ಸೀರೆ ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ಉಡುಗೆಯಾಗಿದೆ. ಸೀರೆಯಲ್ಲಿ ಸೆಕ್ಸೀ ಮತ್ತು ಆಕರ್ಷಕ ಲುಕ್‌ ಇರುವುದಿಲ್ಲ ಎಂದು ಕೆಲವು ಯುವತಿಯರು ಭಾವಿಸುತ್ತಾರೆ. ಆದರೆ ಅದು ಹಾಗೇನಲ್ಲ. `ಯೇ ಜವಾನೀ ಹೈ ದೀವಾನೀ' ಹಿಂದಿ ಚಿತ್ರದಲ್ಲಿ ದೀಪಿಕಾಳ ಸೀರೆಯ ಅವತಾರವನ್ನು ನೋಡಿದರೆ ಸೀರೆಯು ಎಂತಹ ಸೆಕ್ಸೀ, ಗ್ಲಾಮರಸ್‌ ಲುಕ್‌ ನೀಡುತ್ತದೆ ಎಂಬುದು ತಿಳಿಯುತ್ತದೆ.

ಸೀರೆಯ ಟ್ರೆಂಡ್‌ ಮರಳಿ ಬಂದಿದೆ

ಸೀರೆ ಉಡುವಾಗ ಯಾವ ಯಾವ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಆಕರ್ಷಕವಾಗಿ ಕಾಣಬೇಕು ಎಂಬುದನ್ನು ತಿಳಿಯೋಣ ಬನ್ನಿ :

ಸೀರೆಯ ಫ್ಯಾಬ್ರಿಕ್‌ ನೀವು ಮೋಹಕವಾಗಿ ಕಾಣಬೇಕಾದರೆ ಸೀರೆಯ ಫ್ಯಾಬ್ರಿಕ್‌ನ್ನು ಸರಿಯಾಗಿ ಆರಿಸಬೇಕು. ಸೀರೆ ಹಗುರವಾಗಿದ್ದರೆ ಮ್ಯಾನೇಜ್‌ ಮಾಡುವುದು ಸುಲಭವಾಗುತ್ತದೆ. ಆದ್ದರಿಂದ ಶಿಫಾನ್‌ ಸೀರೆ ಉತ್ತಮ ಆಯ್ಕೆ. ಅದು ಬಾಲಿವುಡ್‌ನಲ್ಲಿ ಒಂದು ಟ್ರೆಡಿಶನಲ್ ಫ್ಯಾಷನ್‌ನಂತಾಗಿದೆ. ಸಿಲ್ಕ್ ಸೀರೆಯು ಗ್ಲಾಮರಸ್‌ ಆದರೂ ಅದು ಸಮಾರಂಭಗಳಿಗೆ ಸೂಕ್ತವಾಗಿರುತ್ತದೆ.

ಸೀರೆಯ ಪ್ರಿಂಟ್‌ ಮತ್ತು ಪ್ಯಾಟರ್ನ್‌ ಕಡೆಗೂ ಗಮನ ನೀಡಬೇಕು. ಪ್ರಿಂಟೆಡ್‌ ಸೀರೆಗಿಂತ ಪ್ಲೇನ್‌ ಸೀರೆಯು ಒಳ್ಳೆಯ ಲುಕ್‌ ಒದಗಿಸುತ್ತದೆ. ಈಚೆಗೆ ಹಾಫ್‌ ಸ್ಯಾರಿ ಪ್ಯಾಟರ್ನ್‌ ಚಾಲ್ತಿಯಲ್ಲಿದೆ. ಈ ಪ್ಯಾಟರ್ನ್‌ನಲ್ಲಿ ಸೀರೆಯ ಅರ್ಧ ಭಾಗ ಪ್ರಿಂಟೆಡ್‌ ಮತ್ತು ಉಳಿದರ್ಧ ಭಾಗ ಪ್ಲೇನ್‌ ಆಗಿರುತ್ತದೆ.

ಸೀರೆ ಉಡುವಿಕೆ

ಸರಿಯಾದ ರೀತಿಯಲ್ಲಿ ಸೀರೆ ಉಡುವುದು ಅತಿ ಮುಖ್ಯವಾದುದು. ನಾಭಿಯ ಮಟ್ಟದಿಂದ ಸೀರೆ ಉಡಲು ಪ್ರಾರಂಭಿಸಿ. ಇದರಿಂದ  ನಿಮ್ಮ ಶರೀರದ ಆಕಾರ ಎದ್ದು ಕಾಣುತ್ತದೆ. ನಿಮ್ಮ ಬಳುಕುವ ಸೊಂಟವನ್ನು ಪ್ರದರ್ಶಿಸಬೇಕೆಂದಿದ್ದರೆ ಕೆಳಮಟ್ಟದಲ್ಲಿ ನೆರಿಗೆಯನ್ನು ಸಿಕ್ಕಿಸಿ, ಸೊಂಟವನ್ನು ಮರೆ ಮಾಡಬೇಕೆಂದು ಬಯಸಿದರೆ ಸೀರೆಯನ್ನು ಸೊಂಟದ ಸುತ್ತ ಬಳಸಿ ತನ್ನಿ.

