ಮಳೆಗಾಲ ಎಂದರೆ ಮಾನ್‌ಸೂನ್‌ನಲ್ಲಿ ಮನದ ಮಯೂರ ಗರಿಗೆದರಿ ನರ್ತಿಸುತ್ತದೆ. ಈ ಋತುವಿನಲ್ಲಿ ವಿಶೇಷವಾದ ಫ್ಯಾಷನೆಬಲ್ ಡ್ರೆಸ್‌ ಧರಿಸಿದಾಗ ದೊರೆಯುವ ಆನಂದಕ್ಕೆ ಸಾಟಿ ಇರದು. ಫ್ಯಾಷನ್‌ ಡಿಸೈನರ್‌ ಅನಿತಾ ಶರ್ಮ ಮಾನ್‌ಸೂನ್‌ಗೆ ಅನುರೂಪವಾಗಿ ನಿಮ್ಮ ವಾರ್ಡ್‌ರೋಬ್‌ನ್ನು ಹೇಗೆ ಸಜ್ಜುಗೊಳಿಸಬಹುದೆಂದು ತಿಳಿಸಿಕೊಡುತ್ತಾರೆ. ಇದಕ್ಕಾಗಿ ನೀವು ಸಂಗ್ರಹಿಸುವ ಡ್ರೆಸ್‌ಗಳು ಸ್ಟೈಲಿಶ್‌ ಲುಕ್ಸ್ ಒದಗಿಸುವುದರ ಜೊತೆಗೆ ಕಂಫರ್ಟಬಲ್ ಕೂಡ ಆಗಿರುತ್ತವೆ:

ಬೆಲ್ ಸ್ಲೀವ್‌ ಡ್ರೆಸ್‌ : ಬೆಲ್‌ ಸ್ಲೀವ್ ಡ್ರೆಸ್‌ ಫೆಮಿನೈಸ್‌ ಮತ್ತು ಸೆಕ್ಸೀ ಲುಕ್‌ ನೀಡುತ್ತದೆ. ಇದನ್ನು ಶಾರ್ಟ್ಸ್ ಅಥವಾ ಜೀನ್ಸ್ ಜೊತೆಗೆ ಧರಿಸಬಹುದು. ಮಾನ್‌ಸೂನ್‌ನಲ್ಲಿ ಸಡಿಲವಾದ ಉಡುಪು ಧರಿಸಿ. ಏಕೆಂದರೆ ಮಳೆಗಾಲದಲ್ಲಿ ಅದು ಆರಾಮದಾಯಕವಾಗಿರುತ್ತದೆ.

ಬಾಡಿಕೋನ್‌ ಡ್ರೆಸ್‌ : ಬಾಡಿ ಕೋನ್‌ ಡ್ರೆಸ್‌ ಧರಿಸಿದಾಗ ಗೊಂಬೆಯಂತೆ ಕಾಣುವಿರಿ. ಈವ್ನಿಂಗ್‌ ಪಾರ್ಟಿಗಳಿಗೆ ಇದು ಒಪ್ಪುತ್ತದೆ. 90ರ ದಶಕದ ಲುಕ್‌ ಬರುತ್ತದೆ. ಈ ಡ್ರೆಸ್‌ನೊಂದಿಗೆ ಸ್ನೀಕರ್ಸ್‌ ಧರಿಸಿ. ಬಿಳಿಯ ಸ್ನೀಕರ್ಸ್‌ನೊಂದಿಗೆ ಈ ಬಾಡಿ ಕೋನ್‌ ಡ್ರೆಸ್‌ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಗ್ರಾಫಿಕ್‌ ಬಾಡಿ ಕೋನ್‌ನೊಂದಿಗೆ ಟೀಶರ್ಟ್‌ನ್ನೂ ಸಹ ಪ್ರಯತ್ನಿಸಬಹುದು.

