ಹಿಂದೆಲ್ಲ ಚಿಕ್ಕ ಹಾಗೂ ದೊಡ್ಡ ಮನೆಗಳಿಗಾಗಿ ಬಜೆಟ್ಗೆ ತಕ್ಕಂತೆ ಇಂಟೀರಿಯರ್ ಬೇರೆ ಬೇರೆ ಆಗಿರುತ್ತಿತ್ತು, ರೂಪುರೇಷೆ ಭಿನ್ನವಾಗಿರುತ್ತಿತ್ತು. ಆದರೆ ಈಗ ಬಜೆಟ್ಗೆ ಬದಲಾಗಿ ಕೇವಲ ಜಾಗಕ್ಕೆ ಮಾತ್ರ ಪ್ರಾಶಸ್ತ್ಯ ಕೊಡಲಾಗುತ್ತಿದೆ. 1-2 ನೂರು ಚದರಡಿಯ ಸಣ್ಣ ಮನೆಯಲ್ಲಿ ಕಿಚನ್ ರೂಪುಗೊಳ್ಳುತ್ತದೆ. ಇಂಥ ಆಧುನಿಕ ಅಡುಗೆಮನೆಗಳಲ್ಲಿ ಹೊಸ ಝಮಾನಾದ ಮಾಡ್ಯುಲರ್ ಕಿಚನ್ನಿನ ಫಿಟಿಂಗ್ ಬಳಸಲ್ಪಡುತ್ತದೆ. ವ್ಯತ್ಯಾಸ ಇಷ್ಟೆ, ಅಗತ್ಯ ಮತ್ತು ಬಜೆಟ್ಗೆ ತಕ್ಕಂತೆ ಇಂಟೀರಿಯರ್ಗೆ ಅನ್ವಯಿಸುವ ಸಾಮಗ್ರಿಯ ಗಾತ್ರದಲ್ಲಿ ಅಂತರ ಇರುತ್ತದೆ. ಕಡಿಮೆ ಬಜೆಟ್ನಲ್ಲಿ ಗ್ರಾನೈಟ್ ಬಳಸಲ್ಪಟ್ಟರೆ, ಹೆವಿ ಬಜೆಟ್ನಲ್ಲಿ ಕೊರಿಯರ್ ಸಿಂಥೆಟಿಕ್ ಬಳಸಲಾಗುತ್ತದೆ.
ವಿಷಯ ಕೇವಲ ಕಿಚನ್ಗೆ ಮಾತ್ರ ಸಂಬಂಧಿಸದೆ ಬಾತ್ರೂಮ್, ಬೆಡ್ರೂಮ್, ಲಾಬಿ, ಟೆರೇಸ್, ಲಾನ್ ಇತ್ಯಾದಿ ಎಲ್ಲವನ್ನೂ ಒಳಗೊಂಡಿರುತ್ತದೆ.
ಈ ಕುರಿತಾಗಿ ತಜ್ಞರ ಅಭಿಪ್ರಾಯವೆಂದರೆ, ಈಗೀಗ ಎಲ್ಲಾ ಹೊಸ ಮನೆಗಳಲ್ಲೂ ಇಂಟೀರಿಯರ್ ಕೆಲಸಗಳು ಹೆಚ್ಚುತ್ತಿವೆ. ಕಾಲಕ್ಕೆ ತಕ್ಕಂತೆ ಮನೆ ಕಟ್ಟಲು ಉತ್ತಮ ಟೆಕ್ನಾಲಜಿ ಹಾಗೂ ಅದರಲ್ಲಿ ಬಳಸುವ ಸಾಮಗ್ರಿ ಸುಲಭವಾಗಿ ಸಿಗುತ್ತಿವೆ.
ಟೆಕ್ನಾಲಜಿಯಿಂದ ಸಮೃದ್ಧ ಇಂಟೀರಿಯರ್
ಸಣ್ಣ ಮನೆ ಮಾತ್ರವಲ್ಲ, ದೊಡ್ಡ ಮನೆಗಳಲ್ಲೂ ಈಗ ಹೆಚ್ಚಾಗಿ ಓಪನ್ ಸ್ಪೇಸ್ ಬಿಡುವ ಪರಿಪಾಠ ಬೆಳೆಯುತ್ತಿದೆ. ಇದರಿಂದ ಲಾಭ ಎಂದರೆ, ಮೊದಲನೆಯದಾಗಿ, ಮನೆ ಕಟ್ಟುವಿಕೆಯ ಒಟ್ಟಾರೆ ಖರ್ಚು ಕಡಿಮೆ ಆಗುತ್ತದೆ. ಮತ್ತೊಂದು, ಮನೆಯೊಳಗೆ ಗೃಹೋಪಕರಣಗಳನ್ನು ಜೋಡಿಸಿಟ್ಟುಕೊಳ್ಳುವಲ್ಲಿಯೂ ಹೆಚ್ಚಿನ ತೊಂದರೆ ಇಲ್ಲ. ಓಪನ್ ಸ್ಪೇಸ್ನ ದೊಡ್ಡ ಲಾಭ ಎಂದರೆ, ಭವಿಷ್ಯದ ಅಗತ್ಯಗಳಿಗಾಗಿ ನಿಮ್ಮ ಬಳಿ ಓಪನ್ ಸ್ಪೇಸ್ ಇದ್ದೇ ಇರುತ್ತದೆ. ಇದರಲ್ಲಿ ಬದಲಿಸುತ್ತಿರುವ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸತನ್ನು ಮಾಡಿಕೊಳ್ಳಬಹುದು.
