ಮೆಡಿಕಲ್ ಎಕ್ಸ್ ಪರ್ಟ್ಸ್ ಈ ಕುರಿತು ಏನು ಸಲಹೆ ನೀಡುತ್ತಾರೆ?
– ಇನ್‌ಡೋರ್ ವರ್ಕ್‌ಔಟ್ಸ್ ಈ ಸೀಸನ್‌ನಲ್ಲಿ ಎಲ್ಲಕ್ಕೂ ಹೆಚ್ಚು ಲಾಭಕರ ಎನಿಸುತ್ತದೆ. ಬೆಳಗ್ಗೆ 5 ಗಂಟೆಗೇ ಎದ್ದು, ತಂಪಾದ ವಾತಾವರಣದಲ್ಲಿ 40-45 ನಿಮಿಷ ವರ್ಕ್‌ಔಟ್ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.
– ಈ ಸೀಸನ್‌ನಲ್ಲಿ ಗ್ರೂಪ್ ಆ್ಯಕ್ಟಿವಿಟೀಸ್‌ಗೆ ಹೆಚ್ಚಿನ ಗಮನ ಕೊಡಿ. ಇದರಿಂದ ಫಿಟ್ ಆಗಿರುವುದರ ಜೊತೆ ಜೊತೆಗೆ ಒಂದು ಹೆಲ್ದಿ ಕಾಂಪಿಟಿಷನ್ ಕೂಡ ಕೂಡಿಕೊಳ್ಳುತ್ತದೆ.
– ಈ ಸೀಸನ್‌ನಲ್ಲಿ ಕಪಲ್ಸ್ ತಮ್ಮ ಮಕ್ಕಳ ಜೊತೆ ಹೆಚ್ಚಿನ ಕಾಲ ಕಳೆಯಬೇಕು. ಇದರಿಂದ ಮಕ್ಕಳನ್ನು ಸಂಭಾಳಿಸುವುದರಲ್ಲಿ ಕ್ಯಾಲೋರಿ ಬರ್ನ್ ಆಗುವುದಲ್ಲದೆ, ಹೆಚ್ಚಿನ ಮಜಾ ಸಿಗುತ್ತದೆ.
– ಈ ಸೀಸನ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಕುಡಿಯಿರಿ. ಪಚನದ ಯಾವುದೇ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೊಂದೇ ಪರಿಹಾರ. ಕೋಲ್ಡ್ ಪೇಯಗಳು, ನೀರು ಮಜ್ಜಿಗೆ, ಪಾನಕ, ಜೂಸ್, ಮಿಲ್ಕ್ ಶೇಕ್ ಇತ್ಯಾದಿ ಈ ಸೀಸನ್‌ಗೆ ಹೆಚ್ಚು ಪೂರಕ. ಆಗಾಗ ಎಳನೀರನ್ನೂ ಸೇವಿಸಿ.
– ಈ ಸೀಸನ್‌ನಲ್ಲಿ ಹೆಚ್ಚು ಹೆಚ್ಚು ತಾಜಾ ಹಸಿ ತರಕಾರಿಯ ಸಲಾಡ್, ಕೋಸಂಬರಿ ಸೇವಿಸಿ. ಹಸಿರು ಸೊಪ್ಪು, ಟೊಮೇಟೊ, ಮೂಲಂಗಿ, ಸೌತೆಕಾಯಿ, ಕ್ಯಾಪ್ಸಿಕಂ, ಈರುಳ್ಳಿ ಇತ್ಯಾದಿ.
– ಹಾಗೆಯೇ ಹೆಚ್ಚು ನೀರಿನಂಶವುಳ್ಳ ಮೂಸಂಬಿ, ಕಿತ್ತಳೆಹಣ್ಣು, ಕರ್ಬೂಜಾ, ಚಕ್ಕೋತಾ, ಸಿದ್ದೋಟಿ ಹಣ್ಣು ಇತ್ಯಾದಿ ಸೇವಿಸಿ.