ಒನ್‌ ಪೀಸ್‌ ಶರ್ಟ್‌ ಡ್ರೆಸ್‌ : ಮಾನ್‌ಸೂನ್‌ಗೆ ಓವರ್‌ ಸೈಜ್‌ ನಿಜಕ್ಕೂ ಒಂದು ಒಳ್ಳೆಯ ಆಯ್ಕೆ. ಇದು ಸಾಕಷ್ಟು ಸಡಿಲವಾಗಿದ್ದು, ಬಳುಕುವಂತಿರುತ್ತದೆ ಮತ್ತು ನಿಮಗೆ ಆಕರ್ಷಕ ಮತ್ತು ಫಂಕೀ ಲುಕ್‌ ನೀಡುತ್ತದೆ. ಕಾಟನ್‌ ಶರ್ಟ್‌ನೊಂದಿಗೆ ಬಿಳಿಯ ಸ್ನೀಕರ್ಸ್‌ ಧರಿಸಿ.

ಕುಲೋಟ್ಸ್ : ಇಂದಿನ ದಿನಗಳಲ್ಲಿ ಇದು ಸಾಕಷ್ಟು ಟ್ರೆಂಡ್‌ನಲ್ಲಿದೆ. ಇದು ಕಂಫರ್ಟೆಬಲ್ ಆಗಿರುವುದರ ಜೊತೆಗೆ ಪ್ರೊಫೆಷನಲ್ ಲುಕ್‌ ನೀಡುತ್ತದೆ. ನೀವು ಇದನ್ನು ಮೀಟಿಂಗ್‌ಗಳಿಗೆ ಧರಿಸಬಹುದು. ಇದರಲ್ಲಿ ಅನೇಕ ವೆರೈಟಿಗಳಿರುತ್ತವೆ. ಇದನ್ನು ಲಿನೆನ್‌ ಕ್ರಾಪ್‌ ಟಾಪ್‌ ಅಥವಾ ಡೆನಿಮ್ ಜಾಕೆಟ್‌ನೊಂದಿಗೆ ಧರಿಸಬಹುದು. ಇದು ಬಿಸಿಲಿನ ತಾಪಕ್ಕೂ ಅನುಕೂಲಕರ.

ಟ್ಯಾಸ್‌ ಅಥವಾ ನೆರಿಗೆಯ ಉಡುಪು : 60ರ ದಶಕದಲ್ಲಿ ನೆರಿಗೆಯ ಉಡುಪು ಸಾಕಷ್ಟು ರೂಢಿಯಲ್ಲಿದ್ದಿತು. ಈಗ ಅದು ಕೊಂಚ ಬದಲಾವಣೆಯೊಂದಿಗೆ ವಾಪಸ್ಸಾಗಿದೆ. ಭುಜದಲ್ಲಿ ಮತ್ತು ಉಡುಪಿನ ಕೆಳಭಾಗದಲ್ಲಿ ನೆರಿಗೆ ಇರುವಂತಹ ಡ್ರೆಸ್‌ ಧರಿಸಿ ನೀವು ಪಾರ್ಟಿಗೆ ಹೋಗಬಹುದು. ಅದರ ಜೊತೆಗೆ ಮ್ಯಾಚಿಂಗ್‌ ಜ್ಯುವೆಲರಿ ಇರಲಿ.

ಫ್ಯಾಷನ್‌ ಬುಟಿಕ್‌ನ ಎಂ.ಡಿ. ಆಗಿರುವ ಸಿದ್ದಾರ್ಥ್‌, ನಿಮ್ಮ ಪರ್ಸನಾಲಿಟಿಯಲ್ಲಿ ಮಾನ್‌ಸೂನ್‌ನ ಫ್ಯಾಷನೆಬಲ್ ಟ್ವಿಸ್ಟ್ ನ್ನು ಹೇಗೆ ತರಬಹುದೆಂಬುದು ತಿಳಿಸುತ್ತಾರೆ.

