ಹಬ್ಬಗಳಲ್ಲಿ ಕೆಲವು ವಿಶಿಷ್ಟ ಉಡುಗೆಗಳನ್ನು ಆರಿಸಬೇಕಿರುವಾಗ ಹೆಂಗಸರು ಸದಾ ಸೀರೆ, ಸೂಟ್, ಲಹಂಗಾದಂಥ ಟ್ರೆಡಿಷನಲ್ ಉಡುಗೆಗಳ ಶಾಪಿಂಗ್‌ಗೆ ಮುಗಿಬೀಳುತ್ತಾರೆ. ಕೇವಲ ಎಥ್ನಿಕ್‌ವೇರ್ ಅಷ್ಟೇ ಅವರಿಗೆ ಆಕರ್ಷಕ ಲುಕ್ಸ್ ಒದಗಿಸಲಾರದು, ಬದಲಿಗೆ ಜೊತೆಗೆ ಮಾಡಿದ ಪರ್ಫೆಕ್ಟ್ ಮೇಕಪ್ ಮಾತ್ರವೇ ಡ್ರೆಸ್ ಜೊತೆ ಅವರಿಗೆ ಓವರ್‌ಆಲ್ ಲುಕ್ ನೀಡಬಲ್ಲದು. ಆದರೆ ತಪ್ಪಾದ ಮೇಕಪ್ ಇರುವ ಕಳೆಯನ್ನೂ ಹೋಗಿಸಿಬಿಡುತ್ತದೆ!
ಹೀಗಾಗಿ ಈ ಕೆಳಗಿನ ಅಂಶಗಳನ್ನು ಅಗತ್ಯ ಗಮನಿಸಿ :
ಫೌಂಡೇಶನ್ ನೀಡುವ ಗ್ಲೋ ನೀವು ಸೀರೆ, ಲಹಂಗಾ, ಸೂಟ್ ಯಾವುದೇ ಧರಿಸಿ, ಫೌಂಡೇಶನ್ ನಿಮ್ಮ ಎಲ್ಲಾ ಉಡುಗೆಗಳಿಗೂ ಹೊಂದುವಂಥ ವಿಶೇಷ ಗ್ಲೋ ನೀಡಬಲ್ಲದು. ಏಕೆಂದರೆ ಇದು ಕೇವಲ ಮುಖದ ಸ್ಕಿನ್ ಟೋನ್‌ನ್ನು ಲೈಟ್ ಮಾಡುವುದು ಮಾತ್ರವಲ್ಲ, ಬದಲಿಗೆ ಮುಖದಲ್ಲಿನ ಕಲೆಗುರುತುಗಳನ್ನು ಅಡಗಿಸುವಲ್ಲಿಯೂ ವಿಶೇಷ ಪಾತ್ರ ವಹಿಸಲಿದೆ. ಇದು ಚರ್ಮವನ್ನು ಹೊಳೆ ಹೊಳೆಯುವಂತೆ ಮಾಡಬಲ್ಲದು. ಹೀಗಿದ್ದೂ ಅನೇಕ ಹೆಂಗಸರು ಫೌಂಡೇಶನ್ ನಿರ್ಲಕ್ಷಿಸಿ ಕೇವಲ ಕನ್ಸೀಲರ್ ಬಳಸಿ ಕಲೆಗುರುತು ಅಡಗಿಸಲು ಪ್ರಯತ್ನಿಸುತ್ತಾರೆ. ಇದು ತಪ್ಪು. ಫೌಂಡೇಶನ್ ಚರ್ಮವನ್ನು ಏಕಸಮಾನವಾಗಿ ತೋರಿಸಬಲ್ಲದು. ಹೀಗಾಗಿ ಕನ್ಸೀಲರ್ ಜೊತೆ ಅಗತ್ಯವಾಗಿ ಇದನ್ನೂ ಬಳಸಿಕೊಳ್ಳಿ.
ಹೈಲೈಟರ್‌ನಿಂದ ಪರ್ಫೆಕ್ಟ್ ಲುಕ್
ನಿಮ್ಮ ಸಾಂಪ್ರದಾಯಿಕ ಲುಕ್ಸ್ ಪೂರ್ತಿಯಾಗಲು ಫೌಂಡೇಶನ್ ನಂತರ ಮ್ಯಾಟ್ ಹೈಲೈಟರ್ ಬಳಸಿ. ಇದು ಪರ್ಫೆಕ್ಟ್ ಕ್ಯಾಮೆರಾ ಲುಕ್ಸ್ ನೀಡುತ್ತದೆ. ನೀವು ಬ್ಲ್ಯಾಕ್, ಐವರಿ, ಬ್ಲೂ, ಗ್ರೀನ್ ಇತ್ಯಾದಿ ಬಣ್ಣಗಳ ಸಾಂಪ್ರದಾಯಿಕ ಉಡುಗೆ ಬಳಸುತ್ತಿರುವಿರಾದರೆ ಆಗ ನಿಮ್ಮ ನೋಸ್ ಬ್ರಿಜ್, ಚೀಕ್ ಬೋನ್ಸ್, ಗಲ್ಲವನ್ನು ಗೋಲ್ಡ್ ಕಲರ್‌ನಿಂದ ಹೈಲೈಟ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಫೀಚರ್ಸ್ ಹೆಚ್ಚು ಶೈನ್ ಆಗುತ್ತದೆ. ನಿಮ್ಮ ಚರ್ಮಕ್ಕೆ ಹೊಂದುವ ಬಣ್ಣದ ಪ್ರಕಾರ ಬ್ರಾಂಝ್, ಪೀಚ್, ಪಿಂಕ್ ಶೇಡ್ ಹೈಲೈಟ್ ಆರಿಸಿಕೊಳ್ಳಿ.
