ಪ್ರಮೋದ್‌ ವಿದೇಶದಲ್ಲಿ ವ್ಯಾಸಂಗ ಮುಗಿಸಿ 4 ವರ್ಷಗಳ ನಂತರ ಭಾರತಕ್ಕೆ ಬಂದಾಗ, ತಮ್ಮ ನೆರೆಮನೆಯಲ್ಲಿದ್ದ ಅನೂಷಾಳನ್ನು ಕಂಡು ಬೆಕ್ಕಸಬೆರಗಾದ. ಬಾಲ್ಯದಲ್ಲಿ ಎಲ್ಲರಿಂದಲೂ ಡುಮ್ಮಿ  ಅನ್ನಿಸಿಕೊಂಡು ಮೊದ್ದು ಮೊದ್ದಾಗಿದ್ದ ಅನೂಷಾ, ಈಗ ಬಳುಕುವ ಬಳ್ಳಿಯಂತೆ ಎಲ್ಲೆಡೆ ಓಡಾಡುತ್ತಾ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಮಿಂಚುತ್ತಿದ್ದರೆ, ಒಬ್ಬ ಪ್ರಸಿದ್ಧ ಶಿಲ್ಪಿ ಅವಳ ಅಂಗಾಂಗಗಳನ್ನು ಸೂಕ್ಷ್ಮವಾಗಿ ಕೆತ್ತಿ ಸರಿಪಡಿಸಿದನೇನೋ ಎಂದು ಆಶ್ಚರ್ಯಪಟ್ಟ. ಅತ್ಯಾಕರ್ಷಕ ಮೈಕಟ್ಟು, ಸ್ಛುರದ್ರೂಪಿ ವ್ಯಕ್ತಿತ್ವದಿಂದ ಹ್ಯಾಂಡ್‌ ಸಮ್ ಬ್ಯಾಚುಲರ್‌ ಆಗಿ ಮಿಂಚುತ್ತಿದ್ದ ಪ್ರಮೋದ್‌ನನ್ನು ಕಂಡು ಮಾರುಹೋದ ಅನೂಷಾ, ಅವನನ್ನು ಮನದಲ್ಲೇ ಮೆಚ್ಚಿದಳು.

ಯಾವುದೋ ನೆಪದಿಂದ 1-2 ಬಾರಿ ಅವರು ಭೇಟಿಯಾದರು. ನಂತರ ಅದು ಕ್ರಮೇಣ ಹೆಚ್ಚಾಗಿ ಅವರು ಪ್ರತಿದಿನ ಭೇಟಿಯಾಗತೊಡಗಿದರು. ಕ್ರಮೇಣ ಈ ಸ್ನೇಹ ಪ್ರೇಮವಾಗಿ ಮಾರ್ಪಡಲು ಹೆಚ್ಚು ದಿನ ಬೇಕಾಗಲಿಲ್ಲ. ಮುಂದೆ ತಾವು ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ಎಂಬ ಹಂತ ತಲುಪಿದರು. ಈ ಮಧುರ ಬಾಂಧವ್ಯ ಮದುವೆಯಲ್ಲಿ ಮುಕ್ತಾಯವಾಗಲಿ ಎಂದು ದೃಢ ನಿರ್ಣಯ ಕೈಗೊಂಡರು.

ಮದುವೆಯ ಸುದ್ದಿ ಎತ್ತಿದ ಮೇಲೆ ಎರಡೂ ಮನೆಗಳಲ್ಲಿ ಅಂಥ ಪ್ರೋತ್ಸಾಹಕರ ಬೆಂಬಲವೇನೂ ಸಿಗಲಿಲ್ಲ. ಇಬ್ಬರ ಜಾತಿ ಬೇರೆ ಆಗಿದ್ದುದೇ ಸಮಸ್ಯೆಗೆ ಮೂಲವಾಯ್ತು. ಎಷ್ಟು ಹೇಳಿದರೂ ಇಬ್ಬರ ಮನೆತನದವರೂ ಮದುವೆಗೆ ರಾಜಿ ಆಗಲಿಲ್ಲ. ಕೊನೆಗೆ ಇವರು ರಿಜಿಸ್ಟರ್ಡ್‌ ಮದುವೆ ಆಗುವುದೆಂದು ನಿರ್ಧರಿಸಿದಾಗ, ಬೆಳೆದ ಮಕ್ಕಳನ್ನು ಎದುರುಹಾಕಿಕೊಳ್ಳುವುದು ಬೇಡವೆಂದು ಒಲ್ಲದ ಮನದಿಂದಲೇ ಇಬ್ಬರ ಮನೆಯವರೂ ಮದುವೆಗೆ ಒಪ್ಪಿಗೆ ನೀಡಿದರು. ಅಂತೂ ಹಿರಿಯರ ಸಮ್ಮುಖದಲ್ಲೇ ಮದುವೆ ನೆರವೇರಿತು.

