ಕಾಲಕ್ಕೆ ತಕ್ಕಂತೆ ಫ್ಯಾಷನೆಬಲ್ ಆಗಿ ಕಾಣಬೇಕೆಂದರೆ ಋತುವಿಗೆ ಅನುಸಾರವಾಗಿ ಕೇವಲ ಔಟ್‌ಫಿಟ್‌ ಮಾತ್ರವಲ್ಲದೆ, ಆ್ಯಕ್ಸೆಸರೀಸ್‌ ಕಲೆಕ್ಷನ್‌ನ್ನು ಇರಿಸಿಕೊಳ್ಳುವುದೂ ಅಗತ್ಯವಾಗುತ್ತದೆ. ಔಟ್‌ಫಿಟ್‌ ಮತ್ತು ಆ್ಯಕ್ಸೆಸರೀಸ್‌ನ ಬೆಸ್ಟ್ ಕಾಂಬಿನೇಶನ್‌ನಿಂದಲೇ ಪರ್ಸನಾಲಿಟಿಗೆ ಪರ್ಫೆಕ್ಟ್ ಲುಕ್‌ ದೊರೆಯುತ್ತದೆ. ಹಾಟ್‌ ಸಮ್ಮರ್‌ ಸೀಸನ್‌ನಲ್ಲಿ ಕಂಪ್ಲೀಟ್‌ ಲುಕ್‌ ಪಡೆಯಲು ಯಾವ ಕೂಲ್‌ ಆ್ಯಕ್ಸೆಸರೀಸ್‌ ಬೇಕಾಗುತ್ತದೆ ಎಂದು ತಿಳಿಯಲು ಇಲ್ಲಿವೆ ಫ್ಯಾಷನ್‌ ಡಿಸೈನರ್ಸ್ ಸಲಹೆಗಳು :

ಫ್ಲೇರ್‌ ಸ್ಕಾರ್ಫ್‌ : ಹಾಟ್‌ ಸಮ್ಮರ್‌ನಲ್ಲಿ ಫ್ರೆಶ್‌ ಲುಕ್‌ಗಾಗಿ ನಿಮ್ಮ ವಾರ್ಡ್‌ರೋಬ್‌ನಲ್ಲಿ ಸ್ಕಾರ್ಫ್‌ ಕಲೆಕ್ಷನ್‌ ಅವಶ್ಯವಾಗಿರಲಿ. ಇಂದಿನ ದಿನಗಳಲ್ಲಿ ಫ್ಲೇರ್‌ ಪ್ರಿಂಟೆಡ್‌ ಕಲರ್‌ಫುಲ್ ಸ್ಕಾರ್ಫ್‌ ಫ್ಯಾಷನ್‌ನಲ್ಲಿದೆ. ಇದನ್ನು ನೀವು ಶಾರ್ಟ್‌ ಡ್ರೆಸ್‌ನೊಂದಿಗಿನ ಟಾಪ್‌ ಅಥವಾ ಟೀಶರ್ಟ್‌ ಜೊತೆಯಲ್ಲಿ ಕ್ಯಾರಿ ಮಾಡಬಹುದು. ಸ್ಕಾರ್ಫ್‌ನ್ನು ಬೇರೆ ಬೇರೆ ಸ್ಟೈಲ್‌ನಲ್ಲಿ ಧರಿಸಿ. ಇದರಿಂದ ನೀವು ಮತ್ತಷ್ಟು ಸ್ಟೈಲಿಶ್‌ ಆಗಿ ಕಾಣುವಿರಿ.

