ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಐಶ್ವರ್ಯಾ ರೈ ಬಚ್ಚನ್ ಪರ್ಪಲ್ ಲಿಪ್ಸ್ಟಿಕ್ ಹಚ್ಚಿದ ಬಗೆ! ಸೋಶಿಯಲ್ ಮೀಡಿಯಾದಲ್ಲಿ ಇದನ್ನು ತೀವ್ರವಾಗಿ ಖಂಡಿಸಲಾಗಿತ್ತು. ಯಾವ ರೀತಿಯ ಮೇಕಪ್ ಬ್ಲಂಡರ್ಸ್ನ್ನು ದೂರವಿರಿಸಿ ನೀವು ಹಾಟ್ ಗಾರ್ಜಿಯಸ್ ಅನ್ನಿಸಬಹುದೆಂದು ತಿಳಿಯೋಣವೇ?
ಮೇಕಪ್ ಮಿಸ್ಟೇಕ್ಸ್
ಬ್ರಾಂಡೆಡ್ ಮೇಕಪ್ ಬಲು ದುಬಾರಿ ಎನಿಸಿದೆ. ಆದರೆ ಅಷ್ಟೆಲ್ಲ ಲಕ್ಷಾಂತರ ಖರ್ಚು ಮಾಡಿದ ಮೇಲೂ ನೀವು ಬ್ಯೂಟಿಫುಲ್ ಬದಲು ಇನ್ನಷ್ಟು ಕೆಟ್ಟದಾಗಿ ಕಂಡುಬಂದರೆ ಲಾಭವೇನು? ನೀವು ಎಲ್ಲಾದರೂ ಒಂದು ಕಡೆ (ಪ್ರಿಂಟ್ ಯಾ ಟಿವಿ) ಈ ಮಾಹಿತಿ ಪಡೆದೇ ಇರುತ್ತೀರಿ, ಮೇಕಪ್ ಮಾಡಿದ ನಂತರ ನಾನು ಬಲು ಕೆಟ್ಟದಾಗಿ ಕಂಡುಬರ್ತೀನಿ, ಎಂದು ಸಮಸ್ಯೆ ಹೇಳಿಕೊಳ್ಳುವ ತರುಣಿಯರ ಬಗ್ಗೆ. ಹೀಗಾಗಿ ನಾನು ಮೇಕಪ್ ಮಾಡುವುದಿಲ್ಲ, ನನಗೆ ಮೇಕಪ್ ಸೂಟ್ ಆಗದು ಎಂದೂ ಹೇಳುತ್ತಾರೆ.
ಆದ್ದರಿಂದ ಈ ವಿಷಯದಲ್ಲಿ ತಪ್ಪು ಮೇಕಪ್ನದಲ್ಲ, ಮೇಕಪ್ ಮಾಡುವ ರೀತಿಯದ್ದು. ಮೇಕಪ್ನ ಅರ್ಥ, ಏನೋ ಒಂದಷ್ಟು ಮುಖಕ್ಕೆ ಮೆತ್ತಿಕೊಳ್ಳುವುದಲ್ಲ. ಬದಲಿಗೆ ಎಂಥ ಮಿಸ್ಟೇಕ್ಸ್ ಮಾಡಬಾರದೆಂದು ತಿಳಿದು ಬ್ಯೂಟಿಫುಲ್ ಆಗಿ ಕಾಣಿಸುವುದಾಗಿದೆ. ಇದರಲ್ಲಿ ಬ್ಲೆಂಡಿಂಗ್, ಕಂಟೂರಿಂಗ್, ರೈಟ್ ಶೇಡ್, ಅಪ್ಲಿಕೇಶನ್, ಡಸ್ಟಿಂಗ್, ಫೈನ್ ಟಚ್ಅಪ್ ಇತ್ಯಾದಿ ಮುಖ್ಯ.
