ಅಂದು ಮೊದಲ ಬಾರಿಗೆ ಕುಮಾರ್‌ ಉಷಾಳ ಮನೆಗೆ ಎಲ್ಲರೊಂದಿಗೆ ಊಟ ಮಾಡಲು ಬರುವವರಿದ್ದರು. ಅವಳ ಇಬ್ಬರು ತಮ್ಮಂದಿರು ಮತ್ತು ಅವರ ಹೆಂಡತಿಯರು ಅವರನ್ನು ಸತ್ಕರಿಸಲು ಬೆಳಗಿನಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ತಮ್ಮಂದಿರ ಮಕ್ಕಳೂ ಹೊಸ ಬಟ್ಟೆಗಳನ್ನು ಧರಿಸಿ ಕುಮಾರ್‌ ಬರುವುದನ್ನೇ ಕಾಯುತ್ತಿದ್ದರು.

ಉಷಾ ಚೆನ್ನಾಗಿ ಅಲಂಕರಿಸಿಕೊಳ್ಳಲು ಹಿರಿಯ ತಮ್ಮನ ಹೆಂಡತಿ ರತ್ನಾ ಸಹಾಯ ಮಾಡುತ್ತಿದ್ದಳು. ಉಷಾ ತನ್ನ ವಯಸ್ಸಿಗೆ ಹೋಲಿಸಿದರೆ ಹೆಚ್ಚು ಆಕರ್ಷಕ ಹಾಗೂ ಸ್ಮಾರ್ಟಾಗಿ ಕಾಣುತ್ತಿದ್ದಳು. ಆದರೂ ಅವಳ ಮನಸ್ಸಿನಲ್ಲಿ ಚಿಂತೆ ಹಾಗೂ ವ್ಯಾಕುಲತೆ ಮನೆ ಮಾಡಿತ್ತು.

``35ನೇ ವಯಸ್ಸಿನಲ್ಲಿ ಮದುವೆ ಮಾಡ್ಕೊ ಅಂತ ನೀವೆಲ್ಲಾ ನನ್ನನ್ಯಾಕೆ ಪೀಡಿಸ್ತಿದ್ದೀರಿ? ನಾನು ನಿಮಗೆ ಹೊರೆ ಆಗಿದ್ದೀನಾ? ನನ್ನನ್ನು ಬಲವಂತವಾಗಿ ಹೊರಹಾಕ್ತಿದ್ದೀರಾ?'' ಎಂದು ಕಳೆದ ವಾರ ಉಷಾ ತನ್ನ ತಮ್ಮಂದಿರು ಹಾಗೂ ಅವರ ಹೆಂಡತಿಯರ ಬಳಿ ಹಲವಾರು ಸಾರಿ ಜಗಳವಾಡಿದ್ದಳು. ಆದರೆ ಅವರೆಲ್ಲಾ ಅವಳ ವಿರೋಧವನ್ನು ನಕ್ಕು ತಳ್ಳಿ ಹಾಕಿದ್ದರು.

ಸ್ವಲ್ಪ ಹೊತ್ತಿನ ನಂತರ ಉಷಾಗಿಂತ 2 ವರ್ಷ ಚಿಕ್ಕವನಾದ ತಮ್ಮ ಅಜಿತ್‌ ರೂಮಿಗೆ ಬಂದು ಹೇಳಿದ, ``ಅಕ್ಕಾ, ಕುಮಾರ್‌ಬಂದ್ರು.''

ಉಷಾ ಏಳದಿದ್ದಾಗ, ಅಜಿತ್‌ ಬಹಳ ಪ್ರೀತಿಯಿಂದ ಅವಳ ಭುಜ ಹಿಡಿದು ಎಬ್ಬಿಸಿದ. ನಂತರ ಭಾವುಕತೆಯಿಂದ, ``ಅಕ್ಕಾ, ಮನಸ್ಸಿನಲ್ಲಿ ಯಾವುದೇ ಟೆನ್ಶನ್‌ ಇಟ್ಕೋಬೇಡ. ನಿನ್ನ ಇಷ್ಟಕ್ಕೆ ವಿರುದ್ಧವಾಗಿ ನಾವೇನೂ ಮಾಡಲ್ಲ,'' ಎಂದ.

``ನನಗೆ ಮದುವೆಯಾಗೋಕೆ ಇಷ್ಟವಿಲ್ಲ,'' ಉಷಾ ಮೆಲ್ಲಗೆ ಹೇಳಿದಳು.