ಏವಿಯೇಟರ್‌ ಸನ್‌ಗ್ಲಾಸ್‌ : ಬಿಸಿಲಿನಲ್ಲಿ ಕಣ್ಣುಗಳ ಸುರಕ್ಷತೆಯ ಜೊತೆಗೆ ಸ್ಟೈಲಿಶ್‌ ಲುಕ್‌ ಬೇಕೆಂದರೆ ಸನ್‌ಗ್ಲಾಸ್‌ಗಿಂತ ಹೆಚ್ಚಿನ ಆಪ್ಶನ್‌ ಬೇರೊಂದಿಲ್ಲ. ರೌಂಡ್‌, ಸ್ಕ್ವೇರ್‌ ಅಥವಾ ಬಾಕ್ಸ್ ಶೇಪ್‌ಗೆ ಬದಲಾಗಿ ಮೆಟಲ್ ಫ್ರೇಮ್ ಉಳ್ಳ ಏವಿಯೇಟರ್‌ ಸನ್‌ಗ್ಲಾಸ್‌ನ್ನು ಆರಿಸಿಕೊಳ್ಳಿ. ಇದನ್ನು ಧರಿಸಿದರೆ ನಿಮಗೆ ಹೆವಿ ಐ ಮೇಕಪ್‌ನ ಅಗತ್ಯ ಇರದು.

ಕ್ಲಾಸಿಕ್‌ ವಾಚ್‌ : ಈ ಸಮ್ಮರ್‌ನಲ್ಲಿ ಬೋಲ್ಡ್ ಅಂಡ್‌ ಬಿಂದಾಸ್‌ ಲುಕ್‌ಗಾಗಿ, ಕ್ಲಾಸಿಕ್‌ ವಾಚ್‌ನಿಂದ ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಇದು ಯಾವುದೇ ಔಟ್‌ಫಿಟ್‌ನೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ ಮತ್ತು ಲೆದರ್‌ ಬೆಲ್ಟ್ ನಿಂದಾಗಿ ಎಂದಿಗೂ ಔಟ್‌ ಆಫ್‌ ಫ್ಯಾಷನ್‌ ಆಗದು.

ಸೂಪರ್‌ ಸೈಜ್‌ ಬ್ಯಾಗ್‌ : ಕಂಪ್ಲೀಟ್‌ ಲುಕ್‌ಗಾಗಿ ಸಮ್ಮರ್‌ ಸೂಪರ್‌ಸೈಜ್‌ ಬ್ಯಾಗ್‌ನ್ನು ನಿಮ್ಮ ಮೊದಲ ಆಯ್ಕೆಯನ್ನಾಗಿಸಿಕೊಳ್ಳಿ. ಇದರಲ್ಲಿ ನಿಮ್ಮ ಅಗತ್ಯ ವಸ್ತುಗಳೆಲ್ಲ ಸುಲಭವಾಗಿ ಹಿಡಿಯುತ್ತವೆ, ಜೊತೆಗೆ ನಿಮಗೆ ಸೂಪರ್‌ ಸ್ಟೈಲಿಶ್‌ ಲುಕ್ಸ್ ನ್ನು ಕೂಡ ನೀಡುತ್ತದೆ. ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಲು ನಿಯಾನ್‌ ಶೇಡ್‌ನ ಬ್ಯಾಗ್‌ ಕೊಳ್ಳಿರಿ ಅಥವಾ ಟ್ರಾನ್ಸ್ ಪರೆಂಟ್‌ ಬ್ಯಾಗ್‌ನ್ನು ಕೂಡ ಟ್ರೈ ಮಾಡಬಹುದು. ಇದು ನಿಮಗೆ ಬೋಲ್ಡ್ ಲುಕ್‌ ನೀಡುತ್ತದೆ.

