ಮಳೆಗಾಲ ಎಂದರೆ ಮಾನ್‌ಸೂನ್‌ನಲ್ಲಿ ಮನದ ಮಯೂರ ಗರಿಗೆದರಿ ನರ್ತಿಸುತ್ತದೆ. ಈ ಋತುವಿನಲ್ಲಿ ವಿಶೇಷವಾದ ಫ್ಯಾಷನೆಬಲ್ ಡ್ರೆಸ್ ಧರಿಸಿದಾಗ ದೊರೆಯುವ ಆನಂದಕ್ಕೆ ಸಾಟಿ ಇರದು. ಫ್ಯಾಷನ್ ಡಿಸೈನರ್ ಅನಿತಾ ಶರ್ಮ ಮಾನ್‌ಸೂನ್‌ಗೆ ಅನುರೂಪವಾಗಿ ನಿಮ್ಮ ವಾರ್ಡ್‌ರೋಬ್‌ನ್ನು ಹೇಗೆ ಸಜ್ಜುಗೊಳಿಸಬಹುದೆಂದು ತಿಳಿಸಿಕೊಡುತ್ತಾರೆ. ಇದಕ್ಕಾಗಿ ನೀವು ಸಂಗ್ರಹಿಸುವ ಡ್ರೆಸ್‌ಗಳು ಸ್ಟೈಲಿಶ್ ಲುಕ್ಸ್ ಒದಗಿಸುವುದರ ಜೊತೆಗೆ ಕಂಫರ್ಟಬಲ್ ಕೂಡ ಆಗಿರುತ್ತವೆ:
ಬೆಲ್ ಸ್ಲೀವ್ ಡ್ರೆಸ್ : ಬೆಲ್ ಸ್ಲೀವ್ ಡ್ರೆಸ್ ಫೆಮಿನೈಸ್ ಮತ್ತು ಸೆಕ್ಸೀ ಲುಕ್ ನೀಡುತ್ತದೆ. ಇದನ್ನು ಶಾರ್ಟ್ಸ್ ಅಥವಾ ಜೀನ್ಸ್ ಜೊತೆಗೆ ಧರಿಸಬಹುದು. ಮಾನ್‌ಸೂನ್‌ನಲ್ಲಿ ಸಡಿಲವಾದ ಉಡುಪು ಧರಿಸಿ. ಏಕೆಂದರೆ ಮಳೆಗಾಲದಲ್ಲಿ ಅದು ಆರಾಮದಾಯಕವಾಗಿರುತ್ತದೆ.
ಬಾಡಿಕೋನ್ ಡ್ರೆಸ್ : ಬಾಡಿ ಕೋನ್ ಡ್ರೆಸ್ ಧರಿಸಿದಾಗ ಗೊಂಬೆಯಂತೆ ಕಾಣುವಿರಿ. ಈವ್ನಿಂಗ್ ಪಾರ್ಟಿಗಳಿಗೆ ಇದು ಒಪ್ಪುತ್ತದೆ. 90ರ ದಶಕದ ಲುಕ್ ಬರುತ್ತದೆ. ಈ ಡ್ರೆಸ್‌ನೊಂದಿಗೆ ಸ್ನೀಕರ್ಸ್ ಧರಿಸಿ. ಬಿಳಿಯ ಸ್ನೀಕರ್ಸ್‌ನೊಂದಿಗೆ ಈ ಬಾಡಿ ಕೋನ್ ಡ್ರೆಸ್ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಗ್ರಾಫಿಕ್ ಬಾಡಿ ಕೋನ್‌ನೊಂದಿಗೆ ಟೀಶರ್ಟ್‌ನ್ನೂ ಸಹ ಪ್ರಯತ್ನಿಸಬಹುದು.
ಒನ್ ಪೀಸ್ ಶರ್ಟ್ ಡ್ರೆಸ್ : ಮಾನ್‌ಸೂನ್‌ಗೆ ಓವರ್ ಸೈಜ್ ನಿಜಕ್ಕೂ ಒಂದು ಒಳ್ಳೆಯ ಆಯ್ಕೆ. ಇದು ಸಾಕಷ್ಟು ಸಡಿಲವಾಗಿದ್ದು, ಬಳುಕುವಂತಿರುತ್ತದೆ ಮತ್ತು ನಿಮಗೆ ಆಕರ್ಷಕ ಮತ್ತು ಫಂಕೀ ಲುಕ್ ನೀಡುತ್ತದೆ. ಕಾಟನ್ ಶರ್ಟ್‌ನೊಂದಿಗೆ ಬಿಳಿಯ ಸ್ನೀಕರ್ಸ್ ಧರಿಸಿ.
