ಎಂದಿನಂತೆ ಇಂದೂ 5 ಗಂಟೆಗೆ ಅಲಾರಂ ಹೊಡೆದು ಸುನಂದಾಳನ್ನು ಎಚ್ಚರಿಸಿತು. 6 ಗಂಟೆಗೆ ಕರೆಂಟ್‌ ಹೋಗುತ್ತದೆ. ಆದ್ದರಿಂದ ಅವಳು 1 ಗಂಟೆ ಮುಂಚೆ ಎದ್ದು ಮಕ್ಕಳಿಗೆ ಟಿಫಿನ್‌ ಮಾಡಬೇಕು, ಗೀಸರ್‌ ಹಾಕಿ ತಾನು ಸ್ನಾನ ಮಾಡಿ ಮಕ್ಕಳಿಗೆ ಬಿಸಿ ನೀರು ತೋಡಿಡಬೇಕು. ಕಸದ ಡಬ್ಬಿ ಆಚೆ ಇಟ್ಟು ಮುಂದಿನ ಬಾಗಿಲಿನ ಬೀಗ ತೆರೆಯುವುದು ಮತ್ತೆ ಮಲಗುವ ಮೊದಲು ಬಾಗಿಲಿಗೆ ಬೀಗ ಹಾಕುವುದು ಇತ್ಯಾದಿ ಬಹಳಷ್ಟು ಕೆಲಸಗಳಿರುತ್ತವೆ. ಅವಳಲ್ಲಿ ವಿಚಿತ್ರ ಸಿಡಿಮಿಡಿ ಸ್ವಭಾವ ಮನೆ ಮಾಡಿತ್ತು. `ತಾನು ಮನೆಯಲ್ಲಿ ಕೆಲಸದವಳಾಗಿಬಿಟ್ಟಿದ್ದೇನೆ,' ಎಂಬ ಗಾಢ ಆಲೋಚನೆ ಅವಳ ಮನದಲ್ಲಿ ಮನೆ ಮಾಡಿತ್ತು.

ಗೀಸರ್‌ ಚಾಲೂ ಮಾಡಿ ಅವಳು ಬ್ರಶ್‌ ಮಾಡಿದಳು. ನಂತರ ಕಾಫಿ ಮಾಡಿಕೊಂಡು ಕುಡಿದಳು. ಕಸದ ಬಕೆಟ್‌ ಹೊರಗಿಟ್ಟಳು. ನಂತರ ಮಕ್ಕಳು ರವಿ ಹಾಗೂ ಶೃತಿಯನ್ನು ಎಬ್ಬಿಸಲು ಹೋದಳು. ಅವರ ರೂಮಿನ ಬಳಿ ಹೋಗುತ್ತಲೇ ಬಡಬಡಿಸತೊಡಗಿದಳು,

``ಇವರನ್ನು ಎಬ್ಬಿಸೋಕೆ ನನಗೆ 15-20 ನಿಮಿಷಗಳು ಬೇಕು. ಇವರು ಬಹಳ ಸೋಂಬೇರಿಗಳು. ದಿನ ಇವರ ಬಳಿ ಹೆಣಗೋದೇ ಆಯ್ತು ನನಗೆ.''

ಹೀಗೆ ದಿನ ಅವಳ ಬಡಬಡಿಕೆ ನಡೆದೇ ಇರುತ್ತಿತ್ತು. ಒಮ್ಮೊಮ್ಮೆ ಅವರನ್ನು ಹೊಡೆಯುವವರೆಗೂ ಮುಂದುವರಿಯುತ್ತಿತ್ತು. ಅವರು ಅಳುವ ಸದ್ದು ಕೇಳಿ ಗಂಡ ಸುಮಂತ್‌ ಎದ್ದು ಬಂದು, ``ಯಾಕೆ ಬೆಳಗ್ಗೇನೇ ಹೀಗ್ಮಾಡ್ತೀ? ಮನೇನ ತಲೆ ಮೇಲಿಟ್ಕೊಂಡಿರೋ ಹಾಗೆ ಆಡ್ತಿದ್ದೀಯ. ಕೂಗಾಡದೇ ಕೆಲಸ ಮಾಡೋಕೆ ಆಗೋದೇ ಇಲ್ವಾ ನಿನಗೆ?'' ಎಂದು ರೇಗಾಡುತ್ತಿದ್ದ.

ಅದನ್ನು ನೆನೆಸಿಕೊಂಡು ಸುನಂದಾಳ ಕಣ್ಣುಗಳಲ್ಲಿ ನೀರು ತುಂಬಿತು. `ಎಲ್ಲಾ ನನ್ನದೇ ತಪ್ಪು ಅಂತಾರಲ್ಲ. ಎಂಥ ಗಂಡ ಸಿಕ್ಕಿದ್ದಾರೆ ನನಗೆ,' ಎಂದುಕೊಂಡಳು.

