ನೀವು ಮದುವೆ ಮನೆ, ಪಾರ್ಟಿ, ಯಾವುದೇ ಪ್ರಮುಖ ಸಮಾರಂಭಕ್ಕೆ ಹೊರಟಿರಲಿ ಅಲ್ಲಿಗೆ ಬಗೆಬಗೆಯ ವೈವಿಧ್ಯಮಯ ಡ್ರೆಸ್‌ಗಳಲ್ಲಿ ಮಿಂಚುತ್ತಿರುವ ಹೆಂಗಸರು ಬಂದಿರುವುದನ್ನು ನೀವು ಗಮನಿಸಿರಬಹುದು. ಆದರೆ ಈ ದೊಡ್ಡ ಗುಂಪಿನಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಆಕರ್ಷಣೆಯ ಕೇಂದ್ರ ಎನಿಸುವುದು ಹೇಗೆ? ಈ ಕುರಿತಾಗಿ ಈಗ ವಿವರವಾಗಿ ತಿಳಿಯೋಣವೇ.
ಯಾವುದೇ ಪಾರ್ಟಿಗೆ ಹೊರಡುವುದಕ್ಕೆ ಮೊದಲು ಅದಕ್ಕೆ ಬೇಕಾದ ಡ್ರೆಸ್ ರೆಡಿ ಮಾಡಿಕೊಳ್ಳಿ. ನಂತರ ಅದಕ್ಕೆ ತಕ್ಕಂತೆ ಮೇಕಪ್ ಮಾಡಬೇಕು. ಬಹಳಷ್ಟು ಹೆಂಗಸರು ಸೀರೆ, ಸಲ್ವಾರ್ ಸೂಟ್, ಚೂಡೀದಾರ್, ಲಹಂಗಾ, ಗೌನ್ ಇತ್ಯಾದಿ ಎಲ್ಲದಕ್ಕೂ ಒಂದೇ ತರಹದ ಮೇಕಪ್ ಮಾಡಿಕೊಳ್ಳುತ್ತಾರೆ, ಇದರಿಂದ ಇವರ ಸೌಂದರ್ಯ ಪೂರ್ಣ ಪ್ರಮಾಣ ಹೊರಹೊಮ್ಮದು. ಬದಲಿಗೆ ಇನ್ನಷ್ಟು ಬಾಡಿಹೋಗುತ್ತದೆ. ಪ್ರತಿ ಡ್ರೆಸ್‌ನಲ್ಲೂ ಅವರುಗಳ ಲುಕ್ಸ್ ಒಂದೇ ತರಹ ಆಗಿಬಿಡುತ್ತದೆ. ನೀವು ನಿಮ್ಮ ಎಂದಿನ ಲುಕ್ಸ್ ಗಿಂತ ಡಿಫರೆಂಟ್ ಆಗಿ ಕಂಗೊಳಿಸಲು ಬಯಸಿದರೆ, ಡ್ರೆಸ್‌ಗೆ ತಕ್ಕಂತೆ ಮೇಕಪ್ ಮಾಡಿಕೊಳ್ಳುವುದನ್ನು ಹೀಗೆ ಕಲಿಯಿರಿ :
ವೆಸ್ಟರ್ನ್ ಡ್ರೆಸ್‌ಗೆ ತಕ್ಕಂತೆ ಮೇಕಪ್
ಮೊದಲು ಮುಖವನ್ನು ನೀಟಾಗಿ ಶುಚಿಗೊಳಿಸಿ. ಒಂದು ಪಕ್ಷ ಡಾರ್ಕ್ ಸರ್ಕಲ್ಸ್ ಇದ್ದರೆ ಆರೆಂಜ್ ಕಲರ್‌ನ ಕನ್ಸೀಲರ್ ಹಚ್ಚಿರಿ ಹಾಗೂ ಚೆನ್ನಾಗಿ ಮರ್ಜ್ ಮಾಡಿ. ಬ್ರಶ್‌ನಿಂದಲೇ ಕನ್ಸೀಲರ್ ಹಚ್ಚಬೇಕು. ನಂತರ ಇಡೀ ಮುಖಕ್ಕೆ ಪ್ರೈಮರ್ ಹಚ್ಚಿರಿ.
