ದೀಪಾವಳಿ ಹಬ್ಬ ಬರಲಿದೆ. ಹಬ್ಬದಂದು ನೀವು ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳಬೇಕಲ್ಲವೇ? ಅದಕ್ಕಾಗಿ ನೀವು ಬ್ಯೂಟಿ ಪಾರ್ಲರ್‌ನಲ್ಲಿ ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳುವಿರಿ. ಇದರಿಂದ ನಿಮ್ಮ ಸಮಯ ಮತ್ತು ಹಣ ಎರಡೂ ವ್ಯಯವಾಗುವುದು.

ಇದಕ್ಕಾಗಿ ನಾವು ನಿಮಗೊಂದು ಉಪಾಯ ಹೇಳಿಕೊಡುತ್ತೇವೆ. ಅದರಿಂದ ನೀವು ಹಬ್ಬವನ್ನು ಚೆನ್ನಾಗಿ ಎಂಜಾಯ್‌ ಮಾಡಬಹುದು. ಜೊತೆಗೆ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಕುಳಿತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ಕಿನ್‌ ಮತ್ತು ಹೇರ್‌ ಕೇರ್‌ ಮಾಡಿಕೊಂಡು ಚಾರ್ಮಿಂಗ್‌ ಲುಕ್ಸ್ ಪಡೆಯಬಲ್ಲಿರಿ. ಅದು ಹೇಗೆಂದು ತಿಳಿಯಿರಿ.

ಫೇಶಿಯಲ್ : ಮುಖಕಾಂತಿ ಪಡೆಯಿರಿ

ತಮ್ಮ ಗ್ಲೋಯಿಂಗ್‌ ಸ್ಕಿನ್‌ ನೋಡಿ ಎಲ್ಲರೂ ಹೊಗಳುವಂತಾಗಲಿ ಎಂದು ಪ್ರತಿಯೊಬ್ಬ ಮಹಿಳೆಯೂ ಬಯಸುತ್ತಾಳೆ.

ಇದಕ್ಕಾಗಿ ಕ್ಲೆನ್ಸಿಂಗ್‌, ಮಸಾಜ್‌, ಸೀರಮ್ ಮತ್ತು ಮಾಸ್ಕ್ ಟ್ರೀಟ್‌ಮೆಂಟ್‌ ಉತ್ತಮವೆಂದು ತಿಳಿಯಲಾಗಿದೆ. ಈ ವಿಧಾನದಿಂದ ತ್ವಚೆಯ ಕೊಳೆ ಮತ್ತು ಡೆಡ್‌ ಸೆಲ್ಸ್ ನಿವಾರಣೆಯಾಗಿ ಹೊಸ ಜೀವಕಳೆ ಕಂಡುಬರುತ್ತದೆ. ಹೀಗೆ ಪ್ರತಿ ತಿಂಗಳು ಮಾಡಿಸಿದಾಗ ಚರ್ಮ ಸಾಫ್ಟ್ ಮತ್ತು ವೈಟ್‌ ಆಗಿ ಕಾಣಿಸುತ್ತದೆ.

ಈ ಟ್ರೀಟ್‌ಮೆಂಟ್‌ಗಾಗಿ ಪಾರ್ಲರ್‌ಗೆ ಹೋಗಿ ಹಣ ವೆಚ್ಚ ಮಾಡುವ ಬದಲು `ಡೂ ಯುವರ್‌ಸೆಲ್ಫ್ ಎಂಬಂತೆ ನೀವೇ ಮನೆಯಲ್ಲಿ ಮಾಡಿಕೊಂಡು ಅದೇ ಲುಕ್ಸ್ ಪಡೆದುಕೊಳ್ಳಬಹುದು. ಹಾಗೆ ಮಾಡಲು ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು.

