ಕಥೆ -  ಸಿ.ಕೆ. ವೈಶಾಲಿ 

ಆಟದ ಮೈದಾನದಿಂದ `ಫೋರ್‌,' `ಸಿಕ್ಸರ್‌' ಎನ್ನುವ ಕೂಗು ಕೇಳಿ ಬರುತ್ತಿತ್ತು. ಮೈದಾನದಲ್ಲಿ ಬಿಸಿಲು ಸುಡುತ್ತಿದ್ದರೂ ಅದನ್ನು ಲೆಕ್ಕಿಸದೆ ಸುತ್ತಮುತ್ತಲ ಮನೆಗಳಿಂದ ನವೀನ್‌, ರಂಜನ್‌, ಸುಧೀರ್‌, ರಾಬಿನ್‌, ಆಕಾಶ್‌, ಶೇಖರ್‌, ವಿವೇಕ್‌ ಮತ್ತು ಸಂಪ್ರೀತ್‌ ತಮ್ಮ ಇತರೆ ಗೆಳೆಯರೊಡನೆ ಮೈದಾನದಲ್ಲಿ ಬಂದು ಸೇರಿದ್ದರು. ಪರೀಕ್ಷೆ ಹತ್ತಿರವಾಗುತ್ತಿತ್ತು. ಆದರೆ ಈ ಕ್ರಿಕೆಟ್‌ ಪ್ರೇಮಿಗಳಿಗೆ ಆಟದ ಹುಚ್ಚು ಹತ್ತಿತ್ತು. ಅವರ ತಾಯಿ ತಂದೆಯರ ಬುದ್ಧಿ ಮಾತುಗಳೆಲ್ಲಾ ತರೆಗೆಲೆಗಳಂತೆ ಗಾಳಿಗೆ ತೂರಿಹೋಗುತ್ತಿದ್ದವು. ಮಜವಾಗಿ ಆಡುವುದನ್ನು ಬಿಟ್ಟು ಪುಸ್ತಕ ಹಿಡಿದು ಕೂರುವುದು ಬೋರಿಂಗ್‌ಎನ್ನುವುದು ಅವರೆಲ್ಲರ ಅಭಿಪ್ರಾಯ. ಸುಧೀರ್‌ ಸದ್ದು ಮಾಡದೆ ಮನೆಯಿಂದ ಹೊರಬೀಳುವ ಸಮಯದಲ್ಲಿ ಅವನ ತಾಯಿ ನೋಡಿಯೇ ಬಿಟ್ಟರು. ಅವರು ಕೋಪಗೊಂಡು ಬೈಯುತ್ತಿದ್ದರೂ ಅವನು ತಪ್ಪಿಸಿಕೊಂಡು ಆಟಕ್ಕೆ ಓಡಿದ.

ಸ್ನೇಹಿತರ ಗುಂಪನ್ನು ಸೇರಿದ ಸುಧೀರ್‌, ``ದೊಡ್ಡವರು ನಮ್ಮನ್ನು ಸ್ವಲ್ಪವೂ  ಅರ್ಥ ಮಾಡಿಕೊಳ್ಳುವುದಿಲ್ಲ. ನಮ್ಮ ಆಸೆ ಇಷ್ಟಗಳ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ...'' ಎಂದ.

ಶೇಖರ್‌ ಅವನಿಗೆ ದನಿಗೂಡಿಸುತ್ತಾ, ``ಸಚಿನ್‌ ತೆಂಡೂಲ್ಕರ್‌ ಮತ್ತು ಗವಾಸ್ಕರ್‌ರ ತಾಯಿ ತಂದೆಯರು ಅವರ ಜೊತೆ ಈ ರೀತಿ ನಡೆದುಕೊಂಡಿದ್ದರೆ ಅವರು ಕ್ರಿಕೆಟ್‌ ಚಾಂಪಿಯನ್ಸ್ ಆಗುತ್ತಲೇ ಇರಲಿಲ್ಲ,'' ಎಂದ.

ನವೀನ್‌ಕೂಡ ಕೋಪದಲ್ಲಿದ್ದ. ಅವನ ತಂದೆ ಹಿಂದಿನ ರಾತ್ರಿ ಅವನ ಕ್ರಿಕೆಟ್‌ ಬ್ಯಾಟ್‌ನ್ನು ಎತ್ತಿಟ್ಟುಬಿಟ್ಟಿದ್ದರು. ಆದರೂ ಅವನಿಗೆ ಮನೆಯಲ್ಲಿ ನಿಲ್ಲಲಾಗಲಿಲ್ಲ. ನೇರವಾಗಿ ಮೈದಾನಕ್ಕೆ ಬಂದಿದ್ದ.