ನಂತರ ಬೇಸ್ 4-5 ಮಿಕ್ಸ್ ಮಾಡಿ, ಅದಕ್ಕೆ ಮೇಕಪ್‌ನ 12 ಹನಿ ಹಾಕಿ ಬ್ಲೆಂಡ್ ಮಾಡಿ. ಆಗ ಬೇಸ್ ಸಾಫ್ಟ್ ಆಗುತ್ತದೆ. ನಂತರ ಇದನ್ನು ಲಿಕ್ವಿಡ್ ಮಾಡಿ ಹನಿಹನಿಯಾಗಿ ಬ್ರಶ್ಶಿನಿಂದ ಹಚ್ಚಿರಿ. ಬೇಸ್ ನಂತರ ಡರ್ಮಾಪೌಡರ್‌ಗಳನ್ನು ಮಿಕ್ಸ್ ಮಾಡಿ ಅದನ್ನೂ ಬ್ರಶ್ಶಿನಿಂದಲೇ ಹಚ್ಚಬೇಕು. ನಂತರ ಅಗತ್ಯ ಬಿದ್ದರೆ ಕಂಟೂರಿಂಗ್ ಕಲರ್‌ನಿಂದ ನೋಸ್, ಚೀಕ್ಸ್, ಹಣೆಯ ಕಂಟೂರಿಂಗ್ ಮಾಡಿ. ಬ್ರೌನ್ ಐ ಶ್ಯಾಡೋದಿಂದಲೂ ಕಂಟೂರಿಂಗ್ ಮಾಡಬಹುದು.
ಐ ಮೇಕಪ್ : ಇದಕ್ಕಾಗಿ ಐ ಶ್ಯಾಡೋ ಪ್ರೈಮರ್‌ನ 1 ಹನಿ ತೆಗೆದುಕೊಂಡು ಬೆರಳ ತುದಿಯಿಂದ ತೀಡಿರಿ. ಆಗ ಬ್ಲೆಂಡಿಂಗ್ ಚೆನ್ನಾಗಿ ಆಗುತ್ತದೆ. ಐ ಬ್ರೋಸ್‌ಗೆ ಸದಾ ಹೈವೆಯ್ಸ್ಟ್ ಪಾಯಿಂಟ್ ಮೇಲೆ ಬ್ರಶ್ ನಂ.980ಯಿಂದ ಕಲರ್ ಹಚ್ಚುತ್ತಾ ಒಳಭಾಗಕ್ಕೆ ಬನ್ನಿ. ನಂತರ ಹೈಲೈಟರ್ ಕ್ರೀಂನಿಂದ 3/4 (ತ್ರೀ ಫೋರ್ಥ್) ಹಚ್ಚಿರಿ. ಈಗ ಐ ಬಾಲ್ಸ್ ನಿಂದ ಕೆಳಭಾಗದ ಕಡೆಗೆ ಚಾಕಲೇಟ್ ಬ್ರೌನ್ ಕಲರ್ ಹಚ್ಚಿರಿ. ನಂತರ ಬ್ಲ್ಯಾಕ್ ಪೆನ್ಸಿಲ್‌ನಿಂದ ಕಾರ್ನರ್‌ನಲ್ಲಿ ಶ್ಯಾಡೋ ಹಚ್ಚಿರಿ ಹಾಗೂ ಚೆನ್ನಾಗಿ ಬ್ಲೆಂಡ್ ಮಾಡಿ ಕಂಗಳ ಕೆಳಗೆ ವಾಟರ್ ಲೈನ್ ಏರಿಯಾದಲ್ಲಿ ಕಾಜಲ್ ಪೆನ್ಸಿಲ್‌ನಿಂದ 3/4 ಹಚ್ಚಿರಿ. ಈಗ ಬ್ರಶ್ಶಿನಿಂದ ಡಾರ್ಕ್ ಬ್ರೌನ್ ಚಾಕಲೇಟ್ ಕಲರ್ ಕಾಜಲ್ ಏರಿಯಾದ ಹೊರಗೆ ಹಚ್ಚಿರಿ. ನಂತರ ಕೇಪ್ ಲೈನರ್‌ನಿಂದ ಸೆಲ್ ಸೀಲರ್ ಬೆರೆಸಿ ಹಚ್ಚಿರಿ. ಹೊರಭಾಗದಲ್ಲಿ ದಪ್ಪ ಹಾಗೂ ಒಳಭಾಗದಲ್ಲಿ ತೆಳು ಲೈನ್ ಹಚ್ಚಬೇಕು. ಕೊನೆಯಲ್ಲಿ ಐ ಲ್ಯಾಶೆಸ್‌ನ್ನು ಸುಂದರ, ದಟ್ಟಗೊಳಿಸಲು ಮಸ್ಕರಾ ಹಚ್ಚಿರಿ. ಇದಕ್ಕಾಗಿ ವೀವಾ ಹೈಲೈಟರ್ ಬಳಸಿರಿ. ಬ್ಲಶರ್ ಪೀಚ್ ಬಣ್ಣದ್ದಾದರೆ, ಲಿಪ್‌ಸ್ಟಿಕ್ ಲೈಟ್ ಪಿಂಕ್ ಕಲರ್ ಆಗಿರಬೇಕು.