ಹೊಸ ಝಮಾನದ ಇಂಟೀರಿಯರ್ನಲ್ಲಿ ಜನ ನವೀನ ಟೆಕ್ನಾಲಜಿ ಮತ್ತು ಆ್ಯಂಟಿಕ್ ಲುಕ್ಸ್ ಬಯಸುತ್ತಾರೆ. ಓಪನ್ ಲಾನ್ನಲ್ಲಿ ಒಂದು ಕಡೆ ಜನ ಹಿಲ್ಸ್ ಲುಕ್ ಕೊಡುವ ಫೌಂಟೆನ್ ವ್ಯೂವ್ ವರ್ಕ್ ಬಯಸಿದರೆ, ಮತ್ತೊಂದೆಡೆ ಗಾಜಿನಿಂದ ರೂಪುಗೊಂಡ ಹಿನ್ನೆಲೆ ಹಾಗೂ ಅದರಲ್ಲಿರುವ ಅನುಕೂಲಗಳನ್ನು ಬಯಸುತ್ತಾರೆ.
ಇದೇ ತರಹ ಆಧುನಿಕ ಅಡುಗೆಮನೆಯಲ್ಲಿ ಮಾಡ್ಯುಲರ್ ಕಿಚನ್ ಜೊತೆಯಲ್ಲೇ ಆ್ಯಂಟಿಕ್ ಲುಕ್ಸ್ ಇರಲಿ ಎಂದೂ ಬಯಸುತ್ತಾರೆ. ಮನೆಯ ಪ್ರತಿ ಮೂಲೆ ಮೂಲೆಯೂ ಕ್ಯಾಮೆರಾಗೆ ಎಟುಕುವಂತಿರಬೇಕು. ಬೆಂಕಿ ಆಘಾತ ತಪ್ಪಿಸುವ ಸಿಸ್ಟಮ್ ಇರಬೇಕು. ಇತ್ತೀಚೆಗಂತೂ ಜನ ಮನೆಯ ಇಂಟೀರಿಯರ್ಸ್ ಸಹ ಹೋಟೆಲ್ನಂತಿರಲಿ ಎಂದು ಬಯಸುತ್ತಾರೆ. ಇಂಥದ್ದರಲ್ಲಿ ಟೆಕ್ನಾಲಜಿ ಆ್ಯಂಟಿಕ್ ಲುಕ್ಸ್ ಹೊಂದಾಣಿಕೆಗಳು ಆಧುನಿಕ ಒಳಾಲಂಕಾರದ ವೈಶಿಷ್ಟ್ಯಗಳೆನಿಸುತ್ತಿವೆ.
ಕೆಲಸ ಹೆಚ್ಚು ಜಾಗ ಕಡಿಮೆ
ಇಂಟೀರಿಯರ್ನಲ್ಲಿ ಎಲ್ಲಕ್ಕಿಂತಲೂ ಹೆಚ್ಚಿನ ಗಮನವನ್ನು ಕಡಿಮೆ ಜಾಗದಲ್ಲೇ ಹೆಚ್ಚಿನ ಜಾಗವಿದೆ ಎಂಬ ಭ್ರಮೆ ಬರಿಸುವ ಯತ್ನ ನಡೆಸಲಾಗುತ್ತಿದೆ, ಹಾಗೆ ಅಲಂಕರಿಸಿರುತ್ತಾರೆ.
