ನೀವು ಮದುವೆ ಮನೆ, ಪಾರ್ಟಿ, ಯಾವುದೇ ಪ್ರಮುಖ ಸಮಾರಂಭಕ್ಕೆ ಹೊರಟಿರಲಿ ಅಲ್ಲಿಗೆ ಬಗೆಬಗೆಯ ವೈವಿಧ್ಯಮಯ ಡ್ರೆಸ್‌ಗಳಲ್ಲಿ ಮಿಂಚುತ್ತಿರುವ ಹೆಂಗಸರು ಬಂದಿರುವುದನ್ನು ನೀವು ಗಮನಿಸಿರಬಹುದು. ಆದರೆ ಈ ದೊಡ್ಡ ಗುಂಪಿನಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಆಕರ್ಷಣೆಯ ಕೇಂದ್ರ ಎನಿಸುವುದು ಹೇಗೆ? ಈ ಕುರಿತಾಗಿ ಈಗ ವಿವರವಾಗಿ ತಿಳಿಯೋಣವೇ.
ಯಾವುದೇ ಪಾರ್ಟಿಗೆ ಹೊರಡುವುದಕ್ಕೆ ಮೊದಲು ಅದಕ್ಕೆ ಬೇಕಾದ ಡ್ರೆಸ್ ರೆಡಿ ಮಾಡಿಕೊಳ್ಳಿ. ನಂತರ ಅದಕ್ಕೆ ತಕ್ಕಂತೆ ಮೇಕಪ್ ಮಾಡಬೇಕು. ಬಹಳಷ್ಟು ಹೆಂಗಸರು ಸೀರೆ, ಸಲ್ವಾರ್ ಸೂಟ್, ಚೂಡೀದಾರ್, ಲಹಂಗಾ, ಗೌನ್ ಇತ್ಯಾದಿ ಎಲ್ಲದಕ್ಕೂ ಒಂದೇ ತರಹದ ಮೇಕಪ್ ಮಾಡಿಕೊಳ್ಳುತ್ತಾರೆ, ಇದರಿಂದ ಇವರ ಸೌಂದರ್ಯ ಪೂರ್ಣ ಪ್ರಮಾಣ ಹೊರಹೊಮ್ಮದು. ಬದಲಿಗೆ ಇನ್ನಷ್ಟು ಬಾಡಿಹೋಗುತ್ತದೆ. ಪ್ರತಿ ಡ್ರೆಸ್‌ನಲ್ಲೂ ಅವರುಗಳ ಲುಕ್ಸ್ ಒಂದೇ ತರಹ ಆಗಿಬಿಡುತ್ತದೆ. ನೀವು ನಿಮ್ಮ ಎಂದಿನ ಲುಕ್ಸ್ ಗಿಂತ ಡಿಫರೆಂಟ್ ಆಗಿ ಕಂಗೊಳಿಸಲು ಬಯಸಿದರೆ, ಡ್ರೆಸ್‌ಗೆ ತಕ್ಕಂತೆ ಮೇಕಪ್ ಮಾಡಿಕೊಳ್ಳುವುದನ್ನು ಹೀಗೆ ಕಲಿಯಿರಿ :
ವೆಸ್ಟರ್ನ್ ಡ್ರೆಸ್‌ಗೆ ತಕ್ಕಂತೆ ಮೇಕಪ್
ಮೊದಲು ಮುಖವನ್ನು ನೀಟಾಗಿ ಶುಚಿಗೊಳಿಸಿ. ಒಂದು ಪಕ್ಷ ಡಾರ್ಕ್ ಸರ್ಕಲ್ಸ್ ಇದ್ದರೆ ಆರೆಂಜ್ ಕಲರ್‌ನ ಕನ್ಸೀಲರ್ ಹಚ್ಚಿರಿ ಹಾಗೂ ಚೆನ್ನಾಗಿ ಮರ್ಜ್ ಮಾಡಿ. ಬ್ರಶ್‌ನಿಂದಲೇ ಕನ್ಸೀಲರ್ ಹಚ್ಚಬೇಕು. ನಂತರ ಇಡೀ ಮುಖಕ್ಕೆ ಪ್ರೈಮರ್ ಹಚ್ಚಿರಿ.