ನಿಮ್ಮ ಚರ್ಮ ತಿಳಿದುಕೊಳ್ಳಿ
ಸದಾ ನಿಮ್ಮ ಚರ್ಮವನ್ನು ಗಮನದಲ್ಲಿರಿಸಿಕೊಂಡೇ ಫೌಂಡೇಶನ್, ಮಾಯಿಶ್ಚರೈಸರ್, ಪ್ರೈಮರ್ ಇತ್ಯಾದಿಗಳನ್ನು ಆರಿಸಬೇಕು. ನಿಮ್ಮ ಚರ್ಮ ಡ್ರೈ ಆಗಿದ್ದರೆ, ಲಿಕ್ವಿಡ್ ಹೈಡ್ರೇಟಿಂಗ್ಯುಕ್ತ ಫೌಂಡೇಶನ್ ಬಳಸಬೇಕು. ಆಯ್ಲಿ ಚರ್ಮದವರಿಗೆ ಮ್ಯಾಟ್ ಪೌಡರ್ ಫಿನಿಶಿಂಗ್ ಪ್ರಾಡಕ್ಟ್ ಬೆಟರ್ ಅನಿಸುತ್ತದೆ. ಇವೆರಡರ ಕಾಂಬಿನೇಶನ್ ಚರ್ಮದವರು ಪೌಡರ್, ಲಿಕ್ವಿಡ್ ಫೌಂಡೇಶನ್ ಎರಡನ್ನೂ ಆರಿಸಬೇಕು.
ರೈಟ್ ಶೇಡ್ ಆರಿಸಿ
ಐಶ್ವರ್ಯಾ ತರಹ ಶ್ರೀದೇವಿ ಸಹ ಒಮ್ಮೆ ಮೇಕಪ್ ಬ್ಲಂಡರ್ಗೆ ಬಲಿಯಾಗಿದ್ದಳಂತೆ. ಒಂದು ಅವಾರ್ಡ್ ಫಂಕ್ಷನ್ನಲ್ಲಿ ಆಕೆಯ ಮುಖದಲ್ಲಿ ಫೌಂಡೇಶನ್ ಲೇಯರ್ ಅತಿ ಕೆಟ್ಟದಾಗಿ ಕಂಡುಬರುತ್ತಿತ್ತು. ಇದರಿಂದಾಗಿ ಆಕೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಟೀಕೆಗೆ ಒಳಗಾಗಿದ್ದಳು. ನೀವು ಗಮನದಲ್ಲಿಡಬೇಕಾದ ಮುಖ್ಯ ವಿಷಯ ಎಂದರೆ ನಿಮ್ಮ ಸ್ಕಿನ್ಗಿಂತ ಒಂದು ಕಲರ್ ಲೈಟ್ ಶೇಡ್ನ್ನೇ ಆರಿಸಿ. ಅಂದ್ರೆ, ನಿಮ್ಮದು ಕೂಲ್ ಸ್ಕಿನ್ ಟೋನ್ ಆಗಿದ್ದರೆ, ನೀವು ಕೂಲ್ ಕಲರ್ ಫೌಂಡೇಶನ್ನ್ನೇ ಅಂದ್ರೆ ಬ್ಲೂ, ಪಿಂಕ್ ಅಂಡರ್ಟೋನ್ ಜೊತೆ ಆರಿಸಿ. ಇದಕ್ಕೆ ಬದಲಾಗಿ ವಾರ್ಮ್ ಸ್ಕಿನ್ ಟೋನ್ಗೆ ಯೆಲ್ಲೋ ಟೋನ್ ಫೌಂಡೇಶನ್ ಮ್ಯಾಚ್ ಆಗುತ್ತದೆ. ನಿಮ್ಮ ಬಣ್ಣ ತುಸು ಶ್ಯಾಮಲ ವರ್ಣವಾಗಿದ್ದರೆ ಯೆಲ್ಲೋ ಬೇಸ್ ಫೌಂಡೇಶನ್ ಆರಿಸಿ.
