ಸಾಮಗ್ರಿ : ಒಂದಿಷ್ಟು ಉದ್ದಿನ ಬೇಳೆಯ ಸಂಡಿಗೆ, ಆಲೂ, ಬದನೆ, ಮೂಲಂಗಿ, ಹಾಗಲ, ಬೀನ್ಸ್, ಕ್ಯಾರೆಟ್‌, ಬಾಳೆ, ನುಗ್ಗೇಕಾಯಿ (ಎಲ್ಲಾ ಹೆಚ್ಚಿದ್ದು ತಲಾ ಅರ್ಧರ್ಧ ಕಪ್‌), ಒಗ್ಗರಣೆಗೆ ಎಣ್ಣೆ, ಕ/ಉ ಬೇಳೆ, ಇಂಗು, ಕರಿಬೇವು, ತುಂಡರಿಸಿದ ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಪ.ಬಂಗಾಳದ ಪಂಚರತ್ನ ಮಸಾಲ (ರೆಡಿಮೇಡ್‌ ಲಭ್ಯ), ಶುಂಠಿ ಪೇಸ್ಟ್, ತೆಂಗಿನ ಪೇಸ್ಟ್, ಪಲಾವ್ ‌ಎಲೆ, 2 ಚಮಚ ಸಕ್ಕರೆ, ಕದಡಿದ ಕಾದಾರಿದ ಹಾಲು, 2 ಚಿಟಕಿ ಅರಿಶಿನ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದರಲ್ಲಿ ಉದ್ದಿನ ಸಂಡಿಗೆ ಕರಿದು ತೆಗೆದಿಡಿ. ನಂತರ ಇದರಲ್ಲಿ ಬಿಲ್ಲೆಗಳಾಗಿಸಿದ ಹಾಗಲ, ನಂತರ ಬಾಳೇಕಾಯಿ ಹೋಳು ಹಾಕಿ ಕರಿದು ತೆಗೆಯಿರಿ. ಆಮೇಲೆ ಇಂಗು, ಪಲಾವ್ ‌ಎಲೆ, ಕರಿಬೇವಿನ ಸಮೇತ ಒಗ್ಗರಣೆ ಕೊಟ್ಟು ಒಂದಂದಾಗಿ ಎಲ್ಲಾ ತರಕಾರಿ ಹಾಕಿ ಬಾಡಿಸಿಕೊಳ್ಳಿ. ತರಕಾರಿ ಸುಮಾರು ಬೆಂದಿದೆ ಎನಿಸಿದಾಗ, ಉಪ್ಪು, ಖಾರ, ಅರಿಶಿನ, ಮಸಾಲೆಗಳನ್ನು ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ನಂತರ ಇದಕ್ಕೆ ಹಾಗಲ, ಬಾಳೇಕಾಯಿ ಹೋಳು ಸೇರಿಸಿ ಬಾಡಿಸಿ. ಆಮೇಲೆ ಸಕ್ಕರೆ, ತೆಂಗಿನ ಪೇಸ್ಟ್, ಶುಂಠಿ ಪೇಸ್ಟ್ ಎಲ್ಲಾ ಬೆರೆಸಿ ಮಂದ ಉರಿಯಲ್ಲಿ ಗ್ರೇವಿ ಕುದಿಸಿರಿ. ಗ್ರೇವಿ ಕುದ್ದು ಸಾಕಷ್ಟು ಗಟ್ಟಿಯಾದಾಗ ಮೇಲೆ ಸಂಡಿಗೆ ಉದುರಿಸಿ, ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ಕೊಡಿ.

ತೊಂಡೆಕಾಯಿ ಸ್ಪೆಷಲ್

ಸಾಮಗ್ರಿ : 500 ಗ್ರಾಂ ತಾಜಾ ತೊಂಡೆಕಾಯಿ, 100 ಗ್ರಾಂ ಪನೀರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪಂಚರತ್ನ ಮಸಾಲೆ,  ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಒಣ ಮೆಣಸು, 2 ಸೌಟು ಎಣ್ಣೆ.

ವಿಧಾನ : ತೊಂಡೆಕಾಯಿ ಇಡಿಯಾಗಿರಿಸಿಕೊಂಡು, ಅದರ ತಿರುಳು ತೆಗೆದು ಟೊಳ್ಳಾಗಿಸಿ, ಸೀಳಬಾರದು. ಒಂದು ಬಾಣಲೆಯಲ್ಲಿ ಮೊದಲು ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ, ಮಸಾಲೆ, ಸಕ್ಕರೆ ಎಲ್ಲಾ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ತೊಂಡೆಕಾಯಿ ತಿರುಳು, ಮಸೆದ ಪನೀರ್‌ ಸಹ ಹಾಕಿ ಕೈಯಾಡಿಸಿ. 2 ನಿಮಿಷ ಬಿಟ್ಟು ಇದನ್ನು ಕೆಳಗಿಳಿಸಿ, ತಣಿದ ನಂತರ ಪ್ರತಿ ಟೊಳ್ಳಾದ ಕಾಯಿಗೂ ತುಂಬಿಸಿ. ಉಳಿದ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಇವನ್ನು ಕರಿಯಿರಿ. ನಂತರ ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು ಉಳಿದ ಮಸಾಲೆ, ತುಂಡರಿಸಿದ ಒಣ ಮೆಣಸು, ಉಪ್ಪು, ಸಕ್ಕರೆ, ಮಸೆದ ಪನೀರ್‌ ಹಾಕಿ ಬಾಡಿಸಿ. ಅದಕ್ಕೆ ಕರಿದ ತೊಂಡೆ ಸೇರಿಸಿ, ಬಾಡಿಸಿ ಕೆಳಗಿಳಿಸಿ. ಇದೀಗ ತೊಂಡೆಕಾಯಿ ಸ್ಪೆಷಲ್ ರೆಡಿ! ಚಪಾತಿ, ದೋಸೆ, ಅನ್ನದ ಜೊತೆ ಸವಿಯಲು ಕೊಡಿ.

cookry-page-2

ಬಂಗಾಳದ ಪತ್ರೋಡೆ

ಮೂಲ ಸಾಮಗ್ರಿ : 3 ಕಪ್‌ ಕಡಲೆಹಿಟ್ಟು, 10-12 ಅಗಲದ ಮೂಲಂಗಿ/ಪಾಲಕ್‌ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಓಮ, ಕರಿಯಲು ಎಣ್ಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