ಕಂಗಳನ್ನು ಸುಂದರಗೊಳಿಸಿ
ಮುಖದ ಅತಿ ಅಂದದ ಭಾಗವೆಂದರೆ ಕಂಗಳು. ಮೇಕಪ್‌ನಿಂದ ಇದರ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಹೀಗಾಗಿ ಟ್ರೆಂಡಿ ಐ ಶ್ಯಾಡೋ, ಮಸ್ಕರಾ, ಕಾಡಿಗೆಯಿಂದ ನಿಮ್ಮ ಲುಕ್ಸ್ ಬದಲಿಸಿ. ಇತ್ತೀಚೆಗೆ ವಿಂಗ್ಡ್ ಐ ಲೈನರ್ ಇನ್ ಆಗಿದೆ, ಇದು ಕಂಗಳಿಗೆ ಪರ್ಫೆಕ್ಟ್ ಲುಕ್ಸ್ ಒದಗಿಸುತ್ತದೆ. ಇದರ ಜೊತೆಗೆ ಕಲರ್ಡ್ ಐ ಲೈನರ್ ಸಹ ಫ್ಯಾಷನ್‌ನಲ್ಲಿದೆ.
ತುಟಿಗಳು ಡಿಫರೆಂಟ್ ಆಗಿರಲಿ
ತುಟಿಗೆ ಲಪ್‌ಸ್ಟಿಕ್ ಬಳಿದಾಗ ಮಾತ್ರ ಮೇಕಪ್ ಪೂರ್ತಿ ಆದಂತೆನಿಸುತ್ತದೆ. ಆದ್ದರಿಂದ ನಿಮಗೆ ಹೊಂದುವಂಥ ಶೇಡ್‌ನ್ನೇ ಆರಿಸಿ, ಆಗ ಮಾತ್ರ ನೀವು ಇತರರಿಗಿಂತ ಭಿನ್ನವಾಗಿ ಕಾಣಲು ಸಾಧ್ಯ. ಜನ ನಿಮ್ಮ ಆಯ್ಕೆಯನ್ನು ಮತ್ತೆ ಮತ್ತೆ ಪ್ರಶಂಸಿಸದೆ ಇರಲಾರರು. ನೀವು ಮ್ಯಾಟ್ ಅಥವಾ ಗ್ಲಾಸಿ ಲಿಪ್‌ಸ್ಟಿಕ್ ಆರಿಸಬಹುದು. ನಿಮ್ಮ ಐ ಮೇಕಪ್ ಡಾರ್ಕ್ ಆಗಿದ್ದರೆ, ಮುಖದಲ್ಲಿನ ಮೇಕಪ್ ಬ್ಯಾಲೆನ್ಸ್ ಆಗಿರಲು ತುಟಿಗಳಿಗೆ ಲೈಟ್ ಶೇಡ್ ಅಂದ್ರೆ ಬೇಬಿ ಪಿಂಕ್ ಅಥವಾ ಲೈಟ್ ಪೀಚ್ ತೀಡಿರಿ. ತುಟಿಗಳಿಗೆ ಲೈಟ್ ರೆಡ್ ಬಣ್ಣ ಹಚ್ಚಿದರೆ, ಬೋಲ್ಡ್ ಲುಕ್ಸ್ ಬರುತ್ತದೆ.
ಬ್ಯಾಲೆನ್ಸ್ ಅತ್ಯಗತ್ಯ
ಟ್ರೆಡಿಷನಲ್, ಎಥ್ನಿಕ್ ವೇರ್‌ನಲ್ಲಿ ಕಸೂತಿಗೊಳಿಸಿದ ಬ್ಲೌಸ್, ಲಹಂಗಾ, ಹೆವಿ ಸೀರೆ ಇತ್ಯಾದಿ ಬರುತ್ತವೆ. ಹೀಗಾಗಿ ನಿಮ್ಮ ಡ್ರೆಸ್ ಮತ್ತು ಮೇಕಪ್ ಪರಸ್ಪರ ಪೂರಕವಾಗಿರಬೇಕು. ನೀವು ಹೆವಿ ಡ್ರೆಸ್ ಹೆವಿ ಜ್ಯೂವೆಲರಿ ಧರಿಸಿದರೆ, ಮ್ಯಾಟ್ ಮೇಕಪ್ ಮಾಡಿ. ಕಾಂಟೆಂಪರರಿ ಲುಕ್ಸ್ ಬಯಸಿದರೆ, ಮೇಕಪ್ ನ್ಯೂಡ್ ಇರಲಿ.