ಪ್ರಮೋದ್‌ ಹಾಗೂ ಅನೂಷಾ ಈ ಮದುವೆಯಿಂದ ಬಹಳ ಸಂತೋಷಗೊಂಡಿದ್ದರು. ಈ ಮಧ್ಯೆ ಪ್ರಮೋದನಿಗೆ ಆಸ್ಚ್ರೇಲಿಯಾದ ಸಿಡ್ನಿ ನಗರದ ಪ್ರಖ್ಯಾತ ಕಂಪನಿಯೊಂದರಿಂದ ಉನ್ನತ ಹುದ್ದೆಗಾಗಿ ಆಫರ್‌ ಬಂದಿತು. ಅನೂಷಾಳಿಗೂ ಈ ಸುದ್ದಿಯಿಂದ ತುಂಬಾ ಖುಷಿಯಾಯ್ತು,  ಏಕೆಂದರೆ ಸಿಡ್ನಿಯಲ್ಲಿ ಅವಳ ಸೋದರಮಾವ ವಾಸವಾಗಿದ್ದರು. ವೃತ್ತಿಯಿಂದ ಅವರು ವಕೀಲರಾಗಿದ್ದರು.

ರಾಮರಾವ್ ‌ಈ ದಂಪತಿಗಳನ್ನು ಬಹಳ ಆತ್ಮೀಯತೆಯಿಂದ ಎದುರು ನೋಡುತ್ತಿದ್ದರು.

ಅಂತೂ ಪ್ರಮೋದ್‌-ಅನೂಷಾ ಸಿಡ್ನಿಗೆ ಹೊರಟಿದ್ದಾಯ್ತು. ಮಾವನ ನೆರವಿನಿಂದ ಅವರು ಬಾಡಿಗೆಗೆ ಪ್ರತ್ಯೇಕ ಫ್ಲಾಟ್‌ ಒಂದನ್ನು ಹಿಡಿದು, ಹೊಸ ಸಂಸಾರ ಶುರು ಮಾಡಿದರು. ಅನೂಷಾ ಮುಂದೆ ಕಲಿಯಬೇಕು ಎಂದು ಬಹಳ ಶ್ರದ್ಧೆಯಿಂದ, ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದುಕೊಂಡಳು. ಪ್ರಾರಂಭದಲ್ಲಿ ಇಬ್ಬರೂ ಅತಿ ಉತ್ಸಾಹಿಗಳಾಗಿದ್ದರು.... ಆದರೆ ನಿಧಾನವಾಗಿ ಇಬ್ಬರಲ್ಲೂ ಮೆಲ್ಲಗೆ ಅಸಮಾಧಾನದ ಹೊಗೆ ಆಡತೊಡಗಿತು. ಇವರ ಜಗಳದ ಕಾರಣ ಇಷ್ಟೆ. ಪ್ರಮೋದ್‌ ಮನೆಗೆಲಸದಲ್ಲಿ ಎಂದಿಗೂ ಅನೂಷಾಳಿಗೆ ನೆರವಾಗುತ್ತಿರಲಿಲ್ಲ. ಅದು ಹೆಂಗಸರ ಕೆಲಸ, ಅದೇನಿದ್ದರೂ ಅನೂಷಾಳ ಜವಾಬ್ದಾರಿ. ಅದನ್ನು ಮುಗಿಸಿ ಸಮಯ ಉಳಿದರೆ ಅವಳು ಓದು ಮುಂದುವರಿಸಲಿ ಎನ್ನತೊಡಗಿದ.

