ಕೆಲವು ತಿಂಗಳುಗಳ ಹಿಂದೆ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಬಂದಿತ್ತು. ಒಬ್ಬ ವ್ಯಕ್ತಿ ತಾನು ಸಾಕಿದ ಗಿಳಿ ಸತ್ತು ಹೋಯಿತೆಂದು ಅದೆಷ್ಟು ದುಃಖಿತನಾದನೆಂದರೆ, ಅದಕ್ಕೆಂದೇ ಶವ ಪೆಟ್ಟಿಗೆ ತರಿಸಿ ಅದಕ್ಕೆ ಅಂತ್ಯಸಂಸ್ಕಾರ ಕೈಗೊಂಡ. ಅದರ ಆತ್ಮಕ್ಕೆ ಶಾಂತಿ ಸಿಗಲೆಂದು 13ನೇ ದಿನದಂದು ಅಕ್ಕಪಕ್ಕದ ಮನೆಯವರನ್ನು ಸಂಬಂಧಿಕರನ್ನು ಕರೆಸಿ ಹೋಮ ಹವನ ಹಾಗೂ ತಿಥಿ ಊಟದ ವ್ಯವಸ್ಥೆ ಮಾಡಿಸಿದ.

ಈ ಸುದ್ದಿ ಕೇಳಿದರೆ, ಗಿಳಿಯ ಮಾಲೀಕನಿಗೆ ಅದರ ಬಗ್ಗೆ ಅದೆಷ್ಟು ಪ್ರೀತಿ ಇರಬಹುದು ಎನಿಸುತ್ತದೆ. ಅವನೊಬ್ಬನೇ ಅದೆಲ್ಲ ವ್ಯವಸ್ಥೆಯನ್ನು ತನ್ನ ಸ್ವವಿಚಾರದಿಂದ ಮಾಡಿದ್ದಾನೆಂದು ಅನಿಸುವುದಿಲ್ಲ. ಧರ್ಮದ ಗುತ್ತಿಗೆದಾರರನ್ನು ಮೆಚ್ಚಿಸಲು ಹಾಗೂ ತನ್ನನ್ನು ತಾನು ಧರ್ಮದ ಬಗ್ಗೆ ಅತಿ ಅಭಿಮಾನವುಳ್ಳವ ಎಂದು ತೋರಿಸಿಕೊಳ್ಳಲು ಗಿಳಿಯ ಅಂತ್ಯಕ್ರಿಯೆ ಹಾಗೂ ಅದರ ತಿಥಿ ಕಾರ್ಯಕ್ರಮ ಮಾಡಿಕೊಂಡಿರಬಹುದು ಎನಿಸುತ್ತದೆ. ಈ ಕುರಿತಂತೆ ಅನೇಕರು ಅನೇಕ ಬಗೆಯ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ.

ಇಂಥ ಮೂಢನಂಬಿಕೆ ಏಕೆ?

ಎಷ್ಟೋ ಸಲ ಪಕ್ಷಿ ಹಾಗೂ ಪ್ರಾಣಿಗಾಗಿಯೂ ಜನರು ಹೀಗೆ ಮೂಢರಂತೆ ವರ್ತಿಸುತ್ತಾರೆ. ಕೆಲವು ಕಡೆ ಕೋತಿಗಳು ಸತ್ತಾಗ ಅದಕ್ಕೂ ಹೀಗೆ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ನಾಯಿ, ಎಮ್ಮೆಗಳು ಸತ್ತಾಗ ಹೀಗೆ ಮಾಡಲಾಗುವುದಿಲ್ಲ. ಅವು ಧರ್ಮಕ್ಕೆ ಸಂಬಂಧಪಟ್ಟಿಲ್ಲವೇ?

ಈ ಕುರಿತಂತೆ ಪದ್ಮಾ ಹೀಗೆ ಹೇಳುತ್ತಾರೆ, ``ಕೋತಿಯೊಂದು ಸತ್ತಾಗ ಮೆರವಣಿಗೆಯಲ್ಲಿ ಅದರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಇದರಲ್ಲಿ ಹೆಚ್ಚಿನವರು ಬೀದಿ ಬೀದಿ ಅಲೆಯುವ ಹುಡುಗರೇ ಆಗಿರುತ್ತಾರೆ. ಕೋತಿಯ ಶವಯಾತ್ರೆಯ ಮೂಲಕ ಅವರಿವರಿಂದ ಚಂದಾ ವಸೂಲಿ ಮಾಡಿ ತಮ್ಮ ಊಟತಿಂಡಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಹುಡುಗರು ಆ ರೀತಿ ಮಾಡಿದರೆ ತಾವು ಧರ್ಮಪ್ರವೃತ್ತಿಯವರು ಎಂದು ಕರೆಯಿಸಿಕೊಳ್ಳಬಹುದು ಎನ್ನುವುದು ಅವರ ಯೋಚನೆಯಾಗಿರುತ್ತದೆ.''

