ಯೂರೋಪ್‌ ಎಂದೊಡನೆ ಅದು ಎಂಥ ದುಬಾರಿ ಎನಿಸುತ್ತದೆ. ಆದರೂ ನೀವು ಯೂರೋಪ್‌ ಪ್ರವಾಸ ಬಯಸಿದರೆ ಚಿಂತಿಸುವ ಅಗತ್ಯವಿಲ್ಲ. ಒಂದಿಷ್ಟು ಪ್ಲಾನಿಂಗ್‌, ಅಲ್ಲಿ ತಿರುಗಾಡಲು ಇರುವ ಅಗ್ಗದ, ಉತ್ತಮ ಪ್ರದೇಶಗಳನ್ನು ಆರಿಸಿಕೊಂಡು ನೀವು ಹಾಯಾಗಿ ನಿಮ್ಮ  ಲೋ ಬಜೆಟ್‌ನಲ್ಲೇ ಯೂರೋಪ್‌ ಸುತ್ತಾಡಬಹುದು. ಬನ್ನಿ, ಯೂರೋಪ್‌ನ ಈ ಬಜೆಟ್‌ ಫ್ರೆಂಡ್ಲಿ ನಗರಗಳನ್ನು ಅರಿಯೋಣ.

ಕ್ರಾಕೋ (ಪೋಲೆಂಡ್‌)

ಈ ನಗರ ಕ್ಯಾಪಿಟಲ್ ವಾರ್‌ಸೌ ತರಹ ಹೈಫೈ ಫುಡ್ಸ್ ಗಾಗಿ ಪ್ರಸಿದ್ಧಿ ಪಡೆದಿದೆ. ಎನರ್ಜಿ ತುಂಬಿದ ನೈಟ್‌ ಲೈಫ್‌ ಸೀನ್ಸ್, ರೋಚಕ ಇತಿಹಾಸ ಹಾಗೂ ಅದ ನ್ನು ಇಷ್ಟಪಡುವವರಿಗೆಂದೇ ಸುಪರ್ಬ್‌ ಆಗಿದೆ. ಇಲ್ಲಿ ಕೆಲವನ್ನಂತೂ ಫ್ರೀಯಾಗಿಯೇ ನೋಡಬಹುದು. ಉದಾ : ಓಲ್ಡ್ ಟೌನ್‌ ಸೆಂಟರ್‌ನಿಂದ ರಾಯಲ್‌ ಹಿಟ್‌ವರೆಗಿನ ರಾಯಲ್ ರೂಟ್‌ನಲ್ಲಿ ಹೊರಟು ಅಲ್ಲಿನ ಆರ್ಕಿಟೆಕ್ಚರ್‌, ಗಾಥಿಕ್‌ ಚರ್ಚ್‌, ಬೃಹತ್‌ ಬಂಗಲೆಗಳು, ಯೂರೋಪಿನ ಅತಿ ದೊಡ್ಡ ಮಾರ್ಕೆಟ್‌ ಸ್ಕ್ವೇರ್‌ನ್ನು ಆನಂದಿಸಬಹುದು.

ಇಲ್ಲಿ ಸೇಬು, ಮರಸೇಬು, (ಪೇರ್‌), ಕಿತ್ತಳೆ, ದಾಲ್ಚಿನ್ನಿ ಬೆರೆತ ಹಾಟ್‌ ಲೈನ್‌ ಪ್ರವಾಸಿಗರಿಗೆ ಬಲು ಪ್ರಿಯ. ಇಲ್ಲಿ ಶೀತ ಸಹಿಸುವುದು ಮಹಾ ಕಷ್ಟ. ಇಲ್ಲಿ ಇಬ್ಬರು ವ್ಯಕ್ತಿಗಳಿಗಾಗಿ ಸ್ಟಾರ್ಟರ್ಸ್‌, ಮೇನ್‌ಕೋರ್ಸ್‌, ಡ್ರಿಂಕ್ಸ್, ಡೆಸರ್ಟ್ ಇತ್ಯಾದಿಗಳ ಸರಾಸರಿ ದರ ಈ ರೀತಿ ಇರುತ್ತದೆ :

ಪ್ಯಾರಿಸ್‌  60 ಯೂರೋ, ಮಿಾನ್‌  50 ಯೂರೋ, ಸ್ಪೇನ್‌ (ಬಾರ್ಸಿಲೋನಾ/ಮ್ಯಾಂಡ್ರಿಡ್‌)  45 ಯೂರೋ, ಈಸ್ಟ್ ಯೂರೋಪ್‌ (ವಾರ್ಸಾ, ಬ್ರೆಟಿಸ್ಲಾವಾ), ಲಿಥುನಿಯಾ  30/40 ಯೂರೋ.

