ದೊಡ್ಡ ಮನೆಯಲ್ಲಿ ವಾಸಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಎಲ್ಲರ ಕನಸು ಈಡೇರುವುದಿಲ್ಲ. ಹೀಗಿರುವಾಗ ಚಿಕ್ಕ ಮನೆಯನ್ನೂ ಸೌಂದರ್ಯದೊಂದಿಗೆ ವ್ಯವಸ್ಥಿತವಾಗಿರಿಸಿ ದೊಡ್ಡದಾಗಿ ಮಾಡಬಹುದಾಗಿದೆ. ಬನ್ನಿ, ಬೋನಿತಾದ ಬ್ರ್ಯಾಂಡ್‌ ಡೈರೆಕ್ಟರ್‌ ವಿನೀತಾರಿಂದ ಚಿಕ್ಕ ಮನೆಗಳನ್ನು ಅಲಂಕರಿಸುವ ವಿಧಾನಗಳನ್ನು ತಿಳಿಯೋಣ :

ನಿರುಪಯೋಗಿ ವಸ್ತುಗಳನ್ನು ಡಂಪ್‌ ಮಾಡಿ

ಬಹಳ ಕಾಲ ಯಾವ ವಸ್ತುಗಳನ್ನು ಉಪಯೋಗಿಸುವುದಿಲ್ಲವೋ ಅವನ್ನು ಡಂಪ್‌ ಮಾಡಿಬಿಡಿ. ಈಗ ನಾವು ಉಪಯೋಗಿಸದೆ ಇರುವ ವಸ್ತುಗಳು ಮುಂದೆ ಎಂದಾದರೂ ಉಪಯೋಗಕ್ಕೆ ಬರಬಹುದು ಎಂದು ಯೋಚಿಸಿ ಅನೇಕ ನಿರುಪಯೋಗಿ ವಸ್ತುಗಳನ್ನು ತಿಂಗಳುಗಟ್ಟಲೇ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಅವು ಎಂದೂ ಉಪಯೋಗಕ್ಕೆ ಬರುವುದೇ ಇಲ್ಲ.

ಅಂತಹ ನಿರುಪಯೋಗಿ ವಸ್ತುಗಳನ್ನು ಆದಷ್ಟು ಬೇಗ ಹೊರಗೆ ಹಾಕಿ. ನಿಮ್ಮ ಬಳಿ ಯಾರೂ ಉಪಯೋಗಿಸದೆ ಇರುವ ಕಾರ್ನರ್‌ ಟೇಬಲ್ ಚೇರ್‌ ಅಥವಾ ಬುಕ್‌ ಶೆಲ್ಫ್ ಇದ್ದರೆ ಅವನ್ನು ಕೂಡಲೇ ಡಿಸ್‌ಪೋಸ್‌ ಮಾಡಿ. ಆಗ ಮನೆಯಲ್ಲಿ ಬೇರೆ ಅಗತ್ಯ ವಸ್ತುಗಳಿಗೆ ಜಾಗ ಸಿಗುತ್ತದೆ.

ಬಣ್ಣಗಳ ಸರಿಯಾದ ಆಯ್ಕೆ

ಮನೆ ದೊಡ್ಡದಾಗಿ ಕಾಣಿಸಲು ಗೋಡೆಗಳ ಮೇಲೆ ತೆಳು ಬಣ್ಣದ ಪೇಂಟಿಂಗ್‌ ಮಾಡಿಸಿ. ಗಾಢಬಣ್ಣದ ಪೇಂಟ್‌ನಿಂದ ಕೋಣೆಯಲ್ಲಿ ಲೈಟ್‌ನ ರಿಫ್ಲೆಕ್ಷನ್‌ ಆಗುವುದಿಲ್ಲ. ಹೀಗಾಗಿ ಕೋಣೆ ತನ್ನ ನಿಜವಾದ ಗಾತ್ರಕ್ಕಿಂತ ಚಿಕ್ಕದಾಗಿ ಕಾಣಿಸುತ್ತದೆ. ಬಿಳಿ, ಕ್ರೀಮಿ ಅಥವಾ ಐಸ್‌ ಬ್ಲೂ ಪೇಂಟ್‌ ನಿಮ್ಮ ಚಿಕ್ಕ ಕೋಣೆಯನ್ನು ದೊಡ್ಡದಾಗಿ ಕಾಣಿಸುತ್ತದೆ.