ಸಕ್ಕರೆ ಮತ್ತು ಕೊಬ್ಬರಿ ಎಣ್ಣೆ ಬೆರೆಸಿ ಫೇಶಿಯಲ್ ಸ್ಕ್ರಬ್‌ ತಯಾರಿಸಿ. ಇದನ್ನು ವಾರಕ್ಕೆರಡು ಬಾರಿ ಮುಖಕ್ಕೆ ಹಚ್ಚುವುದರಿಂದ ಡೆಡ್‌ ಸೆಲ್ಸ್ ನಿವಾರಣೆಯಾಗುತ್ತವೆ.

ಹೇರ್‌ ಸ್ಪಾ : ಕೂದಲಿಗೆ ಹೊಸ ಜೀವ

ಸಾಮಾನ್ಯ ದಿನಗಳಲ್ಲಿ ಕೂದಲಿಗೆ ಹೆಚ್ಚು ಗಮನ ಕೊಡದೆ ಯಾವಾಗಲೂ ಹೇರ್‌ ಕ್ಲಿಪ್‌ ಹಾಕಿ ಬಿಗಿದಿರುತ್ತೀರಿ. ಹಬ್ಬ ಹತ್ತಿರ ಬಂದಾಗ ಎಚ್ಚೆತ್ತು ಸುಂದರ ಕೂದಲಿಗಾಗಿ ಹೇರ್‌ ಸ್ಪಾದ ಅಪಾಯಿಂಟ್‌ಮೆಂಟ್‌ ಬುಕ್‌ ಮಾಡುವಿರಿ. ಅದನ್ನು ನೀವೇ ಮನೆಯಲ್ಲಿ ಮಾಡಬಹುದಲ್ಲವೇ?

ಇದಕ್ಕಾಗಿ ಇಂಟರ್‌ನೆಟ್‌ನಲ್ಲಿ ನಿಮಗೆ ಅನೇಕ ಟಿಪ್ಸ್ ದೊರೆಯುತ್ತವೆ. ಆದರೆ ಇಲ್ಲಿ ನಿಮಗೊಂದು ಅತ್ಯಂತ ಸುಲಭವಾದ ವಿಧಾನವನ್ನೂ  ಪ್ರಸ್ತುತಪಡಿಸುತ್ತೇವೆ. ಇದು ಕಡಿಮೆ ಸಮಯದಲ್ಲಿ ಬೆಸ್ಟ್ ಲುಕ್ಸ್ ನೀಡುತ್ತದೆ. ಆ ಲುಕ್ಸ್ ಕಂಡಾಗ ನೀವು ನಿಮ್ಮ ಕೂದಲನ್ನು ಕಂಡು ಮೋಹಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಮೊದಲು 2-3 ಚಮಚ ಆಲಿವ್‌ ಆಯಿಲ್‌, ಬಿಸಿ ನೀರು ಮತ್ತು ಒಂದು ಟವೆಲ್‌ ತೆಗೆದುಕೊಳ್ಳಿ.

ಆಲಿವ್‌ ಆಯಿಲ್‌ನಿಂದ ಕೂದಲು ಮತ್ತು ಅದರ ಬುಡವನ್ನು ಚೆನ್ನಾಗಿ ಮಸಾಜ್‌ ಮಾಡಿ, ಬಿಸಿ ನೀರಿನಿಂದ ಸ್ಟೀಮ್ ಮಾಡಿ.

10 ನಿಮಿಷಗಳ ನಂತರ ಬಿಸಿ ನೀರಿನಲ್ಲಿ ಟವೆಲ್ ಅದ್ದಿ ಅದನ್ನು 15 ನಿಮಿಷಗಳವರೆಗೆ ಕೂದಲಿಗೆ ಸುತ್ತಿಡಿ. ಇದರಿಂದ ಕೂದಲು ಸಾಫ್ಟ್ ಆಗುವುದರ  ಜೊತೆಗೆ ಹೊಳಪೂ ಬರುತ್ತದೆ.