ಕೆಲವೊಂದು ಕಡೆ ತುಳಸಿ ವಿವಾಹದಂದು ಪುರೋಹಿತರು ತುಳಸಿಯನ್ನು ವಧುವೆಂದು ಹೇಳಿಕೊಂಡು ಆಭರಣ ಹಾಗೂ ಹಣ ವಸೂಲಿ ಕೂಡ ಮಾಡುತ್ತಾರೆ. ಹಣದ ಜೊತೆಗೆ ಊಟದ ವ್ಯವಸ್ಥೆ ಕೂಡ ಆಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ಧರ್ಮನಿಷ್ಠರೆಂದು ಕೆಲವರಿಗೆ ತೋರಿಸಿಕೊಳ್ಳಬೇಕಿರುತ್ತದೆ.

``ಸಾಕು ಪ್ರಾಣಿಗಳೊಂದಿಗೆ ಭಾವನಾತ್ಮಕ ಒಡನಾಟ ಬಹಳಷ್ಟು ಜನರಲ್ಲಿ ಇರುತ್ತದೆ. ಅಮೆರಿಕದಲ್ಲೂ ಜನರು ತಮ್ಮ ಪ್ರಾಣಿ ಸತ್ತಾಗ ತಿಂಗಳಾನುಗಟ್ಟಲೆ ದುಃಖಿತರಾಗಿರುತ್ತಾರೆ. ಆದರೆ ಅವರು ಜನರಿಗೆ ತೋರಿಸಲು ಈ ರೀತಿಯ ಮುಖವಾಡ ಧರಿಸುವುದಿಲ್ಲ,'' ಎಂದು ಅನುರಾಧಾ ಹೇಳುತ್ತಾರೆ.

ಸಿಂಚನಾ ಇಂತಹ ಘಟನೆಗಳನ್ನು ಕಪಟಿಗಳು ಹೆಣೆಯುವ ಜಾಲ ಎಂದು ಹೇಳುತ್ತಾರೆ. ನಮ್ಮ ದೇಶ ಮೂಢನಂಬಿಕೆಗಳಿಂದ ತುಂಬಿ ಹೋಗಿದೆ. ಜನ ಅದರೊಳಗೆ ಹೇಗೆ ಸೇರಿಹೋಗಿದ್ದಾರೆಂದರೆ, ಅದರಿಂದ ಹೊರ ಬರುವುದು ಅವರಿಗೆ ಕಷ್ಟ ಆಗಿಬಿಟ್ಟಿದೆ. ಜನರ ಮನಸ್ಸಿನ ಮೇಲೆ ಈ ಪೂಜಾರಿ-ಪುರೋಹಿತರು, ಬಾಬಾಗಳು ಹೇಗೆ ಮೋಡಿ ಮಾಡಿಬಿಟ್ಟಿದ್ದಾರೆಂದರೆ, ಅವರ ವಿರುದ್ಧ ಯಾರಾದರೂ ಚಕಾರ ಎತ್ತಿದರೆ ಸಾಕು, ಅಂಥವರನ್ನು ನಾಸ್ತಿಕ ಹಾಗೂ ಹುಚ್ಚ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ.

``ಅಂದಹಾಗೆ ನಾವು ಮೃತದೇಹವನ್ನು ಹೂಳುತ್ತೇವೆ, ಇಲ್ಲವೇ ಸುಡುತ್ತೇವೆ. ಇದಕ್ಕೆ ಮುಖ್ಯ ಕಾರಣ ಮೃತದೇಹದಿಂದ ರೋಗಾಣುಗಳು ಹರಡದಂತೆ ತಡೆಯುವುದಾಗಿರುತ್ತದೆ. ಅದು ಒಳ್ಳೆಯ ವಾತಾವರಣಕ್ಕೆ ಅತ್ಯವಶ್ಯಕ. ಆದರೆ ಪಂಡಿತ-ಪುರೋಹಿತರು ಈ ಸ್ವಚ್ಛತೆಯ ಪ್ರಕ್ರಿಯೆಯನ್ನು ಅನೇಕ ಆಡಂಬರಗಳಿಗೆ ಹಾಗೂ ಪರಂಪರೆಯ ಹೊದಿಕೆ ಹೊದಿಸಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