ನಾನು ಎಂದೂ ಏನನ್ನೂ ಬರೆಯಲಿಲ್ಲ. ನನಗೆ ಬರೆಯಲು ಬರುವುದಿಲ್ಲವೆಂದಲ್ಲ. ಆದರೆ ನಾನು ಎಂದೂ ಅದು ಅಗತ್ಯವೆಂದು ತಿಳಿಯಲಿಲ್ಲ. ನಾನೆಂದೂ ಯಾವ ವಿಷಯವನ್ನೂ ಹೃದಯಕ್ಕೆ ತೆಗೆದುಕೊಳ್ಳುವುದಿಲ್ಲ. ಬರೆಯುವುದು ವ್ಯರ್ಥವೆಂದು ನನ್ನ ಭಾವನೆ. ಏಕೆ ಬರೆಯಲಿ ಎಂದು ಯೋಚಿಸುತ್ತೇನೆ. ನನ್ನ ಆಲೋಚನೆಯನ್ನು ಬೇರೆಯವರಿಗೇಕೆ ತಿಳಿಸಲಿ. ನನ್ನ ನಂತರ ನನ್ನ ಬರಹಗಳನ್ನು ಓದಿ ಜನ ಅದಕ್ಕೆ ಏನೇನು ಅರ್ಥಗಳನ್ನು ಕಟ್ಟುತ್ತಾರೋ? ನಾನು ಜನ ಹೇಳುವುದರ ಬಗ್ಗೆ ಹೆಚ್ಚು ಚಿಂತಿಸುತ್ತೇನೆ. ನನ್ನ ಬಗ್ಗೆ ಚಿಂತಿಸುವುದು ಕಡಿಮೆ.

ಜನ ಕೆಲವೊಮ್ಮೆ ಡೈರಿ ಬರೆಯುತ್ತಾರೆ. ಕೆಲವರು ಪ್ರತಿದಿನ ಬರೆದರೆ, ಇನ್ನು ಕೆಲವರು ಘಟನೆ ನಡೆದ ಆಧಾರದ ಮೇಲೆ ಬರೆಯುತ್ತಾ  ಹೋಗುತ್ತಾರೆ. ನಾನು ನನ್ನ ಬಗ್ಗೆ ಯಾರಿಗೂ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ ಕಳೆದ 1 ವಾರದಿಂದ ನಾನು ಡಾ. ಪ್ರಸಾದ್‌ರನ್ನು ಭೇಟಿಯಾಗಿ ಬಂದಾಗಿನಿಂದ ಒಂದು ರೀತಿಯ ವಿಚಿತ್ರ ವ್ಯಾಕುಲತೆ ನನ್ನಲ್ಲಿ ಮನೆ ಮಾಡಿದೆ. ಪತ್ನಿ ರಚಿತಾಗೆ ಏನಾದರೂ ಹೇಳಲು ಬಯಸುತ್ತೇನೆ. ಆದರೆ ಹೇಳಲಾಗುವುದಿಲ್ಲ. ಅವಳಂತೂ ಮೊದಲಿನಿಂದಲೇ ದುಃಖಿಯಾಗಿದ್ದಾಳೆ. ಮಾತುಮಾತಿಗೂ ಕಣ್ಣೀರು ತುಂಬಿಕೊಳ್ಳುತ್ತಾಳೆ. ಅವಳಿಗೆ ಇನ್ನಷ್ಟು ದುಃಖ ಕೊಡಲು ಇಷ್ಟವಿಲ್ಲ. ಮಕ್ಕಳು ಗಿರೀಶ್‌ ಮತ್ತು ಸುರೇಶ್ ಸದಾ ನನ್ನ ಸೇವೆ ಮಾಡುತ್ತಿರುತ್ತಾರೆ. ಅವರಿಗೆ ಓದಲೂ ಪುರಸತ್ತಿಲ್ಲ. ನಾನು ಅವರ ತಲೆಯನ್ನು ಇನ್ನಷ್ಟು ಕೆಡಸಲು ಬಯಸುವುದಿಲ್ಲ. ನಾನು ಏನಾದರೂ ವಸ್ತು ಬೇಕೆಂದು ಕೇಳಿದರೆ ಕೂಡಲೇ ಮಾರ್ಕೆಟ್‌ಗೆ ಹೋಗಿಯಾದರೂ ಅದನ್ನು ತಂದು ನನಗೆ ಕೊಡುತ್ತಾರೆ. ನಾನೆಷ್ಟು ಸ್ವಾರ್ಥಿಯಾಗಿದ್ದೇನೆ. ಇತರರ ದುಃಖ, ನೋವು ಅರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ನನ್ನ ಈ ಮನೋವೃತ್ತಿಗೆ ಅಂಕುಶ ಹಾಕಿಕೊಳ್ಳಲು ಬಯಸುತ್ತೇನೆ. ಆದರೆ ಆಗುತ್ತಿಲ್ಲ.