ಪಾಪ್‌ ಕಲರ್ಸ್ ನೆಕ್‌ಪೀಸ್‌ : ಗೋಲ್ಡ್, ಡೈಮಂಡ್‌ ಮತ್ತು ರೆಗ್ಯುಲರ್‌ ನೆಕ್‌ಪೀಸ್‌ಗಳು ನಿಮಗೆ ಬೇಸರ ತಂದಿದ್ದರೆ, ಪಾಪ್‌ ಕಲರ್ಸ್ ನ ಹಾಟ್‌ ನೆಕ್‌ಪೀಸ್‌ನ್ನು ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ ಮಾಡಿಕೊಳ್ಳಿ. ನಿಮ್ಮ ಜ್ಯೂವೆಲರಿ ಬಾಕ್ಸ್ ನಲ್ಲಿ ಲೈವ್‌ ಗ್ರೀನ್‌, ಪಿಂಕ್‌, ಆರೆಂಜ್‌ನಂತಹ ಪಾಪ್‌ ಶೇಡ್ಸ್ ನ ಸ್ಟೋನ್‌, ಪರ್ಲ್, ಕ್ರಿಸ್ಟಲ್‌ಗಳಿಂದ ತಯಾರಿಸಿದ ನೆಕ್‌ಪೀಸ್‌ ಇರಿಸಿಕೊಳ್ಳಿ. ಸಿಂಗಲ್ ಶೇಡ್‌ ಅಥವಾ ಪ್ಲೇನ್‌ ಔಟ್‌ಫಿಟ್‌ನೊಂದಿಗೆ ಪಾಪ್‌ ಕಲರ್‌ ನೆಕ್‌ಪೀಸ್‌ ನಿಮಗೆ ಸೂಪರ್‌ ಸ್ಟೈಲಿಶ್‌ ಲುಕ್‌ ಒದಗಿಸುತ್ತದೆ.

ಸ್ಟೇಟ್‌ಮೆಂಟ್‌ ಇಯರ್‌ರಿಂಗ್‌ : ಸಮ್ಮರ್‌ ಸೀಸನ್‌ನಲ್ಲಿ ಕೂಲ್‌ ಲುಕ್ಸ್ ಗಾಗಿ ನಿಮ್ಮ ಜ್ಯೂವೆಲರಿ ಬಾಕ್ಸ್ ನ ರೆಗ್ಯುಲರ್‌ ಇಯರ್‌ರಿಂಗ್‌ಗಳನ್ನು ಸ್ಟೇಟ್‌ಮೆಂಟ್‌ ಇಯರ್‌ರಿಂಗ್ಸ್ ನಿಂದ ರೀಪ್ಲೇಸ್‌ ಮಾಡಿ. ಶಾರ್ಟ್ಸ್ ನೊಂದಿಗೆ ಲಾಂಗ್‌ ಇಯರ್‌ರಿಂಗ್‌ನ ಕಾಂಬಿನೇಶನ್‌ ನಿಮಗೆ ಸುಂದರ ಹಾಟ್‌ ಲುಕ್‌ ನೀಡುತ್ತದೆ. ನೀವು ಯಾವುದೇ ಶೇಪ್‌ ಮತ್ತು ಸೈಜ್‌ನ ಸ್ಟೇಟ್‌ಮೆಂಟ್‌ ಇಯರ್‌ ರಿಂಗ್‌ನ್ನು ಆಯ್ಕೆ ಮಾಡಿಕೊಳ್ಳಬಹುದು.

ಆ್ಯಂಕಲ್ ಬ್ರೇಸ್‌ಲೆಟ್‌ : ಚಳಿಗಾಲ ಮುಗಿದಿರುವುದರಿಂದ ನಿಮ್ಮ ಶೂ ರಾಕ್‌ನ್ನು ಫುಲ್ ಪ್ಯಾಕ್‌ ಫುಟ್‌ವೇರ್‌ನ ಆ ಸ್ಥಳದಲ್ಲಿ ಆ್ಯಂಕ್ಲೆಟ್‌ ಫುಟ್‌ವೇರ್‌ನಿಂದ ಸಜ್ಜುಗೊಳಿಸಿ. ಈ ಫುಟ್‌ವೇರ್‌ ಸುತ್ತಲೂ ತೆರೆದಂತಿರುತ್ತದೆ. ಆದ್ದರಿಂದ ಬೆವರು ಬರುವುದಿಲ್ಲ ಮತ್ತು ಸ್ಟೈಲಿಶ್‌ ಆಗಿ ಕಾಣುತ್ತದೆ. ಶಾರ್ಟ್ಸ್ ನೊಂದಿಗೆ ಧರಿಸಿದಾಗ ಇದು ಹಾಟ್‌ ಲುಕ್‌ ನೀಡುತ್ತದೆ.