ಬ್ಲೆಂಡಿಂಗ್
ನಟಿ ಸೋನಂ ಕಪೂರ್ ಸಹ ಅನೇಕ ಸಲ ಮೇಕಪ್ ಬ್ಲಂಡರ್ಗೆ ಬಲಿಯಾಗಿದ್ದಾಳೆ. ಫೌಂಡೇಶನ್ + ಕನ್ಸೀಲರ್ ಬೇಸ್ನ ಪ್ರಾಪರ್ ಬ್ಲೆಂಡಿಂಗ್ ಆಗದ ಕಾರಣ, ಆಕೆಯ ಮೇಕಪ್ ಸಹ ಅನೇಕ ಸಲ ವರ್ಸ್ಟ್ ಮೇಕಪ್ ಶ್ರೇಣಿಗೆ ಸೇರುತ್ತದೆ. ಗಮನಿಸಬೇಕಾದುದು ಎಂದರೆ, ಸದಾ ಫೇಸ್ ಪ್ರೈಮರ್ ನಂತರವೇ ಕನ್ಸೀಲರ್ ಮತ್ತು ಫೌಂಡೇಶನ್ ಬಳಸಬೇಕು. ಪರ್ಫೆಕ್ಟ್ ಬ್ಲೆಂಡಿಂಗ್ಗಾಗಿ ಬ್ರಶ್, ಸ್ಪಾಂಜ್, ಬೆರಳುಗಳಿಂದ ಪ್ರಾಡಕ್ಟ್ ಚರ್ಮದಲ್ಲಿ ಚೆನ್ನಾಗಿ ವಿಲೀನಗೊಳ್ಳುವಂತೆ ಮಸಾಜ್ ಮಾಡಬೇಕು. ಇದನ್ನು ಟ್ರಾನ್ಸ್ ಲೂಸೆಂಟ್ ಪೌಡರ್ನಿಂದ ಸೆಟ್ ಮಾಡುವ ಪ್ರಯತ್ನ ಬೇಡ. ಇದರ ಜೊತೆಗೆ ಬ್ಲೆಂಡಿಂಗ್ ಟೆಕ್ನಿಕ್ ನಿಮ್ಮ ಐ ಮೇಕಪ್ಗೂ ಬಹಳ ಸಹಾಯಕ. ಆದ್ದರಿಂದ ಮೇಕಪ್ ಮಾಡುವಾಗ ಬ್ಲೆಂಡಿಂಗ್ ಫೀಚರ್ಸ್ನ್ನು ಸ್ಕಿಪ್ ಮಾಡಬೇಡಿ.
ಕಂಟೂರಿಂಗ್
ಮೇಕಪ್ನಲ್ಲಿ ಕಂಟೂರಿಂಗ್ ನೆರವಿನಿಂದ ಫೇಸ್ನ ಶೇಪ್ ಫೀಚರ್ಸ್ನ್ನು ಸರಿಪಡಿಸಿ ತೋರಿಸಬಹುದು. ಉದಾ : ಯಾವ ಭಾಗ ಸುಧಾರಿಸಬೇಕೋ ಅಲ್ಲಿ ಲೈಟ್ ಶೇಡ್ ಮತ್ತು ಯಾವ ಭಾಗವನ್ನು ತುಸು ಕಡಿಮೆ ಮಟ್ಟದಲ್ಲಿ ತೋರಿಸಬೇಕೋ ಅಲ್ಲಿಗೆ ಡಾರ್ಕ್ ಶೇಡ್ ಬಳಸಬೇಕು. ಹೈಲೈಟಿಂಗ್ಗಾಗಿ ನಿಮ್ಮ ಚರ್ಮಕ್ಕಿಂತ 2-3 ಪಟ್ಟು ಶೇಡ್ ಲೈಟ್ ಮತ್ತು ಶೇಡಿಂಗ್ಗಾಗಿ 2-3 ಶೇಡ್ ಡಾರ್ಕ್ ಫೌಂಡೇಶನ್ ಬಳಸಬೇಕು. ಮೊದಲು ಚರ್ಮಕ್ಕೆ ತಕ್ಕಂತೆ ನಾರ್ಮಲ್ ಫೌಂಡೇಶನ್ ಹಚ್ಚಿರಿ, ನಂತರ ಫೇಸ್ ಕಂಟೂರಿಂಗ್ ಮಾಡಿ.
