ಮದುವೆಯ ಧಾರೆ ದಿನ ಹುಡುಗಿಯ ಜೀವನದ ಅತಿ ಮಹತ್ವಪೂರ್ಣ ದಿನ. ಆ ದಿನ ಮದುವೆ ಮನೆಗೆ ಬಂದವರ ದೃಷ್ಟಿಯೆಲ್ಲ ಅವಳತ್ತಲೇ ಇರುತ್ತದೆ. ಹೀಗಾಗಿ ವಧುವಿನ ಹೇರ್‌ಸ್ಟೈಲ್‌ ಹಾಗೂ ಮೇಕಪ್‌ ಅತಿ ವಿಶಿಷ್ಟವಾಗಿರಬೇಕಾದುದು ಅತ್ಯಗತ್ಯ.

ಬ್ರೈಡಲ್ ಮೇಕಪ್

ಇದಕ್ಕಾಗಿ ಮೊದಲು ಮುಖವನ್ನು ವೆಟ್‌ ಟಿಶ್ಶೂನಿಂದ ಸ್ವಚ್ಛಗೊಳಿಸಿ ಹಾಗೂ ಮಾಯಿಶ್ಚರೈಸಿಂಗ್‌ ಕ್ರೀಂ ಹಚ್ಚಿರಿ. ಆಗ ಮುಖದ ಶುಷ್ಕತೆ ದೂರವಾಗುತ್ತದೆ. ನಂತರ ಕಂಗಳಿಂದ ಮೇಕಪ್‌ ಶುರು ಮಾಡಿ. ಎಲ್ಲಕ್ಕೂ ಮೊದಲು ಕಂಗಳಿಗೆ ಐ ಬೇಸ್‌ ಹಚ್ಚಿರಿ. ಇದರಿಂದ ಮೇಕಪ್‌ ಹೆಚ್ಚು ಬಾಳಿಕೆ ಬರುತ್ತದೆ. ನಂತರ ಲೈಟ್‌ ಕಲರ್‌ನಿಂದ ಶುರು ಮಾಡಿ. ಉದಾ: ಲೈಟ್‌ ಬ್ರೌನ್‌ ಆಮೇಲೆ ಡಾರ್ಕ್‌ ಕಲರ್‌ನತ್ತ ಹೊರಡಿ. ಬ್ರೌನ್‌ ಕಲರ್‌ನಿಂದ ಕ್ರಾಸ್‌ಲೈನ್‌ ತುಂಬುತ್ತಾ ಒಂದು ಏರಿಯಾ ಡಿಫೈನ್‌ ಮಾಡಿ, ಆಗ ಎಲ್ಲಿ ಎಂಥ ಕಲರ್‌ ತುಂಬಬೇಕೆಂದು ಸ್ಪಷ್ಟವಾಗುತ್ತದೆ. ಆಮೇಲೆ ಐ ಬಾಲ್‌ ಮೇಲೆ ನಿಮ್ಮ ಡ್ರೆಸ್‌ಗೆ ಹೊಂದುವ ಕಲರ್‌ ಹಚ್ಚಿರಿ. ನಂತರ ಬ್ರಶ್ಶಿನಿಂದ ಚೆನ್ನಾಗಿ ಬ್ಲೆಂಡ್‌ ಮಾಡಿ. ಆಗ ಯಾವುದೇ ಬಣ್ಣ ಒಂದೇ ಕಡೆ ನಿಂತು ಬಿಟ್ಟಿರುವಂತೆ ಅನಿಸಬಾರದು. ನಂತರ ಹುಬ್ಬನ್ನು ಗಾಢ ಬ್ರೌನ್‌ ಬಣ್ಣದಿಂದ ಡಿಫೈನ್‌ ಮಾಡಿ.