ಬ್ಲೌಸ್

ಸೀರೆಯನ್ನು ಆಕರ್ಷಕಗೊಳಿಸುವ ಶ್ರೇಯಸ್ಸು ಮಾಡರ್ನ್‌ ಬ್ಲೌಸ್‌ಗೆ ಸಲ್ಲುತ್ತದೆ. ಬ್ಲೌಸ್‌ನಿಂದ ನಿಮ್ಮ ಸ್ಟೈಲ್‌ ಎದ್ದು ತೋರುತ್ತದೆ. ಆಕರ್ಷಕ  ಸ್ಟೈಲ್‌‌ಗಾಗಿ ಈ ಕೆಳಗಿನ ಮಾಡರ್ನ್‌ ಪ್ಯಾಟರ್ನ್‌ಗಳನ್ನು ಆರಿಸಿಕೊಳ್ಳಬಹುದು.

ಹಾಲ್ಟರ್‌ ನೆಕ್‌ ಬ್ಲೌಸ್‌, ಸ್ಪೆಗಿಟಿ ಸ್ಟ್ರಾಪ್‌ ಬ್ಲೌಸ್‌, ಫುಲ್ ಸ್ಲೀವ್ಸ್ ಅಥವಾ ಒನ್‌ ಫೋರ್ತ್‌ ಸ್ಲೀವ್‌ನ ಬ್ಯಾಕ್‌ಲೆಸ್‌ ಬ್ಲೌಸ್‌, ವೈಡ್‌ ನೆಕ್‌ ಬ್ಲೌಸ್‌, ಸ್ಟೈಲಿಶ್‌ ರಾಂಪ್ ಅಪ್‌ ಸ್ಯಾರಿ ಬ್ಲೌಸ್‌, ಎಂಬೋಸ್ಡ್ ಎಂಬ್ರಾಯಿಡರಿ ಬ್ಲೌಸ್‌, ಮಾಡರ್ನ್‌ ಚೋಲಿ ಬ್ಲೌಸ್‌.

ಸೀರೆಯೊಂದಿಗೆ ಆ್ಯಕ್ಸೆಸರೀಸ್

ಆದಷ್ಟು ಕಡಿಮೆ ಆ್ಯಕ್ಸೆಸರೀಸ್‌ ಇದ್ದಾಗ ನೀವು ಹೆಚ್ಚು ಹಾಟ್‌ ಅಂಡ್‌ ಗ್ಲಾಮರಸ್‌ ಆಗಿ ತೋರುವಿರಿ. ಸೆಕ್ಸೀ ಸೀರೆಯೊಂದಿಗೆ ಸ್ಟೇಟ್‌ಮೆಂಟ್‌ ಇಯರ್‌ ರಿಂಗ್ಸ್ ಸಾಕು. ಪೆನ್ಸಿಲ್‌ ಹೀಲ್ಸ್ ನಿಂದ ಮತ್ತಷ್ಟು ಗ್ಲಾಮರಸ್‌ ಲುಕ್‌ ದೊರೆಯುತ್ತದೆ.

ಹೇರ್‌ ಸ್ಟೈಲ್‌

ಹೈ ಬನ್‌ ಹೇರ್‌ಸ್ಟೈಲ್ : ನೀವು ಸ್ಟ್ರಾಪ್‌ಲೆಸ್‌ ಬ್ಲೌಸ್‌ ಅಥವಾ ವೈಡ್‌ನೆಕ್‌ ಬ್ಲೌಸ್‌ ಧರಿಸುವಿರಾದರೆ ಈ ಸ್ಟೈಲ್‌ ಚೆನ್ನಾಗಿರುತ್ತದೆ.

ಸ್ಟ್ರೇಟ್ ಹೇರ್‌ಸ್ಟೈಲ್ : ಆತುರದಲ್ಲಿ ಹೊರಡಬೇಕಾಗಿದ್ದಾಗ ಇದು ಬಹಳ ಸಿಂಪಲ್ ಮತ್ತು ಎಲಿಗೆಂಟ್‌ ಲುಕ್‌ ನೀಡುತ್ತದೆ.

ಬ್ಯಾಂಗಲ್ ಹೇರ್‌ಸ್ಟೈಲ್ : ಉದ್ದ ಕೂದಲಿಗೆ ಈ ಸ್ಟೈಲ್ ಫ್ಯಾಷನ್‌ನಲ್ಲಿದೆ. ಸೀರೆ ಮತ್ತು ವೆಸ್ಟರ್ನ್‌ ಡ್ರೆಸ್‌ ಎರಡಕ್ಕೂ ಈ ಸ್ಟೈಲ್ ಹೊಂದುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