ಶಾಲೆಗೆ ಹೋಗಲು ಶೃತಿ ಕೊಂಚ ಬೇಗ ರೆಡಿಯಾಗುತ್ತಿದ್ದಳು. ಆದರೆ ರವಿ ಬಹಳ ತೊಂದರೆ ಕೊಡುತ್ತಿದ್ದ. ಅವರನ್ನು ರೆಡಿ ಮಾಡಿದ ನಂತರ ಅವರ ಊಟ ಪ್ಯಾಕ್‌ ಮಾಡುವಾಗ, ಇಬ್ಬರನ್ನೂ ಹಿಡಿದು ಹೊರಗಿರುವ ಆಟೋದಲ್ಲಿ ತಳ್ಳಿದರೆ 6 ಗಂಟೆಗಳವರೆಗೆ ಇವರ ಕಾಟ ಇರದು ಎಂದುಕೊಂಡಳು. ಆದರೆ ಹಾಗಾಗುತ್ತದೆಯೇ?

ಮಕ್ಕಳು ಸ್ಕೂಲಿಗೆ ಹೊರಟ ನಂತರ ಅವಳು ಮನೆಯೊಳಗೆ ಬಂದಳು. ಅತ್ತೆಯ ನರಳಿಕೆ ಕೇಳಿಬರುತ್ತಿತ್ತು. ``ಹ್ಞೂಂ, ಮಕ್ಕಳು ಹೋದರು. ಆದರೆ ಮಕ್ಕಳ ತಂದೆ ಹಾಗೂ ತಂದೆಯ ತಾಯಿ ಇಲ್ಲೇ ಇದ್ದಾರೆ. ಅತ್ತೆಯಂತೂ ನನ್ನ ಜೀವ ತೊಗೊಳ್ಳೋಕೇ ಇಲ್ಲಿದ್ದಾರೆ ಅನಿಸುತ್ತೆ. ನನ್ನ ಗಂಡನಂತೂ ಆಜ್ಞಾಪಾಲಕ ಶ್ರವಣ ಕುಮಾರನಂತಿದ್ದಾರೆ. ಎಲ್ಲಾ ತೋರಿಕೆ ತಾನೇ ಸೇವೆ ಮಾಡಲಿ, ನನ್ನ ಕಷ್ಟ ಅರ್ಥವಾಗುತ್ತೆ. ತನ್ನ ತಾಯಿಗೆ ಇದುವರೆಗೂ 1 ಕಪ್‌ ಕಾಫಿ ಮಾಡಿಕೊಟ್ಟಿಲ್ಲ. ಬರೀ ಆರ್ಡರ್‌ ಮಾಡ್ತಾರೆ. `ನೋಡು ಸುನಂದಾ, ಅಮ್ಮನಿಗೇನು ಬೇಕೋ  ತಂದು ಕೊಡು ಅಂತಾರೆ, 'ಹ್ಞೂಂ.' 'ಅತ್ತೆಗೆ ಕಾಯಿಲೆಗಳೊಂದಿಗೇ ಸ್ನೇಹ. ಒಮ್ಮೆ ಜ್ವರ ಬಂದರೆ, ಇನ್ನೊಮ್ಮೆ ಕೆಮ್ಮು ನೆಗಡಿ. ಮತ್ತೊಮ್ಮೆ ಶುಗರ್‌ ಹೆಚ್ಚಾದರೆ, ಕೆಲವು ಸಲ ಕಾಲು ನೋವು ಹೆಚ್ಚಾಗುತ್ತದೆ. ಆದರೂ ತಮ್ಮ ಮಗನಿಗೆ ತೋರಿಸಿಕೊಳ್ಳಲು ತರಕಾರಿ ಕೊಡು, ಕುಳಿತಲ್ಲೇ ಹೆಚ್ಚಿ ಕೊಡ್ತೀನಿ ಎನ್ನುತ್ತಾರೆ. ಆದರೆ ಎಷ್ಟು ಹೊತ್ತು  ಕೂತಿರ್ತಾರೆ? ಸ್ವಲ್ಪ ಹೊತ್ತಿಗೇ ಗೋಡೆಗೆ ಒರಗಿಕೊಂಡು ಹೇಗೆ ಕೂರುತ್ತಾರೆಂದರೆ ಈಗಲೇ ಸತ್ತೇಹೋಗುತ್ತಾರೇನೋ ಎಂಬಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