ಈಗ ಕಂಗಳಿಗೆ ಹೊಂದುವ ಐ ಲ್ಯಾಶೆಸ್‌ ಹಾಕಿಡಿ. ಐ ಲ್ಯಾಶೆಸ್‌ ಗ್ಲೂ ಅತಿ ಉತ್ತಮ ಕಂಪನಿಯದೇ ಆಗಿರಬೇಕು, ಇಲ್ಲದಿದ್ದರೆ ಅದು ಉದುರಿ ಹೋಗುವ ಆತಂಕ ಇರುತ್ತದೆ. ನಂತರ ಐ ಲೈನರ್‌ ಹಚ್ಚಿ ಕಂಗಳ ಕೆಳಗೆ ಲೈಟ್‌ ಬ್ರೌನ್‌ ಮತ್ತು ಡಾರ್ಕ್‌ ಬ್ರೌನ್‌ ಬಣ್ಣ ಬಳಿದು, ಲೈಟ್‌ ಆಗಿ ಬ್ಲೆಂಡ್‌ ಮಾಡಿ ಕಂಗಳ ಒಳಗೆ ಕಾಡಿಗೆ ತೀಡಿ. ಕಂಗಳ ಮೇಕಪ್‌ ನಂತರ ಮುಖಕ್ಕೆ ಪ್ರೈಮರ್‌ ಹಚ್ಚಿರಿ. ಇದರಿಂದ ಮುಖದಲ್ಲಿನ ಓಪನ್‌ ಪೋರ್ಸ್‌ ಕ್ಲೋಸ್‌ ಆಗುತ್ತವೆ, ಚರ್ಮ ಸ್ಮೂತ್‌ ಆಗುತ್ತದೆ.

ಇದಾದ ನಂತರ ಕನ್ಸೀಲರ್‌ ಬಳಸಬೇಕು. ಇದು ಮುಖದಲ್ಲಿನ ಕಲೆಗುರುತು, ಗುಳ್ಳೆ ಅಥವಾ ಅನಗತ್ಯ ಅಡ್ಡಿಗಳನ್ನು ನಿವಾರಿಸುತ್ತದೆ. ಕನ್ಸೀಲರ್‌ ಚರ್ಮಕ್ಕೆ ಹೊಂದುವಂತಿರಬೇಕು. ಈಗ ಮುಖಕ್ಕೆ ಹೊಂದುವಂಥ ಬೇಸ್‌ ಕಲರ್‌ ಹಚ್ಚಿರಿ. 1-2 ಶೇಡ್‌ ಲೈಟ್‌ ಕಲರ್‌ನಿಂದ ಹೈಲೈಟ್‌ ಮಾಡಿ. ನಂತರ ಬ್ಲಶರ್‌ ಹೈಲೈಟರ್‌ ಬಳಸಬೇಕು. ಆಮೇಲೆ ಲಿಪ್‌ ಪೆನ್ಸಿಲ್‌ನಿಂದ ತುಟಿಗಳಿಗೆ ಶೇಪ್‌ ನೀಡುತ್ತಾ, ಲಿಪ್‌ಸ್ಟಿಕ್‌ ತೀಡಬೇಕು. ಕೊನೆಯಲ್ಲಿ ಮೇಕಪ್‌ ಫಿಕ್ಸರ್‌ನಿಂದ ಅದನ್ನು ಸೆಟ್‌ ಮಾಡಿ.

ಬ್ರೈಡಲ್ ಹೇರ್‌ಸ್ಟೈಲ್

ಬ್ಯೂಟಿಫುಲ್ ಹೇರ್‌ ಸ್ಟೈಲ್‌‌ಗಾಗಿ ಕೂದಲಿಗೆ ಉತ್ತಮ ಶ್ಯಾಂಪೂ ಬಳಸಿರಬೇಕು. ಆ ದಿನ ಕಂಡೀಶನರ್‌ ಬೇಡ. ಯಾವುದೇ ಬಗೆಯ ಕೇಶ ವಿನ್ಯಾಸಕ್ಕೆ ಮೊದಲು ಬ್ಲೋ ಡ್ರೈಯರ್‌ ಯಾ ಕ್ರಿಂಪಿಂಗ್‌ ಅತ್ಯಗತ್ಯ. ಇದರಿಂದ ಹೇರ್‌ ಸ್ಟೈಲ್‌ ಮಾಡುವುದು ಸುಲಭವಾಗುತ್ತದೆ.