ಇಲ್ಲಿನ ಕ್ಯಾಬ್‌ ಸೇವೆ ಬಲು ಅಗ್ಗ. ವೆಸ್ಟ್ ಯೂರೋಪ್‌ನಲ್ಲಿ ಎಲ್ಲಿಗೇ ಹೋದರೂ 20, 30 ಯೂರೋ ಅಷ್ಟೆ! ಈಸ್ಟ್ ಯೂರೋಪಿನಲ್ಲಿ 10-15 ಕಿ.ಮೀ. 5-7 ಯೂರೋಗಳಲ್ಲಿ ಆಗುತ್ತದೆ. ಈ ದೇಶಗಳು ಅಗ್ಗ, ಏಕೆಂದರೆ ಇನ್ನೂ ಇಲ್ಲಿ ಪ್ರಾದೇಶಿಕ ವಸ್ತುಗಳು ಧಾರಾಳ ಸಿಗುತ್ತಿವೆ. ಜನಸಂಖ್ಯೆ  ಕಡಿಮೆ, ನ್ಯಾಚುರಲ್ ಬ್ಯೂಟಿ ಹೇರಳ, ಕಾಸ್ಟ್ ಆಫ್‌ ಲಿವಿಂಗ್‌ ಅಗ್ಗ.

ವಾರ್ಸಾದ ಸಿಟಿ ಸೆಂಟರ್‌ನಲ್ಲಿ 4 ಸ್ಟಾರ್‌ ಹೋಟೆಲ್,‌ 75 ಯೂರೋ ಪರ್‌ ನೈಟ್‌ ಆಗುತ್ತದೆ. ಆದರೆ ವೆಸ್ಟರ್ನ್‌ ಯೂರೋಪಿಯನ್‌ ನಗರಗಳಲ್ಲಿ 150-200 ಎನ್ನಬಹುದು. ಈಸ್ಟ್ ಯೂರೋಪಿನಲ್ಲಿ ಕಾಫಿ 1 ಹಾಗೂ ಮಫಿನ್‌ 12 ಯೂರೋ ಆದರೆ, ವೆಸ್ಟ್ ಯೂರೋಪ್‌ನಲ್ಲಿ ಕಾಫಿ 34 ಯೂರೋಗಳಿಗೆ ಕಡಿಮೆ ಇಲ್ಲವೇ ಇಲ್ಲ.

ಬುಡಾಪೆಸ್ಟ್ (ಹಂಗೇರಿ)

ನೀವು ಈ ನಗರದಲ್ಲಿ ಕಾಲಿಡುತ್ತಿದ್ದಂತೆಯೇ, ಬುಡಾಪೆಸ್ಟ್ ನ ಜೀವಂತಿಕೆ ನಿಮ್ಮನ್ನು ಆನಂದದ ರೋಮಾಂಚನದಲ್ಲಿ ಅದ್ದಿಬಿಡುತ್ತಿದೆ. ಇದರ ಆಕರ್ಷಣೆಯೇ ಅಂಥದ್ದು. ಇಲ್ಲಿನ ಫ್ಲೈಟ್ಸ್ ಅಗ್ಗ ಹಾಗೂ ತಂಗಲು ವೆಚ್ಚ ನಿಮ್ಮ ಬಜೆಟ್‌ಗೆ ಸುಲಭ ಎನಿಸುತ್ತದೆ. ಕನಿಷ್ಠ ಖರ್ಚಿನಲ್ಲಿ ಗರಿಷ್ಠ ಮಜಾ ಪಡೆಯಲು, ರಿಲ್ಯಾಕ್ಸ್ ಆಗಲು ಬುಡಾಪೆಸ್ಟ್ ಯೂರೋಪಿನ ಥರ್ಮಲ್ ಬಾಥ್‌ ಕ್ಯಾಪಿಟಲ್ ಆಗಿದೆ. ಎಲ್ಲಾ ಜಾಗಗಳಲ್ಲೂ ನಿಮಗೆ ಇಲ್ಲಿ ಬಾಥ್‌ ಹೌಸೆಸ್‌ ಸಿಗುತ್ತದೆ. ನಿಮ್ಮ ಫ್ರೆಂಡ್ಸ್ ಜೊತೆ ಥರ್ಮಲ್ ಬಾಥ್‌ನಲ್ಲಿ  ರಿಲ್ಯಾಕ್ಸ್ ಮಾಡಿ ಅಥವಾ ಬುಡಾಪೆಸ್ಟ್ ಪಾರ್ಟಿಯ ಆನಂದ ಪಡೆಯಿರಿ, ಜೊತೆಗೆ ಡೀಜೆ, ಲೇಸರ್‌ ಶೋ ಸಹ ಲಭ್ಯ.

