ನವಜಾತ ಶಿಶುವಿನ ಆಗಮನ ಆಗುತ್ತಿದ್ದಂತೆ ಅದು ತಾಯಿಯ ಎದೆಹಾಲು ಕುಡಿಯಲು ಸನ್ನದ್ಧವಾಗುತ್ತದೆ. ಬಾಯಿಯಿಂದ ಚೀಪಲು, ಬಾಯಿಯ ಹತ್ತಿರ ಬೆರಳು ತರಲು ಪ್ರಯತ್ನಿಸುತ್ತದೆ. ಹುಟ್ಟಿದ 4-5 ನಿಮಿಷಗಳಿಂದ ಹಿಡಿದು 2 ಗಂಟೆಯೊಳಗೆ ಮಗುವಿನಲ್ಲಿ ಈ ರೀತಿಯ ವರ್ತನೆಗಳು ಕಂಡುಬರುತ್ತವೆ.
ಮಗು ಹುಟ್ಟಿದ ದಿನದಿಂದ ಹಿಡಿದು 6 ವಾರಗಳ ತನಕ ಸ್ತನ್ಯಪಾನಕ್ಕೆ ಅತ್ಯಂತ ಮಹತ್ವದ ದಿನಗಳಾಗಿರುತ್ತವೆ. ಮಗು ಹುಟ್ಟಿದ 1 ಗಂಟೆಯೊಳಗೆ ಮಗುವನ್ನು ತಾಯಿಯ ಸ್ತನದ ಹತ್ತಿರ ತನ್ನಿ. ಪ್ರತಿ 3-4 ಗಂಟೆಗಳಿಗೊಮ್ಮೆ ಕೂಸಿನ ಅಗತ್ಯಕ್ಕೆ ಅನುಸಾರ ಹಾಲು ಕುಡಿಸಿ. ಹೀಗೆ ಮಾಡುವುದರಿಂದ ಫೀಡಿಂಗ್ ಸಮಸ್ಯೆಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ರೀತಿ ಮಾಡುವುದರಿಂದ ಸ್ತನದಲ್ಲಿ ಹಿಡಿದುಕೊಂಡಂತಾಗುವ ಸಮಸ್ಯೆಯಿಂದ ದೂರಾಗುವಿರಿ.
ಹೇಗೆ ಶುರು ಮಾಡುವುದು?
ಒಂದು ಸುರಕ್ಷಿತ ಸ್ಥಳದಲ್ಲಿ ನಿಮ್ಮನ್ನು ನೀವು ರಿಲ್ಯಾಕ್ಸ್ ಮಾಡಿಕೊಳ್ಳಿ.
ನೀವು ಹಾಸಿಗೆಯ ಮೇಲೆ ದಿಂಬಿಗೆ ಒರಗಿ ಅಥವಾ ಕುರ್ಚಿಯ ಮೇಲೆ ಒರಗಿ ಕುಳಿತುಕೊಂಡು ಹಾಲು ಕುಡಿಸಲು ಆರಂಭಿಸಿ. ಮಗು ಸರಿಯಾಗಿ ಚೀಪುತ್ತಿದೆಯೇ ಎಂಬುದನ್ನು ಗಮನಿಸಿ. ಅದಕ್ಕೆ ಚೀಪಲು ಕಷ್ಟವಾಗುತ್ತಿದ್ದರೆ ನಿಮ್ಮ ಕೈಗಳಿಂದ ಅದಕ್ಕೆ ಚೆನ್ನಾಗಿ ಸಪೋರ್ಟ್ ಕೊಡಿ. ನೀವು ಹಾಸಿಗೆಯ ಮೇಲೆ ಕುಳಿತಿದ್ದರೆ, ನಿಮ್ಮ ಕಾಲುಗಳ ಕೆಳಗೆ ಒಂದು ದಿಂಬು ಇರಿಸಿಕೊಳ್ಳಿ. ಕುರ್ಚಿಯ ಮೇಲೆ ಕಾಲು ಇಳಿಬಿಟ್ಟು ಕುಳಿತಿದ್ದರೆ ಕಾಲುಗಳ ಕೆಳಗೆ ಒಂದು ಪುಟ್ಟ ಸ್ಟೂಲ್ ಇಟ್ಟುಕೊಳ್ಳಿ.