ಪೋನಿ ಡೋನಟ್‌ : ಕೂದಲನ್ನು ಕಿವಿಯಿಂದ ಕಿವಿಗೆ ವಿಭಾಗಿಸಿ, ಹಿಂಬದಿಯ ಕೂದಲಿನ ಪೋನಿ ಮಾಡಿ. ನಂತರ ಮುಂಭಾಗದಲ್ಲಿ ಬಿಟ್ಟಿರುವ ಕೂದಲನ್ನು ಬೈತಲೆಗೆ ಸೆಟ್‌ ಆಗುವಂತೆ ಇದರ ಬ್ಯಾಕ್‌ ಕೋಂಬಿಂಗ್‌ ಮಾಡಿ. ಆಗ ಇದರಲ್ಲಿ ಉತ್ತಮ ಬೌನ್ಸ್ ಬರುತ್ತದೆ. ಮುಂಭಾಗದಿಂದ ಉತ್ತಮ ಲುಕ್‌ ಇರುತ್ತದೆ. ಈಗ ಕೂದಲಿಗೆ ಇತ್ತೀಚಿನ ಫ್ಯಾಷನ್‌ ಪ್ರಕಾರ ಲೈನ್ಸ್ ಮಾಡಿ, ಮುಂಭಾಗದ ಲುಕ್ಸ್ ಕಂಪ್ಲೀಟ್‌ ಮಾಡಿ.

ಇದಾದ ಮೇಲೆ ಹಿಂಭಾಗದ ಕೂದಲಿಗೆ ಡೋನಟ್‌ ಸಿಗಿಸಿಡಿ ಹಾಗೂ ಪೋನಿಯ ಕೂದಲಿನಿಂದ ಆ ಡೋನಟ್‌ ಮೇಲೆ ಬೇಕಾದ ಡಿಸೈನ್‌ ಮಾಡಿಸಿ. ಕೊನೆಯಲ್ಲಿ ಈ ಭಾಗಕ್ಕೆ ಹೂ ಮುಡಿಸಿ ಅಲಂಕರಿಸಿ.

ನೆಟ್‌ ಹೇರ್‌ಸ್ಟೈಲ್‌ : ಸೆಂಟರ್‌ ಪಾರ್ಟಿಂಗ್‌ ಮಾಡಿ, ಕೂದಲನ್ನು ಕಿವಿಯಿಂದ ಕಿವಿಗೆ ವಿಭಜಿಸಿ. ನಂತರ ಹಿಂಭಾಗದಿಂದ ನಡುವಿಗೆ ಬ್ಯಾಕ್‌ ಕೋಂಬಿಂಗ್‌ ಮಾಡಿ. ಈಗ ಹಿಂಭಾಗದ ಕೂದಲಿನಿಂದ 3 ಪೋನಿ ಮಾಡಿ. ಆ ಮೂರಕ್ಕೂ ಉತ್ತಮ ಬ್ಯಾಕ್‌ ಕೋಂಬಿಂಗ್‌ ಮಾಡಿ. ಈಗ ನೆಟ್‌ ಬಳಸಿ ಪಿನ್‌ ಹಾಕಿ ಪೋನಿ ಲಾಕ್‌ ಮಾಡಿ. ಮುಂಭಾಗದ ಕೂದಲಿಗೆ ಬ್ಯಾಕ್‌ ಕೋಂಬಿಂಗ್‌ ಮಾಡಿ, ಬೇಕಾದಂತೆ ಕೂದಲನ್ನು ಸೆಟ್‌ ಮಾಡಿ.

