ಊರ ಹೊರಗಿನ ಬಡಾವಣೆಯ ಒಂಟಿ ಮನೆಯಲ್ಲಿದ್ದ ಲೇಖಕಿಯ ಮನೆಗೆ ಎದುರಾಗಿ ಯಾರೋ ಶ್ರೀಮಂತರು ಆಕಸ್ಮಿಕವಾಗಿ ಬಾಡಿಗೆಗೆ ಬಂದಿಳಿದಾಗ, ಮನೆಯ ವಿಚಿತ್ರ ಪರಿಸ್ಥಿತಿ ಇವರಿಗೆ ಕುತೂಹಲ ಮೂಡಿಸಿತು. ಮನೆಯ ಸೊಸೆ ಸದಾ ಮುಚ್ಚಿದ ಕೋಣೆಯಲ್ಲಿ ಅಡಗಿರಬೇಕು ಏಕೆ....? ರಹಸ್ಯ ಕೊನೆಗೆ ಬಯಲಾದದ್ದು ಹೇಗೆ.........?

ಹೊರಲಯದ ಬಡಾವಣೆ, ಸುತ್ತಮುತ್ತಲೂ ಎತ್ತೆತ್ತಲೂ ಇನ್ನು ಒಂದು ಮನೆಯೂ ಹುಟ್ಟಿಕೊಳ್ಳದೆ, ಅಕ್ಷರಶಃ ಕಾಡಿನಂತಿತ್ತು ಆ ಜಾಗ. ಒಳ್ಳೊಳ್ಳೆ ಬಡಾವಣೆಯಲ್ಲಿ ಅನೇಕ ಸೈಟುಗಳು ಮಾರಾಟಕ್ಕಿದ್ದವು. ಆದರೆ ಅವುಗಳ ಬೆಲೆ ನಮ್ಮ ಕೈಗೆ ಎಟುಕುವಂತಿರಲಿಲ್ಲ. ತುಸು ಹೊರಲಯದಲ್ಲಾದರೂ ಪರವಾಗಿಲ್ಲ, ಎಂದು ದಲ್ಲಾಳಿಯ ಮುಂದೆ ಹೇಳಿಕೊಂಡೆವು.

ಕೈಗೆಟುಕು ದರದಲ್ಲಿ ಮೈಸೂರಿನ ಹೊರಲಯದಲ್ಲಿ ದಲ್ಲಾಳಿ ತೋರಿಸಿದ ಅನೇಕ ಸೈಟುಗಳ ಪೈಕಿ 30 x 40ರ ಈ ಸೈಟು ಒಪ್ಪಿಗೆ ಆಗಿ ವಾಸ್ತು ಪ್ರಕಾರ ಡ್ಯೂಪ್ಲೆಕ್ಸ್ ಮನೆಯೊಂದನ್ನು ನಿರ್ಮಿಸಿಕೊಂಡು ಒಳ ಪ್ರವೇಶ ಮಾಡಿದ್ದಾಯ್ತು.

ನಮ್ಮಂಥ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬಾಡಿಗೆಗೆ ಮನೆಗಳು ಸಿಗುತ್ತಿದ್ದವು. ಹಾಗಾಗಿ ಬಾಡಿಗೆ ಮನೆಯಲ್ಲಿರುವುದು ಇಲ್ಲಿಯವರೆಗೂ ನಮಗೇನು ಸಮಸ್ಯೆಯಾಗಿ ಕಾಡಿರಲಿಲ್ಲ. ಮೇಂಟೆನೆನ್ಸ್ ನ ಜಂಜಾಟದ ತಲೆನೋವು ಬಾಡಿಗೆ ಮನೆಯವರಿಗೆ ಇರುವುದಿಲ್ಲ ಅಂತ ನೆಮ್ಮದಿಯಾಗಿ ಮೈಸೂರಿಗೆ ಬಂದ ಮೇಲೆ ಕಳೆದ ಏಳು ವರ್ಷಗಳಿಂದ ಬಾಡಿಗೆ ಮನೆಗಳನ್ನೇ ಆಶ್ರಯಿಸಿದ ನಮಗೆ ಐಟಿ ಕಂಪನಿಗಳು ಮೈಸೂರಿನತ್ತ ಧಾವಿಸಿ ಬಂದು ಹೊಡೆತ ಕೊಟ್ಟವು. ದಿನ ಬೆಳಗಾಗುವುದರೊಳಗೆ ಮನೆಬಾಡಿಗೆ ದುಪ್ಪಟ್ಟಾಗಿಬಿಟ್ಟಿತು. ದುಪ್ಪಟ್ಟು ಬಾಡಿಗೆ ಕೊಟ್ಟು ಇರಿ, ಇಲ್ಲಾಂದ್ರೆ ಮನೆ ಖಾಲಿ ಮಾಡಿ ಎಂದು ಮನೆಯ ಮಾಲೀಕ ದಿನ ಮನೆ ಮುಂದೆ ಬಂದು ಪೀಡಿಸತೊಡಗಿದ. ಅವನು ಹೇಳಿದ ಬಾಡಿಗೆ ನಮಗೆ ದುಬಾರಿ ಎನಿಸಿದಾಗ ನಮಗೆ ನಮ್ಮದೇ ಆದ ಒಂದು ಸೂರು ಮಾಡಿಕೊಳ್ಳುವ ಯೋಚನೆ ಬಂದಿತು.