ಸೆಂಟ್ರಲ್ ಮಾರ್ಕೆಟ್‌ ಹಾಲ್‌ನಲ್ಲಿ ಧಾರಾಳ ಅಗ್ಗದ ಶಾಪಿಂಗ್‌ ಮಾಡಿ. ಇಲ್ಲಿ ತಾಜಾ ಹಣ್ಣು ತರಕಾರಿ, ಸಾಮಿ, ಟ್ಯಾಕೋಸ್‌, ವೈನ್ಸ್, ಹಂಗೇರಿಯನ್‌ ಪ್ಯಾಪ್‌ರಿಕಾದ ಆನಂದ ಪಡೆಯಿರಿ. ಬುಡಾಪೆಸ್ಟ್ ಮಾತ್ರವಲ್ಲದೆ, ನೀವು ರೈಲು ಮಾರ್ಗವಾಗಿ ಬೇರೆ ಬೇರೆ ನಗರಗಳಾದ ಇಸ್ತಾಂಬುಲ್, ವಿಯೆಟ್ನಾಂ, ಬರ್ಲಿನ್‌ ಪ್ರವಾಸ ಮಾಡಬಹುದು. ಇಲ್ಲಿನ ಆಹಾರ ನಿಮ್ಮ ಜೇಬಿಗೆ ಹೊರೆಯಲ್ಲ.

7 ಯೂರೋ ಖರ್ಚು ಮಾಡಿದರೆ ಉತ್ತಮ ಹೋಟೆಲ್‌ನಲ್ಲಿ ಊಟ ಮಾಡಬಹುದು. ಡೇನ್ಯೂಬ್‌ ನದಿಯ ಮತ್ತೊಂದು ಕಡೆಯಿಂದ ಮನೋಹರ ದೃಶ್ಯಗಳ ಆನಂದ ಹೊಂದಲು ಕ್ಯಾಸ್‌ ಹಿಲ್‌ನ ಟಾಪ್‌ಗೆ ಫ್ರೀಯಾಗಿ ಹೋಗಿ ಹಾಗೂ ಫ್ರೀಯಾಗಿಯೇ ಬುದಾ ಕ್ಯಾಸೆಲ್‌ನ ಸುಂದರ ಗಾರ್ಡನ್‌ನಲ್ಲಿ ಸುತ್ತಾಡಿ. ಇದು ವರ್ಷವಿಡೀ ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಇಲ್ಲಿಗೆ ಅಗತ್ಯವಿರುವ ಕಂಫರ್ಟೆಬಲ್ ಶೂಸ್‌ ಧರಿಸಿರಿ. ಕ್ಯಾಸೆಲ್‌ ಗಾರ್ಡನ್‌ ಅಂತೂ ಬಹು ಸುಂದರ, ಶಾಂತ ಜಾಗವಾಗಿದೆ. ಇಲ್ಲಿಂದ ಸಂಸತ್‌ ಭವನಗಳನ್ನು ಕಾಣಬಹುದು.