– ಈ ಬೇಸಿಗೆಯಲ್ಲಿ ಹೊರಗಿನ ಬಯಲಾಟಕ್ಕಿಂತ ಒಳಾಂಗಣ ಕ್ರೀಡೆಗಳಾದ ಬ್ಯಾಡ್‌ಮಿಂಟನ್, ಟೆನಿಸ್, ಸ್ಕ್ವಾಶ್ ಇತ್ಯಾದಿ ಆಡಿಕೊಳ್ಳಿ.
– ಬೇಸಿಗೆಯಲ್ಲಿ ನೀರಿನಲ್ಲಿ ಈಜಾಟ ಹೆಚ್ಚಿನ ಖುಷಿ ಕೊಡುತ್ತದೆ. ಇದು ತಂಪು ಮಾತ್ರವಲ್ಲದೆ ಉತ್ತಮ ವ್ಯಾಯಾಮ ಕೂಡ. ಈಜು ದೇಹದ ಅಂಗಾಂಗಗಳಿಗೆ ಹೆಚ್ಚಿನ ಚೈತನ್ಯ ತುಂಬುತ್ತದೆ.
– ಈಜು ನಮ್ಮ ಸ್ಟ್ರೆಸ್ ಕಡಿಮೆ ಮಾಡುವುದಕ್ಕೂ ಸಹಕಾರಿ. ನೀವು ಕುಟುಂಬದವರ ಜೊತೆಗೂಡಿ ಈಜಾಡಿದರೆ ಹೆಚ್ಚಿನ ಮಜಾ ಉಂಟು. ಮರೆಯದೆ ದೇಹಕ್ಕೆ `ಸನ್ ಟ್ಯಾನ್ ಲೋಶನ್’ ಹಚ್ಚಿಕೊಳ್ಳಿ.
– ಬೇಸಿಗೆಯಲ್ಲಿ ನಿಮ್ಮ ಊಟ-ತಿಂಡಿ ಕಡೆ ವಿಶೇಷ ಗಮನ ಕೊಡಿ. ಆದಷ್ಟೂ ಹುರಿದ ಕರಿದ, ಮಸಾಲೆಯುಕ್ತ ಆಹಾರ ಬೇಡ. ಹಸಿರು ತರಕಾರಿ, ಮೊಸರನ್ನ, ಸಾತ್ವಿಕ ಆಹಾರಕ್ಕೆ ಹೆಚ್ಚು ಮಹತ್ವ ಕೊಡಿ.
– ಲೈಟ್ ವೈಟ್ ಹಾಗೂ ಲೈಟ್ ಕಾಟನ್ ಡ್ರೆಸೆಸ್ ಈ ಕಾಲಕ್ಕೆ ಸರಿ. ಆಗ ಹೆಚ್ಚು ಕೂಲ್ ಎನಿಸುತ್ತದೆ.
– ಬಿಸಿಲಲ್ಲಿ ಹೋಗಬೇಕಾದಾಗ ಕೂಲಿಂಗ್ ಗ್ಲಾಸ್, ಹ್ಯಾಟ್, ಛತ್ರಿ ಮರೆಯಬೇಡಿ. ಉತ್ತಮ ಬ್ರಾಂಡ್‌ನ 30 SPF ಸನ್‌ಸ್ಕ್ರೀನ್ ಲೋಶನ್ ಹಚ್ಚದೆ ಹೊರಗೆ ಹೊರಡಬೇಡಿ.
– ಹೊರಗೆ ಬಿಸಿಲಿನಿಂದ ಬಂದ ತಕ್ಷಣ ಫ್ಯಾನ್ ಅಥವಾ ಕೂಲರ್ ಮುಂದೆ ನಿಲ್ಲಬೇಡಿ. ಸ್ವಲ್ಪ ಹೊತ್ತು ಮಾಮೂಲಿ ತಾಪಮಾನದಲ್ಲಿಯೇ ಕೂರಬೇಕು.
– ಊಟ ಆದ ತಕ್ಷಣ ಬಿಸಿಲಿನಲ್ಲಿ ಹೊರಡಬೇಡಿ.
– ಹೊರಗೆ ದೊರಕುವ ಜೂಸ್ ಕುಡಿಯದಿರಿ, ಸೋಂಕು ತಗುಲೀತು.
– ಸುಮತ