ಮನಸ್ಸು ಬಯಸಿದ ಉಡುಗೆ ಧರಿಸಿ ತನ್ನ ಮೈಮಾಟ ಪ್ರದರ್ಶಿಸಬೇಕೆಂದು ಯಾವ ಹೆಣ್ಣಿಗೆ ತಾನೇ ಇಷ್ಟವಿರುವುದಿಲ್ಲ….?

ಈ ಸ್ಮಾರ್ಟ್‌ ಡ್ರೆಸ್‌ಗಳ ಮುಖಾಂತರವೇ ಅವಳು ತನ್ನ ಸೌಂದರ್ಯ ಹೆಚ್ಚಿಸಿಕೊಂಡು, ಬಾಯ್‌ಫ್ರೆಂಡ್‌ನ್ನು ಆಕರ್ಷಿಸಲು ಸಾಧ್ಯ. ಹಾಗಾಗಿಯೇ ಅವಳು ತನ್ನ ಸಮವಯಸ್ಕ ಗೆಳತಿಯರು ಹಾಗೂ ನೆರೆಹೊರೆಯ ಹೆಂಗಸರ ಅಸೂಯೆಯ ಕಣ್ಣೋಟಕ್ಕೆ ಗುರಿಯಾಗುತ್ತಾಳೆ. ಪ್ರಕೃತಿ ಅಂದವಾಗಿ ರೂಪಿಸಿದ ಕಲಾಕೃತಿಯೇ ಹೆಣ್ಣು! ಹೀಗಾಗಿಯೇ ತಾನು ಮತ್ತಷ್ಟು ರೂಪವತಿಯಾಗಿ ಕಂಗೊಳಿಸಬೇಕು ಎಂದು ಬಯಸುತ್ತಾಳೆ. ಈ ಕಾರಣದಿಂದಲೇ ವಿಶ್ವಾದ್ಯಂತ ಮಾರುಕಟ್ಟೆಯಲ್ಲಿ ಸ್ತ್ರೀ ಉಡುಗೆಯಲ್ಲಿರುವ ವೈವಿಧ್ಯತೆ ಗಂಡಸರ ಉಡುಗೆಗಿಲ್ಲ.

ಮಹಿಳೆಯರು ಮನಸ್ಸು ಬಯಸಿದ ಉಡುಗೆ ಧರಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಮತ್ತೊಂದು ಮುಖ್ಯ ವಿಷಯ ನೆನಪಿಡತಕ್ಕದ್ದು ಎಂದರೆ, ಯಾವ ಡ್ರೆಸ್‌ ಧರಿಸುವುದರಿಂದ ತಾವು ಅದರಲ್ಲಿ ಕಂಫರ್ಟೆಬಲ್ ಕಾನ್ಛಿಡೆಂಟ್‌ ಎಂದು ಭಾವಿಸುತ್ತೀರೋ ಅದನ್ನು ಮಾತ್ರವೇ ಧರಿಸಬೇಕು. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಕಣ್ಣು ಕೋರೈಸುವ ಸ್ಟೈಲಿಶ್‌, ಗ್ಲಾಮರಸ್‌ ಡ್ರೆಸೆಸ್‌ ನಮಗೆ ಸೂಟ್‌ ಆಗುತ್ತದೆ ಎಂದು ಭಾವಿಸಬಾರದು. ಮಾರ್ಕೆಟ್‌ನಲ್ಲಿ ಇಂಥವನ್ನು ಕಂಡಾಗ ಹೆಂಗಸರು ಬೇಗ ಮರುಳಾಗುತ್ತಾರೆ, ಯಾವುದನ್ನು ಧರಿಸುವುದು ಬಿಡುವುದು ಎಂದು ಗೊಂದಲಗೊಳ್ಳುತ್ತಾರೆ. ಇಂಥ ಉಡುಗೆಗಳಿಂದ ತಮ್ಮ ಸ್ಮಾರ್ಟ್‌ನೆಸ್‌ ಹೆಚ್ಚುತ್ತದೋ ಇಲ್ಲವೋ ಅಥವಾ ತಮ್ಮ ದೇಹದ ಕುಂದುಕೊರತೆ ಎದ್ದು ಕಾಣಲಿದೆಯೋ ಎಂಬುದನ್ನೂ ಗಮನಿಸುವುದಿಲ್ಲ.

