ಈ ವಿಶೇಷ ದಿನವನ್ನು ನಿಮ್ಮ ಪಾರ್ಟ್‌ನರ್‌ನೊಂದಿಗೆ ಸೆಲೆಬ್ರೇಟ್ ಮಾಡುತ್ತಾ ದಿನವೆಲ್ಲ ಪ್ರೀತಿ, ಸಂತೋಷಗಳಿಂದ ತುಂಬಿರುವಂತೆ ಮಾಡಿ. ನಿಮ್ಮ ಸುತ್ತಲೂ ರೊಮ್ಯಾನ್ಸ್ ವಾತಾವರಣ ಹಬ್ಬಿರಲಿ.
ಇದಕ್ಕಾಗಿ ಈ ಸಲದ ವ್ಯಾಲೆಂಟೈನ್ ಡೇಯಂದು ನಿಮ್ಮ ಪತ್ನಿ ಅಥವಾ ಪ್ರಿಯತಮೆಗಾಗಿ ವಿಶೇಷ ಬ್ರೇಕ್‌ಫಾಸ್ಟ್ ತಯಾರಿಸಲು ತೊಡಗಿ. ಆ ನಂತರ ನೀವು ಅವರ ಕಣ್ಣುಗಳಲ್ಲಿ ಹಿಂದೆಂದೂ ಕಂಡಿರದಂತಹ ಹೊಳಪನ್ನು ನೋಡುವಿರಿ. ಅವರ ಕನಸಿನ ಯುವರಾಜ ಅವರ ಮೆಚ್ಚಿನ ಡಿಶೆಸ್‌ನಿಂದ ಕೂಡಿದ ಟ್ರೇ ಹಿಡಿದು ಮುಂದೆ ಬಂದು ನಿಂತಾಗ, ಆ ಟ್ರೇನಲ್ಲಿ ತಿನಿಸುಗಳ ಜೊತೆಗೆ ಒಂದು ಸುಂದರ ಗುಲಾಬಿ ಹೂ ಕೂಡ ನಸುನಗುತ್ತಾ ಕುಳಿತಿರುವುದನ್ನು ಕಂಡಾಗ, ಆನಂದದಿಂದ ಮೈ ಮರೆಯುತ್ತಾಳೆ. ಅವಳ ಪ್ರೇಮ ಗೆಲ್ಲಲು ಇದಕ್ಕಿಂತ ಹೆಚ್ಚಿನ ರೆಸಿಪಿ ನಿಮ್ಮ ಬಳಿ ಬೇರಾವುದೂ ಇರಲಾರದು. ಕೆಲವು ಸುಲಭವಾದ ಡಿಶೆಸ್‌ನ ಮೂಲಕ ನಿಮ್ಮ ಪಾರ್ಟ್‌ನರ್‌ನ ದಿನವನ್ನೆಲ್ಲ ಸ್ವಾದಿಷ್ಟ ಸರ್ಪ್ರೈಸ್‌ಗಳಿಂದ ತುಂಬಿಸುವ ಪ್ಲಾನ್ ಮಾಡಿ ಮತ್ತು ನಿಮ್ಮ ಪ್ರೀತಿಯ ಮಾಯಾಜಾಲ ಹರಡಿರಿ.
ಚೀಝಿ ಲವ್ ಬೈಟ್
ನಿಮ್ಮ ಪತ್ನಿ ಅಥವಾ ಪ್ರೇಯಸಿಯ ಮನಗೆಲ್ಲಲು ವ್ಯಾಲೆಂಟೈನ್ ಡೇಯಂದು ಪ್ರೀತಿ ತುಂಬಿದ ಬ್ರೇಕ್‌ಫಾಸ್ಟ್ ಸಿದ್ಧಪಡಿಸಿ. ಫ್ರೋಸನ್ ಚೀಸ್ ಶಾಟ್ಸ್ ನ್ನು ಪ್ಯಾನ್‌ನಲ್ಲಿ ಫ್ರೈ ಮಾಡಿ. ಮೊದಲು ಮಸ್ಟರ್ಡ್ ಡಿಪ್‌ನೊಂದಿಗೆ ಬಿಸಿಬಿಸಿಯಾಗಿ ಮುಂದಿಟ್ಟು ಬೆಳಗಿನ ಸವಿರುಚಿಯನ್ನು ಪ್ರಾರಂಭಿಸಿ.
ತನ್ನ ಪ್ರೀತಿಯ ಶೆಫ್ ತಯಾರಿಸಿದ ರುಚಿ ರುಚಿಯಾದ ತಿಂಡಿ ತಿಂದ ಬಳಿಕ 1 ಕಪ್ ಕಾಫಿಯೂ ಪ್ರೇಯಸಿಗೆ ದೊರೆಯಿತೆಂದರೆ ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೇನೂ ಇರಲಾರದು.
ನೈಟ್ ಅಂಡರ್ ದಿ ಸ್ಟಾರ್ಸ್
ವ್ಯಾಲೆಂಟೈನ್ ಡೇಗೆ ನಿಮ್ಮ ಮನೆಯ ತಾರಸಿಯ ಮೇಲೆ ತಾರೆಗಳ ಸೂರಿನಲ್ಲಿ ಅಥವಾ ಲಿವಿಂಗ್ ರೂಮಿನಲ್ಲಿ ಕ್ಯಾಂಡಲ್ ಲೈಟ್‌ನೊಂದಿಗೆ ಸ್ಪೆಷಲ್ ಡಿನ್ನರ್ ಏರ್ಪಡಿಸಿ.