ಆದರೆ ಅನೂಷಾಳಿಗೆ ಮಾತ್ರ ಯಾವ ಮಹಾ ಮನೆಗೆಲಸ ಬರುತ್ತಿತ್ತು? ಅವಳ ಕೈ ಅಡುಗೆ ಅವನಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಊಟದ ಸಮಯದಲ್ಲಿ ಏನಾದರೂ ಒಂದು ರಾದ್ಧಾಂತ ಇದ್ದೇ ಇರುತ್ತಿತ್ತು. ಅಡುಗೆಯನ್ನು ಹೇಗೋ ಕಷ್ಟಪಟ್ಟು ಮುಗಿಸುತ್ತಿದ್ದ ಅವಳಿಗೆ, ಮನೆಯ ಉಳಿದ ಕೆಲಸಗಳನ್ನೂ ಸಂಭಾಳಿಸುವುದರಲ್ಲಿ ಸಾಕು ಸಾಕಾಗುತ್ತಿತ್ತು. ಭಾರತದ ತರಹ ಅಲ್ಲಿ ಮನೆಗೆಲಸದವರು ಖಂಡಿತಾ ಸಿಗುತ್ತಿರಲಿಲ್ಲ. ಹೀಗಾಗಿ ಎಲ್ಲವನ್ನೂ ಅವಳೇ ನಿಭಾಯಿಸಬೇಕಿತ್ತು. ಆದ್ದರಿಂದೀ ಅವಳು ಮನೆಗೆಲಸದಲ್ಲಿ ಗಂಡನ ನೆರವನ್ನು ಬಯಸುತ್ತಿದ್ದಳು. ಅಂತೂ ಮನೆಗೆಲಸ ಮುಗಿಸಿ ಅವಳು ಯೂನಿರ್ಸಿಟಿಗೆ ಹೋಗಿ ಬಂದು ಹೇಗೋ ಮಾಡಿದರೂ, ಅಭ್ಯಾಸಕ್ಕಾಗಿ ಅವಳು 3-4 ತಾಸು ಮನೆಯಲ್ಲಿ ಕಲಿಯಲೇಬೇಕಿತ್ತು. ಗೃಹಿಣಿಯ ಕರ್ತವ್ಯ, ವಿದ್ಯಾರ್ಥಿನಿಯ ಬದುಕು ಅವಳಿಗೆ ಒಟ್ಟೊಟ್ಟಿಗೆ ನಿಭಾಯಿಸುವುದು ಅತಿ ಕಷ್ಟಕರವಾಯ್ತು. ಇದರಿಂದ ಅವಳ ಸಿಟ್ಟು ನೆತ್ತಿಗೇರುತ್ತಿತ್ತು. ಪ್ರೇಮಲೋಕದಲ್ಲಿ ಮುಳುಗಿದ್ದಾಗ ಎಲ್ಲವೂ ರಮ್ಯವಾಗಿಯೇ ಕಾಣುವ ಪ್ರೇಮಿಗಳಿಗೆ, ದಾಂಪತ್ಯ ಶುರುವಾದ ಮೇಲಷ್ಟೇ ವಾಸ್ತವದ ಅರಿವಾಗುವುದು. ಪ್ರೇಮ ಕುರುಡು, ಆದಕಾರಣ ಇಬ್ಬರ ವ್ಯವಹಾರಗಳೂ ಪರಸ್ಪರ  ಅತಿ ಶಿಷ್ಟಾಚಾರದ ಪರಾಕಾಷ್ಠೆ ತಲುಪಿ ಸಂಗಾತಿಯ ಬೇಕೂ ಬೇಡಗಳನ್ನು ನಿಷ್ಠೆಯಿಂದ ನೆರವೇರಿಸುತ್ತಾರೆ. ಆದರೆ ಅದೇ ವ್ಯಕ್ತಿಗಳು ಮದುವೆಯಾದಾಗ, ತಮ್ಮ ಹಕ್ಕು, ತಮ್ಮ ಸೌಲಭ್ಯಗಳ ಕುರಿತಾಗಿಯೇ ಚಿಂತಿಸುತ್ತಾರೆ. ಆಗ ದಿನನಿತ್ಯದ ಜಂಜಾಟದಿಂದ ಇಬ್ಬರಲ್ಲೂ ತಿಕ್ಕಾಟ ಶುರುವಾಗುತ್ತದೆ, ಪ್ರೇಮದ ತೀವ್ರತೆ ಇಳಿದು ವಾಸ್ತವದ ಬದುಕು ಅಸಹನೀಯ ಎನಿಸುತ್ತದೆ. ಪರಸ್ಪರರ ಅಭ್ಯಾಸಗಳು ಈಗ ಹಿಂಸೆ ಎನಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