ಗೋಲ್ಡ್ ಫಾಯಿಲ್‌ ಪ್ರಿಂಟ್ಸ್ : ಮಾನ್‌ಸೂನ್‌ನಲ್ಲಿ ತೆಳುವಾದ ಮೆಟೀರಿಯಲ್ ಮತ್ತು ಪೇಸ್ಟಲ್ ಶೇಡ್ಸ್ ಚೆನ್ನಾಗಿ ಒಪ್ಪುತ್ತದೆ. ನಿಮ್ಮ ಪೇಸ್ಟಲ್ ಕುರ್ತಾಗೆ ಗೋಲ್ಡ್ ಫಾಯಿಲ್‌ ಪ್ರಿಂಟ್‌ ಮತ್ತು ಕೊಂಚ ಶಿಮರ್‌ ಟಚ್‌ ಒದಗಿಸಿದರೆ ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ. ಈ ಋತುವಿನಲ್ಲಿ ಸುಂದರವಾಗಿ ಕಾಣಲು ಇದೊಂದು ಒಳ್ಳೆಯ ವಿಧಾನ. ತೆಳುವಾದ ಚಂದೇರಿ ಕಾಟನ್‌ನಂತಹ ಮೆಟೀರಿಯಲ್ ಮೇಲೆ ಗೋಲ್ಡ್ ಫಾಯಿಲ್‌ ಪ್ರಿಂಟ್ಸ್ ಬಹಳ ಚೆನ್ನಾಗಿ ಕಾಣುತ್ತದೆ. ಈ ಕಾಲದಲ್ಲಿ ಟರ್ಕ್ವಾಯಿಶ್‌ ಡಸ್ಟ್ ಪಿಂಕ್‌, ‌ ಬ್ಲೂ ಮತ್ತು ಬ್ರೈಟ್‌ ಪಿಂಕ್‌ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಳೆಯುವ ಬಣ್ಣ : ನಿಮ್ಮ ವಾರ್ಡ್‌ರೋಬ್‌ನ್ನು ಬೇಸಿಕ್‌ ಕಲರ್‌ ಡ್ರೆಸ್‌ಗಳಿಗಿಂತ ಹೊಳೆಯುವ ಬಣ್ಣದ ಬಟ್ಟೆಗಳಿಂದ ಸಜ್ಜುಗೊಳಿಸಿ. ಆಗ ನಿಮಗೆ ಡ್ರೆಸ್‌ ಮಾಡಿಕೊಳ್ಳಲು ಸುಲಭವಾಗುತ್ತದೆ.

ಲೇಯರಿಂಗ್‌ : ಮಾನ್‌ಸೂನ್‌ನಲ್ಲಿ ಲೇಯರ್ಸ್‌ಗಾಗಿ ಶ್ರಗ್ಸ್ ಆಯ್ಕೆ ಮಾಡಿಕೊಂಡು ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಈ ಋತುವಿನಲ್ಲಿ  ಲೇಯರಿಂಗ್‌ನ ಒಂದು ಉತ್ತಮ ವಿಧಾನವೆಂದರೆ ಎಥ್ನಿಕ್‌ ಕ್ವಾರ್ಡ್ ಜಾಕೆಟ್‌. ಮಾರುಕಟ್ಟೆಯಲ್ಲಿ ಇದು ಅನೇಕ ವಿಧವಾಗಿ ದೊರೆಯುತ್ತದೆ. ಈ ಜಾಕೆಟ್‌ ನಿಮಗೆ ಚೆಕ್‌ ಲುಕ್‌ ನೀಡುತ್ತದೆ. ಜೊತೆಗೆ ಗಾಳಿಯಿಂದಲೂ ರಕ್ಷಿಸುತ್ತದೆ.

ಕೊಲ್ಯಾಜ್‌/ಮಿಕ್ಸ್ ಅಂಡ್‌ ಮ್ಯಾಚ್‌ ಪ್ರಿಂಟ್‌ : ಕೊಂಚ ಮಿಕ್ಸ್ ಅಂಡ್‌ ಮ್ಯಾಚ್‌ ಮಾಡುವುದರಿಂದ ನಿಮ್ಮ ಸೌಂದರ್ಯ ದುಪ್ಪಟ್ಟಾಗುತ್ತದೆ. ಮಾನ್‌ಸೂನ್‌ನಲ್ಲಿ ಬೇರೆ ಬೇರೆ ಬಣ್ಣ ಮತ್ತು ಪ್ರಿಂಟ್‌ಗಳನ್ನು ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಿ. ಮಾನ್‌ಸೂನ್‌ ಸ್ಲಿಮ್ ಪ್ಯಾಂಟ್‌ನ್ನು ಬ್ಲ್ಯಾಕ್‌ ಇಂಡೀ ಟಾಪ್‌ನೊಂದಿಗೆ ಮ್ಯಾಚ್‌ ಮಾಡಿ, ಜೊತೆಗೆ ಎಥ್ನಿಕ್‌ ಪ್ರಿಂಟ್‌ ಕ್ವಾರ್ಡ್ ಜ್ಯಾಕೆಟ್‌ ತೊಟ್ಟು ನಿಮ್ಮ ಸ್ಟೈಲ್ ನ್ನು ಪ್ರದರ್ಶಿಸಿ.