ಬಾಲ ಸುಟ್ಟ ಬೆಕ್ಕಿನ ಹಾಗೆ ಆ ಮನೆ ಈ ಮನೆ ಅಂತ ಬದಲಾಯಿಸುವ ಗೋಜು ತಾಪತ್ರಯ ಯಾವುದೂ ಇರುವುದಿಲ್ಲ. ಬಾಡಿಗೆಗೆ ಕಟ್ಟುವ ಹಣವನ್ನೇ ಸಾಲದ ಕಂತಾಗಿ ಕಟ್ಟಬಹುದಲ್ಲ, ಎಂಬ ಐಡಿಯಾವನ್ನು ಕಾರ್ಯರೂಪಕ್ಕಿಳಿಸಿ ಈ ಮನೆ ಕಟ್ಟಿದ್ದಾಯ್ತು. ಆದರೆ ಅರೇ ಕಾಡಿನಲ್ಲಿ ಒಂಟಿ ಮನೆ ಎಂಬಂತಾಗಿತ್ತು. ತೀರ ಹತ್ತಿರದಲ್ಲಿ ನಮಗೇನು ಸಿಗುತ್ತಿರಲಿಲ್ಲ. ಪ್ರತಿಯೊಂದಕ್ಕೂ ಎರಡು ಕಿ.ಮೀ. ದೂರದ ವಿವೇಕಾನಂದ ಸರ್ಕಲ್‌ ಗೆ ಹೋಗಬೇಕಾಗುತ್ತಿತ್ತು.

ಇವರು ಕೆಲಸದಿಂದ ಬರುವಾಗಲೇ ಮನೆಗೆ ಬೇಕಾಗುವ ಸಾಮಾನುಗಳನ್ನು ತಂದು ಬಿಡುತ್ತಿದ್ದರಿಂದ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಇನ್ನು ಏಕಾಂತ ಪ್ರಿಯಳಾದ ನನಗೆ ನನ್ನ ಸುತ್ತಮುತ್ತಲೂ ಯಾವುದಾದರೂ ಮನೆ ಇರಬೇಕಿತ್ತು, ಎಂದು ನನಗೆ ಅನಿಸಿರಲೇ ಇಲ್ಲ. ನಾನು ಒಂಟಿಯಾಗಿ ಇರಬಲ್ಲವಳಾಗಿದ್ದೆ, ನನಗದು ಪ್ರಿಯ ಅನಿಸಿತ್ತು.

ಇನ್ನು ಮನೆಯ ಪಕ್ಕ ಹಾದು ಹೋಗಿರುವ ರಸ್ತೆಯಾಚೆಗೆ ಕೆರೆ ಇತ್ತು. ಕೆರೆಯ ಏರಿಯ ಮೇಲೆ ಜನ ಎರಡು ಹೊತ್ತು ವಾಕಿಂಗ್‌ ಗೆ ಬರುತ್ತಿದ್ದರು. ಹಾಗೆ ಬರುತ್ತಿದ್ದರ ಕುತೂಹಲದ ದೃಷ್ಟಿ, ನೋಟ ನಮ್ಮ ಮನೆಯತ್ತಲೇ ಇರುತ್ತಿತ್ತು. ಅವರು ತಮ್ಮ ತಮ್ಮೊಳಗೆ ಏನೇನೋ ಮಾತನಾಡಿಕೊಳ್ಳುತ್ತಾ ಹೋಗುತ್ತಿದ್ದರು. ನಮ್ಮ ಮನೆ ಅವರೊಳಗೆ ಯಾವ ತರಹದ ಭಾವನೆಯನ್ನು ಮೂಡಿಸುತ್ತಿತ್ತೋ ತಿಳಿಯದು. ಆದರೆ ನನ್ನಲ್ಲಿ ಕುತೂಹಲ ಇರುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