ಸೌಂದರ್ಯ ಎಂಬುದು ಕೇವಲ ಮುಖದಿಂದ ಮಾತ್ರ ಗೋಚರಿಸುವುದಲ್ಲ. ಮುಖದ ಜೊತೆ ಕೈಕಾಲು ಸಹ ಸುಂದರವಾಗಿ ಕಂಡುಬಂದಲ್ಲಿ ಮಾತ್ರ ಹೆಣ್ಣು ಸೌಂದರ್ಯವತಿ ಎನಿಸುತ್ತಾಳೆ. ಕೈಗಳನ್ನು ಸುಂದರವಾಗಿ ತೋರಿಸಲು ನಮ್ಮ ಉಗುರು ಸರಿಯಾದ ರೀತಿಯಲ್ಲಿ ಆಕಾರ ಪಡೆದಿರಬೇಕು, ಶುಭ್ರವಾಗಿರಬೇಕು. ಅದರ ಮೇಲೆ ಬ್ಯೂಟಿಫುಲ್ ನೇಲ್ ಆರ್ಟ್ ಡಿಸೈನ್ ಇದ್ದರೆ ಇನ್ನೂ ಸುಂದರ!
ಅಂದಹಾಗೆ ನೇಲ್ ಆರ್ಟ್‌ನಲ್ಲಿ ಇದೀಗ ಒಂದಕ್ಕಿಂತ ಒಂದು ಲೇಟೆಸ್ಟ್ ಟ್ರೆಂಡ್ ಬಂದಿದೆ ಎಂದು ನಿಮಗೆ ಗೊತ್ತೇ? ಇವು ನಿಮ್ಮ ನೇಲ್ಸ್ ಗೆ ಡಿಫರೆಂಟ್ ಲುಕ್ಸ್ ನೀಡಿ ಅಟ್ರಾಕ್ಟಿವ್ ಆಗಿಸಬಲ್ಲದು. ನೀವು ನಿಮ್ಮ ಲುಕ್ಸ್ ಕುರಿತಾಗಿ ತುಸು ಚೇಂಜ್ ಓವರ್ ಮಾಡಬಯಸಿದರೆ, ಇಲ್ಲಿನ ಕೆಲವು ಡಿಫರೆಂಟ್ ಅಟ್ರಾಕ್ಟಿವ್ ಆಪ್ಶನ್ಸ್ ಆರಿಸಿ.
- ಪ್ರೇಮಲತಾ
ಅಡ್ವರ್ಟೈಸಿಂಗ್ ನೇಲ್ ಆರ್ಟ್ ಡಿಸೈನ್ : ಇಲ್ಲಿಯವರೆಗೆ ನೀವು ಫ್ಲವರ್, ಫ್ರೆಂಚ್, ಅನಿಮಲ್ ಡಿಸೈನ್ಸ್ ಮುಂತಾದುವನ್ನು ನಿಮ್ಮ ಉಗುರಿಗೆ ಹಾಕಿಸಿರಬಹುದು. ಆದರೆ ಈ ಬಗೆಯ ಆರ್ಟ್‌ನಿಂದ ನಿಮ್ಮ ಫೇವರಿಟ್ ಆ್ಯಡ್‌ನ್ನು ಆರಿಸಿ ಅದರ ಡಿಸೈನ್‌ನ್ನು ನಿಮ್ಮ ಉಗುರಿನ ಮೇಲೆ ಮೂಡಿಸಬಹುದು.
3ಡಿ ನೇಲ್ ಆರ್ಟ್ ಡಿಸೈನ್ : 3ಡಿ ನೇಲ್ ಪೇಂಟ್ಸ್, ಸ್ಕಲ್ಪ್ ಚರ್ ಪೌಡರ್, 3ಡಿ ಜೆಲ್‌ಗಳ ಮಿಶ್ರಣದಿಂದ 3ಡಿ ನೇಲ್ ಆರ್ಟ್ ರೂಪುಗೊಳ್ಳುತ್ತದೆ. ಇದರಲ್ಲಿ ಎಲ್ಲಾ ಡಿಸೈನ್‌ಗಳೂ 3ಡಿ ಎಫೆಕ್ಟ್ ಕೊಡುತ್ತವೆ. ಈ ಡಿಸೈನ್ ಇತರ ನೇಲ್ ಆರ್ಟ್ ಡಿಸೈನ್ಸ್ ನಿಂದ ಡಿಫರೆಂಟ್ ಆದಕಾರಣ, ಬಹಳ ಆಕರ್ಷಕ ಎನಿಸುತ್ತದೆ. ನಿಮ್ಮ ಮೂಡ್‌ಗೆ ತಕ್ಕಂತೆ ಇವನ್ನು ಡಿಸೈನ್ ಮಾಡಿಸಬಹುದು.
