ವ್ಯಾಲೆಂಟೈನ್ ಡೇನಂದು ಪರಿಸರದಲ್ಲಿ ಎಲ್ಲೆಲ್ಲೂ ಅತ್ಯಾಕರ್ಷಕ ಬಣ್ಣಗಳು ತುಂಬಿಕೊಂಡು, ರೊಮಾನ್ಸ್ ಹರಡಿರುವಂತೆ ಭಾಸವಾಗುತ್ತದೆ. ನೀವು ಯಾವ ವಯಸ್ಸಿನವರಾದರೇನು? 16-76 ಇದು ಖಂಡಿತಾ ಅನ್ವಯವಾಗುತ್ತದೆ. ಈ ದಿನ ನಿಮ್ಮ ಸಂಗಾತಿಯೊಂದಿಗೆ ರೋಮಾಂಚಕ ಡೇಟ್‌ಗೆ ಹೊರಟುಬಿಡಿ. ಇದಕ್ಕಾಗಿ ತುಸು ವಿಭಿನ್ನವಾಗಿ ತಯಾರಾಗಬೇಕು ಎಂಬುದನ್ನು ಮರೆಯದಿರಿ. ಆಗ ಮಾತ್ರ ಈ ಡೇಟ್ ನಿಮ್ಮ ನೆನಪಿನಲ್ಲಿ ಸದಾ ಉಳಿಯುತ್ತದೆ.
ಡ್ರೆಸ್ ಸ್ಪೆಷಲ್ ಆಗಿರಲಿ
ಈ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ನೋಡೋಣವೇ?
ಡ್ರೆಸ್ ವಿಶೇಷವಾಗಿರಲಿ : ನೀವು ಸಂಗಾತಿ ಜೊತೆ ಡೇಟಿಂಗ್ ಹೊರಟಿದ್ದೀರಾ ಎಂದ ಮೇಲೆ ಶಾರ್ಟ್ ಫ್ಲೇಯರ್ಡ್ ಡ್ರೆಸ್ ಧರಿಸಿರಿ. ಇದು ನಿಮಗೆ ಹೆಚ್ಚು ಗರ್ಲಿಶ್ ಲುಕ್ಸ್ ನೀಡುತ್ತದೆ. ಮದುವೆ ಆಗಿದ್ದರೆ ನಿಮ್ಮ ನೆಚ್ಚಿನ ಸೀರೆ ಆರಿಸಿ, ಅದು ಹೆಚ್ಚು ಫೆಮಿನಿಸ್ಟ್ ಲುಕ್‌ನೀಡುತ್ತದೆ. ಫ್ಲೇರ್ ಪ್ರಿಂಟೆಡ್, ಜಾರ್ಜೆಟ್ ಫ್ಯಾಬ್ರಿಕ್‌ನಲ್ಲಿ ಲೈಟ್ ಪಿಂಕ್ ಯಾ ರೆಡ್ ಕಲರ್ ಸೀರೆ, ಬಿಲ್‌ಕುಲ್ ಫಿಲ್ಮಿ ಹೀರೋಯಿನ್‌ತರಹ ನಿಮ್ಮನ್ನು ರೊಮ್ಯಾಂಟಿಕ್ ಬಣ್ಣ, ಅನುಭೂತಿಗಳಲ್ಲಿ ತೇಲಿಬಿಡುತ್ತದೆ. ಜಾರ್ಜೆಟ್ ಸೀರೆ ಲೈಟ್ ಕಂಫರ್ಟೆಬಲ್ ಎನಿಸುತ್ತದೆ. ಹೆವಿ ವರ್ಕ್‌ನ ಸೀರೆ ಧರಿಸಿದರೆ ನೀವು ಅದನ್ನು ಸಂಭಾಳಿಸುವುದರಲ್ಲಿ ದಿನ ಕಳೆದು ಹೋಗುತ್ತದೆ.
ಸೇಮ್ ಕಲರ್ ಥೀಮ್ : ನೀವು ನಿಮ್ಮ ಸಂಗಾತಿಗೆ ಹೇಳಿ ಸೇಮ್ ಕಲರ್ ಥೀಮ್ ಟ್ರೈ ಮಾಡಿ. ಇತ್ತೀಚೆಗಂತೂ ರೆಡಿಮೇಡ್ ಆಗಿ ಮೇಡ್ ಫಾರ್ ಈಚ್ ಅದರ್ ಟೀ ಶರ್ಟ್ಸ್/ಡ್ರೆಸೆಸ್ ಸಹ ಲಭ್ಯ. ಇದನ್ನು ಧರಿಸಿ ನಿಮ್ಮ ಸಂಗಾತಿಯೊಂದಿಗೆ ಹೊರಟರೆ ನಿಮಗೆ ಪರಿಪೂರ್ಣತೆಯ ಅನುಭವ ಸಿಗುತ್ತದೆ. ನಿಮ್ಮನ್ನು ನೋಡಿದವರು ಈ ಬಾಂಧವ್ಯ ಎಂಥ ಅನುಪಮ ಎಂದು ಭಾವಿಸುತ್ತಾರೆ!