ಗ್ಲಿಟರ್‌ ಮೊಬೈಲ್‌ ಕವರ್‌ :  ಫುಟ್‌ವೇರ್‌ ಮತ್ತು ಹ್ಯಾಂಡಲ್ ಬ್ಯಾಗ್‌ನೊಂದಿಗೆ ಈಗ ಮೊಬೈಲ್ ಕೂಡ ಅತ್ಯಗತ್ಯ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಬ್ಯಾಗ್‌ನಂತೆ ಇದನ್ನು ದಿನ ಬದಲಿಸಲಾಗುವುದಿಲ್ಲ. ಹಾಗಾದರೆ ಮೊಬೈಲ್ ಕವರ್‌ನ್ನು ಚೇಂಜ್‌ ಮಾಡಿ ಅದಕ್ಕೊಂದು ನ್ಯೂಲುಕ್‌ ಕೊಡಬಹುದಲ್ಲವೆ? ಸಮ್ಮರ್‌ನಲ್ಲಿ ಕೂಲ್‌ ಲುಕ್ಸ್ ಗಾಗಿ ಗ್ಲಿಟರ್‌ ಮೊಬೈಲ್‌ ಕವರ್‌ ಕೊಳ್ಳಿರಿ.

ಥಂಬ್‌ ರಿಂಗ್ಸ್ : ಇಂಡೆಕ್ಸ್ ಫಿಂಗರ್‌ಗೆ ಕಾಕ್‌ಟೇಲ್‌ ಅಥವಾ ಡಬಲ್ ರಿಂಗ್ಸ್ ಬದಲು ಫ್ಯಾಷನೆಬಲ್ ಲುಕ್‌ಗಾಗಿ ಥಂಬ್‌ ರಿಂಗ್ಸ್ ಟ್ರೈ ಮಾಡಿ. ಕೂಲ್‌ ಲುಕ್ಸ್ ಗಾಗಿ ಎನಾಮೆಲ್ ಪ್ರಿಂಟೆಡ್‌ ಥಂಬ್‌ ರಿಂಗ್‌ ಕೊಳ್ಳಿರಿ. ಬೇಕಾದರೆ ನೀವು ಹೆಬ್ಬೆರಳಿನ ಜೊತೆಗೆ ಇನ್ನಿತರ ಬೆರಳುಗಳಿಗೂ ವಿಭಿನ್ನ ಶೇಪ್ಸ್ ಮತ್ತು ಸ್ಟೈಲ್‌ನ ರಿಂಗ್ಸ್ ಧರಿಸಬಹುದು.

ಹಾಟ್‌ ಹ್ಯಾಟ್ಸ್ : ನೀವು ಹಾಲಿಡೇ ಮೂಡ್‌ನಲ್ಲಿದ್ದು ಬೀಚ್‌ ಪ್ರದೇಶಗಳಿಗೆ ಪ್ರವಾಸ ಹೊರಡಲಿದ್ದರೆ, ನಿಮ್ಮ ಔಟ್‌ಫಿಟ್‌ಗೆ ಮ್ಯಾಚ್‌ ಆಗುವಂತಹ ಹಾಟ್‌ ಹ್ಯಾಟ್‌ ಕೊಂಡೊಯ್ಯಲು ಮರೆಯದಿರಿ. ಇದು ನಿಮಗೆ ಬಿಸಿಲಿನಿಂದ ರಕ್ಷಣೆ ಕೊಡುವುದರೊಂದಿಗೆ ಫ್ಯಾಷನೆಬಲ್ ಲುಕ್‌ ಕೂಡ  ಒದಗಿಸುತ್ತದೆ. ಓವರ್‌ಸೈಜ್‌ ಹ್ಯಾಟ್‌ ಹೆಚ್ಚು ಆಕರ್ಷಕವಾಗಿರುತ್ತದೆ. ಇದನ್ನು ನಿಮ್ಮ ಮೊದಲ ಆಯ್ಕೆಯಾಗಿಸಿಕೊಳ್ಳಬಹುದು.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