ಫುಟ್‌ವೇರ್‌ ವಿಶಿಷ್ಟವಾಗಿರಲಿ : ಲಿಬರ್ಟಿಯ ಫ್ಯಾಷನ್‌ ಡಿಸೈನರ್‌ರ ಪ್ರಕಾರ, ನಿಮ್ಮ ಮಾನ್‌ಸೂನ್‌ ಫುಟ್‌ವೇರ್‌ ಕಲೆಕ್ಷನ್‌ ಆಕರ್ಷಕವಾಗಿರುವುದರ ಜೊತೆಗೆ ಮಳೆಗೂ ಅನುಕೂಲಕರವಾಗಿರಬೇಕು.

ಬೂಟ್‌ : ಮಾನ್‌ಸೂನ್‌ ಸೀಸನ್‌ನಲ್ಲಿ ಬೂಟ್ಸ್ ಫ್ಯಾಷನೆಬಲ್ ಮತ್ತು ಕಂಫರ್ಟೆಬಲ್ ಆಗಿರುತ್ತವೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಬೂಟುಗಳು ಲಭ್ಯ. ಪ್ರಿಂಟೆಡ್‌, ಲೇಸ್ಡ್ ಅಥವಾ ಬಕ್ಡ್‌, ರಬ್ಬರ್‌ ಸೋಲ್‌ನ ಬೂಟ್ಸ್ ಮಾನ್‌ಸೂನ್‌ಗೆ ಒಳ್ಳೆಯದು.

ಫ್ಲಿಪ್‌ ಫ್ಲಾಪ್‌ : ಮಳೆಗಾಲದಲ್ಲಿ ರಸ್ತೆಯ ಮಣ್ಣು, ಕೆಸರಿನಿಂದ ಕೂಡಿರುತ್ತದೆ. ಆಗ ಫ್ಲಿಪ್‌ಫ್ಲಾಪ್‌ ಬಹಳ ಆರಾಮದಾಯಕ. ಇವು ಅನೇಕ ಬಣ್ಣಗಳಲ್ಲಿ ದೊರೆಯುತ್ತವೆ. ಡೆನಿಮ್ ಜೊತೆಗೆ ಇವು ಚೆನ್ನಾಗಿ ಹೊಂದುತ್ತವೆ.

ಫ್ಲೇಟರ್‌ ಸ್ಯಾಂಡಲ್ : ಮಾನ್‌ಸೂನ್‌ನಲ್ಲಿ ಫ್ಲೇಟರ್‌ ಸ್ಯಾಂಡಲ್ ಅನುಕೂಲಕರಾಗಿರುತ್ತವೆ. ಮುಖ್ಯವಾಗಿ ನೀವು ಸಾರ್ವಜನಿಕ ಸಾರಿಗೆಯನ್ನು ಬಳಸುವಂತಹ ಸಂದರ್ಭದಲ್ಲಿ ಜೀನ್ಸ್ ಅಥವಾ ಸೆಮಿಫಾರ್ಮಲ್ ಉಡುಗೆಯೊಂದಿಗೆ ಇದನ್ನು ಬಳಸಿ ನೀವು ಸ್ಮಾರ್ಟ್‌ ಆಗಿ ಕಾಣಬಲ್ಲಿರಿ.