ಹಳೆಯ ಲುಕ್ಸ್ ನ್ನು ಲೋ ಬಜೆಟ್ನಲ್ಲಿ ಹೊಸದಾಗಿ ಹೇಗೆ ತೋರಿಸುವುದು ಎಂದು ನೀವು ಯೋಚಿಸುತ್ತಿದ್ದೀರಾ? ಇತ್ತೀಚೆಗೆ ಮನೆಗಳ ಇಂಟೀರಿಯರ್ನಲ್ಲಿ ವಾಲ್ಪೇಪರ್ ಬಳಕೆ ಹೆಚ್ಚುತ್ತಿದೆ. ಇದರಲ್ಲಿ ಥೀಮ್ ಬೇಸ್ಡ್ ವಾಲ್ ಪೇಪರ್ ಹೆಚ್ಚು ಬಳಕೆಯಲ್ಲಿದೆ. ಕೆಲವು ವಾಲ್ ಪೇಪರ್ಸ್ ಕಸ್ಟಮೈಸ್ಡ್ ಆಗುತ್ತಿದೆ. ಇದರಲ್ಲಿ ನೀವು ನಿಮ್ಮಿಷ್ಟದ ಡಿಸೈನ್, ಕೊಟೇಶನ್ ಅಥವಾ ಯಾವುದೇ ವಿಶಿಷ್ಟ ಸಂದರ್ಭದ ನಿಮ್ಮ ಫೋಟೋ ಸಹ ಪ್ರಿಂಟ್ ಮಾಡಿಸಬಹುದು. ಹಿಂದೆಲ್ಲ ಹೊಸ ಮನೆ ಗೃಹಪ್ರವೇಶ, ಮನೆಯಲ್ಲಿ ಮದುವೆ, ಮುಂಜಿಯಂಥ ಶುಭ ಸಮಾರಂಭ ಇರುವಾಗ ಮನೆಯ ಲುಕ್ಸ್ ಬದಲಿಸಲು ಇಂಟೀರಿಯರ್ಗೆ ಮೊರೆಹೋಗುತ್ತಿದ್ದರು.
ಆದರೆ ಈಗ ಕೇವಲ ವಾಲ್ಪೇಪರ್ಗಳನ್ನು ಬದಲಾಯಿಸಿಯೇ ಹೊಸ ಲುಕ್ಸ್ ಒದಗಿಸುತ್ತಾರೆ. ಇದಕ್ಕಾಗಿ ಒಂದು ಗೋಡೆಯನ್ನು ಖಾಲಿ ಬಿಡಲಾಗುತ್ತದೆ. ಇದರ ಮೇಲೆ ವಾಲ್ ಪೇಪರ್ ಬದಲಿಸುವುದರಿಂದ ಇಡೀ ಕೋಣೆಯಲ್ಲಿ ಹೊಸ ಲುಕ್ಸ್ ನ ಅನುಭವ ಮೂಡುತ್ತದೆ. ಬಜೆಟ್ ಮತ್ತು ಇತರೆ ಕಷ್ಟಗಳನ್ನು ಗಮನಿಸಿದಾಗ, ವಾಲ್ಪೇಪರ್ ಬದಲಾವಣೆಯಿಂದ ಎಷ್ಟೋ ಖರ್ಚು ಉಳಿಯುತ್ತದೆ, ಯಾವುದೇ ತೊಂದರೆ, ಟೆನ್ಶನ್ ಇರುವುದಿಲ್ಲ.
ಕಿಚನ್, ಬೆಡ್ರೂಮ್, ಲಾಬಿಯಲ್ಲೂ ಸಹ ಗ್ಲಾಸ್ನ ಗೋಡೆ ಬಳಸಲಾಗುತ್ತದೆ. ಇದರಿಂದ ಜಾಗ ದೊಡ್ಡದಾಗಿರುವಂತೆಯೂ, ಅಗತ್ಯದ ಪ್ರೈವೆಸಿಯೂ ಸಿಗುತ್ತದೆ. ಗ್ಲಾಸ್ ಗೋಡೆಗಳಿಗೆ ಪರದೆ ಇಳಿಬಿಡುವುದರಿಂದ ಪ್ರೈವೆಸಿ ಉಳಿದುಕೊಳ್ಳುತ್ತದೆ. ಗ್ಲಾಸ್ ಗೋಡೆಗಳಿಂದಾಗಿ ಮುಕ್ತತೆ (ಓಪನ್ನೆಸ್) ಎದ್ದು ಕಾಣುತ್ತದೆ, ಹೊರಗೆ ಲಾನ್ನಲ್ಲಿ ಗಿಡಮರ ಬೆಳೆಸುವುದರಿಂದ ಹಸಿರು ವಾತಾವರಣ ಹೆಚ್ಚಿನ ಬ್ಯೂಟಿ ಒದಗಿಸುತ್ತದೆ.