ಇಲ್ಲಿ ಡೇನ್ಯೂಬ್‌ ನದಿ ಮೇಲೆ, 2ನೇ ವಿಶ್ವಯುದ್ಧದಲ್ಲಿ ಬುಡಾಪೆಸ್ಟ್ ಪರವಾಗಿ ಹುತಾತ್ಮರಾದ ವೀರಯೋಧರ ಸ್ಮಾರಕಗಳಿವೆ. ಇದರಲ್ಲಿ ಬಹಳಷ್ಟು ಶೂಸ್‌ ಇವೆ. ಏಕೆಂದರೆ ಆ ಸಮಯದಲ್ಲಿ ಜನರನ್ನು ಕೊಲ್ಲುವ ಮೊದಲು ಶೂ ಕಳಚಲು ಹೇಳುತ್ತಿದ್ದರಂತೆ. ಅಂಥವರನ್ನು ಕೊಂದು ನದಿಗೆ ಎಸೆಯುತ್ತಿದ್ದರಂತೆ. ಇದಂತೂ ನಿಜಕ್ಕೂ ಹೃದಯಸ್ಪರ್ಶಿ ಎಮೋಶನ್‌ ಮಾಡಿಬಿಡುವ ಸ್ಮಾರಕಗಳು.

ಬುಡಾಪೆಸ್ಟ್ ನ ಸ್ಪಾ ತನ್ನಷ್ಟಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿ ನಿಮ್ಮದೇ ಸ್ವಿಮ್ ವೇರ್‌ ಇರಬೇಕು. ಗೆಲರ್ಟ್‌ ಬಾಥ್‌ ಪಿಲ್ಯಾಸ್‌ಗೆ ಹೋಗಿ ಹಾಗೂ ಬಿಸಿ ನೀರ ಬುಗ್ಗೆಗಳಲ್ಲಿ ರಿಲ್ಯಾಕ್ಸ್ ಆಗುತ್ತಾ ಎಂಜಾಯ್‌ ಮಾಡಿ.

ಬೆಲ್ ‌ಗ್ರೇಡ್‌ (ಸರ್ಬಿಯಾ)

ಇದಂತೂ ಪಾರ್ಟಿ ಲವಿಂಗ್‌ ಕ್ಯಾಪಿಟಲ್, ಇಲ್ಲಿ ಪ್ರತಿ ದಿನ ಜನ ರಾತ್ರಿ ಹೊತ್ತು ಕ್ಲಬ್‌ಗಳಲ್ಲಿ ಪಾರ್ಟಿ ನಡೆಸುತ್ತಾರೆ. ಪ್ರತಿಯೊಂದು ಕಡೆಯೂ ನೈಟ್‌ ಬಾರ್ಸ್‌ ಇದ್ದೇ ಇವೆ. ವರ್ಷವಿಡೀ ಈ ನಗರದಲ್ಲಿ ಪಾರ್ಟಿ ಕಳೆ ಇದ್ದೇ ಇರುತ್ತದೆ. ಮುಖ್ಯವಾಗಿ ಬೇಸಿಗೆಯಲ್ಲಿ ಪಾರ್ಟಿ ಕ್ಲಬ್ಸ್ ಹೊರಗೆ ಸಾವಾ ನದಿ ಬಳಿಯ ಕ್ರೂಸ್‌ನಲ್ಲಿ ಮಾರನೇ ದಿನ ಸೂರ್ಯೋದಯ ಆಗುವವರೆಗೂ ಪಾರ್ಟಿ ನಡೆಸುತ್ತಾರೆ. ಈ ನಗರದ ಪ್ರವಾಸಿ ಸ್ಥಳಗಳೆಂದರೆ ಸ್ಕಡರ್‌ ಲಿಯಾ, ಇಲ್ಲಿ ರಸ್ತೆಗಳಲ್ಲೇ ಸರ್ಬಿಯನ್‌ ಕೆಫೆ ಯೋಕ್‌ ಆರ್ಟಿಸ್ಟ್ ಸ್ಟ್ರೀಟ್‌ ಪರ್ಫಾರ್ಮರ್ಸ್‌ ಸೇರಿ ಕಳೆಗಟ್ಟುತ್ತದೆ. ಸರ್ಬಿಯಾದ ಇತಿಹಾಸ ತಿಳಿಯಲು ಬೆಲ್‌ಗ್ರೇಡ್‌ ಮ್ಯೂಸಿಯಂಗೆ ಅಗತ್ಯ ಹೋಗಿ.