ಮೇಕಪ್ ಅಪ್ಲಿಕೇಶನ್
ಎಲ್ಲಕ್ಕೂ ಮೊದಲು ಮುಖಕ್ಕೆ ಮಾಯಿಶ್ಚರೈಸರ್ ಮತ್ತು ಮೇಕಪ್ ಪ್ರೈಮರ್ ಹಚ್ಚಿರಿ. ಮುಖ ಶುಚಿಗೊಳಿಸಿದ ನಂತರ ಮತ್ತೆ ಫೌಂಡೇಶನ್ ಮತ್ತು ಕನ್ಸೀಲರ್ನ್ನು ಬಳಸಬೇಕು.
ಆದರೆ ಮುಖ್ಯವಾಗಿ ಗಮನಿಸಬೇಕಾದುದು ಎಂದರೆ, ಕನ್ಸೀಲರ್ ಫೌಂಡೇಶನ್ನ್ನು ಬೇಸ್ ರೂಪದಲ್ಲಿ ಐ ಲಿಡ್ ಮೇಲೆ ಹಚ್ಚಲೇಬಾರದು. ಅದಕ್ಕಾಗಿ ಐ ಬೇಸ್ ಬಳಸಿಕೊಳ್ಳಿ. ನಂತರ ಟ್ರಾನ್ಸ್ ಲೂಸೆಂಟ್ ಪೌಡರ್ನಿಂದ ಬೇಸ್ನ್ನು ಸೆಟ್ ಮಾಡಿ.
ಚೀಕ್ ಬೋನ್ಸ್ ನ್ನು ಹೈಲೈಟ್ಗೊಳಿಸಲು, ಹೈಲೈಟರ್ ಬಳಸಿಕೊಳ್ಳಿ. ನಂತರ ಬ್ಲಶರ್ ಹಚ್ಚಿರಿ. ಐ ಮೇಕಪ್ ಲಿಪ್ ಮೇಕಪ್ನಿಂದ ಲುಕ್ಸ್ ಕಂಪ್ಲೀಟ್ ಮಾಡಿ.
ಡಸ್ಟಿಂಗ್
ಪೌಡರ್ ಹಚ್ಚಿಕೊಳ್ಳುವಾಗ ಪಫ್ ಬದಲಾಗಿ ಪೌಡರ್ ಬ್ರಶ್ ಬಳಸಿರಿ ಹಾಗೂ ಎಕ್ಸ್ ಟ್ರಾ ಪೌಡರ್ ತೊಲಗಿಸಿ. ಪೌಡರ್ ಬೆವರನ್ನು ಹೀರಿಕೊಂಡು ಬೇಸ್ನ್ನು ಸೆಟ್ ಮಾಡಲು ಬಳಸಿರಿ. ಅದನ್ನು ಬಿಟ್ಟು ಇನ್ನಷ್ಟು ಮತ್ತಷ್ಟು ಬೆಳ್ಳಗೆ ಕಾಣಿಸಲಿ ಎಂದು ಪೌಡರ್ ಮೆತ್ತಬೇಡಿ. ಅಗತ್ಯವೆನಿಸಿದರೆ ನೀವು ದುಬಾರಿ ಟ್ರಾನ್ಸ್ ಲೂಸೆಂಟ್ ಜಾಗದಲ್ಲಿ ಬೇಬಿ ಪೌಡರ್ ಸಹ ಬಳಸಬಹುದು. ನ್ಯಾಚುರಲ್ ಲುಕ್ಸ್ ಗಾಗಿ ಡಸ್ಟಿಂಗ್ ನಿಯಮವನ್ನೇ ಅನುಸರಿಸಿ. ಅದು ಪೌಡರ್, ಹೈಲೈಟರ್ ಎರಡಕ್ಕೂ ಅನ್ವಯಿಸುತ್ತದೆ.
