ಭಾನುವಾರ ಮಧ್ಯಾಹ್ನದ ಊಟ ಮುಗಿಸಿ ಡಾ. ಮೋಹನ್‌ ಆರಾಮಾಗಿ ಸೋಫಾ ಮೇಲೆ ಒರಗಿದ್ದ. ಅಷ್ಟರಲ್ಲಿ ರಾಜೇಶನ ಫೋನ್‌ಬಂದಿತು.

``ಸಂಗೀತಾ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಾನೀಗ ಅವಳನ್ನು ನರ್ಸಿಂಗ್‌ ಹೋಮಿಗೆ ಕರೆದುಕೊಂಡು ಬಂದಿದ್ದೀನಿ. ನೀನು ಬೇಗ ವಿಜಯ ನರ್ಸಿಂಗ್‌ ಹೋಂಗೆ ಹೊರಟು ಬಾ...'' ಎಂದು ಆತಂಕದಿಂದ ಬಡಬಡಿಸಿದ್ದ. ಅವನ ದನಿಯಲ್ಲಿದ್ದ ಟೆನ್ಶನ್‌ ಮೋಹನನ ನಿದ್ದೆಯನ್ನು ಪೂರ್ತಿ ಓಡಿಸಿತು.

ತನ್ನ ಬಾಲ್ಯ ಸ್ನೇಹಿತ ರಾಜೇಶನಿಗಾಗಿ ಮೋಹನ್‌ ತಕ್ಷಣ ಅಲ್ಲಿಗೆ ಧಾವಿಸಿ ಬಂದ. ಡಾಕ್ಟರ್‌ ಗೌತಮ್ ಇವರಿಬ್ಬರಿಗೂ ಅನ್ವಯಿಸಿ ಹೇಳಿದರು, ``ನೋಡಿ, ಪೇಶೆಂಟ್‌ಗೆ ವಾಂತಿ ಮಾಡಿಸಿದ್ದೇವೆ. ಆಕೆ ಸಾಕಷ್ಟು ಮಾತ್ರೆಗಳನ್ನು ಸೇವಿಸಿಬಿಟ್ಟಿದ್ದರು. ಸಮಯಕ್ಕೆ ಸರಿಯಾಗಿ ನೀವು ಆಕೆಯನ್ನು ಇಲ್ಲಿಗೆ ಕರೆದುಕೊಂಡು ಬಂದು ಅಡ್ಮಿಟ್‌ ಮಾಡಿದ್ದು ಒಳ್ಳೆಯದಾಯ್ತು. ಇಲ್ಲದಿದ್ದರೆ ಅವರ ಜೀವ ಉಳಿಯುತ್ತಿರಲಿಲ್ಲ....''

ಡಾ. ಮೋಹನ್‌ ಸ್ವತಃ ತಾನೇ ಗೆಳೆಯನ ಹೆಂಡತಿ ಸಂಗೀತಾಳ ಚೆಕಪ್‌ ಮಾಡಿ, ಆಕೆ ಅಪಾಯದ ಗಡಿ ದಾಟಿದ್ದಾಳಷ್ಟೆ ಎಂದು ಖಾತ್ರಿಪಡಿಸಿಕೊಂಡ. ಸಂಗೀತಾಳಿಗೆ ಇನ್ನೂ ಜ್ಞಾನ ಬಂದಿರಲಿಲ್ಲ. ಆಕೆ ಆಳವಾದ ನಿದ್ದೆಗೆ ಜಾರಿಹೋಗಿದ್ದಳು. ಮೋಹನ್‌ ಬಂದು ರಾಜೇಶ್‌ಗೆ ವಿಷಯ ತಿಳಿಸಿ, ಏನೂ ಆತಂಕ ಪಡಬೇಡ ಎಂದು ಧೈರ್ಯ ತುಂಬಿಸಿದ. ರಾಜೇಶ್‌ ಕಣ್ಣಲ್ಲಿ ನೀರೂರಿತ್ತು.