ಕ್ಲಾಗ್‌ : ಈ ಮಾನ್‌ಸೂನ್‌ನಲ್ಲಿ ನೀವು ಕ್ಲಾಗ್‌ನಿಂದ ನಿಮ್ಮ ಕಾಲುಗಳಿಗೆ ಆರಾಮ ಒದಗಿಸಬಹುದು. ಈ ಕಾಲಕ್ಕೆ ಇದು ಎಲ್ಲಕ್ಕಿಂತ ಕೂಲ್ ಫುಟ್‌ವೇರ್‌. ಇದರ ಒಂದು ಉತ್ತಮ ಅಂಶವೆಂದರೆ, ಮಳೆಗಾಲದಲ್ಲಿ ಇದರಲ್ಲಿ ಯಾವುದೇ ದುರ್ಗಂಧ ಇರುವುದಿಲ್ಲ. ಮಾನ್‌ಸೂನ್‌ನಲ್ಲಿ ಆರಾಮವಾಗಿ ತಿರುಗಾಡಲು ಇದನ್ನು ಬಳಸಬಹುದು.

ಲೋಫಿರ್ಸ್‌ : ಮಾನ್‌ಸೂನ್‌ನಲ್ಲಿ ಶರ್ಟ್‌ ಮತ್ತು ಶಾರ್ಟ್ಸ್ ಒಳ್ಳೆಯ ಕ್ಯಾಶುಯಲ್ ಡ್ರೆಸ್‌. ಇದರೊಂದಿಗೆ ಲೋಫಿರ್ಸ್‌ ಮ್ಯಾಚ್‌ ಮಾಡಿ ನೀವು ಮಳೆಗಾಲದಲ್ಲಿಯೂ ಕೂಲ್‌ ಮತ್ತು ಸ್ಮಾರ್ಟ್‌ ಆಗಿ ಕಾಣಬಹುದು.

ಹೀಲ್ : ಮಾನ್‌ಸೂನ್‌ನಲ್ಲಿ ನೀವು ಹೀ‌ಲ್ ಧರಿಸಿ ಸ್ಮಾರ್ಟ್‌ ಅಂಡ್‌ ಬ್ಯೂಟಿಫುಲ್ ಆಗಿ ಕಾಣಬಹುದು. ನೀವು ಪಾರ್ಟಿಗೆ ಹೋಗಬೇಕಿದ್ದರೆ ಪಿವಿಸಿ ಸೋಲ್‌ ಅಥವಾ ಜೆಲಿ ಸ್ಟ್ರಾಪ್ಸ್ ನೊಂದಿಗೆ ಹೀಲ್‌ ಬಳಸಿ. ಹೀಲ್ ಎಲ್ಲ ಕಾಲಕ್ಕೂ ಆರಾಮದಾಯಕಾಗಿರುವುದಿಲ್ಲ. ಅದಕ್ಕಾಗಿ ನೀವು ಫ್ಲಾಟ್ ಹೀಲ್ ಆಯ್ಕೆ ಮಾಡಿ. ಇದು ಜೀನ್ಸ್, ಟೈಟ್ಸ್ ಇತ್ಯಾದಿ ಉಡುಪುಗಳೊಂದಿಗೆ ಒಪ್ಪುತ್ತದೆ.

ಗಮ್ ಬೂಟ್ : ಮಳೆಗಾಲದಲ್ಲಿ ಎಲ್ಲ ಕಡೆಯೂ ನೀರು ನಿಂತಿರುತ್ತದೆ. ಅಂತಹ ಸಮಯದಲ್ಲಿ ಗಮ್ ಬೂಟ್‌ ನಿಮ್ಮ ಕಾಲುಗಳಿಗೆ ರಕ್ಷಣೆ ನೀಡುತ್ತದೆ. ಇದರ ರಬ್ಬರ್‌ ನೀರು ಒಳಗೆ ಪ್ರವೇಶಿಸಲು ಬಿಡುವುದಿಲ್ಲ ಮತ್ತು ಇದನ್ನು ಸುಲಭವಾಗಿ ಒರೆಸಿ ಸ್ವಚ್ಛಗೊಳಿಸಬಹುದು.