``ಅಪ್ಪಾ, ನೀವು ಯೋಚಿಸ್ಬೇಡಿ. ಬೇಗನೆ ಗುಣವಾಗ್ತೀರಿ,'' ಎಂದು ಗಿರೀಶ್‌ ತನ್ನ ಕೈಯನ್ನು ನನ್ನ ತಲೆಯ ಮೇಲಿಟ್ಟ. ಹಾಗೆ ಹೇಳಿ ಅವನು ಯಾರಿಗೆ ಸಾಂತ್ವನ ನೀಡುತ್ತಿದ್ದಾನೆ? ನನಗೋ ಅಥವಾ ತನಗೋ? ಅವನಿಗೆ ಏನು ಹೇಳಲಿ?  ಮೊಬೈಲ್‌ನಲ್ಲಿ ಇನ್ನೊಬ್ಬ ಡಾಕ್ಟರ್‌ನ್ನು ಕನ್ಸಲ್ಟ್ ಮಾಡುತ್ತಾನೆ ಅಥವಾ ನೆಟ್‌ನಲ್ಲಿ  ಸರ್ಚ್‌ ಮಾಡುತ್ತಾನೆ. ಮಕ್ಕಳು 1-1 ಉಸಿರಿನ ಲೆಕ್ಕವನ್ನೂ ಇಡುತ್ತಾರೆ. ಎಲ್ಲೂ ಏನೂ ಕಡಿಮೆಯಾಗಬಾರದು. ನಾನು ಹಾಸಿಗೆಯ ಮೇಲೆ ಮಲಗಿ ಅವರೆಲ್ಲರ ಗಡಿಬಿಡಿ, ಹತಾಶೆ, ನಿರಾಶೆಗಳನ್ನು ಅವರಿಗೆ ತಿಳಿಯದಂತೆ ನೋಡುತ್ತಿರುತ್ತೇನೆ. ಅವರ ಕಣ್ಣುಗಳಲ್ಲಿ ಭಯ ಇದೆ. ಈಗ ನನಗೂ ಭಯವಾಗುತ್ತಿದೆ. ನಾನೂ ಯಾರಿಗೂ ಏನೂ ಹೇಳಲ್ಲ. ಡಾ. ಅರ್ಜುನ್‌, ಡಾ. ಸುನಿಲ್ ‌ಮತ್ತು ಡಾ. ಅನಂತ್‌ ಎಲ್ಲರದೂ ಒಂದೇ ಅಭಿಪ್ರಾಯ. ಇಡೀ ಶರೀರದಲ್ಲಿ ವೈರಸ್‌ ಹರಡಿಬಿಟ್ಟಿದೆ. ಲಿವರ್‌ ಡ್ಯಾಮೇಜ್‌ ಆಗಿದೆ. ಇನ್ನು ಬದುಕಿನ ದಿನಗಳನ್ನು ಎಣಿಸುವುದು ಬಾಕಿ. ಡಾಕ್ಟರ್‌ ಫೈಲನ್ನು ತಿರುವುತ್ತಾರೆ, ಪ್ರಿಸ್ಕ್ರಿಪ್ಶನ್ ಓದುತ್ತಾರೆ ಮತ್ತು ಈ ಔಷಧ ಬಿಟ್ಟು ಬೇರೆ ಔಷಧ ಇಲ್ಲವೆನ್ನುತ್ತಾರೆ.

ಅದನ್ನು ಕೇಳಿ ನನಗೆ ಉಸಿರು ಕಟ್ಟಿದಂತಾಯಿತು. ನನಗಿನ್ನು ಸ್ವಲ್ಪ ಸಮಯ ಮಾತ್ರ ಉಳಿದಿದೆ ಅನ್ನಿಸಿತು. ಈಗ ನನ್ನೊಳಗೆ ಬದುಕಬೇಕೆಂಬ ಅದಮ್ಯ ವಾಂಛೆ ಮೊಳೆಯತೊಡಗಿತು. ನನ್ನ ನಂತರ ನನ್ನ ಹೆಂಡತಿ ಮಕ್ಕಳ ಗತಿಯೇನು? ರಚಿತಾ ಒಬ್ಬಳೇ ಮಕ್ಕಳನ್ನು ಹೇಗೆ ಸಂಭಾಳಿಸುತ್ತಾಳೆ? ಮಕ್ಕಳ ಓದು ಹೇಗೆ ಮುಗಿಯುತ್ತದೆ? ಮನೆಯ ಖರ್ಚು ಹೇಗೆ ಪೂರೈಕೆಯಾಗುತ್ತದೆ? 3-4 ಲಕ್ಷ ರೂ. ಅಂತೂ ಮನೆಯಲ್ಲಿದೆ. ಆದರೆ ಅದು ಎಲ್ಲಿಯವರೆಗೆ ಬರುತ್ತದೆ? ಅದು ಡಾಕ್ಟರುಗಳ ಫೀಸ್‌ಗೆ ಮತ್ತು ನನ್ನ ಅಂತಿಮ ಸಂಸ್ಕಾರಕ್ಕೆ ಸರಿಹೋಗುತ್ತದೆ. ಹಣ ಬರುವ ಬೇರೆ ಯಾವ ಮಾರ್ಗಗಳೂ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