ಬ್ಯಾಕ್‌ ಟ್ರೀಟ್‌ಮೆಂಟ್‌ : ಸೆಕ್ಸೀ ಬ್ಯಾಕ್‌ಗಾಗಿ

ದೀಪಾವಳಿಯಂದು ನೀವು ಲಹಂಗಾ ಅಥವಾ ಸೀರೆಯೊಡನೆ ಬ್ಯಾಕ್‌ಲೆಸ್‌ ಬ್ಲೌಸ್‌ ಧರಿಸುವಿರಾದರೆ, ನೀವು ಅಗತ್ಯವಾಗಿ ಬ್ಯಾಕ್‌ ಸ್ಪಾ ಪಡೆಯಬೇಕು (ಇದರಲ್ಲಿ ಬ್ಯಾಕ್‌ ಸ್ಕ್ರಬ್‌, ಮಡ್‌ ಪ್ಯಾಕ್‌ ಮತ್ತು ಮಸಾಜ್‌ ಸೇರಿರುತ್ತದೆ).

ಹಬ್ಬದ ಗಡಿಬಿಡಿಯಲ್ಲಿ ನೀವು ಬಿಡುವು ಮಾಡಿಕೊಂಡು ಪಾರ್ಲರ್‌ಗೆ ಹೋಗುವುದು ಕಷ್ಟವಾಗುತ್ತದೆ. ಆದ್ದರಿಂದ ನೀವು ಮನೆಯಲ್ಲೇ ಕುಳಿತು ಬ್ಯಾಕ್‌ ಟ್ರೀಟ್‌ಮೆಂಟ್‌ ಪಡೆಯಬಹುದು.

ಒಂದು ಕಪ್‌ ಸಮುದ್ರದ ಉಪ್ಪಿಗೆ ಅರ್ಧ ಕಪ್‌ ಆಲಿವ್‌ ಆಯಿಲ್‌ ಮತ್ತು 5 ಹನಿ ಸ್ಯಾಂಡಲ್ ಆಯಿಲ್ ಸೇರಿಸಿ ಮಿಶ್ರಣ ತಯಾರಿಸಿ.

ಈ ಮಿಶ್ರಣದಿಂದ ಬೆನ್ನಿಗೆ ಮಸಾಜ್‌ ಮಾಡಿ. ನಂತರ ಒದ್ದೆಯಾದ ಟವೆಲ್‌ನಿಂದ ಸ್ವಚ್ಛಗೊಳಿಸಿ.

ಮೆನಿಕ್ಯೂರ್‌ಪೆಡಿಕ್ಯೂರ್‌ : ಬೆಡಗಿನ ಲುಕ್ಸ್ ಗಾಗಿ

ಹಬ್ಬದ ಸಂದರ್ಭದಲ್ಲಿ ನಿಮ್ಮ ಲುಕ್ಸ್ ಮಾತ್ರ ಚೆನ್ನಾಗಿದ್ದರೆ ಸಾಲದು. ನಿಮ್ಮ ಗೆಳತಿಯರು ನಿಮ್ಮ ಕೈಕಾಲುಗಳನ್ನೂ ಹೊಗಳಬೇಕಲ್ಲವೇ?

ಇದಕ್ಕಾಗಿ ಹೆಚ್ಚು ಹಣ ವೆಚ್ಚ ಮಾಡದೆ ಡೂ ಯುವರ್‌ ಸೆಲ್ಫ್ ಕಿಟ್‌ನಿಂದ ಮನೆಯಲ್ಲೇ ಪಾರ್ಲರ್‌ನಲ್ಲಿ ದೊರೆಯುವ ಲುಕ್ಸ್ ಪಡೆದುಕೊಳ್ಳಿ. ಮೆನಿಕ್ಯೂರ್‌-ಪೆಡಿಕ್ಯೂರ್‌ ಹ್ಯಾಂಡ್ ಕಿಟ್‌ ಬಳಸಿ. ಜೊತೆಗೆ ನಿಮ್ಮ ಉಗುರುಗಳಿಗೆ ಶೈನ್‌ ಜೆಲ್ ನೇಲ್ ಲಿಕ್ವಿಡ್‌ನಿಂದ ಪೇಂಟ್‌ ಮಾಡಿ ಆಕರ್ಷಕ ಲುಕ್ಸ್ ಪಡೆಯಿರಿ.