ಮುಂಭಾಗದ ಕೂದಲನ್ನು ಮುಖಕ್ಕೆ ಅನುಸಾರ ಡಿಸೈನ್‌ ಮಾಡಿ. ಉದ್ದನೆಯ ಮುಖಕ್ಕೆ ಹೆಚ್ಚಿನ ಹೈಲೈಟ್‌ ಕೊಡಬಾರದು. ಬದಲಿಗೆ ಸಣ್ಣ ಗುಂಡನೆಯ ಮುಖಕ್ಕೆ ಉತ್ತಮ ಹೈಲೈಟ್‌ ನೀಡಬಹುದು. ಹೀಗೆ ಮುಂಭಾಗ ಕಂಪ್ಲೀಟ್‌ ಆದಮೇಲೆ, ಹಿಂಭಾಗದಲ್ಲಿ ಮಾಡಿದ ಪೋನಿ (ನೆಟ್‌ ಅಳಡಿಸಿದ್ದು)ಯನ್ನು ಒಂದೊಂದಾಗಿ ಸೆಟ್‌ ಮಾಡಿ, ಬಾಲ್ ಪಿನ್‌ನಿಂದ ಲಾಕ್‌ ಮಾಡಿ. ನೆಟ್‌ ಅಳವಡಿಸುವುದರಿಂದ ಹೇರ್‌ ಡೂಗೆ ಉತ್ತಮ ಲುಕ್‌ ಸಿಗುತ್ತದೆ. ಇದು ಪೂರ್ತಿ ಆದಮೇಲೆ ಸಣ್ಣ ಸಣ್ಣ ಹೂಗಳಿಂದ ಸಿಂಗರಿಸಿ.

ಸ್ಟಫ್ಡ್ ಹೇರ್‌ ಸ್ಟೈಲ್‌ : ಮುಂಭಾಗದ ಕೂದಲಿನಲ್ಲಿ ಸೆಂಟರ್‌ ಪಾರ್ಟಿಂಗ್‌ ಮಾಡಿ. ಹಿಂಭಾಗದ ಕೂದಲಿನಲ್ಲಿ ಕ್ರಿಂಪಿಂಗ್‌ ಮಾಡಿ, ಆಗ ಒಟ್ಟಾರೆ ಕೂದಲಿನ ವಾಲ್ಯೂಂ ಹೆಚ್ಚುತ್ತದೆ. ಈಗ ಇದನ್ನು ಪಿನ್‌ನಿಂದ ಲಾಕ್‌ ಮಾಡಿ, ಒಂದು ಹೆವಿ ಸ್ಟಫಿಂಗ್‌ ಸಿಗಿಸಿಡಿ. ಅದನ್ನು ಪಿನ್‌ನಿಂದ ಲಾಕ್‌ ಮಾಡಿ. ಮುಂಭಾಗದ ಕೂದಲನ್ನು ನಿಮಗೆ ಬೇಕಾದಂತೆ ಸೆಟ್‌ ಮಾಡಿ. ಹಿಂಭಾಗದಲ್ಲಿ ಸ್ಟಫಿಂಗ್‌ ಮಾಡಿದ ಮೇಲೆ, ಕೆಳಭಾಗದಲ್ಲಿ ಉಳಿದಿರುವಂಥ ಕೂದಲಿನಿಂದ, ಒಂದು ಬದಿಯಿಂದ ಶುರು ಮಾಡಿ, ಒಂದರ ಮೇಲೆ ಒಂದರಂತೆ ಕೂದಲಿನ ಲೇಯರ್‌ ತೆಗೆದುಕೊಳ್ಳಿ ಹಾಗೂ ಸ್ಟಫಿಂಗ್‌ ಕಾಣದಂತೆ ಮರೆ ಮಾಡಿ. ನಂತರ ಸಣ್ಣ ಸಣ್ಣ  ಹೂಗಳಿಂದ ಇದನ್ನು ಅಲಂಕರಿಸಿ.

– ಗಾಯತ್ರಿ ಸುರೇಶ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