ನಂತರ ಬೇಸ್ 4-5 ಮಿಕ್ಸ್ ಮಾಡಿ, ಅದಕ್ಕೆ ಮೇಕಪ್‌ನ 12 ಹನಿ ಹಾಕಿ ಬ್ಲೆಂಡ್ ಮಾಡಿ. ಆಗ ಬೇಸ್ ಸಾಫ್ಟ್ ಆಗುತ್ತದೆ. ನಂತರ ಇದನ್ನು ಲಿಕ್ವಿಡ್ ಮಾಡಿ ಹನಿಹನಿಯಾಗಿ ಬ್ರಶ್ಶಿನಿಂದ ಹಚ್ಚಿರಿ. ಬೇಸ್ ನಂತರ ಡರ್ಮಾಪೌಡರ್‌ಗಳನ್ನು ಮಿಕ್ಸ್ ಮಾಡಿ ಅದನ್ನೂ ಬ್ರಶ್ಶಿನಿಂದಲೇ ಹಚ್ಚಬೇಕು. ನಂತರ ಅಗತ್ಯ ಬಿದ್ದರೆ ಕಂಟೂರಿಂಗ್ ಕಲರ್‌ನಿಂದ ನೋಸ್, ಚೀಕ್ಸ್, ಹಣೆಯ ಕಂಟೂರಿಂಗ್ ಮಾಡಿ. ಬ್ರೌನ್ ಐ ಶ್ಯಾಡೋದಿಂದಲೂ ಕಂಟೂರಿಂಗ್ ಮಾಡಬಹುದು.
ಐ ಮೇಕಪ್ : ಇದಕ್ಕಾಗಿ ಐ ಶ್ಯಾಡೋ ಪ್ರೈಮರ್‌ನ 1 ಹನಿ ತೆಗೆದುಕೊಂಡು ಬೆರಳ ತುದಿಯಿಂದ ತೀಡಿರಿ. ಆಗ ಬ್ಲೆಂಡಿಂಗ್ ಚೆನ್ನಾಗಿ ಆಗುತ್ತದೆ. ಐ ಬ್ರೋಸ್‌ಗೆ ಸದಾ ಹೈವೆಯ್ಸ್ಟ್ ಪಾಯಿಂಟ್ ಮೇಲೆ ಬ್ರಶ್ ನಂ.980ಯಿಂದ ಕಲರ್ ಹಚ್ಚುತ್ತಾ ಒಳಭಾಗಕ್ಕೆ ಬನ್ನಿ. ನಂತರ ಹೈಲೈಟರ್ ಕ್ರೀಂನಿಂದ 3/4 (ತ್ರೀ ಫೋರ್ಥ್) ಹಚ್ಚಿರಿ. ಈಗ ಐ ಬಾಲ್ಸ್ ನಿಂದ ಕೆಳಭಾಗದ ಕಡೆಗೆ ಚಾಕಲೇಟ್ ಬ್ರೌನ್ ಕಲರ್ ಹಚ್ಚಿರಿ. ನಂತರ ಬ್ಲ್ಯಾಕ್ ಪೆನ್ಸಿಲ್‌ನಿಂದ ಕಾರ್ನರ್‌ನಲ್ಲಿ ಶ್ಯಾಡೋ ಹಚ್ಚಿರಿ ಹಾಗೂ ಚೆನ್ನಾಗಿ ಬ್ಲೆಂಡ್ ಮಾಡಿ ಕಂಗಳ ಕೆಳಗೆ ವಾಟರ್ ಲೈನ್ ಏರಿಯಾದಲ್ಲಿ ಕಾಜಲ್ ಪೆನ್ಸಿಲ್‌ನಿಂದ 3/4 ಹಚ್ಚಿರಿ. ಈಗ ಬ್ರಶ್ಶಿನಿಂದ ಡಾರ್ಕ್ ಬ್ರೌನ್ ಚಾಕಲೇಟ್ ಕಲರ್ ಕಾಜಲ್ ಏರಿಯಾದ ಹೊರಗೆ ಹಚ್ಚಿರಿ. ನಂತರ ಕೇಪ್ ಲೈನರ್‌ನಿಂದ ಸೆಲ್ ಸೀಲರ್ ಬೆರೆಸಿ ಹಚ್ಚಿರಿ. ಹೊರಭಾಗದಲ್ಲಿ ದಪ್ಪ ಹಾಗೂ ಒಳಭಾಗದಲ್ಲಿ ತೆಳು ಲೈನ್ ಹಚ್ಚಬೇಕು. ಕೊನೆಯಲ್ಲಿ ಐ ಲ್ಯಾಶೆಸ್‌ನ್ನು ಸುಂದರ, ದಟ್ಟಗೊಳಿಸಲು ಮಸ್ಕರಾ ಹಚ್ಚಿರಿ. ಇದಕ್ಕಾಗಿ ವೀವಾ ಹೈಲೈಟರ್ ಬಳಸಿರಿ. ಬ್ಲಶರ್ ಪೀಚ್ ಬಣ್ಣದ್ದಾದರೆ, ಲಿಪ್‌ಸ್ಟಿಕ್ ಲೈಟ್ ಪಿಂಕ್ ಕಲರ್ ಆಗಿರಬೇಕು.