ಆಗಸ್ಟ್ ತಿಂಗಳಲ್ಲಿ 5 ದಿನ ಸರ್ಬಿಯಾದ ಜನಪ್ರಿಯ ಬೆಲ್‌ಗ್ರೇಡ್‌ ಬೀರ್‌ ಫೆಸ್ಟ್ ನಡೆಯುತ್ತದೆ, ಇಲ್ಲಿ ಯಾರಿಗೂ ಶುಲ್ಕವಿಲ್ಲ. ಇಲ್ಲಿರುವ ಸೇಂಟ್‌ ಸಾವಾ ಚರ್ಚ್‌, ವಿಶ್ವದ 2ನೇ ಅತಿ ದೊಡ್ಡ ಆರ್ಥೊಡಾಕ್ಸ್ ಚರ್ಚ್‌ ಎನಿಸಿದೆ. ಇದು ನಗರದ ಅಚ್ಚುಮೆಚ್ಚಿನ ಪ್ರೇಕ್ಷಣೀಯ ಸ್ಥಳ. ಇಲ್ಲಿನ ಹಾಸ್ಟೆಲ್ ರೂಮುಗಳಲ್ಲಿ ಒಂದು ರಾತ್ರಿ ತಂಗಲು ಕೇವಲ 6 ಯೂರೋ ಅಷ್ಟೆ.

ಲಿಸ್ಬೇನ್‌ (ಪೋರ್ಚುಗಲ್)

ಲಿಸ್ಬೇನ್‌ ವೆಸ್ಟರ್ನ್‌ ಯೂರೋಪಿನ ಚೀಪೆಸ್ಟ್ ಕ್ಯಾಪಿಟಲ್. ನಗರದಲ್ಲಿ ಸುತ್ತಾಡಲು ಡನ್‌ ಟ್ರಾಮ್ಸ್ ಬಳಸಿ. ಕೇವಲ 5 ಯೂರೋಗಳಲ್ಲಿ 24 ಗಂಟೆಗಳಲ್ಲಿ ಎಲ್ಲಿ ಬೇಕಾದರೂ ಓಡಾಡಬಹುದು. ಹೀಗಾಗಿ ನೀವು ಬೀಚ್‌, ಅಲ್ಫಾಮಾದ ಐತಿಹಾಸಿಕ ಗಲ್ಲಿಗಳಲ್ಲಿ ಓಡಾಡಬಹುದು. ಕಸ್ಟರ್ಡ್‌ ಟಾರ್ಟ್ಸ್ ಸವಿಯುವ ಆನಂದ ಕಳೆದುಕೊಳ್ಳಬೇಡಿ. ರಾತ್ರಿ ಹೆಚ್ಚು ಖರ್ಚು ಮಾಡದೆ ನೀವು ಬ್ಯಾರೋ ಆಲ್ಮೋ ಡಿಸ್ಟ್ರಿಕ್ಟ್ ಗೆ ಡಿನ್ನರ್‌ ಸವಿಯಲು ಹೊರಡಿ. ಇಲ್ಲಿ ಲಿಸ್ಬೇನಿನ ವಿಚಿತ್ರ ಕೂಲ್ಸೆಂಟ್ ರೆಸ್ಟುರಾಗಳಿವೆ. ಇಲ್ಲಿ ಪೋರ್ಚುಗಲ್ ಸಾರ್‌ಡೀನ್ಸ್ ನ ಬೊಂಬಾಟ್‌ ಟೂರಿಸ್ಟ್ ಸ್ಪಾಟ್ಸ್ ಗಮನಿಸಿ. ಇದೂ ಕೂಡ ಫ್ರೀ. ಇಲ್ಲಿ ಒಂದು ಶಾಪ್‌ ಸ್ಟ್ರೋಕ್‌ ಮ್ಯೂಸಿಯಂ ಇದೆ, ಸಾರ್‌ಡೀನ್‌ ಫೇರಿ ವೀಲ್ ಇದೆ. ಇಲ್ಲಿ ಹೋಟೆಲ್‌ ಚಾರ್ಜ್‌ ಕೇವಲ 12 ಯೂರೋನಿಂದ ಆರಂಭ.