ಇನೋವೇಟಿವ್‌ ಸ್ಪೇಸ್‌ ಸೇವಿಂಗ್‌

ಮನೆಯ ಸ್ಪೇಸ್‌ನ್ನು ಇನ್ನೂ ಉತ್ತಮ ರೀತಿಯಲ್ಲಿ ಉಪಯೋಗಿಸುವ ವಿಧಾನವೆಂದರೆ ಇನೋವೇಟಿವ್‌ ಸ್ಪೇಸ್‌ ಸೇವಿಂಗ್‌ ಸಲ್ಯೂಶನ್‌. ಈ ವಿಧಾನದಲ್ಲಿ ಕೆಲವೇ ಜನರು ಯೋಚಿಸಿರುವಂತಹ ಮನೆಯ ಭಾಗಗಳಲ್ಲಿ ವಸ್ತುಗಳನ್ನು ಇಡಬಹುದು. ಉದಾಹರಣೆಗೆ ಮನೆಯ ಗೋಡೆಗಳು ಮತ್ತು ಖಾಲಿ ಟೆರೇಸ್‌.

ಈ ವಿಧಾನಗಳಿಂದ ಬೇರೆ ಬೇರೆ ಲೋಕೇಶನ್‌ಗಳಲ್ಲಿ ವಿಶೇಷ ರೀತಿಯ ಪ್ರಾಡಕ್ಟ್ ಮೂಲಕ ವಸ್ತುಗಳನ್ನು ಸೆಟ್‌ ಮಾಡಬಹುದು. ಅದರಿಂದ ನಿಮ್ಮ ಮನೆ ಸ್ವಚ್ಛವಾಗಿ, ದೊಡ್ಡದಾಗಿ ಕಾಣಿಸುವುದಲ್ಲದೆ, ಮನೆಯ ನಾಲ್ಕೂ ಕಡೆ ಹರಡಿಕೊಂಡಿರುವ ವಸ್ತುಗಳೂ ವ್ಯವಸ್ಥಿತಗೊಳ್ಳುತ್ತವೆ.

ಸ್ಮಾರ್ಟ್‌ ಯುಟಿಲಿಟಿ ಪ್ರಾಡಕ್ಟ್

ನಿಮ್ಮ ಮನೆಯಲ್ಲಿ ಹೆಚ್ಚು ಜಾಗ ಪಡೆದುಕೊಳ್ಳಲು ಅನೇಕ ರೀತಿಯ ಉತ್ಪನ್ನಗಳಿವೆ. `ಬೊನಿತಾ' ಸ್ಪೇಸ್‌ ಸೇವಿಂಗ್‌ ಪ್ರಾಡಕ್ಟ್ಸ್ ಬಗ್ಗೆ ಮಾರ್ಕೆಟ್‌ ಲೀಡರ್‌ ಎಂದು ಪ್ರಸಿದ್ಧವಾಗಿದೆ. ಬೊನಿತಾದ ಪೋರ್ಟ್‌ಪೋಲಿಯೊದಲ್ಲಿ ಇರುವ ಅನೇಕ ಪ್ರಾಡಕ್ಟ್ ಗಳನ್ನು ವಾಶಿಂಗ್‌ ಮೆಶಿನ್‌ ಮೇಲೆ ಬಳಕೆಯಾಗದೆ ವೇಸ್ಟ್ ಆಗುತ್ತಿದ್ದ ಜಾಗದಲ್ಲಿ ಇಡಬಹುದು. ಹೀಗೆಯೇ ಫೋಲ್ಡಿಂಗ್‌ ವಾರ್ಡ್‌ರೋಬ್‌ನಲ್ಲೂ ನೀವು ಹೆಚ್ಚಿನ ಜಾಗ ಪಡೆಯಬಹುದು.

ಸ್ಪೇಸ್‌ ಇಲ್ಯೂಶನ್‌ಗಾಗಿ ಕನ್ನಡಿಯ ಬಳಕೆ

ಮನೆಯಲ್ಲಿ ಜಾಗ ಕಡಿಮೆ ಇದ್ದು ನೀವು ಮನೆಯನ್ನು ದೊಡ್ಡದಾಗಿ ಕಾಣಿಸಬೇಕೆಂದಿದ್ದರೆ ಅದಕ್ಕೆ ಮನೆಯ ಗೋಡೆಗಳ ಮೇಲೆ ಕನ್ನಡಿಗಳನ್ನು ಅಳವಡಿಸಿ. ಅವುಗಳಿಂದ ಬೆಳಕು ರಿಫ್ಲೆಕ್ಟ್ ಆಗಿ ಇಮೇಜ್‌ ಉಂಟಾಗುತ್ತದೆ. ಅದರಲ್ಲಿ ಕೋಣೆಯ ಆಕಾರ ದೊಡ್ಡದಾಗಿ ಕಂಡುಬರುತ್ತದೆ. ಇದೂ ಒಂದು ರೀತಿಯ ಕ್ರಿಯೇಟಿವಿಟಿ ಆಗಿದೆ.

- ಕೆ. ಶರಣ್ಯಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