ಹೇರ್‌ಸ್ಟೈಲ್ : ವೆಸ್ಟರ್ನ್ ಡ್ರೆಸ್ ಜೊತೆ ಸ್ಟ್ರೇಟ್ ಹೇರ್ ಯಾ ಟಾಪ್‌ನಾಟ್ ಜಡೆ ಹೆಣೆದುಕೊಳ್ಳಿ. ಇದಲ್ಲದೆ, ಡ್ರೆಸ್‌ಗೆ ತಕ್ಕಂತೆಯೇ ಹೇರ್‌ಸ್ಟೈಲ್ ಆರಿಸಬೇಕು. ಗೌನ್, ಬ್ಯಾಕ್‌ಲೆಸ್ ಡ್ರೆಸ್, ಟ್ಯೂನಿಕ್ ಯಾ ಟಾಪ್ ಪ್ಲಾಜೋಗಳ ಜೊತೆ ನೀವು ಮ್ಯಾಜಿಕ್ ಹೇರ್‌ಕಟ್ ಪ್ರಿಫರ್ ಮಾಡಿ. ಇದರಲ್ಲಿ ಮೇಲ್ಭಾಗದ ಕೂದಲು ಚಿಕ್ಕದು, ಕೆಳಗಿನದು ಉದ್ದ, ನಡುವಿನದು ಸಾಧಾರಣ ಲೆಂಥ್ ಇರಲಿ. ಈ ಸ್ಟೈಲ್ ನಿಮಗೆ ಸ್ಮಾರ್ಟ್ ಲುಕ್ಸ್ ನೀಡುತ್ತದೆ ಹಾಗೂ ಟ್ರೆಡಿಶನಲ್ ಮಾಡರ್ನ್ ಎರಡೂ ಡ್ರೆಸ್‌ಗಳಿಗೆ ಬೆಸ್ಟ್ ಎನಿಸುತ್ತದೆ.
ಸೀರೆ ಜೊತೆ ಮೇಕಪ್
ಎಲ್ಲಕ್ಕೂ ಮೊದಲು ಮುಖವನ್ನು ನೀಟಾಗಿ ಶುಚಿಗೊಳಿಸಿ, ಮಾಯಿಶ್ಚರೈಸರ್ ಹಚ್ಚಿರಿ. ನಂತರ ಅಲ್ಟ್ರಾ ಅಂಡರ್ ಬೇಸ್ ಹಚ್ಚಿರಿ ಈ ಬೇಸ್‌ನ್ನು ನೀವು ಯಾವುದೇ ಸೀಸನ್‌ನಲ್ಲೂ ಹಚ್ಚಬಹುದು. ನಂತರ ಈ ಬೇಸ್‌ಗೆ ಚೆನ್ನಾಗಿ ಬೆರೆಸಿ ಹಚ್ಚಬೇಕು. ನಂತರ ಅದನ್ನು ಚೆನ್ನಾಗಿ ಮರ್ಜ್ ಮಾಡಿ. ನಂತರ ಮುಖದ ಕಂಟೂರಿಂಗ್‌ಗಾಗಿ ಕಂಟೂರಿಂಗ್ ಕಲರ್‌ನಿಂದ ಮೂಗು, ಹಣೆ, ಕೆನ್ನೆ, ಗಲ್ಲಗಳ ಕಂಟೂರಿಂಗ್ ಮಾಡಿ. ಈಗ ಬ್ರಶ್‌ನಿಂದ ಟ್ರಾನ್ಸ್ ಲೂಸೆಂಟ್ ಪೌಡರ್ ಹಚ್ಚಿರಿ.