ಕಿವ್‌ (ಯೂಕ್ರೇನ್‌)

ಇದು ಯೂರೋಪಿನ ಅತಿ ಪ್ರಾಚೀನ ನಗರಗಳಲ್ಲಿ ಒಂದು. ಇಲ್ಲಿ ಅತ್ಯಧಿಕ ಅಲ್ಲದಿದ್ದರೂ ಒಂದು ತಂಡ ಟೂರಿಸ್ಟ್ ಬರುತ್ತಿರುತ್ತಾರೆ. ಹೀಗಾಗಿ ಇಲ್ಲಿ ಏನೂ ದುಬಾರಿ ಅಲ್ಲ, ಅಗ್ಗ ಎನಿಸಿದೆ. ಪ್ರವಾಸಿಗರು ಬೊಂಬಾಟ್‌ ನೈಟ್‌ಲೈಫ್‌ ಎಂಜಾಯ್‌ ಮಾಡಬಹುದು. ಸಿಟಿ ಸೆಂಟರ್‌ನಲ್ಲಿ ಬಹಳಷ್ಟು ಕ್ಲಬ್‌ಗಳಿವೆ. ನಿಮಗೆ ಕ್ಲಬ್ಬಿಂಗ್‌ ಇಷ್ಟವಿಲ್ಲ ಎಂದರೆ ಚಿಂತೆ ಇಲ್ಲ. ಕಿವ್ ನ ಗಲ್ಲಿ ಗಲ್ಲಿಗಳಲ್ಲಿ ಕಾರು ಟ್ರಕ್ಕುಗಳಲ್ಲಿ ಎಲ್ಲೆಡೆ ಕೆಫೆ, ಬಾರುಗಳು ರಾರಾಜಿಸುತ್ತವೆ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಚೆನೋಬಿಲ್‌ಗೆ ಹೋಗುವುದು. ಅಲ್ಲಿನ ಒಂದು ಜಾಗದಲ್ಲಿ ವಿಶ್ವದ ಅತಿ ದಾರುಣ ನ್ಯೂಕ್ಲಿಯರ್‌ ಸ್ಛೋಟ ಆಗಿತ್ತು. ಆ ಜಾಗ ನೋವು ಮೀಟಿದರೂ ಅವಿಸ್ಮರಣೀಯ  ಎಂಬುದು ದಿಟ.

ಯೂಕ್ರೇನಿನ ಪ್ರಸಿದ್ಧ ಜಾಗಗಳಲ್ಲಿ  ಒಂದು ಸೇಂಟ್‌ ಆ್ಯಂಡ್ರೂ ಚರ್ಚ್‌. ಇಲ್ಲಿ ಆಗಾಗ ಸಾಂಪ್ರದಾಯಿಕ ವಿವಾಹ ನಡೆಯುತ್ತಿರುತ್ತದೆ. ಅದನ್ನೂ ಗಮನಿಸಬಹುದು. ಇಲ್ಲಿನ ಹೋಟೆಲ್‌ನಲ್ಲಿ ತಂಗಲು ದಿನಕ್ಕೆ 5 ಯೂರೋ ಇದ್ದರೂ ಆದೀತು.

ಲಿವರ್‌ಪೂಲ್‌ (ಇಂಗ್ಲೆಂಡ್‌)

