ಸಂಗೀತಾಳ ಮಗಳು ಶ್ವೇತಾ ತನ್ನ ಗೆಳತಿ ಕಾವ್ಯಾಳನ್ನು ಭೇಟಿಯಾಗಿ ಮಾತುಕಥೆ ಮುಗಿಸಿ ಬೇಗ ಬೇಗ ಮನೆಯ ದಾರಿ ಹಿಡಿದಳು, ಮನೆಯೊಳಗೆ ಬಂದ ತಕ್ಷಣ ಯಾಕಾದರೂ ಅಷ್ಟು ಬೇಗ ಮನೆಗೆ ಬಂದೆನೋ ಎಂದು ಪೇಚಾಡಿಕೊಂಡಳು. ಕಾರಣವಿಷ್ಟೆ, ಅವಳ ತಾಯಿ ಸಂಗೀತಾ ಮತ್ತು ರಾಜೇಶ್‌ ಜೊತೆಯಾಗಿ ಕುಳಿತು ಸಂಜೆಯ ಕಾಫಿ ಹೀರುತ್ತಿದ್ದರು.

ಶ್ವೇತಾ ರಾಜೇಶ್‌ ಕಡೆ ತಿರುಗಿ ಪರಿಚಯದ ಮುಗುಳ್ನಗು ಬೀರುವುದಿರಲಿ, ನಮಸ್ತೆ ಸಹ ಹೇಳಲಿಲ್ಲ. ದುರ್ದಾನ ಪಡೆದವಳಂತೆ ಮುಖ ಗಂಟಿಕ್ಕಿಕೊಂಡು ಸರಸರ ತನ್ನ ಕೋಣೆಗೆ ಹೊರಟುಹೋದಳು. ಅವಳ ಅಂಥ ವರ್ತನೆಯಿಂದ ತಾಯಿ ಸಂಗೀತಾ ಸಂಕೋಚಪಟ್ಟುಕೊಳ್ಳುತ್ತಾ, ಮನದಲ್ಲೇ ಮಗಳ ಮೇಲೆ ಕೆಂಡ ಕಾರಿದಳು.

``ನಾನು ಹೊರಟ ನಂತರ ಶ್ವೇತಾ ನಿನ್ನೊಂದಿಗೆ ಜಗಳ ಆಡುವುದಿಲ್ಲ ತಾನೇ.....?'' ರಾಜೇಶ್‌ ಕೇಳಿದರು.

``ಅವಳ ಕೋಪ ಬೇಗ ಕರಗುವುದಿಲ್ಲ ಬಿಡಿ. ಇವತ್ತು ರಾತ್ರಿ ದೊಡ್ಡ ಗಲಾಟೆ ಮಾಡದೆ ಊಟ ಮಾಡುವವಳಲ್ಲ,'' ಸಂಗೀತಾ ದುಗುಡದಿಂದ ಹೇಳಿದಳು.

``ನಾನು ನಿನ್ನನ್ನು ಭೇಟಿಯಾಗಲು ಇಲ್ಲಿಗೆ ಬರುವುದನ್ನು ಆದಷ್ಟೂ ನಿಲ್ಲಿಸುವುದೇ ಒಳ್ಳೆಯದು.''

``ನಾನು ನೆಮ್ಮದಿಯಾಗಿರಲು ನಿಮ್ಮ ಸ್ನೇಹದ ಆಸರೆ ನನಗೆ ಬೇಕೇಬೇಕು ಎಂದು ಈ ಹುಡುಗಿಗೆ ಹೇಗೆ ಬಿಡಿಸಿ ಹೇಳಲಿ....?''

``ನೀನು ಅವಳನ್ನೇನೂ ಬೈದು, ಗದರಿ ಮಾಡಲು ಹೋಗಬೇಡ. ಕೆಲಸ ಇನ್ನಷ್ಟು ಕೆಡುತ್ತದೆ.''

``ರಾಜೇಶ್‌, ಅವಳೆಂದೂ ನಿಮ್ಮನ್ನು ತನ್ನ ತಂದೆಯ ಸ್ಥಾನದಲ್ಲಿರಿಸಿ ನೋಡಲಾರಳೇನೋ ಅನ್ಸುತ್ತೆ.''

``ಅವಳು ದೊಡ್ಡವಳಾಗ್ತಿದ್ದಾಳೆ. ಒಂದಲ್ಲ ಒಂದು ದಿನ ಅವಳು ನಿನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು, ತನ್ನ ಮನಸ್ಸು ಬದಲಾಯಿಸಿಕೊಳ್ಳಬಹುದು.''