``ಬೇಡ ಬಿಡು. ಆದರೆ ಮನೆಗೆ ಬಂದ ಅತಿಥಿಗಳನ್ನು ಸ್ವಾಗತ ಮಾಡೋಕಾದ್ರೂ ನಡಿ,'' ಅಜಿತ್‌ ಅವಳ ಕೈ ಹಿಡಿದು ಡ್ರಾಯಿಂಗ್‌ರೂಮಿಗೆ ಕರೆದುಕೊಂಡು ಹೊರಟ. ಉಷಾಳ ಕಣ್ಣುಗಳಲ್ಲಿ ಚಿಂತೆ ಹಾಗೂ ವ್ಯಾಕುಲತೆ ಇನ್ನಷ್ಟು ಹೆಚ್ಚಿತು.

ಡ್ರಾಯಿಂಗ್‌ ರೂಮಿನಲ್ಲಿ ಕುಮಾರ್‌ರನ್ನು ಮೂವರೂ ಮಕ್ಕಳು ಮುತ್ತಿಗೆ ಹಾಕಿದ್ದರು. ಕುಮಾರ್‌ ಎದುರಿಗೆ ಅವರು ಬಹಳಷ್ಟು ಪೆನ್ಸಿಲ್‌ಗಳು ಮತ್ತು ಕಾಗದಗಳನ್ನು ಇಟ್ಟಿದ್ದರು.

ಕುಮಾರ್‌ ಚಿತ್ರಕಾರರಾಗಿದ್ದರು. ಮಕ್ಕಳು ತಮ್ಮ ತಮ್ಮ ಚಿತ್ರಗಳನ್ನು ಮೊದಲು ಬರೆಸಿಕೊಳ್ಳಲು ಗದ್ದಲ ಮಾಡುತ್ತಿದ್ದರು. ಅವರ ಸ್ವಚ್ಛಂದ ವರ್ತನೆಗೆ ಕಾರಣ ಕುಮಾರ್‌ ಆ ಮೂವರೂ ಮಕ್ಕಳ ಮನಸ್ಸನ್ನು ಕೆಲವೇ ನಿಮಿಷಗಳಲ್ಲಿ ಗೆದ್ದುಬಿಟ್ಟಿದ್ದರು.

ಅಜಿತನ 6 ವರ್ಷದ ಮಗಳು ಕಾವ್ಯಾ ತನ್ನ ಚಿತ್ರ ಬರೆಸಿಕೊಳ್ಳಲು ಕೆನ್ನೆಯ ಮೇಲೆ ಬೆರಳಿಟ್ಟು ವಯ್ಯಾರದಿಂದ ಪೋಸ್‌ ಕೊಟ್ಟಾಗ ಅಲ್ಲಿದ್ದವರಿಗೆಲ್ಲಾ ನಗು ಬಂತು.

ಉಷಾ ನಗುತ್ತಾ ಕಾವ್ಯಾಗೆ ಮುತ್ತು ಕೊಟ್ಟು ಕುಮಾರ್‌ಗೆ ಕೈ ಮುಗಿದಳು.

``ಇದು ನಿಮಗೆ,'' ಕುಮಾರ್‌ ಎದ್ದು ನಿಂತು ಒಂದು ಅಗಲಾದ ಕಾಗದದ ರೋಲ್‌ನ್ನು ಉಷಾಗೆ ಕೊಟ್ಟರು.

``ನೀವು ಮಾಡಿರೋ ಪೇಂಟಿಂಗ್‌ ಇದೆಯಾ ಇದರಲ್ಲಿ?'' ಅಜಿತನ ಹೆಂಡತಿ ರತ್ನಾ ಕುತೂಹಲದಿಂದ ಕೇಳಿದಳು.

``ಹೌದು,'' ಕುಮಾರ್‌ ಸಂಕೊಚದಿಂದ ಕೇಳಿದರು.

``ನಾವು ಅದನ್ನು ನೋಡೋಣ,'' ಉಷಾಳ ಚಿಕ್ಕ ತಮ್ಮ ಆಕಾಶನ ಪತ್ನಿ ಆಶಾ ಉತ್ಸಾಹದಿಂದ ಕೇಳಿದಳು.

ಉಷಾ ರೋಲ್‌‌ನ್ನು ಆಶಾಗೆ ಕೊಟ್ಟಳು. ಅವಳು ರತ್ನಾಳ ಸಹಾಯದಿಂದ ಗಿಫ್ಟ್ ಪೇಪರ್‌ ಬಿಚ್ಚತೊಡಗಿದಳು.

ಕುಮಾರ್‌ ಉಷಾಳ ವರ್ಣ ಚಿತ್ರ ರಚಿಸಿ ಅವಳಿಗೆ ಉಡುಗೊರೆ ನೀಡಿದ್ದರು. ಚಿತ್ರ ಬಹಳ ಸುಂದರವಾಗಿತ್ತು. ಎಲ್ಲರೂ ಚಿತ್ರವನ್ನು ಹೊಗಳತೊಡಗಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