ಕಂಗಳ ಮೇಕಪ್ ಸ್ಪೆಷಲ್ ಆಗಿರಲಿ : ಕಂಗಳ ಮೇಕಪ್‌ಗಾಗಿ ಎಲ್ಲಕ್ಕೂ ಮೊದಲು ಶ್ಯಾಡೋ ಪ್ರೈಮರ್ ಹಚ್ಚಿರಿ. ನಂತರ ಶಿಮರಿಂಗ್ ವಿಷನ್‌ನಿಂದ ಗೋಲ್ಡ್ ಬ್ರಾಂಝ್ ಕಲರ್ ಸೈಡ್‌ನಲ್ಲಿ ಹಚ್ಚಿಕೊಂಡು, ಐಬಾಲ್ಸ್ ನ ಸೆಂಟರ್‌ನಲ್ಲಿ ಪಿಂಕ್ ಕಲರ್‌ನ ಶ್ಯಾಡೋ ಹಚ್ಚಬೇಕು. ಕಂಗಳ ಕೊನೆಯಂಚಲ್ಲಿ ಹಚ್ಚಲು ಮೆಟಾಲಿಕ್ ಬ್ಲೂ ಕಲರ್ ತೆಗೆದು ಹಚ್ಚಿರಿ. ಕಂಗಳ ಕೆಳಭಾಗಕ್ಕೆ ಬ್ಲೂ ಕಾಪರ್ ಶ್ಯಾಡೋ 3/4 ಹಚ್ಚಿರಿ.
ಹೈಲೈಟಿಂಗ್‌ಗಾಗಿ ಲಿವಿಂಗ್ ಕಲರ್ ಸಿಲ್ಕ್ ಗೋಲ್ಡ್ ಬಳಸಿಕೊಳ್ಳಿ. ನಂತರ ಅದನ್ನು ಮರ್ಜ್ ಮಾಡಿ. ಎಲ್ಲಿ ಕ್ರೀಮೀ ಶ್ಯಾಡೋ ಹಚ್ಚಿದ್ದೀರೋ ಅಲ್ಲಿ ತುಸು ಪೌಡರ್ ಸಹ ಉದುರಿಸಿ. ಕಂಗಳ ಕೆಳಗೂ ಪೌಡರ್ ಶ್ಯಾಡೋ ಉದುರಿಸಿ. ಬ್ರಶ್‌ನಲ್ಲಿ ಬ್ರೌನ್ ಶ್ಯಾಡೋ ತೆಗೆದುಕೊಂಡು ಐ ಬ್ರೋಸ್‌ನ್ನು ಶಾರ್ಪ್ ಮಾಡಿ. ನಂತರ ಇದರ ಮೇಲೆ ಆರ್ಟಿಫಿಶಿಯಲ್ ಐ ಲ್ಯಾಶೆಸ್ ತೆಗೆದು ಅಂಟಿಸಿ. ಇದು ಒಣಗಿದ ನಂತರ, ಇದರ ಮೇಲೆ ಕೇಕ್ ಲೈನರ್‌ನಲ್ಲಿ ಸೀಲರ್ ಮಿಕ್ಸ್ ಮಾಡಿ ಹಚ್ಚಿರಿ. ನಂತರ ಗ್ಲಿಟರ್ ಹಚ್ಚಿ ಕಾಪರ್ ಮಸ್ಕರಾ ಹಚ್ಚಿರಿ.