ಡಾ. ಮೋಹನ್‌ ಅವನನ್ನು ಸಮಾಧಾನಪಡಿಸುತ್ತಾ, ``ಅತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದು ಇದು 3ನೇ ಸಲ ರಾಜು.... ಈ ಸಲವಂತೂ ಸಾಯಲೇಬೇಕು ಅಂತ ಹಠತೊಟ್ಟಂತೆ ಜಾಸ್ತಿ ಮಾತ್ರೆ ನುಂಗಿದ್ದಾರೆ. ನಿನಗೆ ಆಕೆಯ ಕೋಪಿಷ್ಟ ಸ್ವಭಾವದ ಬಗ್ಗೆ ಗೊತ್ತಿರುವಾಗ ಯಾಕೆ ಮತ್ತೆ ಮತ್ತೆ ಅವರ ತಂಟೆಗೆ ಹೋಗ್ತೀಯಾ? ನೀನೇ ಅನುಸರಿಸಿಕೊಂಡು ಹೋಗಬೇಕಷ್ಟೆ.... ಅದು ಸರಿ, ನಿನ್ನೆ ಮೊನ್ನೆ ಯಾವ ವಿಷಯಕ್ಕಾಗಿ ನಿಮ್ಮಿಬ್ಬರಲ್ಲಿ ಅಷ್ಟು ದೊಡ್ಡ ಜಗಳವಾಯ್ತು? ಅವರು ಇಂಥ ಕಠಿಣ ನಿರ್ಧಾರ ಕೈಗೊಳ್ಳುವಂಥ ಅನಿವಾರ್ಯತೆ ಏಕೆ ಬಂತು?''

``ಇಲ್ವೋ ಮೋನಿ...... ಈ ಸಲ ನಮ್ಮ ಮಧ್ಯೆ ಅಂಥ ಯಾವ ದೊಡ್ಡ ಜಗಳ ನಡೆಯಲಿಲ್ಲ. ಈ ಸಂಗಿ ಹೀಗ್ಯಾಕೆ ಮಾಡಿದಳು ಅಂತ ನನಗೆ ನಿಜವಾಗ್ಲೂ ಅರ್ಥ ಆಗ್ತಾ ಇಲ್ಲ. ಅದರಲ್ಲೂ ತನ್ನ ಪ್ರಾಣವನ್ನೇ ಬಲಿಕೊಡುವಂಥ ಕೆಟ್ಟ ಕರ್ಮ ಅವಳಿಗೇನಿತ್ತೊ......''

``ರಾಜು.... ನೀನು ನನಗೂ ಸುಳ್ಳು ಹೇಳಬೇಕೇ?'' ಮೋಹನ್‌ ಅವನನ್ನು ಗದರಿಕೊಂಡ.

``ದಯವಿಟ್ಟು ನನ್ನನ್ನು ನಂಬು ಮೋನಿ. ನಮ್ಮಿಬ್ಬರಿಗೂ 3 ದಿನಗಳ ಹಿಂದ ಸಣ್ಣ ಜಗಳ ನಡೆದಿದ್ದು ನಿಜ..... ಅದೇನೂ ದೊಡ್ಡ ವಿಷಯ ಆಗಿರಲಿಲ್ಲ. ನಿನ್ನೆ ರಾತ್ರಿ ಅಥವಾ ಇವತ್ತು ಏನೂ ಮಾತುಕಥೆ ಆಗಿರಲಿಲ್ಲ,'' ರಾಜೇಶ್‌ ಆವೇಶದಲ್ಲಿ ಉತ್ತರಿಸಿದ. ಅವನ ಮಾತುಗಳಿಂದ ರಾಜೇಶ್‌ ಸತ್ಯ ಹೇಳುತ್ತಿದ್ದಾನೆ ಎಂದು ಮೋಹನ್‌ಗೆ ಅನಿಸಿತು. ಮತ್ತೆ ಏನನ್ನೋ ನೆನಪಿಸಿ ಕೊಂಡವನಂತೆ ಡಾ. ಮೋಹನ್‌ ಪ್ರಶ್ನಿಸಿದ, ``3 ದಿನಗಳ ಹಿಂದೆ ಜಗಳ ಆಯ್ತು ಅಂದ್ಯಲ್ಲ..... ಅದು ಯಾವ ವಿಷಯಕ್ಕೆ?''

``ಅದೇ ಹಾಳು ಹಳೇ ವಿಷಯ.... ಕಳೆದ 20 ವರ್ಷಗಳಿಂದ ನನ್ನ ಜೀವನದ ಸುಖಶಾಂತಿಗಳೆಲ್ಲ ಅದರಿಂದ ಮಾಯವಾಗಿದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