ಅಗತ್ಯ ಸಲಹೆಗಳು
ಇತ್ತೀಚೆಗೆ ನ್ಯೂಡ್ ಮೇಕಪ್ ಸಹ ಹೆಚ್ಚು ಚಾಲ್ತಿಯಲ್ಲಿದೆ. ಇದು ಬಿಲ್‌ಕುಲ್ ಆರ್ಡಿನರಿ ಆಗಿರುತ್ತದೆ ಹಾಗೂ ಮೇಕಪ್ ಮಾಡಿಯೇ ಇಲ್ಲವೇನೋ ಎಂಬಂತಿರುತ್ತದೆ. ಈ ಮೇಕಪ್ ಖಂಡಿತಾ ಡಿಫರೆಂಟ್ ಆಗಿರುತ್ತದೆ. ಬಹು ಮಂದಿ ಸೆಲೆಬ್ರಿಟೀಸ್ ಈ ಮೇಕಪ್‌ಗೇ ಮೊರೆ ಹೋಗುತ್ತಾರೆ.
ಇತ್ತೀಚೆಗೆ ವಿಂಗ್ಡ್ ಐ ಲೈನರ್ ಸಾಕಷ್ಟು ಕ್ರೇಜ್‌ನಲ್ಲಿದೆ. ಎಷ್ಟೋ ಸಲ ಹುಡುಗಿಯರು ಟ್ರೆಡಿಷನಲ್ ಡ್ರೆಸ್ ಜೊತೆ ಪೂರ್ತಿ ಐ ಮೇಕಪ್ ಮಾಡಿಕೊಳ್ಳುವ ಬದಲು, ಕೇವಲ ವಿಂಗ್ಡ್ ಐ ಲೈನರ್ ಬಳಸುತ್ತಾರೆ, ಇತರರಿಗಿಂತ ತಾವು ಭಿನ್ನವಾಗಿ ತೋರ್ಪಡಿಸುತ್ತಾರೆ.
ಡಾರ್ಕ್ ರೆಡ್ ಲಿಪ್‌ಸ್ಟಿಕ್ ಎಷ್ಟೋ ಕಾಲದಿಂದ ಟ್ರೆಂಡ್‌ನಲ್ಲಿದೆ, ಇದು ಬೋಲ್ಡ್ ಲುಕ್ಸ್ ನೀಡುತ್ತದೆ.
ಕಂಗಳನ್ನು ಮತ್ತಷ್ಟು ಬ್ಯೂಟಿಫುಲ್ ಆಗಿಸಲು ನೀವು ಕೃತಕ ಐ ಲ್ಯಾಶೆಸ್ ಬಳಸಬಹುದು. ಇದರಿಂದ ಕಂಗಳು ದೊಡ್ಡದಾಗಿ ಕಾಣುತ್ತವೆ.
ಟ್ರೆಡಿಷನಲ್ ಲುಕ್ಸ್ ಜೊತೆ ಸ್ಮೋಕಿ ಐ ಮೇಕಪ್ ಸಾಕಷ್ಟು ಜನಪ್ರಿಯ ಎನಿಸಿದೆ. ಆದರೆ ಇತ್ತೀಚೆಗೆ ಪ್ಲೇನ್ ಸ್ಮೋಕಿ ಲುಕ್ಸ್ ಔಟ್ ಆಫ್ ಫ್ಯಾಷನ್. ಹೀಗಾಗಿ ನಿಮ್ಮ ಡ್ರೆಸ್‌ಗೆ ಹೊಂದುವ ಕಲರ್‌ನ್ನು ಕಣ್ಣಿಗೆ ಆ್ಯಡ್ ಮಾಡಬಹುದು.
ನೀವು ಕಾಲಾತೀತ ಲುಕ್ಸ್ ಬಯಸಿದರೆ, ಜೆಲ್ ಐ ಲೈನರ್ ಬಳಸಬೇಕು. ಅದು ನಿಮಗೆ ಸೊಗಸಾದ ಲುಕ್ಸ್ ನೀಡುತ್ತದೆ.
ನಿಮ್ಮ ಮೇಕಪ್ ಬಹಳ ಹೊತ್ತು ಉಳಿಯಬೇಕೆಂದರೆ, ಮೇಕಪ್‌ನ ಆರಂಭವನ್ನು ಪ್ರೈಮರ್‌ನಿಂದ ಮಾಡಿ, ಆಗ ಫೋಟೋದಲ್ಲೂ ನೀವು ಫ್ರೆಶ್ ಆಗಿ ಕಾಣುವಿರಿ.
– ಬಿ. ಪೂಜಾ