– ಜಿ. ಪ್ರಿಯಂವದಾ

ಮಾನ್‌ಸೂನ್‌ನಲ್ಲಿ  ಪೇಸ್ಟಲ್ ಶೇಡ್‌ನ  ಹಗುರವಾದ ಮೆಟೀರಿಯಲ್‌ನ ಉಡುಗೆಗಳು ಚೆನ್ನಾಗಿ ಒಪ್ಪುತ್ತವೆ

– ಸಿದ್ಧಾರ್ಥ್‌ ಬಿಂದ್ರಾ

ಋತುವಿಗೆ ಅನುಗುಣವಾಗಿ ನಿಮ್ಮ ವಾರ್ಡ್‌ರೋಬ್‌ನಲ್ಲಿನ ಡ್ರೆಸ್‌ಗಳು ಸ್ಟೈಲಿಶ್‌ ಲುಕ್‌ ನೀಡುವುದರೊಂದಿಗೆ ಕಂಫರ್ಟೆಬಲ್ ಕೂಡ ಆಗಿರಬೇಕು.

– ಆಶಿಮಾ ಶರ್ಮ

ಈ ಕಾಲದ ಸೊಗಸನ್ನು ಸವಿಯಲು ಆರಾಮದಾಯಕ ಫುಟ್‌ವೇರ್‌ ಅಂದರೆ ಕ್ಲಾಗ್ಸ್ ಅನುಪಮ್ ಬನ್ಸ್‌ ಮಾನ್‌ಸೂನ್‌ನಲ್ಲಿ ಹೇರ್‌ಸ್ಟೈಲ್ ಮತ್ತು ಮೇಕಪ್‌ ಬಗ್ಗೆ ಕಡಿಮೆ, ಆದರೆ ಉಡುಪಿನ ಬಗ್ಗೆ ಹೆಚ್ಚು ಫೋಕಸ್‌ ಮಾಡಿ.

– ರಿತಿಕಾ ತನೇಜಾ

ಮಾನ್‌ಸೂನ್‌ನಲ್ಲಿ ಫ್ಯಾಷನ್‌ ಪ್ರದರ್ಶಿಸಿ

ಮಾನ್‌ಸೂನ್‌ನಲ್ಲಿ ಫ್ಯಾಷನ್‌ ಪ್ರದರ್ಶಿಸುವ ಬಗ್ಗೆ ರಿತಿಕಾ ಹೀಗೆ ಹೇಳುತ್ತಾರೆ :