ಇಲ್ಲಿನ ಕಲ್ಚರ್‌, ನೈಟ್‌ಲೈಫ್‌ ಎಲ್ಲ ಸುಪರ್ಬ್‌. ಈ ಸಿಟಿಯ ಕ್ರಿಯೇಟಿವ್‌ ಹಬ್‌ ಎಂದರೆ ದಿ ಬಾಲ್ಟಿಕ್‌ ಟ್ರಯಾಂಗ್‌. ಬಾಲ್ಟಿಕ್‌ ಫುಡ್‌ ಮಾರ್ಕೆಟ್‌. ಐಕಾನಿಕ್‌ ಕೆರ್ನಲ್ ಕ್ಲಬ್‌ ಮೇಲೆ ಲಿವರ್‌ಪೂಲ್‌‌ನ ಮ್ಯೂಸಿಕ್‌ ಇತಿಹಾಸದ ಆನಂದ ಹೊಂದಿರಿ. ವಿಶ್ವದ ಅತಿ ಅತಿ ಎನ್ನಬಹುದಾದ ಪ್ಯಾಶನೇಟ್‌ ಫ್ಯಾನ್ಸ್ ಜೊತೆ ಕುಳಿತು, ಫುಟ್‌ಬಾಲ್‌ ಮ್ಯಾಚ್‌ ಆನಂದಿಸಿ. ನಿಮ್ಮ ಬಳಿ ಇನ್ನೂ ಟೈಂ ಇದ್ದರೆ ಬೋಲ್ಡ್ ಸ್ಟ್ರೀಟ್‌ನಲ್ಲಿರುವ ಅದ್ಭುತ ಐಟಂ ಕೊಳ್ಳಿರಿ. ವಿಶ್ವಪ್ರಸಿದ್ಧ ಆಲ್ಬರ್ಟ್‌ ಡಾರ್ಕ್ಸ್ ಗೆ ಹೋಗಿ. ಅಲ್ಲಿ ಟೆಂಟಲ್ ಆರ್ಟ್‌ ಗ್ಯಾಲರಿ ಇದೆ. ಇಲ್ಲಿ ಎಂಟ್ರಿ ಉಚಿತ. ಎಲ್ಲಕ್ಕೂ ದೊಡ್ಡದಾದ ಚೀನೀ ಕ್ಲಬ್‌ಗಳನ್ನು ನೋಡಲು ಚೈನಾ ಟೌನ್‌ಗೆ ಹೋಗಿ. ಇಲ್ಲಿ 10 ಯೂರೋಗೆ ಹೋಟೆಲ್ ಸಿಗುತ್ತದೆ. ಪ್ರಾಗ್‌ ಇಲ್ಲಿ ತಂಗುವುದು ನಿಮ್ಮ ಬಜೆಟ್‌ಗೆ ಎಂದೂ ಹೊರೆಯಲ್ಲ. ನಡೆದಾಡುತ್ತಾ ಹೋಗಿಯೇ ಅನೇಕ ಸ್ಥಳಗಳನ್ನು ನೋಡಬಹುದು. ಇದು ಚೆಕ್‌ ರಿಪಬ್ಲಿಕ್‌ನ ಕ್ಯಾಪಿಟಲ್ ನಗರ. ಅದೇ ತರಹ ಸೆಂಟ್ರಲ್ ಯೂರೋಪಿನ ಸುಂದರ ನಗರ ಎನಿಸಿದೆ. ಓಲ್ಡ್ ಟೌನ್‌ ಸ್ಕ್ವೇರ್‌ಗಾಗಿ ಈ ಮೂಲಕ ಹೋಗಬಹುದು. ಬಣ್ಣ ಬಣ್ಣದ ಕಟ್ಟಡ, ಗಾಥಿಕ್‌ ಚರ್ಚ್‌, ಕಲ್ಲಿನ ಗಲ್ಲಿಗಳ ನಗರವಿದು. ಸಂಸ್ಕೃತಿ, ಶಾಂತಿಪ್ರಿಯತೆ, ಇತಿಹಾಸದ ಕುರಿತು ಆಸಕ್ತಿಯುಳ್ಳವರು ಇಲ್ಲಿ ಧಾರಾಳ ಎಂಜಾಯ್‌ ಮಾಡಬಹುದು.

ಸ್ಲೀನಿಯಾ ಈ ದೇಶದ ಹೆಸರಲ್ಲೇ ಲವ್ ಸೇರಿಕೊಂಡಿದೆ. ಇದೂ ಕೂಡ ಸೆಂಟ್ರಲ್ ಯೂರೋಪಿನ ಸುಂದರ, ಹಸಿರುಮಯ ನಗರ.  ಇದರ ರಾಜಧಾನಿ ಲಿಬಿಲಿಯಾನಾ ಅತಿ ಜನಪ್ರಿಯ ವಾಸಯೋಗ್ಯ ಹಾಗೂ ಹಸಿರಸಿರಿಯ ನಗರ ಎನಿಸಿದೆ. ಇಲ್ಲಿ ಮಾಲಿನ್ಯ ಇಲ್ಲವೇ ಇಲ್ಲ. ನೀವು ಲೋ ಬಜೆಟ್‌ ಯೂರೋಪ್‌ ಟ್ರಿಪ್‌ ಹೊರಟಾಗ, ಇಲ್ಲಿಗೆ ಅಗತ್ಯ ಬನ್ನಿ. ನೈಸರ್ಗಿಕ ರಮಣೀಯತೆಯೊಂದಿಗೆ ಈ ನಗರ ಅಗ್ಗದ ಖರ್ಚಿಗೂ ಪ್ರಸಿದ್ಧಿ. ವಾಕಿಂಗ್‌, ಸೈಕ್ಲಿಂಗ್‌ ಇಲ್ಲಿ ಜನಪ್ರಿಯ. ನೀವು ಪ್ರಕೃತಿಪ್ರಿಯರಾದರೆ ಇಲ್ಲಿ ಬೆಟ್ಟ, ಗುಡ್ಡ, ಝರಿ, ತೊರೆಗಳು, ಜೂಲಿಯನ್‌ ಆಲ್ಪ್ಸ್ ಇತ್ಯಾದಿಗಳ ದರ್ಶನ ಪಡೆಯಿರಿ.

