ಹಬ್ಬಗಳಲ್ಲಿ ಕೆಲವು ವಿಶಿಷ್ಟ ಉಡುಗೆಗಳನ್ನು ಆರಿಸಬೇಕಿರುವಾಗ ಹೆಂಗಸರು ಸದಾ ಸೀರೆ, ಸೂಟ್‌, ಲಹಂಗಾದಂಥ ಟ್ರೆಡಿಷನಲ್ ಉಡುಗೆಗಳ ಶಾಪಿಂಗ್‌ಗೆ ಮುಗಿಬೀಳುತ್ತಾರೆ. ಕೇವಲ ಎಥ್ನಿಕ್‌ವೇರ್‌ ಅಷ್ಟೇ ಅವರಿಗೆ ಆಕರ್ಷಕ ಲುಕ್ಸ್ ಒದಗಿಸಲಾರದು, ಬದಲಿಗೆ ಜೊತೆಗೆ ಮಾಡಿದ ಪರ್ಫೆಕ್ಟ್ ಮೇಕಪ್‌ ಮಾತ್ರವೇ ಡ್ರೆಸ್‌ ಜೊತೆ ಅವರಿಗೆ ಓವರ್‌ಆಲ್ ಲುಕ್‌ ನೀಡಬಲ್ಲದು. ಆದರೆ ತಪ್ಪಾದ ಮೇಕಪ್‌ ಇರುವ ಕಳೆಯನ್ನೂ ಹೋಗಿಸಿಬಿಡುತ್ತದೆ!

ಹೀಗಾಗಿ ಈ ಕೆಳಗಿನ ಅಂಶಗಳನ್ನು ಅಗತ್ಯ ಗಮನಿಸಿ :

ಫೌಂಡೇಶನ್‌ ನೀಡುವ ಗ್ಲೋ ನೀವು ಸೀರೆ, ಲಹಂಗಾ, ಸೂಟ್‌ ಯಾವುದೇ ಧರಿಸಿ, ಫೌಂಡೇಶನ್‌ ನಿಮ್ಮ ಎಲ್ಲಾ ಉಡುಗೆಗಳಿಗೂ ಹೊಂದುವಂಥ ವಿಶೇಷ ಗ್ಲೋ ನೀಡಬಲ್ಲದು. ಏಕೆಂದರೆ ಇದು ಕೇವಲ ಮುಖದ ಸ್ಕಿನ್‌ ಟೋನ್‌ನ್ನು ಲೈಟ್‌ ಮಾಡುವುದು ಮಾತ್ರವಲ್ಲ, ಬದಲಿಗೆ ಮುಖದಲ್ಲಿನ ಕಲೆಗುರುತುಗಳನ್ನು ಅಡಗಿಸುವಲ್ಲಿಯೂ ವಿಶೇಷ ಪಾತ್ರ ವಹಿಸಲಿದೆ. ಇದು ಚರ್ಮವನ್ನು ಹೊಳೆ ಹೊಳೆಯುವಂತೆ ಮಾಡಬಲ್ಲದು. ಹೀಗಿದ್ದೂ ಅನೇಕ ಹೆಂಗಸರು ಫೌಂಡೇಶನ್‌ ನಿರ್ಲಕ್ಷಿಸಿ ಕೇವಲ ಕನ್ಸೀಲರ್‌ ಬಳಸಿ ಕಲೆಗುರುತು ಅಡಗಿಸಲು ಪ್ರಯತ್ನಿಸುತ್ತಾರೆ. ಇದು ತಪ್ಪು. ಫೌಂಡೇಶನ್‌ ಚರ್ಮವನ್ನು ಏಕಸಮಾನವಾಗಿ ತೋರಿಸಬಲ್ಲದು. ಹೀಗಾಗಿ ಕನ್ಸೀಲರ್‌ ಜೊತೆ ಅಗತ್ಯವಾಗಿ ಇದನ್ನೂ ಬಳಸಿಕೊಳ್ಳಿ.