  1. ಈ ಬಾರಿ ಮಾನ್‌ಸೂನ್‌ನಲ್ಲಿ ನಿಮ್ಮ ಹೇರ್‌ಸ್ಟೈಲ್‌ ಮತ್ತು ಮೇಕಪ್‌ ಮೇಲೆ ಕಡಿಮೆ, ಆದರೆ ಡ್ರೆಸ್‌ ಮೇಲೆ ಹೆಚ್ಚು ಫೋಕಸ್‌ ಮಾಡಿ.
  2. ಪೇಸ್ಟಲ್ ಕಲರ್ಸ್ ಕ್ರಾಪ್‌ ಹೆವಿ ಸ್ಟೈಲ್‌, ಟಾಪ್ಸ್ ಮತ್ತು ಪ್ಯಾಂಟ್ಸ್ ಹೊರಗೆ ತೆಗೆದು ಮಳೆಗಾಲಕ್ಕೆ ಸಿದ್ಧರಾಗಿರಿ.
  3. ನಿಮ್ಮ ಬ್ರೌನ್‌ ಮತ್ತು ಬ್ಲ್ಯಾಕ್‌ ಬೇಸಿಕ್ಸ್ ಪಕ್ಕಕ್ಕಿಟ್ಟು ಇಂಡಿಗೋ ಮತ್ತು ಗ್ರೀನ್‌ ಬಣ್ಣಗಳನ್ನು ಬಳಸಿ.
  4. ಧಗೆಯನ್ನು ತಡೆಯಲು ಕಾಟನ್‌ ಟಾಪ್ಸ್ ಬಳಸಿ. ಸ್ಪಾಲಶ್‌ ಎಲೆಕ್ಟ್ರಿಕ್‌ ಪ್ಲೇರೊಸೆಂಟ್‌ ಪ್ರಿಂಟ್ಸ್ ಉಳ್ಳ ಟಾಪ್ಸ್ ನಿಂದ ಕಂಗೊಳಿಸಿ.
  5. ಮಾನ್‌ಸೂನ್‌ ಮಳೆ, ಧೂಳು, ಕೆಸರಿನ ವಾತಾವರಣದಲ್ಲಿಯೂ ಕೂಲ್‌ ಆಗಿರಲು ಬೇಸಿಕ್‌ ರಿಂಡ್‌ ಡೆನಿಮ್ ಶಾರ್ಟ್ಸ್ ಬಳಸಿ ಸ್ಟೈಲಿಶ್‌ ಆಗಿರಿ.
  6. ಎಥ್ನಿಕ್‌ ಡ್ರೆಸ್‌ ಇಷ್ಟಪಡುವವರು ಜರ್ದೋಜಿ ಉಡುಪು ಧರಿಸಬಹುದು.
  7. ಕ್ರಾಫ್ಟ್ ಪ್ಯಾಂಟ್‌ ಜೊತೆಗೆ ಸುಂದರವಾದ ಪ್ರಿಂಟೆಡ್‌ ಬೋಟ್‌ನೆಕ್‌ ಟಾಪ್‌ ಬಳಸಬಹುದು ಮತ್ತು ವೈಟ್‌ ಬೀಡೆಡ್‌ ನೆಕ್‌ಪೀಸ್‌ ಅಥವಾ ಹ್ಯಾಂಡ್‌ ಕಫ್‌ ಆಯ್ಕೆ ಮಾಡಿಕೊಳ್ಳಬಹುದು.
  8. ಮಾನ್‌ಸೂನ್‌ನಲ್ಲಿ ಪರ್ಪಲ್, ಆರೆಂಜ್‌ ಮತ್ತು ಯೆಲ್ಲೋ ಉಡುಪುಗಳನ್ನು ತಪ್ಪದೆ ಬಳಸಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಆಕರ್ಷಕವಾಗಿ ಕಾಣಲು ಬ್ಲೇಝರ್‌ ಮತ್ತು ಕುಲೋಟ್ಸ್ ಗಳ ಸೂಕ್ತ ಮ್ಯಾಚಿಂಗ್‌ ಬಗ್ಗೆ ಗಮನವಿರಿಸಿ.
  9. ನಡೆಯಲು ತೊಂದರೆಯಾಗದಂತೆ ಆರಾಮವಾಗಿರುವ ಹೀಲ್‌ ಆಥವಾ ಕಂಫರ್ಟ್‌ ಸ್ಟೈಲ್ಸ್‌ ಧರಿಸಿ. ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿರಿಸಲು ವಾಟರ್‌ ಪ್ರೂಫ್‌ ಬ್ಯಾಗ್‌ ಜೊತೆಯಲ್ಲಿಟ್ಟುಕೊಳ್ಳಿ.
  10. ಈ ಕಾಲದಲ್ಲಿ ಮಳೆಯಿಂದ ನೀವು ಮತ್ತು ನಿಮ್ಮ ಉಡುಪು ಒದ್ದೆಯಾಗದಿರಲು ಫ್ಯಾಷನೆಬಲ್ ಕಲರ್‌ಫುಲ್ ಅಂಬ್ರೆಲಾವನ್ನು ಸದಾ ನಿಮ್ಮ ಜೊತೆಯಲ್ಲಿ ಇಟ್ಟುಕೊಂಡಿರಿ.
  11. ಕಲರ್‌ಫುಲ್ ಪ್ಲಾಸ್ಟಿಕ್‌ ಮಾನ್‌ಸೂನ್‌ ಫ್ಲಾಟ್ಸ್ (ಪಾದರಕ್ಷೆ) ಬಳಸಿ. ಇದರಿಂದ ನಿಮ್ಮ ಬೆಲೆಬಾಳುವ ಫುಟ್‌ವೇರ್‌ ಹಾಳಾಗುವುದು ತಪ್ಪುತ್ತದೆ. ಈ ಋತುವಿನಲ್ಲಿ ಲೆದರ್‌ ಪಾದರಕ್ಷೆಗಳನ್ನು ಬಳಸಬೇಡಿ. ಪಾರದರ್ಶಕ ಉಡುಪುಗಳನ್ನು ಧರಿಸಬೇಡಿ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