ಅಥೇನ್ಸ್ (ಗ್ರೀಸ್‌)

ವಿಶ್ವದಲ್ಲಿ ಅಥೇನ್ಸ್ ನಷ್ಟು ಪ್ರಾಚೀನ ಐತಿಹಾಸಿಕ ನಗರ ಮತ್ತೊಂದಿಲ್ಲ. ಇದು ತತ್ವಶಾಸ್ತ್ರ ಕಲಿಯಲು ಮೂಲ ಕೇಂದ್ರ. ಇದನ್ನು ಕ್ರೇಡಲ್ ಆಫ್‌ ಡೆಮೋಕ್ರಸಿ, ಹೋಂ ಟು ಫಸ್ಟ್ ಥಿಯೇಟರ್‌ ಎಂದೂ ಕರೆಯುತ್ತಾರೆ. ಈಸ್ಟ್ ಯೂರೋಪ್‌ ತುಸು ಅಗ್ಗ. ಉದಾ : ಲಾತ್ವಿಯಾ, ಲಿಥ್ವೇನಿಯಾ, ಬಲ್ಗೇರಿಯಾ, ಕ್ರೊಯೇಶಿಯಾ, ರೊಮಾನಿಯಾ, ಚೆಕ್‌, ತಾಲಿನ್‌ (ಆ್ಯಸ್ಥೋನಿಯಾ), ಸೋಫಿಯಾ ಇತ್ಯಾದಿ.

ನಾರ್ಥ್‌ ವೆಸ್ಟ್ ಯೂರೋಪ್‌ ತುಸು ದುಬಾರಿ. ಉದಾ : ಫ್ರಾನ್ಸ್, ಜರ್ಮನಿ, ಸ್ವಿಟ್ಝರ್‌ಲ್ಯಾಂಡ್‌, ಬೆಲ್ಜಿಯಂ, ಡೆನ್ಮಾರ್ಕ್‌, ಇಂಗ್ಲೆಂಡ್‌, ನಾರ್ವೆ, ಸ್ವೀಡನ್‌ ಇತ್ಯಾದಿ. ಯೂರೋಪಿನ ಬಹುತೇಕ ದೇಶಗಳಲ್ಲಿ ನೋಡಲಿಕ್ಕೆ ಎಷ್ಟು ಪ್ರವಾಸಿ ತಾಣಗಳಿವೆ ಎಂದರೆ ನಿಮ್ಮ ಇಡೀ ವಾರ ಹಾಯಾಗಿ ಕಳೆದುಹೋಗುತ್ತದೆ. ಅಧಿಕವಾಗಿ ಈ ನಗರಗಳು ತೀರಾ ಸಮೀಪವಿದ್ದು, ನೀವು ಒಂದೇ ದಿನದಲ್ಲಿ ಎರಡೂರು ಸುತ್ತಬಹುದು. ಡೇ ಟ್ರಿಪ್‌ ಹೊರಟರೆ ನೀವು ಬೆಳಗ್ಗೆಯೇ ಇನ್ನೊಂದು ನಗರಕ್ಕೆ ಹೊರಡಿ, ಇಡೀ ದಿನ ಅಲ್ಲಿ ಕಳೆದು ನಿಮ್ಮ ಬೇಸ್‌ ನಗರಕ್ಕೆ ಮರಳಿರಿ. ಹೀಗೆ ಮಾಡುವುದರಿಂದ ನಿಮ್ಮ ಇಡೀ ಲಗೇಜ್‌ ಎತ್ತಿಕೊಂಡು ಸುತ್ತುವುದು ತಪ್ಪುತ್ತದೆ, ಹೋಟೆಲ್ ಬದಲಿಸುವ ಗೋಜಿಲ್ಲ.

– ಪೂರ್ಣಿಮಾ ಆನಂದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