ಎಷ್ಟೋ ಸಲ ಜನ ಕೃತಕ ಹುಲ್ಲು, ಗಿಡಗಂಟಿಗಳನ್ನೂ ಅಲಂಕಾರಕ್ಕಾಗಿ ಬಳಸುತ್ತಾರೆ. ಇದನ್ನು ಗಾಜಿನ ಗೋಡೆಗಳಿಂದ ನೋಡುವ ಆನಂದವೇ ಬೇರೆ. ಇಂದು ಇಂಟೀರಿಯರ್ನಲ್ಲಿ ಎಲ್ಲ ತರಹದ ವಸ್ತುಗಳೂ ಅಡಗಿರುತ್ತವೆ. ಇಂಟೀರಿಯರ್ ಇದೀಗ ಸ್ಟೇಟಸ್ ಸಿಂಬಲ್ ಎಂದೇ ಹೇಳಬಹುದು.
– ಶೈಲಜಾ ಸುಧೀರ್
ಯೂನಿಕ್ ಡಿಸೈನ್ಸ್ ನಲ್ಲಿ ಹೊಸ ಪ್ರಯೋಗ
ಇಂಟೀರಿಯರ್ನಲ್ಲಿ ಈಗೀಗ ಎಲ್ಲಾ ಕಡೆ ಮೂಡ್ ಲೈಟ್ಸ್ ಪ್ರಯೋಗ ಹೆಚ್ಚುತ್ತಿವೆ. ನಮ್ಮ ಮೂಡ್ನ್ನು ಸರಿಪಡಿಸಿ, ಸಂತಸ ಹೆಚ್ಚಿಸುವಂಥ ಲೈಟ್ಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ.
ಮಕ್ಕಳ ಕೋಣೆಯಲ್ಲಂತೂ ಅವರ ಹಾಸಿಗೆ ಆಟಿಕೆಗಳ ರೂಪ ಪಡೆದಿರುತ್ತವೆ. ಕೋಣೆಯ ಅಲಂಕಾರ ಮತ್ತು ಬಣ್ಣದಲ್ಲಿ ಹೆಣ್ಣುಮಕ್ಕಳು, ಗಂಡುಮಕ್ಕಳ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ವಾರ್ಡ್ರೋಬ್ಗಳು ಹೇಗಿರುತ್ತವೆಂದರೆ, ಬೇರೆ ಬೇರೆ ತರಹದ ಬಟ್ಟೆಗಳಿಗೆ ಬೇರೆ ಬೇರೆ ತರಹದ ರಾಕ್ಗಳು! ಅವನ್ನು ಬಳಸುವಲ್ಲಿ ಕಷ್ಟಗಳಿಲ್ಲ.
ಸೆಂಟ್ರಲ್ ಲಾಕ್ ಇರುವಂಥದ್ದೇ ಹೆಚ್ಚು ಬಳಕೆಗೆ ಬರುತ್ತಿದೆ, ಹಾಗಾಗಿ ಇದನ್ನು ಕೋಣೆಯ ಯಾವ ಮೂಲೆಯಿಂದಾದರೂ ನಿಯಂತ್ರಿಸಬಹುದು.
ಕಿಚನ್ನಲ್ಲಿ ಟಾಪ್ ಲೆವೆಲ್ನಲ್ಲಿ ಕ್ಯಾಬಿನೆಟ್ ಬಳಕೆಯಿದೆ. ಇದು ಜಾಗ ಸೇವ್ ಮಾಡುತ್ತದೆ.
ಬಾತ್ರೂಮಿನಲ್ಲಿ ವಾಷ್ಬೇಸಿನ್ ತುಸು ಟಾಪ್ಗೆ ಏರಿದೆ, ಆಗ ಮುಕ್ತ ವಾತಾವರಣ ಹೆಚ್ಚಾಗುತ್ತದೆ.
ಬಾತ್ ಟಬ್ನಲ್ಲಿ ಜಾಕೂಝಿ ಬಳಕೆ ಹೆಚ್ಚುತ್ತಿದೆ. ಇದರಲ್ಲಿ ಕಾರಂಜಿ ಹಲವು ಬಗೆಯದಾಗಿವೆ, ಇದು ಸಣ್ಣ ದೊಡ್ಡ ಹನಿಗಳಿಂದಾಗಿ ವಿಭಿನ್ನ ಅನುಭವ ನೀಡುತ್ತದೆ.
ಗೀಸರ್ ಲುಕ್ ಬದಲಾಯಿಸಲು ಅದನ್ನು ಬೇರೆಯದಾಗಿ ಅಳವಡಿಸಲಾಗುತ್ತಿದೆ. ಇದಕ್ಕೆ ಸೋಲಾರ್ ಎನರ್ಜಿ ಹೆಚ್ಚು ಬಳಕೆ ಆಗುತ್ತಿದೆ.
ಮನೆಯಲ್ಲಿ ಜಿಮ್ ಗಾಗಿ ಪ್ರತ್ಯೇಕ ಜಾಗ ಸಿಗುತ್ತಿದೆ.