ಸೌಂದರ್ಯಕ್ಕೆ ಮೆರುಗು ಕೊಡಲು ಇತ್ತೀಚೆಗೆ ಚಾರ್‌ಕೋಲ್‌ನ ಬಳಕೆ ಹೆಚ್ಚುತ್ತಿದೆ. ಹೀಗಾಗಿಯೇ ಇದು ಮೇಕಪ್‌ ಕಿಟ್‌ನಲ್ಲಿಯೂ ತನಗೊಂದು ಜಾಗ ಗಿಟ್ಟಿಸಿಕೊಂಡಿದೆ. ಕ್ಲೆನ್ಸರ್‌, ಫೇಸ್‌ ಮಾಸ್ಕ್, ಸ್ಕ್ರಬ್‌ ಮಾತ್ರವಲ್ಲದೆ, ಸ್ನಾನದ ಸೋಪಿಗೂ ಇದು ಬಳಕೆಯಾಗುತ್ತಿದೆ. ಇತ್ತೀಚೆಗೆ ಶೈನಿಂಗ್‌ ಸ್ಕಿನ್‌ಗಾಗಿ ಚಾರ್‌ಕೋಲ್‌ನ ಬಳಕೆ ಇದೀಗ ಬಹುತೇಕ ಎಲ್ಲಾ ಕಂಪನಿಗಳಲ್ಲೂ ಅನಿವಾರ್ಯವಾಗಿದೆ. ಹಾಗಿದ್ದರೆ ಇದರ ಬಳಕೆ ಲಾಭಕರವೇ ಅಲ್ಲವೇ? ಬನ್ನಿ, ಅದರ ವಿವರಗಳನ್ನು ತಿಳಿಯೋಣ :

ಚಾರ್‌ಕೋಲ್‌ ಫೇಸ್‌ ಮಾಸ್ಕ್ : ಇದನ್ನು ಅಳವಡಿಸಿಕೊಂಡ ನಂತರ, ಅದು ಪೂರ್ತಿ ಒಣಗುವವರೆಗೂ ಕಾದು, ನಂತರ ಅದನ್ನು ಪೀಲ್‌ ಆಫ್‌ ಮಾಡಬೇಕಾಗುತ್ತದೆ. ಇದು ಚರ್ಮಕ್ಕೆ ಆರೋಗ್ಯಕರ, ಕಾಂತಿಯುತ ಪರಿಣಾಮ ನೀಡುತ್ತದೆ. ಇದರ ಬಳಕೆಯಿಂದ ಮುಖದಲ್ಲಿನ ಕೊಳಕು, ಜಿಡ್ಡಿನಂಶ, ಧೂಳು ಇತ್ಯಾದಿ ನಿವಾರಣೆ ಆಗುತ್ತದೆ.

ಬ್ಲ್ಯಾಕ್‌ಹೆಡ್ಸ್ ನಿವಾರಣೆ :  ನೀವು ಬ್ಲ್ಯಾಕ್‌ಹೆಡ್ಸ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಬ್ಲ್ಯಾಕ್‌ಹೆಡ್ಸ್ ರಿಮೂವ್ ಸ್ಟ್ರಿಪ್‌ ಬಳಸಿರಿ. ಇದರಲ್ಲಿ ಆ್ಯಕ್ಟಿವೇಟೆಡ್‌ ಚಾರ್‌ಕೋಲ್ ಇರಬೇಕು. ಇದು ಮುಖದಲ್ಲಿ ಆಳವಾಗಿ ಇಳಿದು, ಬ್ಲ್ಯಾಕ್‌ಹೆಡ್ಸ್ ನ್ನು ಬೇರು ಸಹಿತ ನಿರ್ಮೂಲ ಮಾಡುತ್ತದೆ. ಜೊತೆಗೆ ಇದು ಮೊಡವೆಗಳನ್ನೂ ಸಂಪೂರ್ಣ ತೆಗೆದುಬಿಡುತ್ತದೆ. ಮುಖವನ್ನು ಕ್ಲೀನ್‌ ಮಾಡುವುದಷ್ಟೇ ಅಲ್ಲದೆ, ಪೋರ್ಸ್‌ನ್ನೂ ಸ್ವಚ್ಛಗೊಳಿಸಿ, ಚರ್ಮದ ಹೊಳಪನ್ನು ಉಳಿಸಿಕೊಳ್ಳುತ್ತದೆ. ಇದರ ಬಳಕೆಯಿಂದ ಮುಖದಲ್ಲಿ ಕೊಳೆ ನಿಲ್ಲುವುದಿಲ್ಲ ಹಾಗೂ ಇಡೀ ದಿನ ನೀವು ಲವಲವಿಕೆಯಿಂದ ನಳನಳಿಸುತ್ತೀರಿ.

ಸನ್‌ಸ್ಕ್ರೀನ್‌ ಜವಾಬ್ದಾರಿ ನಿರ್ವಹಿಸುತ್ತದೆ : ಬದಲಾಗುತ್ತಿರುವ ಋತುಮಾನದ ಪರಿಣಾಮ ಮುಖದ ಮೇಲೆ ನೇರವಾಗಿ ಆಗುತ್ತದೆ. ತೀವ್ರ ಬಿಸಿಲಿನ ಸಂಕರ್ಪಕ್ಕೆ ಬಂದಾಗ ಚರ್ಮ ಕಳಾಹೀನವಾಗುತ್ತದೆ. ಹೀಗಾದಾಗ ಚಾರ್‌ಕೋಲ್ ಚರ್ಮವನ್ನು ಆರೋಗ್ಯಕರವಾಗಿಸಿ, ಸೂರ್ಯನ ಹಾನಿಕಾರಕ UV ಕಿರಣಗಳಿಂದಲೂ ಚರ್ಮವನ್ನು ರಕ್ಷಿಸುತ್ತದೆ.