ಹೈಲೈಟರ್‌ನಿಂದ ಪರ್ಫೆಕ್ಟ್ ಲುಕ್‌

ನಿಮ್ಮ ಸಾಂಪ್ರದಾಯಿಕ ಲುಕ್ಸ್ ಪೂರ್ತಿಯಾಗಲು ಫೌಂಡೇಶನ್‌ ನಂತರ ಮ್ಯಾಟ್‌ ಹೈಲೈಟರ್‌ ಬಳಸಿ. ಇದು ಪರ್ಫೆಕ್ಟ್ ಕ್ಯಾಮೆರಾ ಲುಕ್ಸ್ ನೀಡುತ್ತದೆ. ನೀವು ಬ್ಲ್ಯಾಕ್‌, ಐವರಿ, ಬ್ಲೂ, ಗ್ರೀನ್‌ ಇತ್ಯಾದಿ ಬಣ್ಣಗಳ ಸಾಂಪ್ರದಾಯಿಕ ಉಡುಗೆ ಬಳಸುತ್ತಿರುವಿರಾದರೆ ಆಗ ನಿಮ್ಮ ನೋಸ್‌ ಬ್ರಿಜ್‌, ಚೀಕ್‌ ಬೋನ್ಸ್, ಗಲ್ಲವನ್ನು ಗೋಲ್ಡ್ ಕಲರ್‌ನಿಂದ ಹೈಲೈಟ್‌ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಫೀಚರ್ಸ್‌ ಹೆಚ್ಚು ಶೈನ್‌ ಆಗುತ್ತದೆ. ನಿಮ್ಮ ಚರ್ಮಕ್ಕೆ ಹೊಂದುವ ಬಣ್ಣದ ಪ್ರಕಾರ ಬ್ರಾಂಝ್, ಪೀಚ್‌, ಪಿಂಕ್‌ ಶೇಡ್‌ ಹೈಲೈಟ್‌ ಆರಿಸಿಕೊಳ್ಳಿ.

ಕಂಗಳನ್ನು ಸುಂದರಗೊಳಿಸಿ

ಮುಖದ ಅತಿ ಅಂದದ ಭಾಗವೆಂದರೆ ಕಂಗಳು. ಮೇಕಪ್‌ನಿಂದ ಇದರ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಹೀಗಾಗಿ ಟ್ರೆಂಡಿ ಐ ಶ್ಯಾಡೋ, ಮಸ್ಕರಾ, ಕಾಡಿಗೆಯಿಂದ ನಿಮ್ಮ ಲುಕ್ಸ್ ಬದಲಿಸಿ. ಇತ್ತೀಚೆಗೆ ವಿಂಗ್ಡ್ ಐ ಲೈನರ್‌ ಇನ್‌ ಆಗಿದೆ, ಇದು ಕಂಗಳಿಗೆ ಪರ್ಫೆಕ್ಟ್ ಲುಕ್ಸ್ ಒದಗಿಸುತ್ತದೆ. ಇದರ ಜೊತೆಗೆ ಕಲರ್ಡ್‌ ಐ ಲೈನರ್‌ ಸಹ ಫ್ಯಾಷನ್‌ನಲ್ಲಿದೆ.

ತುಟಿಗಳು ಡಿಫರೆಂಟ್‌ ಆಗಿರಲಿ

ತುಟಿಗೆ ಲಪ್‌ಸ್ಟಿಕ್‌ ಬಳಿದಾಗ ಮಾತ್ರ ಮೇಕಪ್‌ ಪೂರ್ತಿ ಆದಂತೆನಿಸುತ್ತದೆ. ಆದ್ದರಿಂದ ನಿಮಗೆ ಹೊಂದುವಂಥ ಶೇಡ್‌ನ್ನೇ ಆರಿಸಿ, ಆಗ ಮಾತ್ರ ನೀವು ಇತರರಿಗಿಂತ ಭಿನ್ನವಾಗಿ ಕಾಣಲು ಸಾಧ್ಯ. ಜನ ನಿಮ್ಮ ಆಯ್ಕೆಯನ್ನು ಮತ್ತೆ ಮತ್ತೆ ಪ್ರಶಂಸಿಸದೆ ಇರಲಾರರು. ನೀವು ಮ್ಯಾಟ್‌ ಅಥವಾ ಗ್ಲಾಸಿ ಲಿಪ್‌ಸ್ಟಿಕ್‌ ಆರಿಸಬಹುದು. ನಿಮ್ಮ  ಐ ಮೇಕಪ್‌ ಡಾರ್ಕ್‌ ಆಗಿದ್ದರೆ, ಮುಖದಲ್ಲಿನ ಮೇಕಪ್‌ ಬ್ಯಾಲೆನ್ಸ್ ಆಗಿರಲು ತುಟಿಗಳಿಗೆ ಲೈಟ್‌ ಶೇಡ್‌ ಅಂದ್ರೆ ಬೇಬಿ ಪಿಂಕ್‌ ಅಥವಾ ಲೈಟ್‌ ಪೀಚ್‌ ತೀಡಿರಿ. ತುಟಿಗಳಿಗೆ ಲೈಟ್‌ ರೆಡ್‌ ಬಣ್ಣ ಹಚ್ಚಿದರೆ, ಬೋಲ್ಡ್ ಲುಕ್ಸ್ ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