ಕುಲೋಟ್ಸ್ : ಇಂದಿನ ದಿನಗಳಲ್ಲಿ ಇದು ಸಾಕಷ್ಟು ಟ್ರೆಂಡ್‌ನಲ್ಲಿದೆ. ಇದು ಕಂಫರ್ಟೆಬಲ್ ಆಗಿರುವುದರ ಜೊತೆಗೆ ಪ್ರೊಫೆಷನಲ್ ಲುಕ್ ನೀಡುತ್ತದೆ. ನೀವು ಇದನ್ನು ಮೀಟಿಂಗ್‌ಗಳಿಗೆ ಧರಿಸಬಹುದು. ಇದರಲ್ಲಿ ಅನೇಕ ವೆರೈಟಿಗಳಿರುತ್ತವೆ. ಇದನ್ನು ಲಿನೆನ್ ಕ್ರಾಪ್ ಟಾಪ್ ಅಥವಾ ಡೆನಿಮ್ ಜಾಕೆಟ್‌ನೊಂದಿಗೆ ಧರಿಸಬಹುದು. ಇದು ಬಿಸಿಲಿನ ತಾಪಕ್ಕೂ ಅನುಕೂಲಕರ.
ಟ್ಯಾಸ್ ಅಥವಾ ನೆರಿಗೆಯ ಉಡುಪು : 60ರ ದಶಕದಲ್ಲಿ ನೆರಿಗೆಯ ಉಡುಪು ಸಾಕಷ್ಟು ರೂಢಿಯಲ್ಲಿದ್ದಿತು. ಈಗ ಅದು ಕೊಂಚ ಬದಲಾವಣೆಯೊಂದಿಗೆ ವಾಪಸ್ಸಾಗಿದೆ. ಭುಜದಲ್ಲಿ ಮತ್ತು ಉಡುಪಿನ ಕೆಳಭಾಗದಲ್ಲಿ ನೆರಿಗೆ ಇರುವಂತಹ ಡ್ರೆಸ್ ಧರಿಸಿ ನೀವು ಪಾರ್ಟಿಗೆ ಹೋಗಬಹುದು. ಅದರ ಜೊತೆಗೆ ಮ್ಯಾಚಿಂಗ್ ಜ್ಯುವೆಲರಿ ಇರಲಿ.
ಫ್ಯಾಷನ್ ಬುಟಿಕ್‌ನ ಎಂ.ಡಿ. ಆಗಿರುವ ಸಿದ್ದಾರ್ಥ್, ನಿಮ್ಮ ಪರ್ಸನಾಲಿಟಿಯಲ್ಲಿ ಮಾನ್‌ಸೂನ್‌ನ ಫ್ಯಾಷನೆಬಲ್ ಟ್ವಿಸ್ಟ್ ನ್ನು ಹೇಗೆ ತರಬಹುದೆಂಬುದು ತಿಳಿಸುತ್ತಾರೆ.
ಗೋಲ್ಡ್ ಫಾಯಿಲ್ ಪ್ರಿಂಟ್ಸ್ : ಮಾನ್‌ಸೂನ್‌ನಲ್ಲಿ ತೆಳುವಾದ ಮೆಟೀರಿಯಲ್ ಮತ್ತು ಪೇಸ್ಟಲ್ ಶೇಡ್ಸ್ ಚೆನ್ನಾಗಿ ಒಪ್ಪುತ್ತದೆ. ನಿಮ್ಮ ಪೇಸ್ಟಲ್ ಕುರ್ತಾಗೆ ಗೋಲ್ಡ್ ಫಾಯಿಲ್ ಪ್ರಿಂಟ್ ಮತ್ತು ಕೊಂಚ ಶಿಮರ್ ಟಚ್ ಒದಗಿಸಿದರೆ ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ. ಈ ಋತುವಿನಲ್ಲಿ ಸುಂದರವಾಗಿ ಕಾಣಲು ಇದೊಂದು ಒಳ್ಳೆಯ ವಿಧಾನ. ತೆಳುವಾದ ಚಂದೇರಿ ಕಾಟನ್‌ನಂತಹ ಮೆಟೀರಿಯಲ್ ಮೇಲೆ ಗೋಲ್ಡ್ ಫಾಯಿಲ್ ಪ್ರಿಂಟ್ಸ್ ಬಹಳ ಚೆನ್ನಾಗಿ ಕಾಣುತ್ತದೆ. ಈ ಕಾಲದಲ್ಲಿ ಟರ್ಕ್ವಾಯಿಶ್ ಡಸ್ಟ್ ಪಿಂಕ್, ಬ್ಲೂ ಮತ್ತು ಬ್ರೈಟ್ ಪಿಂಕ್ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.