ಒಮ್ಮೊಮ್ಮೆ ಟಿವಿ ಯಾ ಪತ್ರಿಕೆಗಳ ಜಾಹೀರಾತುಗಳಲ್ಲಿ ಮಾಡೆಲ್‌, ಹೀರೋಯಿನ್ಸ್ ಇಂಥ ಚಿತ್ರವಿಚಿತ್ರ ಉಡುಗೆ ಧರಿಸಿರುವುದನ್ನು ನೋಡುತ್ತೇವೆ. ಕೆಲವೊಂದು ಮಾಡರ್ನ್‌ ಸ್ಟೈಲಿಶ್‌ ಆಗಿ ಅವರಿಗೆ ಬಹಳ ಶೋಭೆ ನೀಡುತ್ತಿರುತ್ತದೆ. ಒಮ್ಮೊಮ್ಮೆ ಇಂಥವರೂ ಸಹ ತಮ್ಮ ಮೈಕಟ್ಟಿಗೆ ಸೂಕ್ತ ಉಡುಗೆ ಆರಿಸದ ಕಾರಣ, ಎಲ್ಲರ ಮುಂದೆ ಸಂಕೋಚಕ್ಕೆ ಒಳಗಾಗುವ ಪ್ರಸಂಗ ಎದುರಾಗುತ್ತದೆ. ನಟಿ ಮಲೈಕಾ ಅರೋರಾ ಕ್ಯಾಟ್‌ವಾಕ್‌ ಮಾಡುವಾಗ, ಮೇಲ್ಫಾಗದ ಸ್ಟ್ರಾಪ್ಸ್ ಕಿತ್ತು ಹೋಗಿ ಎಲ್ಲರೆದುರು ಟಾಪ್‌ಲೆಸ್‌ ಆಗಬೇಕಾಯಿತು.

ಹೊಗಳಿಕೆ ಗಿಟ್ಟಿಸುವುದು ಹೇಗೆ?

ಕೆಲವು ದಿನಗಳ ಹಿಂದೆ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದರಲ್ಲಿ ಒಬ್ಬಳು ಸೆಲೆಬ್ರಿಟಿ ತನ್ನ ಅತಿ ಟೈಟಾದ ಡ್ರೆಸ್‌ನ್ನು  ಹೇಗೋ ಸಂಭಾಳಿಸುತ್ತಾ, ಇಡೀ ದೇಹದ ಉಬ್ಬು ತಗ್ಗುಗಳನ್ನು ಎಲ್ಲರ ಮುಂದೆ ಪ್ರದರ್ಶಿಸಿ ಬೀಗುತ್ತಿದ್ದಳು. ಈ ಅಟಾಟೋಪದಲ್ಲಿ  ಅವಳ ಡ್ರೆಸ್‌ನ ಮುಂಭಾಗದ  ಜಿಪ್‌ ಫಟ್‌ ಅಂತ ಕಿತ್ತುಹೋಗಿ..... ರಾದ್ಧಾಂತ ಎದುರಾಯಿತು. ಇದೇ ತರಹ ಒಂದು ಸಲ ಅಮಿತಾಭ್‌ ನಡೆಸಿಕೊಡುb ರಿಯಾಲಿಟಿ ಶೋನಲ್ಲಿ ಒಬ್ಬ ಮಹಿಳೆ ಬಂದು ಕೂರುತ್ತಾಳೆ. ಬಿಗಿಯಾದ ಉಡುಗೆ ಬಿಟ್ಟುಕೊಂಡಾಗ, ಅಮಿತಾಭ್ ಪಕ್ಕಕ್ಕೆ ಮುಖ ಸರಿಸುತ್ತಾರೆ. ಇವೆಲ್ಲ ಅವಾಂತರಗಳು ಸರಿಯಾದ ಡ್ರೆಸ್‌ ಆರಿಸದ ಕಾರಣ ಆಗಿರುವಂಥವು. ಇದರಿಂದ ಅವಮಾನ ಮಾತ್ರವಲ್ಲ, ಹೆಂಗಸರಿಗೆ ಬೇಕೆಂದೇ ಮಾಡಿದರೆಂಬ ಕೆಟ್ಟ ಹೆಸರೂ ಬರುತ್ತದೆ. ಮತ್ತೊಂದು ಸಲ, ಗೌಹರ್‌ ಖಾನ್‌ ತನ್ನ ಬಿಗಿಯಾದ ಡ್ರೆಸ್‌ ಕಾರಣ, ರಾಂಪ್‌ ಮೇಲೆ ಕ್ಯಾಟ್‌ವಾಕ್‌ ಮಾಡುವಾಗ ಹಿಂಬದಿ ಫಟ್‌ ಎಂದು ಹರಿಯಿತು. ಪೋಟೋಗ್ರಾಫರ್ಸ್‌ಗಂತೂ ಗಾಢ ಮಸಾಲ ಫೋಟೋಗಳು ದೊರಕಿದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