ಯಾವುದೇ ಮಹಿಳೆ ತನ್ನ ದೇಹದ ಮೇಲೆ ಅನಗತ್ಯ ಕೂದಲು ಬೆಳೆಯುವುದನ್ನು ಇಷ್ಟಪಡುವುದಿಲ್ಲ. ತನ್ನ ತ್ವಚೆ ಸದಾ ಮೃದುವಾಗಿರಬೇಕು, ಸದಾ ಹೊಳೆಯುತ್ತಿರಬೇಕು ಎಂದೆಲ್ಲ ಬಯಸುತ್ತಾಳೆ. ಇದಕ್ಕಾಗಿ ತನಗೆ ತೋಚಿದ ವಿಧಾನದಂತೆ, ಅದು ಎಷ್ಟೇ ನೋವು ಕೊಟ್ಟರೂ ಅವಳು ಅದನ್ನು ಅನುಸರಿಸುತ್ತಾಳೆ.

ಆದರೆ ಈಗ ಮಾರುಕಟ್ಟೆಯಲ್ಲಿ ಲೇಟೆಸ್ಟ್ ಟೆಕ್ನಿಕ್‌ ಹಾಗೂ ಅಡ್ವಾನ್ಸ್ ಹೇರ್‌ ರಿಮೂವಲ್ ಕ್ರೀಮ್ ಗಳು ಬಂದಿವೆ. ಅವುಗಳ ಪರಿಣಾಮ ಉತ್ತಮವಾಗಿರುವುದರ ಜೊತೆಜೊತೆಗೆ ಅವನ್ನು ಬಳಸುವಾಗ ಯಾವುದೇ ನೋವು ಆಗುವುದಿಲ್ಲ. ಚರ್ಮ ಕೆಲವೇ ನಿಮಿಷಗಳಲ್ಲಿ ಹೊಳಪು ಪಡೆದುಕೊಳ್ಳುತ್ತದೆ.

ಹೇರ್‌ ರಿಮೂವಲ್ ಕ್ರೀಮ್ ಏಕೆ?

ಮಹಿಳೆಯರು ಮೊದಲೆಲ್ಲ ಅನಗತ್ಯ ಕೂದಲ ನಿವಾರಣೆಗೆ ಪ್ಯೂಮಿಕ್‌ ಸ್ಟೋನ್‌, ಶೇವಿಂಗ್‌ ರೇಸರ್‌ ಅಥವಾ ಪ್ಲಕರ್‌ನ ನೆರವು ಪಡೆದುಕೊಳ್ಳುತ್ತಿದ್ದರು. ಅದರಿಂದ ತ್ವಚೆಗೆ ಹಾನಿಯಾಗುತ್ತಿತ್ತು. ಜೊತೆಗೆ ಕೂದಲು ಬುಡದಿಂದ ನಿವಾರಣೆಯಾಗದೆ ಅದಕ್ಕೆ ಸಮಾಧಾನಕರ ಪರಿಣಾಮ ದೊರೆಯುತ್ತಿರಲಿಲ್ಲ. ಹೀಗಾಗಿ ಮೇಲಿಂದ ಮೇಲೆ ಅದೇ ಉಪಾಯಗಳನ್ನು ಅನುಸರಿಸಬೇಕಾಗುತ್ತಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಹೇರ್‌ ರಿಮೂವಲ್ ಕ್ರೀಮುಗಳು ಲಭ್ಯವಿದ್ದು, ಅವನ್ನು ಬಳಸುವುದು ಸುಲಭ ಮತ್ತು ಪರಿಣಾಮ ಕೂಡ ಉತ್ತಮವಾಗಿರುತ್ತದೆ.

ವಿಶೇಷ ಗುಣಗಳು

ಹೇರ್‌ ರಿಮೂವಲ್ ಕ್ರೀಮ್ ಖರೀದಿಸುವ ಮುಂಚೆ ಅದರಲ್ಲಿರುವ ಅಂಶಗಳ ಬಗ್ಗೆ ಗಮನಹರಿಸಿ. ನೈಸರ್ಗಿಕ ಹಾಗೂ ಆಯುರ್ವೇದಿಕ್‌ ಅಂಶಗಳಿಂದ ಕೂಡಿದ ಕ್ರೀಮನ್ನೇ ಖರೀದಿಸಿ. ಅಡ್ವಾನ್ಸ್ ಹೇರ್‌ ರಿಮೂವಲ್ ಕ್ರೀಮ್ಸ್ ಅನಗತ್ಯ ಕೂದಲ ನಿವಾರಣೆಯ ಜೊತೆಜೊತೆಗೆ ಚರ್ಮದ ಕೋಮಲತೆಯನ್ನೂ ಕಾಯ್ದುಕೊಂಡು ಹೋಗಲು ನೆರವಾಗುತ್ತದೆ. ಜೋಜೋಬಾ ಆಯಿಲ್‌ನಂತಹ ಅಂಶಗಳು ಸೇರಿರುವ ಈ ಕ್ರೀಮ್ ಚರ್ಮದ ಶುಷ್ಕತನವನ್ನು ನಿವಾರಿಸಿ, ಅದರ ತೇವಾಂಶ ಕಾಪಾಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ಅದರ ಬಳಕೆಯಿಂದ ಅದರ ಸ್ಕಿನ್‌ ಟೋನ್‌ ಕೂಡ ಹೆಚ್ಚುತ್ತದೆ.

