ಟೇಸ್ಟಿ ಹಾಗಲಕಾಯಿ ಸ್ಪೆಷಲ್
ಸಾಮಗ್ರಿ : 500 ಗ್ರಾಂ ಹಾಗಲಕಾಯಿ, 100 ಗ್ರಾಂ ಗೋಡಂಬಿ, 250 ಗ್ರಾಂ ಈರುಳ್ಳಿ, 4 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಅರಿಶಿನ, ಧನಿಯಾಪುಡಿ, ಅಮ್ಚೂರ್ ಪುಡಿ, ಮೆಣಸು/ಜೀರಿಗೆ/ಓಮದ ಪುಡಿ, ಕುಕಿಂಗ್ ಕ್ರೀಂ, ಇಡಿಯಾದ ಒಣ ಮೆಣಸಿನಕಾಯಿ, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ಪಲಾವ್ ಎಲೆ, ತುಸು ಹುಳಿ ಮಾವಿನ ಉಪ್ಪಿನಕಾಯಿ.
ವಿಧಾನ : ಹಾಗಲ ತೊಳೆದು ಒರೆಸಿ, ಶುಚಿ ಮಾಡಿಡಿ. ಇದನ್ನು ಸಣ್ಣ ಹೋಳಾಗಿಸಿ, ಬೀಜ ತೆಗೆದುಬಿಡಿ. ಒಂದು ಪಾತ್ರೆಯಲ್ಲಿ ಇದು ಮುಳುಗುವಷ್ಟು ನೀರಿಗೆ ತುಸು ಎಣ್ಣೆ, ಉಪ್ಪು, ಅರಿಶಿನ ಹಾಕಿ 1 ತಾಸು ನೆನೆಸಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ನಂತರ ಜೀರಿಗೆ, ಓಮ, ಪಲಾವ್ ಎಲೆ, ತುಂಡರಿಸಿದ ಒಣ ಮೆಣಸಿನಕಾಯಿ ಹಾಕಿ ಚಟಪಟಾಯಿಸಿ. ನಂತರ ನೀಟಾಗಿ ಹೆಚ್ಚಿದ ಈರುಳ್ಳಿ, ಆಮೇಲೆ ಹಾಗಲ ನಂತರ ಟೊಮೇಟೊ ಹಾಕಿ ಬಾಡಿಸಿ. ನಂತರ 2 ಬಗೆ ಪೇಸ್ಟ್, ಅರಿಶಿನ, ಧನಿಯಾಪುಡಿ, ಖಾರ, ಜೀರಿಗೆ ಪುಡಿ ಹಾಕಿ ಕೆದಕಬೇಕು. ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ಅಮ್ಚೂರ್ ಪುಡಿ, ಮಾವಿನ ಉಪ್ಪಿನಕಾಯಿ, ಕ್ರೀಂ ಸೇರಿಸಿ ಕೆದಕಬೇಕು. 2 ನಿಮಿಷ ಎಲ್ಲನ್ನೂ ಕೆದಕಿ ಕೆಳಗಿರಿಸಿ. ಚಿತ್ರದಲ್ಲಿರುವಂತೆ ಪುದೀನಾ ಉದುರಿಸಿ. ಇದನ್ನು ಜೀರಾ ರೈಸ್ ಅಥವಾ ಚಪಾತಿ, ದೋಸೆ ಜೊತೆ ಸವಿಯಲು ಕೊಡಿ.
ಟೇಸ್ಟಿ ಕಟ್ ಲೆಟ್
ಸಾಮಗ್ರಿ : 300 ಗ್ರಾಂ ಸೀಮೆಗೆಡ್ಡೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 3-4 ಹಸಿ ಮೆಣಸು, ಒಗ್ಗರಣೆಗೆ ಸಾಸುವೆ, ಜೀರಿಗೆ, ಅರಿಶಿನ, ಕರಿಯಲು ಎಣ್ಣೆ, ಬ್ರೆಡ್ ಕ್ರಂಬ್ಸ್, 4-5 ಚಮಚ ತುಪ್ಪ.
ವಿಧಾನ : ಮೊದಲು ಸೀಮೆಗೆಡ್ಡೆ ಬೇಯಿಸಿ, ಅದರ ಸಿಪ್ಪೆ ಸುಲಿದು, ಸ್ಟೀಲ್ ಮ್ಯಾಶರ್ ನಿಂದ ನೀಟಾಗಿ ಮಸೆಯಿರಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ನಂತರ ಇದಕ್ಕೆ ಜೀರಿಗೆ ಪುಡಿ, 2 ಬಗೆ ಪೇಸ್ಟ್, ಹೆಚ್ಚಿದ ಹಸಿ ಮೆಣಸು, ಅರಿಶಿನ ಹಾಕಿ ಹುರಿಯಿರಿ. ನಂತರ ಮ್ಯಾಶ್ ಮಾಡಿದ ಗೆಡ್ಡೆ ಸೇರಿಸಿ, ಮಂದ ಉರಿಯಲ್ಲಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೆದಕಿ ಕೆಳಗಿಳಿಸಿ. ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕಟ್ ಲೆಟ್ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಸಂಜೆ ಹೊತ್ತು ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಿರಿ.
ವೆಜ್ ವಡೆ
ಸಾಮಗ್ರಿ : 1-1 ಬದನೆ, ಬೆಂಡೆ, ಸಣ್ಣ ಸೌತೆ, ಆಲೂ, 2 ಈರುಳ್ಳಿ, ತಲಾ 100 ಗ್ರಾಮಿನ ಅಕ್ಕಿಹಿಟ್ಟು, ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಜೀರಿಗೆ ಪುಡಿ, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.