಗುತ್ತಿದ್ದರು. ಭಾವನ ಕಾಮುಕ ದೃಷ್ಟಿ ಅವರ ಅಂಗಗಳನ್ನು ಭೇದಿಸುವಂತಿದ್ದವು. ಭಾವನಿಗೆ ಕುಡಿತದ ಅಭ್ಯಾಸ. ಮನೆ ರಣರಂಗದಂತಿತ್ತು. ಅದರಿಂದ ಬೇಸತ್ತು ಅವರು ಮನೆ ಬಿಟ್ಟು ತರುಮನೆಗೆ ಹೋಗಿದ್ದರು. ಸುರೇಶ್‌ಗೆ ಆಗ ಬಹಳ ಕೋಪ ಬಂದಿತ್ತು. ಅವರು 5-6 ವರ್ಷ ಅರುಣಾ ಬಳಿ ಬಂದಿರಲಿಲ್ಲ. ಆಗ ಅರುಣಾಗೆ ಬಹಳ ಕಷ್ಟವಾಗಿತ್ತು. ಅವರು ಒಂದು ಸಣ್ಣ ಶಾಲೆಯಲ್ಲಿ ಕೆಲಸಕ್ಕೆ ಸೇರಿ ಸಂಜೆ ಹೊತ್ತು ಟ್ಯೂಶನ್‌ ಮಾಡುತ್ತಾ ಬದುಕು ಸಾಗಿಸಿದರು. ಮಗ ರಾಹುಲ್‌‌ನನ್ನು ಚೆನ್ನಾಗಿ ಓದಿಸಿ ಉತ್ತಮ ಪ್ರಜೆಯನ್ನಾಗಿ ಮಾಡುವುದೇ ಅವರ ಜೀವನದ ಧ್ಯೇಯವಾಗಿತ್ತು. ಜೀವನದಲ್ಲಿ ಬಿರುಗಾಳಿಗಳನ್ನು ಎದುರಿಸೀ ಎದುರಿಸೀ ಅವರು ಒರಟರೂ, ಹಠವಾದಿಯೂ ಆಗಿದ್ದರು.

ರಾಹುಲ್ ಚಿಕ್ಕಂದಿನಿಂದಲೇ ಬಹಳ ಚೂಟಿಯಾಗಿದ್ದ. ತರಗತಿಯಲ್ಲಿ ಯಾವಾಗಲೂ ಮೊದಲು ಬರುತ್ತಿದ್ದ. ಅವನು ಎಂಜಿನಿಯರಿಂಗ್‌ ಮಾಡಿ 3 ವರ್ಷ ಅಮೆರಿಕಾಗೆ ಹೋಗಿದ್ದ. ಅಲ್ಲಿಯೇ ಮಿನ್ನಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅರುಣಾಗೆ ಮಗನ ಈ ವ್ಯವಹಾರದಿಂದ ಕೋಪ ಬಂದಿತ್ತು. ರಾಹುಲ್ ‌ಅಮ್ಮನ ಬಳಿ ಮಿನ್ನಿಯನ್ನು ಕರೆದುಕೊಂಡು ಬಂದಿದ್ದ. ಸ್ವಲ್ಪ ದಿನದಲ್ಲೇ ಅವನಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿ ಹೆಂಡತಿಯೊಡನೆ ಅಲ್ಲಿಗೆ ಹೋಗಿದ್ದ. ಅರುಣಾಗೆ ಮಗನ ಮನೆಯಲ್ಲಿ ಹೇಗೆ ಇರೋದು? ಸೊಸೆಯ ಜೊತೆ ಹೇಗೆ ವ್ಯವಹರಿಸೋದು ಎಂದೆಲ್ಲಾ ಭಯವಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