ಕ್ರಿಯೇಟಿವಿಟಿ : ಇಂಥಹ ಸಂದರ್ಭಗಳಲ್ಲಿ ನೀವು ಶಾಲು ಅಥವಾ ತುಂಬು ತೋಳಿನ ಉಡುಗೆ ಧರಿಸಬೇಡಿ. ಸೀರೆ ಉಟ್ಟಿದ್ದರೆ ಬ್ಲೌಸ್‌ಜೊತೆ ಪ್ರಯೋಗ ಮಾಡಿ. ಹಾಲ್ಟರ್ ನೆಕ್, ನೂಡಲ್ಸ್ ಪ್ರಿಂಟ್ ಅಥವಾ ಸ್ವೀಟ್ ಹಾರ್ಟ್ ನೆಕ್‌ವುಳ್ಳ ಡ್ರೆಸೆಸ್ ಸಾಕಷ್ಟು ಆಕರ್ಷಕ ಎನಿಸುತ್ತವೆ.
ಬಾಡಿ ಶೇಪ್ : ಉಡುಗೆ ಆರಿಸುವಾಗ ನಿಮ್ಮ ಮೈಕಟ್ಟಿನ ಕಡೆ ಗಮನವಿರಲಿ. ನಿಮ್ಮ ಹೈಟ್ ಹೆಚ್ಚಿದ್ದರೆ, ಲಾಂಗ್ ಪ್ಲೇಯಿಂಗ್‌ಅನಾರ್ಕಲಿ ಸೂಟ್ ಯಾ ಗೌನ್ ಚೆನ್ನಾಗಿ ಹೊಂದುತ್ತದೆ. ನಿಮ್ಮ ಹೈಟ್ ಕಡಿಮೆ ಎನಿಸಿದರೆ, ಒನ್‌ಪೀಸ್ ಡ್ರೆಸ್ ಯಾ ಮಿಡಿ ಚೆನ್ನಾಗಿರುತ್ತದೆ. ಇದಕ್ಕಾಗಿ ಕೆಲವು ಟ್ರೆಂಡಿ ಸ್ಟೈಲಿಶ್ ಉಡುಗೆ ಆರಿಸಿ.
ಅಡ್ವೆಂಚರಸ್ ಡೇಟ್‌ಗಾಗಿ ಡ್ರೆಸ್: ನೀವು ಔಟ್‌ಡೋರ್ ವ್ಯಾಲೆಂಟೈನ್‌ಡೇ ಪ್ಲಾನ್ ಮಾಡಿದ್ದರೆ ಅಂದರೆ ಒಂದು ಕಡೆ ಶಾರ್ಟ್‌ಟ್ರಿಪ್‌ಅಥವಾ ಈವೆಂಟ್ ಪಾರ್ಟಿಸಿಪೇಶನ್ ಇದ್ದರೆ, ನಿಮಗೆ ಜೀನ್ಸ್ ವಿತ್ ಟಾಪ್ ಬೆಟರ್ ಆಪ್ಶನ್. ಜೀನ್ಸ್ ಧರಿಸಲು ಹಿತಕರ ಮಾತ್ರವಲ್ಲ, ಅದರ ಮೇಲೆ ಟಾಪ್ ಯಾ ಲೆದರ್ ಜ್ಯಾಕೆಟ್ ಸ್ಮಾರ್ಟ್‌ನೆಸ್ ಹೆಚ್ಚಿಸುತ್ತದೆ. ಡಾರ್ಕ್ ವಾಶ್, ಸ್ಕಿನೀಸ್, ಟಾಪ್‌ರೈಡಿಂಗ್ ಬೂಟ್ ಮತ್ತು ಬ್ಲ್ಯಾಕ್ ಕಲರ್ಡ್ ಸ್ವೆಟರ್‌ನಲ್ಲೂ ನೀವು ಸ್ಮಾರ್ಟ್ ಲುಕ್ಸ್ ಜೊತೆ ಅಡ್ವೆಂಚರಸ್ ಡೇಟ್‌ನ ಮಜಾ ಪಡೆಯಿರಿ.