ಪರಿಸರ ಮಾಲಿನ್ಯದಿಂದ ಪಾರು : ಆ್ಯಕ್ಟಿವೇಟೆಡ್‌ ಚಾರ್‌ಕೋಲ್‌ನ ವೈಶಿಷ್ಟ್ಯವೆಂದರೆ ಇದು ಸ್ಕಿನ್‌ನಿಂದ ಟಾಕ್ಸಿನ್ಸ್ ನ್ನು ಹೊರಗೆಳೆಯಬಲ್ಲದು. ಅಂದ್ರೆ ಇದು ಟಾಕ್ಸಿನ್ಸ್ ಗೆ ಒಂದು ರೀತಿ ಮ್ಯಾಗ್ನೆಟ್‌ ಇದ್ದಂತೆ. ರಾತ್ರಿ ನಿದ್ರಿಸುವ ಮೊದಲು ಚಾರ್‌ಕೋಲ್ ಬೇಸ್ಡ್ ಫೇಸ್‌ವಾಶ್‌ನಿಂದ ಮುಖ ತೊಳೆಯಿರಿ. ಆಗ ಸ್ಕಿನ್‌ನಲ್ಲಿರುವ ಕೊಳಕು, ಜಿಡ್ಡು, ಧೂಳಿನ ಪೋರ್ಸ್‌ ಇತ್ಯಾದಿಗಳನ್ನು ತೊಲಗಿಸಿ ಮುಖವನ್ನು ಪರ್ಫೆಕ್ಟ್ ಕ್ಲೀನ್‌ ಮತ್ತು ತಾಜಾ ಮಾಡುತ್ತದೆ.

ಫೇರ್‌ ಸ್ಕಿನ್‌ : ಇದಕ್ಕಾಗಿ ಚಾರ್‌ಕೋಲ್ ನ್ನು ಧಾರಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಚರ್ಮದೊಳಗೆ ಇಳಿದು ಆಳವಾಗಿ ಕ್ಲೀನ್‌ ಮಾಡುತ್ತದೆ, ಮೃದುವಾಗಿಸುತ್ತದೆ. ಇದರಲ್ಲಿರುವ ಅಂಶದಿಂದಾಗಿ ಮುಖ ಸ್ವಚ್ಛಗೊಳ್ಳುವುದು ಮಾತ್ರವಲ್ಲದೆ, ಕಾಂತಿಯುತ ಆಗುತ್ತದೆ. ಅಸಲಿಗೆ ಇಲ್ಲಿ ಚಾರ್‌ಕೋಲ್ ಅಂದ ತಕ್ಷಣ ನೀವು ಕೇವಲ ಇಜ್ಜಲು ತಾನೇ ಎಂದು ನಿರ್ಲಕ್ಷಿಸಬೇಡಿ. ಇಲ್ಲಿ ಹೇಳುತ್ತಿರುವ ವಿಷಯ ಆ್ಯಕ್ಟಿವೇಟೆಡ್‌ ಚಾರ್‌ಕೋಲ್‌ನದು. ಇದು ಕಟ್ಟಿಗೆ ಮತ್ತು ತೆಂಗಿನ ಚಿಪ್ಪನ್ನು ಸುಟ್ಟು ತಯಾರಿಸಲಾದ, ಸಂಸ್ಕರಿಸಿದ ಪೌಡರ್‌ ಆಗಿದ್ದು, ಇದು ಚರ್ಮದ ಸೌಂದರ್ಯ ಕಾಪಾಡುವುದಲ್ಲದೆ, ಹಲವು ರೋಗಗಳ್ನೂ ದೂರವಿಡಬಲ್ಲದು. ಹೆಲ್ದಿ ಶೈನಿಂಗ್‌ ಸ್ಕಿನ್‌ಗಾಗಿ ವಾರದಲ್ಲಿ 2 ಸಲ ಇದರ ಬಳಕೆ ಮಾಡಬಹುದು. ಪೀಲ್‌ ಆಫ್‌ ಮಾಸ್ಕ್ ನ್ನು ಚರ್ಮದ ಮೇಲೆ ಬಹಳ ಹೊತ್ತು ಉಳಿಸಿಕೊಳ್ಳುವುದರಿಂದ ಕೆಟ್ಟ ಪರಿಣಾಮ ಮೂಡಬಹುದು. ಒಂದು ವಿಷಯ ಗಮನಿಸಿ, ಯಾವ ಫೇಸ್‌ ಮಾಸ್ಕ್ ಬಳಕೆಯಿಂದ ಚರ್ಮದ ತೈಲೀಯ ಗ್ರಂಥಿಗಳ ಸಕ್ರಿಯತೆ ಕಡಿಮೆ ಆಗುತ್ತದೋ ಅಂಥದ್ದನ್ನು ಚರ್ಮದ ಮೇಲೆ ಬಹಳ ಹೊತ್ತು ಇರಿಸಿಕೊಳ್ಳಬಾರದು. ಇದರಿಂದ ಚರ್ಮದ ಅಗತ್ಯ ಆರ್ದ್ರತೆಯೂ ಕಡಿಮೆ ಆಗುತ್ತದೆ. ಹೀಗಾಗಿ ಈ ಮಾಸ್ಕನ್ನು ರಾತ್ರಿ ಹೊತ್ತು ಹಚ್ಚಿಕೊಳ್ಳುವುದೇ ಒಳ್ಳೆಯದು.

– ಸಿ. ಮೃದುಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