``ಅಯ್ಯೋ.... ಬಿಡಿ.... ನಾನು ಇಡೀ ಜನ್ಮ ಹೀಗೇ ಒಂಟಿಯಾಗಿ ಕೊರಗುತ್ತಿದ್ದರೂ ಅವಳಿಗೇನೂ ಅನ್ನಿಸದು. ಆದರೆ ನಿಮ್ಮೊಂದಿಗೆ ಸಂಸಾರ ಹೂಡುತ್ತೇನೆ ಅಂದಾಕ್ಷಣ ಅವಳಿಗೆ ತನ್ನ ತಂದೆಯ ನೆನಪಾಗಿಬಿಡುತ್ತದೆ. ನನ್ನ ಮನಸ್ಸಿಗೂ ತುಸು ನೆಮ್ಮದಿ ಬೇಕು ಎಂಬುದರ ಕಡೆ ಒಂದಿಷ್ಟೂ ವಿಚಾರ ಮಾಡದೆ, ಅವಳು ತನ್ನ ಸ್ವಾರ್ಥದ ಬಗ್ಗೆ ಮಾತ್ರ ಚಿಂತಿಸುತ್ತಾಳೆ...... ಅವಳೇಕೆ ಹೀಗೆ ಸ್ವಾರ್ಥಿಯಾದಳೋ?'' ಸಂಗೀತಾ ತುಸು ಕೋಪದಲ್ಲೇ ಗುಡುಗಿದಳು.

``ನೀನು ಅನಗತ್ಯವಾಗಿ ಟೆನ್ಶನ್‌ ತೆಗೆದುಕೊಳ್ಳುತ್ತಿರುವೆ. ಮುಂದೆ ಒಂದು ದಿನ ಎಲ್ಲ ಸರಿಯಾಗುತ್ತದೆ ಬಿಡು,'' ಎಂದು ಸಂಗೀತಾಳಿಗೆ ಸಾಂತ್ವನ ಹೇಳಿ ಅವರು ಹೊರಟು ನಿಂತರು.

ಅಂದು ರಾತ್ರಿ ಸಂಗೀತಾ ನೆನೆಸಿದಂತೆಯೇ ಶ್ವೇತಾ ರಂಪ ರಾದ್ಧಾಂತಕ್ಕಿಳಿದಳು. ಅವಳು ಊಟ ಮಾಡದೇ ಸಂಪು ಹೂಡಿದಳು. ಸಂಗೀತಾ ಅವಳನ್ನು ಸಮಾಧಾನಪಡಿಸಿದಷ್ಟೂ ಶ್ವೇತಾಳ ಕೋಪ ಕಣ್ಣೀರಾಗಿ ಹರಿಯಿತು, ``ಇಡೀ ಸಮಾಜದ ಮುಂದೆ ನನಗೆ ಅವಮಾನ ಆಗಬಾರದು ಎಂದು ನಿನಗೆ ಅನಿಸಿದರೆ ಮೊದಲು ಆ ರಾಜೇಶ್‌ ಅಂಕಲ್ ಇಲ್ಲಿಗೆ ಬರುವುದನ್ನು ನಿಲ್ಲಿಸು,'' ಎಂದು ಅದೇ ರಾಗ ಹಾಡತೊಡಗಿದಳು.

``ಅಂದ್ರೇನಮ್ಮ ನೀನು ಹೇಳುವುದು.... ಇಷ್ಟು ವರ್ಷಗಳ ಕೊರಗಿನ ನಂತರವಾದರೂ ನಾನೊಂದಿಷ್ಟು ನೆಮ್ಮದಿ ಕಾಣುವುದು ಬೇಡ ಅಂತೀಯಾ?'' ಅಷ್ಟು ಕೇಳುವಷ್ಟರಲ್ಲಿ ಸಂಗೀತಾಳ ಕಂಠ ತುಂಬಿಬಂದಿತ್ತು.

``ಅದೆಲ್ಲ ನನಗೆ ಗೊತ್ತಿಲ್ಲ... ನೀನು ನನ್ನ ಅಮ್ಮ, ನಾನು ನಿನ್ನ ಮಗಳು.... ನೀನು ನನಗೆ ಮಾತ್ರ ಸೇರಿದಳು! ವಯಸ್ಸಿಗೆ ಬಂದ ಮಗಳ ಬಗ್ಗೆ ನಿನಗೆ ಹೆಚ್ಚು ಕಾಳಜಿ ಇರಬೇಕೇ ಅಥವಾ ಈ ವಯಸ್ಸಿನಲ್ಲಿ ಯಾರೋ ಒಬ್ಬ ಫ್ರೆಂಡ್‌ ಸಿಕ್ಕಿದನೆಂದು ನೀನು ಪ್ರಾಪ್ತ ವಯಸ್ಕ ಮಗಳನ್ನು  ಧಿಕ್ಕರಿಸಿ ಆತನೊಂದಿಗೆ ಹೀಗೆ ವ್ಯವಹರಿಸುವುದು ಸರಿಯೇ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