ಜ್ಯೂವೆಲರಿ ಆ್ಯಕ್ಸೆಸರೀಸ್: ಈ ಸಂದರ್ಭದಲ್ಲಿ ಎಂದೂ ಹೆವಿ ಜ್ಯೂವೆಲರಿ ಧರಿಸಬೇಡಿ. ಲೈಟ್ ಜ್ಯೂವೆಲರಿ ಮತ್ತು ಓಪನ್‌ಹೇ ರ್‌ನಿಮಗೆ ಪ್ರತ್ಯೇಕ ಆಕರ್ಷಕ ಲುಕ್ಸ್ ಗಳಿಸಿಕೊಡುತ್ತವೆ. ಕೂದಲಿಗೆ ಸದಾ ನ್ಯಾಚುರಲ್ ಲುಕ್ಸ್ ಕೊಡಿ. ಬೇಕಿದ್ದರೆ ಕಲರ್ಸ್, ರೀಬಾಂಡಿಂಗ್, ಪರ್ಮನೆಂಟ್‌ವೇರ್ ಇತ್ಯಾದಿ ಮಾಡಿಸಿ, ಬಿಲ್‌ಕುಲ್ ಡಿಫರೆಂಟ್ ಆಗಿ ಕಾಣಿಸಿ. ತುಸು ಸ್ಟೈಲಿಶ್ ಆಗಿ ಕಾಣಿಸಲು ಸನ್ ಗ್ಲಾಸಸ್, ಲೈಟ್ ಹೀಲ್ಸ್, ಕಲರ್‌ಫುಲ್ ಬ್ಯಾಂಗಲ್ಸ್, ಸ್ಕಾರ್ಫ್, ನೇಲ್ ಆರ್ಟ್, ನೇಲ್ ಎಕ್ಸ್ ಟೆನ್ಶನ್ ಇತ್ಯಾದಿ ಉತ್ತಮ ಅವಕಾಶಗಳಿವೆ.
ಲಾಂಗ್ ಜ್ಯಾಕೆಟ್‌ಯಾ ಕೇಪ್: ಇತ್ತೀಚೆಗೆ ಲಾಂಗ್ ಜ್ಯಾಕೆಟ್ ಫ್ಯಾಷನ್‌ನಲ್ಲಿ ಮತ್ತೆ ಮರಳಿದೆ. ಇದು ಸ್ಟೈಲಿಶ್ ಆಗಿ ಕಾಣಿಸುವುದರ ಜೊತೆ ಪ್ರತಿ ಡ್ರೆಸ್‌ಗೂ ಒಪ್ಪುತ್ತದೆ.
ಪ್ಲಾಜೋ ಯಾ ಧೋತಿ ಪ್ಯಾಂಟ್: ಪ್ಲಾಜೋ ಮತ್ತು ಧೋತಿ ಪ್ಯಾಂಟ್, ಕುರ್ತಿ ಜೊತೆ ಧರಿಸಿದರೆ ಬಿಲ್‌ಕುಲ್ ಡಿಫರೆಂಟ್ ಲುಕ್‌ನೀಡುತ್ತದೆ. ನೀವು ಬಯಸಿದರೆ ಒಂದು ಹಳೆಯ ಕುರ್ತಿಗೆ ಬೆಲ್ ಬಾಟಮ್ ಜೀನ್ಸ್ ಜೊತೆಯಾಗಿ ಧರಿಸಬಹುದು.
ಇನೋವೇಟಿವ್ ಬ್ಲೌಸ್: ಈ ಸಂದರ್ಭದಲ್ಲಿ ಕ್ಲಾಸಿಕ್ ಸೀರೆ ಬ್ಲೌಸ್ ಬದಲಿಗೆ ಹೊಸ ಬಗೆಯ ಪ್ರಯೋಗ ಮಾಡಿ. ಒಂದು ಹಳೆಯ ಕ್ರಾಪ್ ಟಾಪ್‌ನ್ನು ಸೀರೆ ಯಾ ಧೋತಿ ಪ್ಯಾಂಟ್ ಜೊತೆ ಬ್ಲೌಸ್ ತರಹ ಧರಿಸಿ ನೀವು ಸ್ಟೈಲಿಶ್ ಡಿಫರೆಂಟ್ ಆಗಿ ಕಾಣಿಸಬಹುದು.
ಸೀಕ್ವೆನ್ಸ್ : ಸೀಕ್ವೆನ್ಸ್ ಲೇಯರ್ಸ್ ಸದಾ ಸ್ಟೈಲ್ ಎನಿಸುತ್ತವೆ. ವಿಷಯ ವ್ಯಾಲೆಂಟೈನ್ ಡೇ ಕುರಿತಾಗಿರುವುದರಿಂದ ಇದನ್ನು ಹೇಗೆ ನಿರ್ಲಕ್ಷಿಸಲಾಗುತ್ತದೆ?
ಎಂಬ್ರಾಯಿಡರ್ಡ್ ಸ್ಲಿಪ್ ಯಾ ಕೋಲ್ಡ್ ಶೋಲ್ಡರ್ ಟಾಪ್ ಜೊತೆ ಡೆನಿಮ್ ಯಾ ಲೆದರ್ ಪ್ಲಾಂಟ್‌ನ್ನು ಈವ್ನಿಂಗ್ ಪಾರ್ಟಿಗೆ ಧರಿಸಬಹುದು.
– ಜಿ.ಕೆ. ದಿವ್ಯಾ