ಸ್ತನ್ಯಪಾನದ ವಿಧಾನಗಳು
ಕ್ರೆಡಲ್ ಹೋಲ್ಡ್ : ಸ್ತನ್ಯಪಾನದ ಈ ವಿಧಾನದಲ್ಲಿ ನೀವು ಮಗುವಿನ ತಲೆಗೆ ನಿಮ್ಮ ತೋಳುಗಳ ಸಪೋರ್ಟ್ ಕೊಡುವಿರಿ. ಹಾಸಿಗೆ ಅಥವಾ ಕುರ್ಚಿಯ ಮೇಲೆ ಕುಳಿತಿದ್ದರೆ ದಿಂಬಿನ ಸಹಾಯ ಪಡೆದುಕೊಳ್ಳಿ. ನಿಮ್ಮ ಕಾಲುಗಳನ್ನು ಯಾವುದೇ ಸ್ಟೂಲ್ ಅಥವಾ ಕಾಫಿ ಟೇಬಲ್ ಮೇಲೆ ಇಡಿ. ಏಕೆಂದರೆ ನೀವು ಮಗುವಿನ ಮೇಲೆ ಒರಗಿಕೊಳ್ಳಬಾರದು. ಮಗುವನ್ನು ನಿಮ್ಮ ಮಡಿಲಲ್ಲಿ ಹೇಗೆ ಮಲಗಿಸಿಕೊಳ್ಳಬೇಕೆಂದರೆ ಅದರ ಮುಖ, ಹೊಟ್ಟೆ ನಿಮ್ಮ ಕಡೆಯೇ ವಾಲಿರಬೇಕು. ಈಗ ನಿಮ್ಮ ತೋಳುಗಳನ್ನು ಅದರ ತಲೆಯ ಕೆಳಗೆ ಹಾಕುತ್ತ ಅದಕ್ಕೆ ಸಪೋರ್ಟ್ ಕೊಡಿ. ನಿಮ್ಮ ತೋಳನ್ನು ಮುಂದಕ್ಕೆ ಚಾಚುತ್ತ ಅದರ ಕುತ್ತಿಗೆ, ಬೆನ್ನಿಗೆ ಆಧಾರ ಕೊಡಿ. ಈ ಸ್ಥಿತಿಯಲ್ಲಿ ಅದು ನೇರವಾಗಿ ಅಥವಾ ತುಸು ಕ್ರಾಸ್ ಆಗಿ ಮಲಗಿರುತ್ತದೆ. ಅವಧಿ ಪೂರೈಸಿ ಹುಟ್ಟಿದ ಮಕ್ಕಳಿಗೆ ಈ ವಿಧಾನ ಸೂಕ್ತ. ಸಿಸೇರಿಯನ್ ಆದವರು ಈ ವಿಧಾನ ಅನುಸರಿಸಬಾರದು, ಏಕೆಂದರೆ ಇದರಿಂದ ಹೊಟ್ಟೆಯ ಮೇಲೆ ಭಾರ ಬೀಳುತ್ತದೆ.
ಕ್ರಾಸ್ ಓವರ್ ಹೋಲ್ಡ್ : ಈ ವಿಧಾನಕ್ಕೆ ಕ್ರಾಸ್ ಕ್ರೆಡಲ್ ಹೋಲ್ಡ್ ಎಂದೂ ಕರೆಯಲಾಗುತ್ತದೆ. ಇದರಲ್ಲಿ ನೀವು ನಿಮ್ಮ ತೋಳುಗಳಿಂದ ಮಗುವಿಗೆ ಸಪೋರ್ಟ್ ಕೊಡುವುದಿಲ್ಲ. ಒಂದು ವೇಳೆ ನೀವು ಬಲಭಾಗದ ಸ್ತನದಿಂದ ಹಾಲು ಕುಡಿಸುತ್ತಿದ್ದರೆ, ಮಗುವನ್ನು ಎಡಗೈನಿಂದ ಹಿಡಿದುಕೊಳ್ಳಿ. ಮಗುವಿನ ಎದೆ ಹಾಗೂ ಹೊಟ್ಟೆ ಭಾಗ ನಿಮ್ಮ ಕಡೆ ಇರುವಂತೆ ನೋಡಿಕೊಳ್ಳಿ. ಇವನ್ನು ಮಲಗಲು ಆಗದ ಚಿಕ್ಕಮಕ್ಕಳಿಗೆ ಈ ವಿಧಾನ ಸೂಕ್ತ.
ಕ್ಲಚ್ ಹೋಲ್ಡ್ : ಈ ಹೆಸರಿನಿಂದ ಗೊತ್ತಾಗುವುದೇನೆಂದರೆ, ನೀವು ಈ ವಿಧಾನದಲ್ಲಿ ಹೇಗೆ ಹ್ಯಾಂಡ್‌ಬ್ಯಾಗ್‌ನ್ನು ಹಿಡಿದುಕೊಂಡಿರುತ್ತೀರೊ, ಅದೇ ರೀತಿಯಲ್ಲಿ ಮಗುವನ್ನು ಹಿಡಿದುಕೊಂಡಿರುತ್ತೀರಿ.