ಭಾನುವಾರದ ದಿನ ಈ ಹುಡುಗರ ಮನೆಗಳಲ್ಲಿ ಹೊರಗೆ ಲಂಚ್‌ ಪ್ರೋಗ್ರಾಮ್ ಅಥವಾ ಸಂಬಂಧಿಕರ ಮನೆಯ ಸಮಾರಂಭಕ್ಕೆ ಹೋಗುವ ಕಾರ್ಯಕ್ರಮದ ಮಾತು ನಡೆಯುತ್ತಿತ್ತು. ಆದರೆ ಆ ಹುಡುಗರಿಗೆ ಅದ್ಯಾವುದೂ ಬೇಕಿರಲಿಲ್ಲ. ಕ್ರಿಕೆಟ್‌ ಭೂತ ಅವರ ಮೇಲೆ ಸವಾರಿ ಮಾಡುತ್ತಿತ್ತು.

ಆಟದ ಮೈದಾನದ ಪಕ್ಕದಲ್ಲಿ ರಾಜಾರಾಮ್ ಅವರ ಬಂಗಲೆ ಕಾಣಿಸುತ್ತಿತ್ತು. ಅಲ್ಲಿಯ ಕಥೆಯೇ ಬೇರೆ ಬಗೆಯದು. ಅವರ ಏಕಮಾತ್ರ ಪುತ್ರ ರಾಹುಲ್‌ ಹೈಸ್ಕೂಲ್‌‌ನಲ್ಲಿ ಓದುತ್ತಿದ್ದ. ಅವನ ತಾಯಿ ರಶ್ಮಿಯದು ಮಿಲಿಟರಿ ಆಫೀಸರ್‌ನ ಶಿಸ್ತು. ಅವನ ದಿನಚರಿಯಲ್ಲಿ ಓದು ಬರಹ ಮಾತ್ರ ಇತ್ತು. ಆಟ, ಕುಣಿತ, ನೆಗೆತಗಳಿಗೆ ಅಲ್ಲಿ ಅವಕಾಶವೇ ಇರಲಿಲ್ಲ. ರಾಜಾರಾಮ್ ಮತ್ತು ರಶ್ಮಿಯ ಪ್ರಕಾರ ಮೈದಾನದಲ್ಲಿ ಕ್ರಿಕೆಟ್‌ ಆಡುವ ಹುಡುಗರು ಜವಾಬ್ದಾರಿ ಇಲ್ಲದೆ ಕೆಟ್ಟಿರುವ ಗುಂಪಿಗೆ ಸೇರಿದವರು. ಆದ್ದರಿಂದ ಅವರು ತಮ್ಮ ಮಗ ರಾಹುಲ್‌‌ನನ್ನು ಆ ಹುಡುಗರಿಂದ ದೂರ ಇರಿಸಿದ್ದರು. ರಸ್ತೆಯಲ್ಲಿ ರಾಜಾರಾಮ್ ದಂಪತಿಗೆ ಆ ಹುಡುಗರೇನಾದರೂ ಎದುರಾದರೆ ಇಬ್ಬರೂ ಅನಿಷ್ಟವನ್ನು ಕಂಡಂತೆ ಹುಡುಗರಿಂದ ಮುಖ ತಿರುಗಿಸಿ ನಡೆಯುತ್ತಿದ್ದರು. ಹುಡುಗರೂ ಸಹ ಅವರನ್ನು ಕಂಡರೆ ಅಂಜುತ್ತಿದ್ದರು.

ಅಂದು ಭಾನುವಾರದ ದಿನ ರಾಹುಲ್‌ ಪುಸ್ತಕ ಹಿಡಿದು ಕುಳಿತಿದ್ದನು. ಹುಡುಗರ ಉತ್ಸಾಹಭರಿತ ಕೇಕೆಯು ಅವನ ಕಿವಿಗೆ ಬೀಳುತ್ತಿತ್ತು. ಅವನ ಮನಸ್ಸೂ ಆ ಕಡೆಗೆ ಎಳೆಯುತ್ತಿತ್ತು. ಆದರೆ ತಾಯಿಯ ಬಿಗಿಯಾದ ಕಟ್ಟುಪಾಡಿನಿಂದಾಗಿ ಮುದುಡಿ ಕುಳಿತಿದ್ದ. ಓದುವುದರ ಕಡೆಗೆ ಗಮನಹರಿಸಲು ಪ್ರಯತ್ನಿಸಿದಷ್ಟೂ ಮನಸ್ಸು ಹಕ್ಕಿಯಂತೆ ಮೈದಾನದ ಕಡೆಗೇ ಹಾರುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