ಪೊಟೆಟೊ ವೆಜೆಸ್ ಫ್ರೈ ಮಾಡಿ. ಥಾಯ್ ಚಿಲಿ ಸಾಸ್‌ನೊಂದಿಗೆ ಸ್ವಾದಿಷ್ಟ ಸೈಡ್ ಡಿಶ್ ಸಿದ್ಧಪಡಿಸಿ. ಈ ರುಚಿಕರವಾದ ಸ್ಪೈಸೀ ಫುಡ್‌ನೊಂದಿಗೆ ವಿಶೇಷ ದಿನದ ಸಂಜೆಯನ್ನು ಪಾರ್ಟ್‌ನರ್ ಜೊತೆ ಕಳೆಯಿರಿ.
ಆಫೀಸ್ ಲಂಚ್ ನೋಟ್ಸ್
ಸಂಬಂಧದ ಪ್ರಾರಂಭದ ದಿನಗಳಲ್ಲಿ ಪರಸ್ಪರ ಹಂಚಿಕೊಂಡಿದ್ದ ಸೀಕ್ರೆಟ್ ಲವ್ ನೋಟ್‌ಗಳ ಆ ಸಂದರ್ಭಗಳನ್ನು ನೆನಪಿಸಿಕೊಳ್ಳಿ. ಫ್ರೋಸನ್ ಆಲೂ ಟಿಕಿಯನ್ನು ಪ್ರೀತಿಯಿಂದ ಫ್ರೈ ಮಾಡಿ ರಾಪ್ ಮಾಡಿ. ಜೊತೆಗೆ ಪುದೀನಾ, ನಿಂಬೂ ಚಟ್ನಿಯನ್ನು ಪ್ಯಾಕ್ ಮಾಡಿ, ಆಫೀಸ್ ಲಂಚ್‌ನೊಂದಿಗೆ ಇದನ್ನು ಇರಿಸಿ. ಜೊತೆಗೆ ಒಂದು ಲವ್ ನೋಟ್‌ನ್ನು ಟೂತ್ ಪಿಕ್‌ಗೆ ಸಿಕ್ಕಿಸಿ ಕಳುಹಿಸಲು ಮರೆಯದಿರಿ. ನಿಮ್ಮ ಈ ರೊಮ್ಯಾಂಟಿಕ್ ಕುಶಲತೆಯು ಅವರನ್ನು ಸಾಯಂಕಾಲ ಆಫೀಸ್‌ನಿಂದ ಬೇಗನೆ ಮನೆಗೆ ಎಳೆದು ತರುತ್ತದೆ.
ದಿ ಬೆಸ್ಟ್ ಫಾರ್ ದಿ ಲಾಸ್ಟ್
ರುಚಿಯಾದ ಡೆಸರ್ಟ್ ಇಲ್ಲದೆ ಯಾವುದೇ ಮೆನು ಪೂರ್ಣವಾಗಲಾರದು. ಡೆಸರ್ಟ್ ತಯಾರಿಸಲು ಹೆಚ್ಚಿನ ಸಮಯ ಹಿಡಿಯುತ್ತದೆ ನಿಜ. ಆದರೆ ಈ ವ್ಯಾಲೆಂಟೈನ್ ಡೇಗೆ ನಿಮ್ಮ ಮೆನುವಿನಲ್ಲಿ ಸ್ವೀಟ್ ಅಂಡ್ ಸಾಲ್ಟ್ ರುಚಿಯನ್ನು ಒಂದುಗೂಡಿಸಿ. ಇವೆರಡರ ರುಚಿಯೂ ಭಿನ್ನ, ಆದರೆ ನೀವದನ್ನು ನಿಮ್ಮ ಪ್ರೀತಿಯ ರುಚಿಯಿಂದ ಒಂದಾಗುವಂತೆ ಮಾಡಿ. ಫ್ರೋಸನ್ ಪೊಟೆಟೊ ಫ್ರೆಂಚ್ ಫ್ರೈಸ್‌ನ್ನು ಫ್ರೈ ಮಾಡಿ ನಿಮಗಿಷ್ಟವಾದ ಸಿರಪ್‌ನಲ್ಲಿ ಟಾಸ್ ಮಾಡಿ. ಅದು ಚಾಕಲೇಟ್, ಸ್ಟ್ರಾಬೆರಿ ಅಥವಾ ಮಾಪ್ಲೆ ಆಗಿರಬಹುದು ಅಥವಾ ಈ ಮೂರೂ ಸಿರಪ್‌ಗಳ ಮಿಕ್ಸ್ ಚರ್ ಆಗಿರಬಹುದು. ಇದರ ರುಚಿಯನ್ನು ಮತ್ತಷ್ಟು ಸವಿಯಾಗಿಸಲು ಸ್ವಲ್ಪ ವಿಪ್ಡ್ ಕ್ರೀಮ್ ಸೇರಿಸಿ ವಿಶಿಷ್ಟ ಡೆಸರ್ಟ್‌ನ ಸರ್ಪ್ರೈಸ್ ನೀಡಿ.
– ಸುನಂದಾ