ನ್ಯೂಸ್‌ಪೇಪರ್ ನೇಲ್ ಆರ್ಟ್ ಡಿಸೈನ್ : ಈ ಬಗೆಯ ನೇಲ್ ಆರ್ಟ್‌ನಲ್ಲಿ ನೀವು ನಿಮ್ಮ ಫೇವರಿಟ್ ನ್ಯೂಸ್ ಪೇಪರ್‌ನ್ನು ಡಿಸೈನ್ ಮಾಡಿಸಬಹುದು ಅಥವಾ ನಿಮ್ಮ ನೆಚ್ಚಿನ ಯಾವುದೇ ಲೈನ್‌ನ್ನೂ ಇಲ್ಲಿ ಬರೆಸಬಹುದು. ಇದು ನಿಮ್ಮ ನೇಲ್ಸ್ ಗೆ ವಿಭಿನ್ನ ಲುಕ್ ಕೊಡುತ್ತದೆ.
ಸೋಶಿಯಲ್ ನೇಲ್ ಆರ್ಟ್ ಡಿಸೈನ್ : ಇಂದು ಯುವ ಜನತೆಯಲ್ಲಿ ಹೆಚ್ಚುತ್ತಿರುವ ಸೋಶಿಯಲ್ ನೆಟ್‌ವರ್ಕ್‌ನ ಕ್ರೇಝ್ ಇವನ್ನು ಮೇಕಪ್ ಟ್ರೆಂಡ್ಸ್ ಗೂ ಎಳೆ ತಂದಿವೆ. ಕಾಲೇಜು ಕಿಶೋರಿಯರು ತಮ್ಮ ಉಗುರುಗಳ ಮೇಲೆ ಫೇಸ್‌ಬುಕ್, ಟ್ವಿಟರ್, ವಾಟ್ಸ್ಆ್ಯಪ್, ಯೂಟ್ಯೂಬ್ ಇತ್ಯಾದಿಗಳ ಸೈನ್ ಪಿಕ್ಚರ್ಸ್‌ನ್ನು ಹೀಗೆ ಮಾಡಿಸುತ್ತಾರೆ.
ಝಿಪರ್ ನೇಲ್ ಆರ್ಟ್ ಡಿಸೈನ್ : ಈ ಡಿಸೈನಿನಲ್ಲಿ ಉಗುರಿನ ಮೇಲೆ ಝಿಪ್‌ನಂಥ ಡಿಸೈನ್ ಬಿಡಿಸಲ್ಪಟ್ಟಿರುತ್ತದೆ. ಈ ಯುನಿಕ್ ಸ್ಟೈಲ್ ನಿಮಗೆ ಬೋಲ್ಡ್ ಲುಕ್ಸ್ ನೀಡುತ್ತದೆ. ಆದರೆ ಈ ಡಿಸೈನ್ ಮೂಡಿಸಲು ಹೆಚ್ಚು ಸಮಯ ಬೇಕು.
ಹ್ಯಾಲೋವಿನ್ ನೇಲ್ ಆರ್ಟ್ ಡಿಸೈನ್ : ಗ್ಲಾಮರಸ್ ಬೋಲ್ಡ್ ಲುಕ್ಸ್ ಗಾಗಿ ಈ ನೇಲ್ ಆರ್ಟ್ ಹೆಚ್ಚು ಬೆಸ್ಟ್. ಇದರಲ್ಲಿ ಡಿಫರೆಂಟ್ ಸ್ಟೈಲ್‌ನ ಬೋಲ್ಡ್ ಲುಕ್ಸ್ ಮೂಡಿಸಬಹುದು. ಈ ಡಿಸೈನ್ ಡಿಸ್ಕೋ ಪಾರ್ಟಿ ಇತ್ಯಾದಿಗಳಿಗೆ ಬೆಸ್ಟ್ ಎನಿಸಿವೆ.