ಫೈನಲ್ ಟಚ್ಅಪ್
ಮೇಕಪ್ಗೆ ಫೈನಲ್ ಟಚ್ಅಪ್ ನೀಡುವುದು ಅತಿ ಅಗತ್ಯ, ಆಗ ಅನಗತ್ಯವಾಗಿ ನೀವು ಸಂಕೋಚಕ್ಕೆ ಒಳಗಾಗುವುದು ತಪ್ಪುತ್ತದೆ. ಆದ್ದರಿಂದ ಫೈನಲ್ ಟಚ್ಅಪ್ ಅತಿ ಅಗತ್ಯ.
– ಪ್ರೀತಿ ಜೈನ್
ಕಿವಿಮಾತು
– ಕೃತಕ ಲ್ಯಾಶೆಸ್ ಸರಿಯಾಗಿ ಸೆಟ್ ಆಗಿದೆಯೋ ಇಲ್ಲವೋ ನೋಡಿಕೊಳ್ಳಿ.
– ಲಿಪ್ಲೈನರ್ ಸರಿಯಾಗಿ ಲಿಪ್ಸ್ಟಿಕ್ ಜೊತೆ ಮ್ಯಾಚ್ ಬ್ಲೆಂಡ್ ಆಗಿದೆಯೇ?
– ಬೆವರಿನ ದುರ್ವಾಸನೆ ನಿಮ್ಮ ಸೌಂದರ್ಯಕ್ಕೆ ಮುಳುವಾಗದಿರಲಿ.
– ಐ ಶೇಡ್ಸ್ ಸೂಕ್ತ ಬ್ಲೆಂಡ್ ಆಗಿದೆಯೇ?
– ಐ ಲಿಡ್ ಮೇಲೆ ಯಾವ ಕ್ರೀಝ್ ಲೈನ್ ಸಹ ಇರಬಾರದು.
– ಔಟ್ಫಿಟ್ಸ್ ನಲ್ಲಿ ಯಾವ ಕೊರತೆಯೂ ಇಲ್ಲ ತಾನೇ….?
– ಹೇರ್ಸ್ಟೈಲ್ ಚೆನ್ನಾಗಿ ಸೂಟ್ ಆಯ್ತು ತಾನೇ?
– ನಿಮ್ಮ ಪರ್ಸ್ ಯಾವ ಪೌಚ್ನಲ್ಲಿ ಮೊಬೈಲ್/ಕ್ರೆಡಿಟ್ ಕಾರ್ಡ್ ಜೊತೆ ರೆಗ್ಯುಲರ್ ಮೇಕಪ್ ಐಟಮ್ಸ್ ಇವೆಯೋ…. ನೋಡಿ.
ಫೇಸ್ ಶೇಪ್ಗೆ ತಕ್ಕಂತೆ ಕಂಟೂರಿಂಗ್
ಇಲ್ಲಿ ಹೈಲೈಟಿಂಗ್ಗಾಗಿ ಯೆಲ್ಲೋ ಕಲರ್ ಮತ್ತು ಶೇಡಿಂಗ್ಗಾಗಿ ಬ್ರೌನ್ ಕಲರ್ ಮೂಲಕ ತೋರಿಸಲಾಗಿದೆ :
ಹಾರ್ಟ್ ಶೇಪ್ ಅಬ್ಲಾಂಗ್ ಶೇಪ್ ಓವಲ್ ಶೇಪ್ ರೌಂಡ್ ಶೇಪ್ ಸ್ಕ್ವೇರ್ ಶೇಪ್ ಡೈಮಂಡ್ ಶೇಪ್ಕಂಟೂರಿಂಗ್ ಹೈಲೈಟಿಂಗ್