ದೀಪಾವಳಿ ಹಬ್ಬ ಬರಲಿದೆ. ಹಬ್ಬದಂದು ನೀವು ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳಬೇಕಲ್ಲವೇ? ಅದಕ್ಕಾಗಿ ನೀವು ಬ್ಯೂಟಿ ಪಾರ್ಲರ್‌ನಲ್ಲಿ ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳುವಿರಿ. ಇದರಿಂದ ನಿಮ್ಮ ಸಮಯ ಮತ್ತು ಹಣ ಎರಡೂ ವ್ಯಯವಾಗುವುದು.

ಇದಕ್ಕಾಗಿ ನಾವು ನಿಮಗೊಂದು ಉಪಾಯ ಹೇಳಿಕೊಡುತ್ತೇವೆ. ಅದರಿಂದ ನೀವು ಹಬ್ಬವನ್ನು ಚೆನ್ನಾಗಿ ಎಂಜಾಯ್‌ ಮಾಡಬಹುದು. ಜೊತೆಗೆ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಕುಳಿತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ಕಿನ್‌ ಮತ್ತು ಹೇರ್‌ ಕೇರ್‌ ಮಾಡಿಕೊಂಡು ಚಾರ್ಮಿಂಗ್‌ ಲುಕ್ಸ್ ಪಡೆಯಬಲ್ಲಿರಿ. ಅದು ಹೇಗೆಂದು ತಿಳಿಯಿರಿ.

ಫೇಶಿಯಲ್ : ಮುಖಕಾಂತಿ ಪಡೆಯಿರಿ

ತಮ್ಮ ಗ್ಲೋಯಿಂಗ್‌ ಸ್ಕಿನ್‌ ನೋಡಿ ಎಲ್ಲರೂ ಹೊಗಳುವಂತಾಗಲಿ ಎಂದು ಪ್ರತಿಯೊಬ್ಬ ಮಹಿಳೆಯೂ ಬಯಸುತ್ತಾಳೆ.

ಇದಕ್ಕಾಗಿ ಕ್ಲೆನ್ಸಿಂಗ್‌, ಮಸಾಜ್‌, ಸೀರಮ್ ಮತ್ತು ಮಾಸ್ಕ್ ಟ್ರೀಟ್‌ಮೆಂಟ್‌ ಉತ್ತಮವೆಂದು ತಿಳಿಯಲಾಗಿದೆ. ಈ ವಿಧಾನದಿಂದ ತ್ವಚೆಯ ಕೊಳೆ ಮತ್ತು ಡೆಡ್‌ ಸೆಲ್ಸ್ ನಿವಾರಣೆಯಾಗಿ ಹೊಸ ಜೀವಕಳೆ ಕಂಡುಬರುತ್ತದೆ. ಹೀಗೆ ಪ್ರತಿ ತಿಂಗಳು ಮಾಡಿಸಿದಾಗ ಚರ್ಮ ಸಾಫ್ಟ್ ಮತ್ತು ವೈಟ್‌ ಆಗಿ ಕಾಣಿಸುತ್ತದೆ.

ಈ ಟ್ರೀಟ್‌ಮೆಂಟ್‌ಗಾಗಿ ಪಾರ್ಲರ್‌ಗೆ ಹೋಗಿ ಹಣ ವೆಚ್ಚ ಮಾಡುವ ಬದಲು `ಡೂ ಯುವರ್‌ಸೆಲ್ಫ್ ಎಂಬಂತೆ ನೀವೇ ಮನೆಯಲ್ಲಿ ಮಾಡಿಕೊಂಡು ಅದೇ ಲುಕ್ಸ್ ಪಡೆದುಕೊಳ್ಳಬಹುದು. ಹಾಗೆ ಮಾಡಲು ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು.

ಸಕ್ಕರೆ ಮತ್ತು ಕೊಬ್ಬರಿ ಎಣ್ಣೆ ಬೆರೆಸಿ ಫೇಶಿಯಲ್ ಸ್ಕ್ರಬ್‌ ತಯಾರಿಸಿ. ಇದನ್ನು ವಾರಕ್ಕೆರಡು ಬಾರಿ ಮುಖಕ್ಕೆ ಹಚ್ಚುವುದರಿಂದ ಡೆಡ್‌ ಸೆಲ್ಸ್ ನಿವಾರಣೆಯಾಗುತ್ತವೆ.