ಹೀಗೆ ನೀವು ಈ ದೀಪಾವಳಿಗೆ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಕುಳಿತೇ ಪಾರ್ಲರ್‌ನಿಂದ ಪಡೆಯುವ ಗ್ಲೋ ಮತ್ತು ಬ್ಯೂಟಿ ಗಳಿಸಿಕೊಳ್ಳಿ.

– ಪ್ರೇಮಲತಾ

ದೀಪಾವಳಿಗೆ ಒಂದು ವಾರ ಮೊದಲಿನಿಂದ ಪ್ರತಿದಿನ ನಿಮ್ಮ ಮುಖವನ್ನು ರೋಸ್‌ ವಾಟರ್‌ನಿಂದ ಸ್ವಚ್ಛಗೊಳಿಸಿ. ಇದಕ್ಕಾಗಿ ಕಾಮಾ ಆಯುರ್ವೇದ ಪ್ಯೂರ್‌ ರೋಸ್‌ವಾಟರ್‌ ಬಳಸಿ. ರೋಸ್‌ ವಾಟರ್‌ನಿಂದ ನಿಮ್ಮ ಚರ್ಮ ಕ್ಲೀನ್‌ ಶೈನ್‌ ಆಗಿ ಕಂಗೊಳಿಸುತ್ತದೆ.

ಮುಲ್ತಾನಿ ಮಿಟ್ಟಿಯಿಂದ ಮುಖ ಸ್ವಚ್ಛ ಮತ್ತು ಕಾಂತಿಯುತವಾಗುತ್ತದೆ. ಇದಕ್ಕಾಗಿ ನೀವು ತಿಜೋರಿ ನ್ಯಾಚುರಲ್ ಬ್ಯೂಟಿ ಮುಲ್ತಾನಿ ಮಿಟ್ಟಿ ರೋಸ್‌ ಫೇಸ್‌ ಪ್ಯಾಕ್‌ ಬಳಸಬಹುದು.

ನೀವು ಹೇರ್‌ ಕೇರ್‌ನ್ನು ಇನ್ನೂ ಸುಲಭಗೊಳಿಸಲು ಬಯಸುವಿರಾದರೆ ರಿಚ್‌ ಫೀಲ್ ಆರ್ಗನ್‌ ಹೇರ್‌ ಸ್ಪಾ ಕಿಟ್‌ ಬಳಸಬಹುದು. ಅದು ಒಳ್ಳೆಯ ಲುಕ್ಸ್ ಕೊಡುವುದಲ್ಲದೆ, ಪ್ಯಾಕೆಟ್‌ ಫ್ರೆಂಡ್ಲೀ ಸಹ ಆಗಿರುತ್ತದೆ.

ಬ್ಯಾಕ್‌ ಟ್ರೀಟ್‌ಮೆಂಟ್‌ನ  ಮತ್ತೂ ಸುಲಭವೆಂದರೆ ತಿಜೋರಿ ಎಕ್ಸ್ ಪೋಲಿಯೇಟಿಂಗ್‌ ಲೆಮನ್‌ ಗ್ರಾಸ್‌ ಬ್ಯಾಕ್‌ ಸ್ಕ್ರಬ್‌ನ್ನು ಬಳಸುವುದು. ಇದರಿಂದ ನಿಮ್ಮ ಬ್ಯಾಕ್‌ಗೆ ಹಾಟ್‌ ಲುಕ್‌ ದೊರೆಯಬಲ್ಲದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