ಸೆನ್ಸಿಟಿವ್ ಏರಿಯಾ ಕೂಡ ಸೇಫ್‌ ಡರ್ಮಟಾಲಜಿಸ್ಟ್ ರಿಂದ ಈ ಕ್ರೀಮ್ಸ್ ಪರೀಕ್ಷೆಗೊಳಪಟ್ಟಿದೆ. ಹೀಗಾಗಿ ಬಿಕಿನಿ ಏರಿಯಾ ತರಹದ ದೇಹದ ಸೆನ್ಸಿಟಿವ್‌ ಏರಿಯಾಗೆ ಯಾವುದೇ ಹಾನಿಯುಂಟಾಗದು. ಇದರಿಂದ ಉತ್ತಮ ಪರಿಣಾಮದ ಜೊತೆಗೆ ಸಮಯ ಉಳಿತಾಯ ಕೂಡ ಆಗುತ್ತದೆ.

ಅಷ್ಟಿಷ್ಟು ಎಚ್ಚರ ವಹಿಸಿ

ನೀವು ಕ್ರೀಮನ್ನು ಎಲ್ಲೆಲ್ಲಿ ಲೇಪಿಸಬೇಕಾಗಿದೆಯೋ, ಅಲ್ಲಿ ಕೈ ಬೆರಳಿನಿಂದ ಅಲ್ಲ, ಸ್ಪ್ಯಾಟೂಲಾದ ಸಹಾಯದಿಂದ ಲೇಪಿಸಿ. ಹೆಚ್ಚು ಹೊತ್ತು ಲೇಪಿಸಿ ಹಾಗೆಯೇ ಬಿಡಬೇಡಿ. ಏಕೆಂದರೆ ಹೆಚ್ಚು ಹೊತ್ತು ಉಳಿದರೆ ಆ ಏರಿಯಾ ಕೆಂಪಾಗುವ ಸಾಧ್ಯತೆ ಇರುತ್ತದೆ. 3-6 ನಿಮಿಷಗಳೊಳಗೆ ಅದರ ಪರಿಣಾಮ ಕಂಡುಬರುತ್ತದೆ. ಹೀಗಾಗಿ ಹೆಚ್ಚು ಸಮಯ ಹಚ್ಚಿ ಹಾಗೆ ಬಿಡುವ ಅಗತ್ಯವಿಲ್ಲ. ಕೂದಲ ನಿವಾರಣೆಯ ಪ್ರಕ್ರಿಯೆ ಮುಗಿದ ಬಳಿಕ ಮೆತ್ತನೆಯ ಟವೆಲ್‌ನಿಂದ ಒರೆಸಿ, ನೀರಿನಿಂದ ತೊಳೆಯಿರಿ. ಆ ಬಳಿಕ ತ್ವಚೆಯಲ್ಲಾದ ಪರಿವರ್ತನೆಯನ್ನು ಗಮನಿಸಿ.

ಉದ್ಯೋಗಸ್ಥೆ ಅಥವಾ ಗೃಹಿಣಿ ಯಾರೇ ಆಗಿರಬಹುದು, ಅವರು ತಮ್ಮ ತ್ವಚೆ ಮೃದುವಾಗಿರಬೇಕು, ಅದರ ಮೇಲೆ ಅನಗತ್ಯ ಕೂದಲು ಇರಬಾರದೆಂದು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಹಾರದ ಅಭ್ಯಾಸ ಮತ್ತು ಹಾರ್ಮೋನುಗಳ ಸಮತೋಲನ ಬಿಗಡಾಯಿಸಿರುವುದರಿಂದ ಮುಖ ಹಾಗೂ ದೇಹದ ಬೇರೆ ಭಾಗಗಳಲ್ಲಿ ಕೂದಲು ಬೆಳೆಯುವ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಅದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಇಂತಹ ಸ್ಥಿತಿಯಲ್ಲಿ ಹೇರ್‌ ರಿಮೂವ್ ಉತ್ತಮ ಉಪಾಯ. ಅದನ್ನು ಬಳಸಿ ನೀವು ನಿಮ್ಮ ತ್ವಚೆಯ ಮೃದುತ್ವವನ್ನು ಕಂಡು ಖುಷಿಪಡುವಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