ಹೇರ್‌ ಸ್ಪಾ : ಕೂದಲಿಗೆ ಹೊಸ ಜೀವ

ಸಾಮಾನ್ಯ ದಿನಗಳಲ್ಲಿ ಕೂದಲಿಗೆ ಹೆಚ್ಚು ಗಮನ ಕೊಡದೆ ಯಾವಾಗಲೂ ಹೇರ್‌ ಕ್ಲಿಪ್‌ ಹಾಕಿ ಬಿಗಿದಿರುತ್ತೀರಿ. ಹಬ್ಬ ಹತ್ತಿರ ಬಂದಾಗ ಎಚ್ಚೆತ್ತು ಸುಂದರ ಕೂದಲಿಗಾಗಿ ಹೇರ್‌ ಸ್ಪಾದ ಅಪಾಯಿಂಟ್‌ಮೆಂಟ್‌ ಬುಕ್‌ ಮಾಡುವಿರಿ. ಅದನ್ನು ನೀವೇ ಮನೆಯಲ್ಲಿ ಮಾಡಬಹುದಲ್ಲವೇ?

ಇದಕ್ಕಾಗಿ ಇಂಟರ್‌ನೆಟ್‌ನಲ್ಲಿ ನಿಮಗೆ ಅನೇಕ ಟಿಪ್ಸ್ ದೊರೆಯುತ್ತವೆ. ಆದರೆ ಇಲ್ಲಿ ನಿಮಗೊಂದು ಅತ್ಯಂತ ಸುಲಭವಾದ ವಿಧಾನವನ್ನೂ  ಪ್ರಸ್ತುತಪಡಿಸುತ್ತೇವೆ. ಇದು ಕಡಿಮೆ ಸಮಯದಲ್ಲಿ ಬೆಸ್ಟ್ ಲುಕ್ಸ್ ನೀಡುತ್ತದೆ. ಆ ಲುಕ್ಸ್ ಕಂಡಾಗ ನೀವು ನಿಮ್ಮ ಕೂದಲನ್ನು ಕಂಡು ಮೋಹಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಮೊದಲು 2-3 ಚಮಚ ಆಲಿವ್‌ ಆಯಿಲ್‌, ಬಿಸಿ ನೀರು ಮತ್ತು ಒಂದು ಟವೆಲ್‌ ತೆಗೆದುಕೊಳ್ಳಿ.

ಆಲಿವ್‌ ಆಯಿಲ್‌ನಿಂದ ಕೂದಲು ಮತ್ತು ಅದರ ಬುಡವನ್ನು ಚೆನ್ನಾಗಿ ಮಸಾಜ್‌ ಮಾಡಿ, ಬಿಸಿ ನೀರಿನಿಂದ ಸ್ಟೀಮ್ ಮಾಡಿ.

10 ನಿಮಿಷಗಳ ನಂತರ ಬಿಸಿ ನೀರಿನಲ್ಲಿ ಟವೆಲ್ ಅದ್ದಿ ಅದನ್ನು 15 ನಿಮಿಷಗಳವರೆಗೆ ಕೂದಲಿಗೆ ಸುತ್ತಿಡಿ. ಇದರಿಂದ ಕೂದಲು ಸಾಫ್ಟ್ ಆಗುವುದರ  ಜೊತೆಗೆ ಹೊಳಪೂ ಬರುತ್ತದೆ.

ಬ್ಯಾಕ್‌ ಟ್ರೀಟ್‌ಮೆಂಟ್‌ : ಸೆಕ್ಸೀ ಬ್ಯಾಕ್‌ಗಾಗಿ

ದೀಪಾವಳಿಯಂದು ನೀವು ಲಹಂಗಾ ಅಥವಾ ಸೀರೆಯೊಡನೆ ಬ್ಯಾಕ್‌ಲೆಸ್‌ ಬ್ಲೌಸ್‌ ಧರಿಸುವಿರಾದರೆ, ನೀವು ಅಗತ್ಯವಾಗಿ ಬ್ಯಾಕ್‌ ಸ್ಪಾ ಪಡೆಯಬೇಕು (ಇದರಲ್ಲಿ ಬ್ಯಾಕ್‌ ಸ್ಕ್ರಬ್‌, ಮಡ್‌ ಪ್ಯಾಕ್‌ ಮತ್ತು ಮಸಾಜ್‌ ಸೇರಿರುತ್ತದೆ).

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