ತುಟಿಗಳನ್ನು ಆಕರ್ಷಕಗೊಳಿಸಿ : ಒದ್ದೆ ಕಾಟನ್‌ನಿಂದ ಮೊದಲು ತುಟಿಗಳನ್ನು ಚೆನ್ನಾಗಿ ಶುಚಿಗೊಳಿಸಿ. ನಂತರ ಲಿಪ್‌ಸ್ಟಿಕ್‌ಗೆ 2 ಹನಿ ಸೀಲರ್ ಬೆರೆಸಿ ತುಟಿಗೆ ಹಚ್ಚಿರಿ. ಇದರ ಮೇಲೆ ಗ್ಲಾಸ್ ಲಿಪ್‌ಸ್ಟಿಕ್ ಬಹಳ ಹೊತ್ತು ಹಾಗೇ ಉಳಿಯುತ್ತದೆ.
ಚೀಕ್ಸ್ ಮೇಕಪ್ : ಕೆನ್ನೆಗಳ ಅಂದ ಹೆಚ್ಚಿಸಲು ಗ್ಲಾಮರ್ ಗ್ಲೋನಿಂದ ಬ್ಲಶರ್ ತೆಗೆದುಕೊಂಡು ಚೀಕ್‌ಬೋನ್ಸ್ ಮೇಲೆ ಒಳಗಿನಿಂದ ಮೇಲಕ್ಕೆ ಹಚ್ಚಿರಿ. ಇದರಿಂದ ಕೆನ್ನೆಗಳು ಹೊಳೆಯ ತೊಡಗುತ್ತವೆ, ಅದರಿಂದ ಮುಖ ವಿಭಿನ್ನವಾಗಿ ತೋರುತ್ತದೆ.
ಹೇರ್‌ಸ್ಟೈಲ್ ಆಗಿರಲಿ ಪರ್ಫೆಕ್ಟ್ : ಪರ್ಫೆಕ್ಟ್ ಡ್ರೆಸ್ ಮೇಕಪ್‌ಗೆ ಜೊತೆಯಾಗಿ ಹೇರ್‌ಸ್ಟೈಲ್ ಸಹ ಪರ್ಫೆಕ್ಟ್ ಆಗಿದ್ದರೆ ಹೇಳುವುದೇ ಬೇಡ. ಹೇರ್‌ಸ್ಟೈಲ್ ನಿಮ್ಮ ಲುಕ್ಸನ್ನು ಇನ್ನಷ್ಟು ಸುಧಾರಿಸಲಿದೆ. ಇದಕ್ಕಾಗಿ ಮೊದಲು ಕೂದಲನ್ನು ಚೆನ್ನಾಗಿ ಬಾಚಿ 2 ಭಾಗವಾಗಿ ವಿಂಗಡಿಸಿ. ನಂತರ ಮುಂಭಾಗದಿಂದ ಇಯರ್-ಇಯರ್ ಪಾರ್ಟಿಂಗ್ ಮಾಡಿ.
ಹಿಂಭಾಗದ ಕೂದಲನ್ನು ಪೋನಿ ಮಾಡಿ. ಮುಂಭಾಗದಿಂದ ಬಾಕ್ಸ್ ಏರಿಯಾ ಪಾರ್ಟಿಂಗ್ ಮಾಡಿ, ಕೂದಲನ್ನು ಹಿಂಭಾಗದಿಂದ ಖರ್ಜೂರದ ಹೆಣಿಗೆ ಬರುವಂತೆ ಜಡೆ ಹಾಕಿರಿ. ಈಗ ಇದರಿಂದ ಖರ್ಜೂರದ ಪಫ್ ಮಾಡಿ. ಪೋನಿಯ ಕೂದಲನ್ನು ಸುತ್ತಿಕೊಂಡು ಕೊಂಡೆ ಹಾಕಿರಿ. ನಂತರ ಕೃತಕ ಹೇರ್ ಆ್ಯಕ್ಸೆಸರೀಸ್ ಅಳವಡಿಸಿ. ಅದರ ಮೇಲೆ ನೆಟ್ ಬರಲಿ. ಹೇರ್ ಆ್ಯಕ್ಸೆಸರೀಸ್ ಡ್ರೆಸ್‌ಗೆ ತಕ್ಕಂತಿರಲಿ. ತೀರಾ ಅಗತ್ಯವೆನಿಸಿದರೆ ಮಾತ್ರ ಬಳಸಿರಿ.
– ಪ್ರತಿನಿಧಿ