ಮಗುವನ್ನು ನಿಮ್ಮ ತೋಳುಗಳಲ್ಲಿ ಒಂದು ಬದಿಯಲ್ಲಿ ಹೇಗೆ ಹಿಡಿದಿರುತ್ತೀರಿ ಅಂದರೆ, ಅದರ ಮೂಗಿನ ದಿಸೆ ನಿಮ್ಮ ನಿಪ್ಪಲ್ ಕಡೆ ಇರಬೇಕು. ಮಡಿಲಲ್ಲಿ ದಿಂಬು ಇಟ್ಟುಕೊಂಡು ನಿಮ್ಮ ತೋಳನ್ನು ಅದರ ಮೇಲೆ ಇರಿಸಿ, ಮಗುವಿನ ಭುಜ, ಕುತ್ತಿಗೆ ಮತ್ತು ತಲೆಗೆ ನಿಮ್ಮ ಕೈನ ಆಧಾರ ಕೊಡಿ. ಸೀ ಹೋಲ್ಡ್ ನಿಂದ ಮಗುವನ್ನು ನಿಪ್ಪಲ್ ತನಕ ತೆಗೆದುಕೊಂಡು ಹೋಗಿ.
ಸಿಸೇರಿಯನ್ ವಿಧಾನದಿಂದ ಹುಟ್ಟಿದ ಮಕ್ಕಳಿಗೆ ಮಾತ್ರ ಈ ವಿಧಾನ ಸೂಕ್ತ.
ರಿಕ್ಲೈನಿಂಗ್ ಪೊಸಿಶನ್ : ಮಗುವಿನ ಮುಖ ನಿಮ್ಮ ಕಡೆಯೇ ಇರುವಂತೆ ನಿಮ್ಮತ್ತ ತೆಗೆದುಕೊಳ್ಳಿ. ಅದರ ತಲೆಗೆ ನಿಮ್ಮ ತೋಳಿನ ಆಧಾರ ಕೊಡಿ. ಒಂದು ವೇಳೆ ಮಗುವನ್ನು ಸ್ತನದ ತನಕ ಒಯ್ಯಲು ಕಷ್ಟ ಆದರೆ, ಕೆಳಗೆ ಒಂದು ಚಿಕ್ಕ ದಿಂಬು ಅಥವಾ ಒಂದು ಮಡಿಕೆ ಮಾಡಿದ ಹೊದಿಕೆಯನ್ನು ತಲೆಯ ಕೆಳಗೆ ಇಡಿ. ಮಗುವಿಗೆ ಹಾಲು ಕುಡಿಯಲು ಕತ್ತನ್ನು ಮೇಲೆತ್ತುವಂತೆ ಮಾಡಬೇಡಿ. ಅದೇ ರೀತಿ ನಿಮಗೂ ಕೂಡ ಬಗ್ಗುವ ಸ್ಥಿತಿ ಬರಬಾರದು.
ನಿಮಗೆ ಕುಳಿತುಕೊಳ್ಳಲು ಕಷ್ಟ ಅನಿಸಿದರೆ ಮಲಗಿಕೊಂಡೇ ಮಗುವಿಗೆ ಹಾಲು ಕುಡಿಸಿ. ಇದರ ಹೊರತಾಗಿ ನೀವು ವಿಶ್ರಾಂತಿ ಮಾಡುವಾಗ ಅಥವಾ ರಾತ್ರಿ ಮಲಗಿದ್ದಾಗ ಮಲಗಿಯೇ ಹಾಲು ಕುಡಿಸಬಹುದು.
ಸ್ತನ್ಯಪಾನದ ಬಳಿಕ ಮಗುವಿಗೆ ತೇಗು ಬರುವಂತೆ ಮಾಡಬೇಕು. ಅದಕ್ಕಾಗಿ ಅದರ ಹೊಟ್ಟೆಯ ಮೇಲೆ ನಿಧಾನವಾಗಿ ಸವರಬೇಕು. ಒಂದು 5 ನಿಮಿಷವಾದರೂ ಅದಕ್ಕೆ ತೇಗು ಬರದೇ ಇದ್ದರೆ, ಅದು ಸಹಜವಾಗಿದೆ ಎನಿಸುತ್ತಿದ್ದರೆ, ತೇಗು ಬರಿಸುವ ಪ್ರಯತ್ನ ಮಾಡಬೇಡಿ.
– ಡಾ. ವಿನೋದಿನಿ